ಬೆಟ್ಟಿಂಗ್, ಗ್ಯಾಂಗ್ ವಾರ್ ನಡುವೆ ವಾತ್ಸಲ್ಯದ ಉಡುಗೊರೆಯ ಶಕ್ತಿ “ಮದರ್ ಪ್ರಾಮಿಸ್” (ಚಿತ್ರವಿಮರ್ಶೆ-ರೇಟಿಂಗ್ : 3.5 /5)

Spread the love

ರೇಟಿಂಗ್ : 3.5 /5
ಚಿತ್ರ : ಮದರ್ ಪ್ರಾಮಿಸ್
ನಿರ್ದೇಶಕ : ಪೂರ್ಣಚಂದ್ರ
ನಿರ್ಮಾಪಕ : ಹರ್ಷ ಮುರುಂಡಿ , ಧನಂಜಯ
ಸಂಗೀತ : ನವನೀತ್ ಶಾಮ್
ಛಾಯಾಗ್ರಹಣ : ರಾಹುಲ್
ತಾರಾಗಣ : ಧನಂಜಯ್ , ಹಿರಿಯ ನಟಿಯರಾದ ಗೀತಾ , ವಿನಯ ಪ್ರಸಾದ್ , ಪೂರ್ಣಚಂದ್ರ , ಮಹದೇವ್ ಪ್ರಸಾದ್, ಚಿ. ಗುರುದತ್, ನಾಗಭೂಷಣ್, ಶ್ರೀವತ್ಸ, ನರೇಶ್ ಹಾಗೂ ಮುಂತಾದವರು…

ಇತ್ತೀಚಿನ ದಿನಗಳಲ್ಲಿ ಲೈಫ್ ಈಸ್ ಜೋಶ್ ಅಂಡ್ ಎಂಜಾಯ್ ಎನ್ನುವಂತಹ ಮನಸ್ಥಿತಿಯೇ ಹೆಚ್ಚಾಗೋಗಿದೆ. ಅದರಲ್ಲೂ ಮೋಜು , ಮಸ್ತಿ , ಬೆಟ್ಟಿಂಗ್, ರೌಡಿಸಂ , ಗ್ಯಾಂಗ್ ವಾರ್ ಗಳ ಆರ್ಭಟ ನಿರಂತರ. ಇಂಥದ್ದೇ ಬೆಟ್ಟಿಂಗ್ ದಂಧೆಯ ಕೈಚಳಕ , ಗೊಂದಲ , ಎಡವಟ್ಟು , ಇಕ್ಕಟ್ಟಿನ ತಳಮಳವನ್ನು ಹಾಸ್ಯ ಮಿಶ್ರಣದೊಂದಿಗೆ ಹೇಳುವುದರ ಜೊತೆಗೆ ಮಗನ ಆಸೆ , ತಾಯಿಯ ಕೊಡುಗೆಯ ಪ್ರೀತಿ , ಮಮಕಾರದ ನಡುವೆ ಬಾಲ್ಯದ ಗೆಳೆತನದ ಸೆಳೆತವನ್ನು ಬಹಳ ಲವಲವಿಕೆಯಿಂದ ವಿಡಂಬನಾತ್ಮಕ ಕಥೆಯನ್ನ ಬೆಸೆದುಕೊಂಡು ಹಾಸ್ಯ ಮಿಶ್ರಣದೊಂದಿಗೆ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಮದರ್ ಪ್ರಾಮಿಸ್”.

ಜನರನ್ನ ಸೆಳೆಯುವಂತ ಅಡ್ಡಜೂಜಾಟ, ಡ್ರಗ್ ಮಾಫಿಯಾ , ಬೆಟ್ಟಿಂಗ್ ದಂಧೆ. ಇದಕ್ಕೆ ಒಂದಷ್ಟು ರೂವಾರಿಗಳು , ಬೌನ್ಸರ್. ಇನ್ನು ಗ್ಯಾಂಬ್ಲಿಂಗ್ ಕಿಂಗ್‌ ಪಿನ್ ರೋಸಿ (ಧನಂಜಯ್) ಯ ಇಷ್ಟದ ಬೈಕ್ ಕೊಡಿಸಿದ ಅಮ್ಮ (ವಿನಯ ಪ್ರಸಾದ್) ಎಂದರೆ ಅಪಾರ ಪ್ರೀತಿ. ಇನ್ನು ತನ್ನ ಬಳಿಗೆ ಎಷ್ಟೇ ವಾಹನ ಇದ್ದರೂ ಆ ಬೈಕ್ ಎಂದರೆ ಪಂಚಪ್ರಾಣ.

