Cinisuddi Fresh Cini News Tv / Serial 

ಹೊಸ ರೂಪದಲ್ಲಿ ಬರುತ್ತಿದೆ “ಸಿರಿಕನ್ನಡ” ವಾಹಿನಿ

ಪ್ರಸ್ತುತ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳು ಆಮೆ ಹೆಜ್ಜೆ ಇಡುವಂತೆ ಸಾಗುತ್ತಿರುವುದರಿಂದ ಸಾವಿರ ಕಂತುಗಳನ್ನು ತಲುಪುತ್ತಿವೆ. ಇದರಿಂದ ವೀಕ್ಷಕರು ಮನಸ್ಸು ಬದಲಾಯಿಸಿ ಬೇರೆ ಛಾನಲ್ ಕಡೆ ಆಸಕ್ತಿ ಹೊಂದಿರುತ್ತಾರೆ. ಇದನ್ನು ಅರಿತ ’ಸಿರಿ ಕನ್ನಡ ವಾಹಿನಿ’ಯು ಯಾವುದೇ ಸಂಚಿಕೆಗಳು ಇರಲಿ, ಗರಿಷ್ಟ 65ಕ್ಕೆ ನಿಲ್ಲಿಸಬೇಕೆಂದು ನಿರ್ಣಯ ತೆಗೆದುಕೊಂಡಂತೆ, ಸಪಲರಾಗಿದ್ದಾರೆ. ಇದರ ಪ್ರತಿಫಲವಾಗಿ ಶಾರ್ಟ್ ಅಂಡ್ ಸ್ವೀಟ್ ಎನ್ನುವಂತೆ ರಿಯಾಲಿಟಿ ಶೋ, ಅಧ್ಯಾತ್ನಿಕ ಹೂರತುಪಡಿಸಿ, ಒಂದಷ್ಟು ಹೊಸ ರೀತಿಯ ವಿನೂತನ ಧಾರವಾಹಿ, ಹೀಗೆ ಎಲ್ಲರೂ ಇಷ್ಟಪಡುವಂತಹ ಎಂಟು ಕಾರ್ಯಕ್ರಮಗಳನ್ನು ಸಿದ್ದಪಡಿಸಿದೆ. ಮೊದಲನೆಯದಾಗಿ ಮಠ ಮಾನ್ಯಗಳ ದರ್ಶನ ನೀಡುವ… Read More
Cinisuddi Fresh Cini News Tv / Serial 

“ಕುಕ್ಕು ವಿಥ್ ಕಿರಿಕ್ಕು”ನಲ್ಲಿ ಕುಕ್ಕಿಂಗ್ ಕಿಂಗ್ ಕಿಚ್ಚ ಸುದೀಪ್

ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸ ಸೃಷ್ಟಿಸೋಕೆ, ಕರುನಾಡನ್ನ ಪ್ರತಿ ವಾರಾಂತ್ಯದಲ್ಲಿ ರಂಜಿಸೋಕೆ ಕನ್ನಡಿಗರ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಚ್ಚ ಹೊಸ ಶೋ ಆರಂಭವಾಗ್ತಿದೆ. ಕನ್ನಡ ಟಿವಿ ಲೋಕದ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ಅತಿ ದೊಡ್ಡ ಮಟ್ಟದಲ್ಲಿ ಕುಕಿಂಗ್ ಜೊತೆ ಅದ್ದೂರಿ ಕಾಮಿಡಿ ಔತಣ ಬಡಿಸೋಕೆ ಬರುತ್ತಿರುವ ಕಾರ್ಯಕ್ರಮ “ಕುಕ್ಕು ವಿಥ್ ಕಿರಿಕ್ಕು”.. ಏನನ್ನಾದರೂ ಹೊಸದನ್ನು ಹಂಬಲಿಸುತ್ತಿರುವ ಕನ್ನಡ ಪ್ರೇಕ್ಷಕ ಪ್ರಭುಗಳಿಗೆ ಕುಕ್ಕು ವಿಥ್ ಕಿರಿಕ್ಕು ಹೊಟ್ಟೆ ತುಂಬಾ ನಗು, ಹೊಸ ರೀತಿಯ ಮನರಂಜನೆ ನೀಡುವುದಂತೂ ಸುಳ್ಳಲ್ಲ.. ಕುಕ್ಕು ವಿಥ್ ಕಿರಿಕ್ಕು ಗ್ರಾಂಡ್… Read More
Cinisuddi Fresh Cini News Tv / Serial 

