Cinisuddi Fresh Cini News Tollywood 

ಬೆಂಗಳೂರಿನಲ್ಲಿ ರಾಜಮೌಳಿಯ “RRR” ಟೀಮ್

ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವಂಥ ಚಿತ್ರ “RRR”. ವಿಶ್ವದಾದ್ಯಂತ ಜನವರಿ 07 ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಪ್ರಚಾರ ಕಾರ್ಯವನ್ನು ತಂಡ ಅದ್ಧೂರಿಯಾಗಿ ನಡೆಸುತ್ತಿದ್ದೆ. ಕನ್ನಡದಲ್ಲಿ ಡಬ್ ಆಗಿರುವ ಈ ಚಿತ್ರದ ಕುರಿತು ಒಂದಷ್ಟು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಬೆಂಗಳೂರಿನ ಒರಾಯನ್ ಮಾಲ್ ನ ಪಿವಿಆರ್ ಗೆ ಆಗಮಿಸಿತ್ತು. ಸಿನಿಮಾದ ಅಂಗಳದ ಯಾವುದೇ ಮೂಲೆ..ಗಲ್ಲಿ ಗಲ್ಲಿಯಲ್ಲಿಯೂ ಈಗ ಬರೀ RRR ಸಿನಿಮಾದ್ದೇ ಜಪ-ತಪ. ಯೂಟ್ಯೂಬ್ ನಲ್ಲಿ ಬೆಂಕಿ ಬಿರುಗಾಳಿ ಸೃಷ್ಟಿಸ್ತಿರುವ RRR ಟ್ರೇಲರ್ ನೋಡಿ ಚಿತ್ರಪ್ರೇಮಿಗಳು ಬಹುಪರಾಕ್ ಅಂತಿದ್ದಾರೆ. # ಕನ್ನಡದಲ್ಲಿ ಮಾತಾಡಿದ ರಾಜಮೌಳಿ… Read More
Cinisuddi Fresh Cini News Tollywood 

ಡಿ. 3ರಂದು ಬಹು ನಿರೀಕ್ಷಿತ “ಆರ್ ಆರ್ ಆರ್” ಟ್ರೇಲರ್ ಬಿಡುಗಡೆ

ಎಸ್.ಎಸ್.ರಾಜಮೌಳಿ ಆರ್ ಆರ್ ಆರ್ ಅಂಗಳದಿಂದ ಧಮಾಕೇದಾರ್ ಸುದ್ದಿಯೊಂದು ಹೊರ ಬಂದಿದೆ. ಟೀಸರ್ ಹಾಗೂ ಹಾಡಿನ ಮೂಲಕ ಕುತೂಹಲದ ಕೋಟೆ ಕಟ್ಟಿದ್ದ ಆರ್ ಆರ್ ಆರ್ ಟ್ರೇಲರ್ ಗೆ ಅಭಿಮಾನಿಗಳು ಎದುರು ನೋಡುತ್ತಿದ್ದರು. ಫೈನಲಿ ತ್ರಿಬಲ್ ಆರ್ ಸಿನಿಮಾದ ಟ್ರೇಲರ್ ಎಂಟ್ರಿಗೆ ದಿನಾಂಕ‌ ನಿಗದಿಯಾಗಿದೆ. ಡಿಸೆಂಬರ್ 3 ರಂದು ರಾಜಮೌಳಿಯ ಆರ್ ಆರ್ ಆರ್ ಸಿನಿಮಾ ಟ್ರೇಲರ್ ರಿಲೀಸ್ ಆಗ್ತಿದೆ. ಪಂಚ ಭಾಷೆಯಲ್ಲಿ ತಯಾರಾಗ್ತಿರುವ ಆರ್ ಆರ್ ಆರ್ ಸಿನಿಮಾ ಮೇಲೆ ಭಾರತೀಯ ಚಿತ್ರರಂಗದ ಚಿತ್ತ ನೆಟ್ಟಿದೆ. ಜಕ್ಕಣ್ಣಗಾರು ಸಿನಿಮಾ ಅಂದ್ಮೇಲೆ ಆ ನಿರೀಕ್ಷೆ… Read More
Cinisuddi Fresh Cini News Tollywood 