ಇನ್ನು ರೋಸಿ ಗ್ಯಾಂಗ್ ಗೆ ಅಣ್ಣನ ಮಾತೇ ಫೈನಲ್. ಇದರ ನಡುವೆ ಕ್ರಿಕೆಟ್ ಬೆಟ್ಟಿಂಗೆ ಸ್ನೇಹಿತನ ಜೊತೆ ಎಂಟ್ರಿ ಕೊಡುವ ರಾಂಡಿ (ಪೂರ್ಣಚಂದ್ರ) 20 ಲಕ್ಷ ರುಪಾಯಿ ಸೋತು ಕಷ್ಟಕ್ಕೆ ಸಿಲುಕಿ ಹಣ ಹಿಂತಿರುಗಿಸಲು ಸಮಯಕ್ಕೆ ಪಡೆಯುತ್ತಾನೆ. ತಾಯಿ ಟೀಚರ್ (ಗೀತಾ)ಗೆ ಮಗನ ವರ್ತನ ಬಗ್ಗೆ ಬೇಸರ. ತಂದೆ ( ಶ್ರೀನಿವಾಸ್ ಪ್ರಭು)ಗೆ ಇನ್ನಿಲ್ಲದ ಮಗನ ಪ್ರೀತಿ. ಇನ್ನೊಂದು ಕಡೆ ದೊನ್ನೆ ಬಿರಿಯಾನಿ(ಮಹದೇವ್ ಪ್ರಸಾದ್). ತನ್ನ ಸುಮಗ್ಲಿಂಗ್ ಬಿಸಿನೆಸ್ಗೆ ಹೊಸ ಹುಡುಗರನ್ನ ಬಳಸಿಕೊಂಡು ದಂಧೆ ಮಾಡುತ್ತಾನೆ.

ಇನ್ನು ರಾಮಚಂದ್ರ ಹಾಗೂ ದಿನೇಶ್ ಬಾಲ್ಯದಲ್ಲಿ ಸ್ನೇಹಿತರು. ಇವರಿಬ್ಬರ ನಡುವೆ ಒಂದು ಚಿಕ್ಕ ವಿಷಯಕ್ಕೆ ಜಗಳವಾಗಿ ಅದು ಮುಂದೆ ಎರಡು ಗ್ಯಾಂಗ್‌ಗಳ ಕಿತ್ತಾಟಕ್ಕೆ ಕಾರಣವಾಗಿ ದೂರವಾಗುತ್ತಾರೆ. ಆದರೆ ವಿಧಿಯ ಆಟವೇ ಬೇರೆಯಾಗಿ ಎಲ್ಲದಕ್ಕೂ ಒಂದೊಂದು ಕೊಂಡಿಯಂತೆ ಬೆಸೆದುಕೊಳ್ಳುವಂತೆ ಮಾಡುತ್ತದೆ. ಒಂದೆಡೆ ಅಮ್ಮನ ಉಡುಗೊರೆ ಬೈಕ್ ನಾಪತ್ತೆ… ಮತ್ತೊಂದೆಡೆ ಸುಮಗ್ಲಿಂಗ್ ಡೆಲಿವರಿಯಲ್ಲಿ ಹುಡುಗರ ಎಡವಟ್ಟು… ಹೊಡೆದಾಟ… ಮರ್ಡರ್…
ನಿಗೂಢ ವ್ಯಕ್ತಿಗಳ ಸುತ್ತಾಟ…
ನಡುವೆ ರಾಂಡಿಯ ಸಾಲದ ಒದ್ದಾಟ… ಈ ಎಲ್ಲಾ ಗೊಂದಲಕ್ಕೆ ಉತ್ತರ ನೀವು ತೆರೆಯ ಮೇಲೆ ನೋಡಬೇಕು.