ಉದಯ ಟಿವಿಯಲ್ಲಿ ಒಂದೇ ದಿನ 2 ಹೊಸ ಧಾರಾವಾಹಿಗಳು

ಕಳೆದ ಎರಡೂವರೆ ದಶಕಗಳಿಂದ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ʻಉದಯ ಟಿವಿʼ, ವೈವಿಧ್ಯಮಯ ಧಾರಾವಾಹಿಗಳ ಮೂಲಕ ವೀಕ್ಷಕ ಹೃದಯಕ್ಕೆ ಇನ್ನಷ್ಟು ಹತ್ತಿರವಾಗುತ್ತಿದೆ. ಈ ಗುಚ್ಛಕ್ಕೆ ಎರಡು ಹೊಸ ಧಾರಾವಾಹಿಗಳು ಸೇರ್ಪಡೆಯಾಗುತ್ತಿವೆ. ಮಾರ್ಚ್ 15 ರಿಂದ ಸಂಜೆ 6:30 ಕ್ಕೆ ಹಾಸ್ಯಮಯ ಸಸ್ಪೆನ್ಸ್ ಕಥೆ ʻಗೌರಿಪುರದ ಗಯ್ಯಾಳಿಗಳುʼ ಹಾಗೂ ಸಂಜೆ 7:30ಕ್ಕೆ ಮಂಜುನಾಥಸ್ವಾಮಿಯ ಭಕ್ತೆಯೂ ಆಗಿರುವ ಆಶಾಕಾರ್ಯಕರ್ತೆಯೊಬ್ಬಳ ಜೀವನ ಪಯಣ ʻನೇತ್ರಾವತಿʼ. # “ಗೌರಿಪುರದ ಗಯ್ಯಾಳಿಗಳು” ಗೌರಿಪುರ ಎಂಬ ಮಧ್ಯಮ ವರ್ಗದವರ ಕಾಲನಿಯಲ್ಲಿ ಇರುವ ನಾಲ್ವರು ಮಧ್ಯಮವರ್ಗದ ಗಯ್ಯಾಳಿಗಳು ಸ್ತ್ರೀ ಸಂಘ ಸ್ಥಾಪಿಸಿಕೊಂಡು ಹಪ್ಪಳ ಸಂಡಿಗೆ… Read More
Cinisuddi Fresh Cini News Tv / Serial 

ಡಾನ್ಸ್ ಕರ್ನಾಟಕ ಡಾನ್ಸ್‌ನಲ್ಲಿ ಪವರ್‌ಸ್ಟಾರ್ ಪುನೀತ್

ಜೀ ಕನ್ನಡದ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ನಲ್ಲಿ ‘ಪವರ್‌ಸ್ಟಾರ್’ ಪುನೀತ್‌ರಾಜಕುಮಾರ್ ಭಾಗವಹಿಸಿದ್ದಾರೆ. ಅದ್ಭುತ ನೃತ್ಯದ ಮೂಲಕವೇ ಎಲ್ಲರ ಮೆಚ್ಚುಗೆಗೆ ಹೆಸರಾಗಿರುವ ಅಪ್ಪು ಅವರ ಉಪಸ್ಥಿತಿ ಡಿಕೆಡಿಯ ಎಲ್ಲ ನೃತ್ಯಪಟುಗಳ ಉತ್ಸಾಹ ಹೆಚ್ಚಿಸಿದೆ. ಸ್ಪರ್ಧಿಗಳೊಂದಿಗೆ ಪುನೀತ್ ಸ್ವತಃ ಕುಣಿದು ಅವರೊಂದಿಗೆ ತಾವೂ ಒಬ್ಬರಾದರು. ರಂಗಾದ ವೇದಿಕೆ ಪುನೀತ್ ನೃತ್ಯದಿಂದ ಮತ್ತಷ್ಟು ಕಲರ್ ಆಯಿತು. ವಿಶೇಷ ಎಂಬಂತೆ ಡಿಕೆಡಿಯ ಸ್ಪರ್ಧಿಯಾಗಿರುವ ಮಾತುಬಾರದ ಮತ್ತು ಕಿವಿ ಕೇಳದ ಚೈತ್ರಾಲಿ ಜತೆಗೂ ಅಪ್ಪು ಡಾನ್ಸ್ ಮಾಡಿ ಎಲ್ಲರನ್ನು ರಂಜಿಸಿದ್ದಾರೆ. ಹನಿಕಾ ಮತ್ತು ಮಿಥುನ್… Read More
Cinisuddi Fresh Cini News Tv / Serial 