ಪ್ಯಾನ್ ಇಂಡಿಯಾ “ಮೈಕಲ್” ಶುರು

ಸಂದೀಪ್ ಕಿಶನ್ ಮತ್ತು ಮಕ್ಕಳ್ ಸೇಲ್ವನ್ ವಿಜಯ್ ಸೇತುಪತಿ ಕಾಂಬಿನೇಷನ್ನಲ್ಲಿ ಮೈಕಲ್ ಶೀರ್ಷಿಕೆ ಸಿನಿಮಾ ಶುರುವಾಗಿದೆ. ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್ ಎಲ್ ಪಿ ಮತ್ತು ಕರಣ್ ಸಿ ಪ್ರೊಡಕ್ಷನ್ಸ್ ಎಲ್ಎಲ್ಪಿ ಬ್ಯಾನರ್ನಲ್ಲಿ ಸಿದ್ಧವಾಗಲಿರುವ ಈ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಆಗಲಿದ್ದು, ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ .ಈಗಾಗಲೇ ಹಲವು ಸಿನಿಮಾ ನಿರ್ಮಾಣ ಮಾಡಿರುವ ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್ ಎಲ್ ಪಿ ಇದೀಗ ಮಾಸ್ ಎಂಟರ್ಟೈನರ್ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದು, ಭರವಸೆಯ ನಾಯಕ ನಟ ಸಂದೀಪ್ ಕಿಶನ್ ಅವರನ್ನು ನಾಯಕನನ್ನಾಗಿ… Read More
Cinisuddi Fresh Cini News Tollywood 

ಬಹು ನಿರೀಕ್ಷಿತ “RRR” ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್

ಬಹುನಿರೀಕ್ಷಿತ RRR , ರೌದ್ರ ರಣ ರುಧಿರ, ಚಿತ್ರವೂ ದಸರಾ ಹಬ್ಬದಂದು ತೆರೆಗಪ್ಪಳಿಸಲು ಸಿದ್ಧವಾಗಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರವನ್ನು ಕನ್ನಡಕ್ಕೆ ಕೆ.ಆರ್.ಜಿ ಸ್ಟುಡಿಯೊಸ್ ತರುತ್ತಿದೆ. ಪಂಚಭಾಷೆಗಳಲ್ಲಿ ಏಕಕಾಲಕ್ಕೆ ಅಕ್ಟೋಬರ್ ೧೩ರಂದು ತೆರೆಕಾಣಲಿದೆ. ಜೂ. ಎನ್.ಟಿ.ಆರ್ , ರಾಮ್ ಚರಣ್, ಅಜಯ್ ದೇವ್ಗನ್, ಅಳಿಯ ಭಟ್, ಸಮುಥಿರಕಿಣಿ ಮುಂತಾದವರ ದೊಡ್ಡ ತಾರಾಬಳಗ ಈ ಚಿತ್ರಕ್ಕಿದೆ. ಪಿರಿಯಡ್ ಆಕ್ಷನ್ ಡ್ರಾಮಾ ಇದಾಗಿದ್ದು, ಇಬ್ಬರು ಸ್ವತಂತ್ರ ಹೋರಾಟಗಾರರ ಕುರಿತ ಕಥೆಯಾಗಿದೆ. ಡಿ.ವಿ.ವಿ. ದಾನಯ್ಯ ಈ ಚಿತ್ರದ ನಿರ್ಮಾಪಕರು. Read More
Cinisuddi Fresh Cini News Tollywood 