ಇನ್ನು ಈ ಚಿತ್ರದ ನಿರ್ದೇಶಕ ಪೂರ್ಣಚಂದ್ರ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಗಮನ ಸೆಳೆಯುವಂತಿದೆ. ಅದರಲ್ಲೂ ತಾಯಿ ಮಗನಿಗೆ ಪ್ರೀತಿಯಿಂದ ಕೊಡಿಸಿದ ಬೈಕ್‌ನ ಮಹತ್ವ, ತಾಯಿ ಮಗನ ಭಾವನಾತ್ಮಕ ಸಂಬಂಧ. ಗೆಳೆತನದ ಸೆಳೆತ, ದಂಧೆ ಕೋರರ ಆರ್ಭಟ , ಅಮಾಯಕರ ಒದ್ದಾಟ , ಹಣವಿದ್ದ ಬ್ಯಾಗ್ ಸುತ್ತ ನಡೆಯುವ ಗ್ಯಾಂಬ್ಲಿಂಗ್, ಕಿತ್ತಾಟ ಇವೆಲ್ಲವೂ ಹಾಸ್ಯ ರೂಪದಲ್ಲಿ ತೆರೆಯ ಮೇಲೆ ತಂದಿದ್ದಾರೆ. ಆದರೆ ಪಾತ್ರಗಳ ಮಾತಿನ ಸದ್ದು ಜೋರಾಗಿದ್ದು, ಚಿತ್ರಕಥೆಯಲ್ಲಿ ಇನ್ನಷ್ಟು ಹಿಡಿತ ಮಾಡಬಹುದಿತ್ತು.

ತಾಳ್ಮೆಯಿಂದ ಕೂರುವುದು ಕಷ್ಟವೇಸುತ್ತದೆ. ಲಾಜಿಕ್ ಹುಡುಕದೆ ಎಂಜಾಯ್ ಮಾಡಬಹುದು. ಇಂತಹ ಚಿತ್ರವನ್ನು ನೀಡಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು. ಈ ಚಿತ್ರದಲ್ಲಿ ಡಾಲಿ ಧನಂಜಯ್ ಸೈಲೆಂಟ್ ಜೊತೆ ವೈಲೆಂಟ್ ಮ್ಯಾನರಿಸಂ ಪ್ರೇಕ್ಷಕರಿಗೆ ಇಷ್ಟವಾಗುತ್ತೆ. ಗ್ಯಾಂಗ್‌ಸ್ಟರ್ ರೋಸಿ ಪಾತ್ರದ ಲುಕ್, ಡೈಲಾಗ್ ಡೆಲಿವರಿ ಗಮನ ಸೆಳೆಯುತ್ತದೆ. ನಟ ಧನಂಜಯ ರಚನೆಯ ಹಾಡುಗಳು ಇಷ್ಟವಾಗುತ್ತವೆ.

ಇನ್ನು ನಿರ್ದೇಶಕ ಪೂರ್ಣಚಂದ್ರ ಕೊಡ ತಮ್ಮ ನಟನಾ ಸಾಮರ್ಥ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇವರೊಂದಿಗೆ ತಿದ್ದಿ ಬುದ್ದಿ ಹೇಳುವ ಟೀಚರ್ ಪಾತ್ರ ಮಾಡಿರುವ ಹಿರಿಯ ನಟಿ ಗೀತಾ ಬಹಳ ನ್ಯಾಚುರಲ್ ಆಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದೇ ರೀತಿ ನಾಯಕನ ತಾಯಿಯ ಪಾತ್ರ ಮಾಡಿರುವ ನಟಿ ವಿನಯಾ ಪ್ರಸಾದ್‌ ಕೂಡ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಗಳು ಕೂಡ ಚಿತ್ರಕ್ಕೆ ಬೆಂಬಲವಾಗಿ ನಿಂತಿದೆ. ಇನ್ನು ಈ ಚಿತ್ರದ ಸಂಗೀತ , ಹಿನ್ನೆಲೆ ಸಂಗೀತ , ಛಾಯಾಗ್ರಹಣ ಹಾಗೂ ಸಂಕಲನ ಉತ್ತಮವಾಗಿದೆ.ಹಾಸ್ಯವೇ ಪ್ರಧಾನವಾಗಿರೋ ಈ ಚಿತ್ರ ಯುವ ಸಮುದಾಯಕ್ಕೆ ಇಷ್ಟವಾಗುವಂತಿದೆ.

Visited 1 times, 1 visit(s) today
error: Content is protected !!