ಭಕ್ತಿ ಪ್ರಧಾನ ಧಾರಾವಾಹಿ ನಿರ್ಮಿಸುತ್ತಾರಂತೆ ಪವರ್ ಸ್ಟಾರ್

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರುಗಳು ಸಿನಿಮಾ ಜೊತೆ ಜೊತೆಗೆ ಧಾರಾವಾಹಿ ನಿರ್ಮಾಣ ಮಾಡೋದ್ದು ಸರ್ವೇಸಾಮಾನ್ಯ. ಈಗಾಗಲೇ ಅಣ್ಣಾವ್ರ ಕುಟುಂಬದಿಂದ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಕಿರುತೆರೆಯಲ್ಲಿ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಪುನೀತ್‍ ರಾಜಕುಮಾರ್‍ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ಪವರ್ ಸ್ಟಾರ್ ಪುನೀತ್‍ ರಾಜಕುಮಾರ್‍ ನಟನೆಯ ಜೊತೆಗೆ ಕಿರುತೆರೆಯ ಹಲವಾರು ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದಾರೆ. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಮೂಲಕ ಪುನೀತ್ ಕನ್ನಡಿಗರ ಮನಸ್ಸನ್ನು ಗೆದಿದ್ದಾರೆ. ಇದೀಗ ಮತ್ತೆ ಕಿರುತೆರೆಗೆ ಧಾರಾವಾಹಿ ನಿರ್ಮಾಣ ಮಾಡುವ… Read More
Cinisuddi Fresh Cini News Tv / Serial 

ಪ್ರಕೃತಿಯ ತಪ್ಪಲಲ್ಲಿ “ಕಸ್ತೂರಿ ನಿವಾಸ”

ಮನರಂಜನೆಗೆ ಮತ್ತೊಂದು ಹೆಸರು ಉದಯ ಟಿವಿ. ಬೆಳಗಿನ ಕಾರ್ಯಕ್ರಮಗಳಿಂದ ಶುರುವಾಗಿ ಸೂಪರ್ ಹಿಟ್ ಚಲನಚಿತ್ರಗಳ ಧಮಾಕಾದೊಂದಿಗೆ ಮುದ ನೀಡುವ ಧಾರಾವಾಹಿಗಳು ಒಳಗೊಂಡು ಪ್ರೇಕ್ಷಕನ ಮನಸ್ಸಿನಲ್ಲಿ ಮನೆ ಮಾಡಿದೆ. ಜನಮೆಚ್ಚಿದ ಧಾರಾವಾಹಿಗಳಲ್ಲಿ ಒಂದಾದ ಕಸ್ತೂರಿ ನಿವಾಸ 350 ಸಂಚಿಕೆಗಳನ್ನ ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಒಟ್ಟು ಕುಟುಂಬದ ಆನಂದವನ್ನ ಅತ್ತೆ ಸೊಸೆ ಬಾಂಧವ್ಯವನ್ನ ಈ ಧಾರಾವಾಹಿಯ ಪ್ರಮುಖ ಅಂಶ. ಕಥಾ ಹಂದರದಲ್ಲಿ ಹೊಸತನ ಅಳವಡಿಸುತ್ತಾ ,ಹಂತ ಹಂತಕ್ಕೂ ತಿರುವುಗಳನ್ನ ನೀಡುತ್ತಾ ಪ್ರೇಕ್ಷಕ ವರ್ಗವನ್ನ ಸೆಳೆಯುತ್ತಿದೆ. ಇದೀಗ ನಾಯಕ ರಾಘವ್ , ನಾಯಕಿ ಮೃದುಲಾಳ ಹ್ಯಾಪಿ ಡೇಸ್ಗೆ ಈಡಿ… Read More
Tv / Serial 

ಗಟ್ಟಿಮೇಳದಲ್ಲಿ ‘ವ್ಯಾಲೆಂಟೈನ್ಸ್ ಡೇ’ಗೆ ಟ್ವಿಸ್ಟ್

ಬೆಂಗಳೂರು: ಜೀ ಕನ್ನಡದ ಜನಪ್ರಿಯ ಧಾರಾವಾಹಿ ಈ ವ್ಯಾಲೆಂಟೈನ್ಸ್ ದಿನಕ್ಕೆ ವೀಕ್ಷಕರಿಗೆ ಪ್ರೀತಿಯನ್ನು ಸಂಭ್ರಮಿಸಲು ಒಂದು ಕುತೂಹಲಕಾರಿ ಸರ್ಪ್ರೈಸ್ ತರುತ್ತಿದೆ. ಪ್ರೇಮಿಗಳ ದಿನದಂದು “ಗಟ್ಟಿಮೇಳ”ದಲ್ಲಿ ಚಿತ್ರದ ನಾಯಕ ವೇದಾಂತ್, ನಾಯಕಿ ಅಮೂಲ್ಯಾಗೆ ತಾಜ್ ಮಹಲ್ ಬಳಿಯಲ್ಲಿ ತನ್ನ ಪ್ರೇಮ ನಿವೇದಿಸುತ್ತಾನೆ. ಕನ್ನಡ ಕಿರುತೆರೆಯಲ್ಲಿಯೇ ವಿನೂತನವಾದ ಈ ಪ್ರಯತ್ನ ವೀಕ್ಷಕರನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ಧಾರಾವಾಹಿ ತಂಡ ವ್ಯಕ್ತಪಡಿಸಿದೆ. ಈ ಯೋಜನೆಯ ಹಿಂದಿನ ಪ್ಲಾನ್ ವೇದಾತ್ ತಮ್ಮನದು. ಅವನು ವೇದಾಂತ್ ತಮ್ಮ ಬ್ಯುಸಿನೆಸ್ ಟ್ರಿಪ್ ಎಂದು ಪ್ಲಾನ್ ಮಾಡಿ ದೆಹಲಿಗೆ ಕರೆದುಕೊಂಡು ಹೋಗುತ್ತಾನೆ. ಆಗ ಪ್ರೇಮಿಗಳ… Read More
Cinisuddi Fresh Cini News Tv / Serial 

ಕಾವ್ಯಾಂಜಲಿ “ಲವ್ ಇನ್ ಗೋವಾ”, ಟೆನ್ನಿಸ್ ಕೃಷ್ಣ ಮತ್ತು ರೇಖಾದಾಸ್ ಸಾತ್

ಉದಯ ಟಿವಿ ಅಂದ್ರೆ ಜನಮಾನಸದಲ್ಲಿ ಮನರಂಜನೆಗೆ ಇನ್ನೊಂದು ಹೆಸರು. ಸುಮಾರು ಎರಡೂವರೆ ದಶಕಗಳಿಂದ ತನ್ನ ವಿಭಿನ್ನ ಕಥೆಗಳೊಂದಿಗೆ ಕರುನಾಡ ಕಲಾರಸಿಕರ ಮನಸ್ಸು ಗೆದ್ದಿದೆ. ಕೌಟುಂಬಿಕ ಕಥಾವಸ್ತುವಿನ ಜೊತೆಜೊತೆ ವೀಕ್ಷಕರ ಹೃದಯ ಮಿಡಿವ ಭಾವಗಳ ಸರಿಮಿಶ್ರಣದ ರಸದೌತಣ ನೀಡುತ್ತಿರೊ ಉದಯ ಟಿವಿಯ ಯಶಸ್ವಿ ಧಾರಾವಾಹಿಗಳಲ್ಲಿ ಕಾವ್ಯಾಂಜಲಿ ಕೂಡ ಒಂದು. ಇದೀಗ ಕಾವ್ಯಾಂಜಲಿ ಧಾರಾವಾಹಿಯು 150 ಸಂಚಿಕೆಗಳನ್ನು ಪೂರೈಸಿದೆ. ಫೆಬ್ರವರಿ ಅಂದ್ರೆ ಪ್ರಪಂಚದಾದ್ಯಂತ ಪ್ರೇಮಿಗಳ ಸಂಬ್ರಮ ಶುರುವಾಗುತ್ತೆ. ಕಾವ್ಯಾಂಜಲಿ ಧಾರಾವಾಹಿ ಅಂದ್ರೆ ಕಾವ್ಯ-ಸಿದ್ಧಾರ್ಥ್, ಅಂಜಲಿ-ಸುಶಾಂತ್ ಮುದ್ದಾದ ಜೋಡಿ ಕಣ್ಮುಂದೆ ಬರುತ್ತೆ. ಏನಿದು ಫೆಬ್ರವರಿ ಕಾವ್ಯಾಂಜಲಿ ಕನೆಕ್ಷನ್ ಅಂತೀರಾ?… Read More
Cinisuddi Fresh Cini News Tv / Serial 

ಇವರೇನಾ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗಳು..?!

ಕೊರೋನಾ ಹಾವಳಿಯಿಂದ ಹಲವಾರು ರಿಯಾಲಿಟಿ ಶೋಗಳು , ಕಾರ್ಯಕ್ರಮಗಳು ಹಾಗೂ ಚಿತ್ರೋದ್ಯಮವು ಸ್ತಬ್ಧವಾಗಿತ್ತು. ಈಗ ಒಂದರ ಹಿಂದೆ ಒoದು ತೆರೆಯುತ್ತಿದ್ದಂತೆ, ಬಿಗ್ ಬಾಸ್ ಸೀಸನ್ ಯಾವಾಗ ಆರಂಭ ಎಂಬ ಪ್ರಶ್ನೆಯೂ ಕಾಡಿತು. ಸದ್ಯ ಅದಕ್ಕೆಲ್ಲ ಉತ್ತರ ಎಂಬಂತೆ ಬಿಗ್ ಬಾಸ್ ಮನೆಗೆ ಹೋಗುವ ಸ್ಪರ್ಧಿಗಳ ಯಾರ್ಯಾರು ಎಂಬ ಹೆಸರು ಈಗ ಹರಿದಾಡುತ್ತಿದೆ. ಬಿಗ್ ಬಾಸ್ ಸೀಸನ್ 8 ಕುರಿತಾಗಿ ಒಂದಷ್ಟು ಮಾಹಿತಿಗಳು ಹೊರ ಬರುತ್ತಿದ್ದು , ಈ ಬಾರಿ ಯಾವೆಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಕ್ಕೆ ಹೋಗಬಹುದು ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್… Read More
Cinisuddi Fresh Cini News Tv / Serial 

ಉದಯ ಟಿವಿಯಲ್ಲಿ ನಿರ್ಮಾಪಕ ಜಯಣ್ಣರ ಚೊಚ್ಚಲ ಧಾರಾವಾಹಿ “ನಯನತಾರಾ”

ಕಳೆದ ಎರಡೂವರೆ ದಶಕಗಳಿಂದ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ವಾಹಿನಿ ʻಉದಯ ಟಿವಿʼ, ವೈವಿಧ್ಯಮಯ ಧಾರಾವಾಹಿಗಳ ಮೂಲಕ ವೀಕ್ಷಕ ಹೃದಯಕ್ಕೆ ಇನ್ನಷ್ಟು ಹತ್ತಿರವಾಗುತ್ತಿದೆ. ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸ, ಸೇವಂತಿ, ಸುಂದರಿ ಹೀಗೆ ವಿಭಿನ್ನ ಕಥೆಗಳು ನೋಡುಗರ ಮೆಚ್ಚುಗೆ ಪಡೆದಿವೆ. ಈ ವರ್ಣರಂಜಿತ ಗುಚ್ಛಕ್ಕೆ ವಿನೂತನ ಸೇರ್ಪಡೆ ಹೊಸ ಧಾರಾವಾಹಿ ʻನಯನತಾರಾʼ. ತನ್ನ ಪ್ರಾಮಾಣಿಕತೆ, ನಿಷ್ಠೆ, ಸತ್ಯಸಂಧತೆ, ಮುಗ್ದತೆಯ ಮೂಲಕ ಮನಗೆಲ್ಲುವ ಸರಳ ಹುಡುಗಿ ನಯನಾ ಮತ್ತು ಅತಿಯಾಸೆ, ಭ್ರಮೆ, ಸುಳ್ಳು, ವಿಶ್ವಾಸದ್ರೋಹದ ಮೂಲಕ ಬದುಕಲ್ಲಿ ಸೋಲುವ ತಾರಾ ಈ ಇಬ್ಬರು ಅಕ್ಕತಂಗಿಯರ ಕಥೆ… Read More