“ಸಲಾರ್‌” ಚಿತ್ರದ ಮುಹೂರ್ತದಲ್ಲಿ ಕನ್ನಡ -ತೆಲುಗು ಚಿತ್ರೋದ್ಯಮದ ಮಹಾಸಂಗಮ

ಕನ್ನಡ ಚಿತ್ರರಂಗದ ಸ್ಥಾಯಿಯನ್ನು ದಿಗಂತಕ್ಕೆ ವಿಸ್ತರಿಸುವ ಹಾಗೂ ಇಡೀ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಪ್ರತಿಭೆಗಳ ಶಕ್ತಿಯನ್ನು ಸಾಕ್ಷಾತ್ಕರಿಸುವ ವರದಿಯೊಂದು ಇಂದು ಹೈದರಾಬಾದ್‌ನ ರಾಮಾನಾಯ್ಡು ಸ್ಟುಡಿಯೋದಿಂದ ಬಂದಿದೆ. ಬಾಹುಬಲಿ ಖ್ಯಾತಿಯ ಪ್ರಭಾಸ್‌ ನಟಿಸುತ್ತಿರುವ, ʼಕೆಜಿಎಫ್‌ʼ ಚಿತ್ರದಂಥ ಬಿಗ್‌ ಬಜೆಟ್‌ ಇಂಡಿಯನ್‌ ಸಿನಿಮಾವನ್ನು ನಿರ್ಮಾಣ ಮಾಡಿ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್‌ನ ವಿಜಯ್‌ ಕಿರಗಂದೂರು ಅವರು ನಿರ್ಮಿಸುತ್ತಿರುವ ಹಾಗೂ ಅದೇ ʼಕೆಜಿಎಫ್‌ʼ ಚಿತ್ರವನ್ನು ನಿರ್ದೇಶಿಸಿ ಮೊದಲ ಟೀಸರ್‌ನಿಂದಲೇ ಜಗತ್ತಿನ ಎಲ್ಲ ದಾಖಲೆಗಳನ್ನು ಬ್ರೇಕ್‌ ಮಾಡಿರುವ ಪ್ರಶಾಂತ್‌ ನೀಲ್‌ ನಿರ್ದೇಶನದ ʼಸಲಾರ್‌ʼ ಚಿತ್ರಕ್ಕೆ ರಾಮಾನಾಯ್ಡು ಸ್ಟುಡಿಯೋದಲ್ಲಿ ಚಾಲನೆ ನೀಡಲಾಯಿತು. ಮಕರ… Read More
Cinisuddi Fresh Cini News Tollywood 

“30 ರೊಜುಲಾ ಪ್ರೇಮಿಚದಂ ಎಲಾ..?” ತೆಲುಗು ಚಿತ್ರ‌ 29 ರoದು ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ 17 ಚಿತ್ರಗಳನ್ನು ನಿರ್ಮಿಸಿರುವ , ತೆಲುಗಿನಲ್ಲೂ ಈಗಾಗಲೇ ಎರಡು ಚಿತ್ರಗಳ ನಿರ್ಮಾಣ ಮಾಡಿರುವ ನಿರ್ಮಾಪಕ ಎಸ್.ವಿ.ಬಾಬು ಅವರು ತಮ್ಮ ಎಸ್.ವಿ.ಪ್ರೊಡಕ್ಷನ್ಸ್ ಮೂಲಕ ನಿರ್ಮಿಸಿರುವ “30 ರೊಜುಲಾ ಪ್ರೇಮಿಚದಂ ಎಲಾ?” ತೆಲುಗು ಚಿತ್ರ ಜನವರಿ 29 ರಂದು ಬಿಡುಗಡೆಯಾಗಲಿದೆ. ಆಂದ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ 400 ಹಾಗೂ ಕರ್ನಾಟಕದಲ್ಲಿ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಖ್ಯಾತ ನಿರ್ದೇಶಕ ಸುಕುಮಾರ್ ಅವರ ಬಳಿ ಕಾರ್ಯ ನಿರ್ವಹಿಸಿ ಅನುಭವವಿರುವ ಮುನ್ನಾ‌ ಈ ಚಿತ್ರ ನಿರ್ದೇಶಿಸಿದ್ದಾರೆ. ಅನೂಪ್ ರುಬೆನ್ಸ್ ಸಂಗೀತ ನೀಡಿದ್ದು, ‘ನೀಲಿ ನೀಲಿ… Read More
Cinisuddi Fresh Cini News Tollywood 

ಟಾಲಿವುಡ್ ನಿಂದ ಉಪ್ಪಿಗೆ ಮತ್ತೆ ಬಂತು ಕರೆ

ಸ್ಯಾಂಡಲ್‍ವುಡ್‍ನ ಸ್ಟಾರ್ ನಟರು ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗದೆ ಪರಭಾಷೆಗಳಲ್ಲೂ ತಮ್ಮ ಕ್ರೇಜ್ ಅನ್ನು ಹುಟ್ಟುಹಾಕಿದ್ದಾರೆ. ಕನ್ನಡದವರೇ ಆದ ಪ್ರಕಾಶ್‍ರೈಘಿ, ಪ್ರಭುದೇವ, ಅರ್ಜುನ್‍ಸರ್ಜಾರಂತಹ ನಟರು ಚಂದವನಕ್ಕಿಂತ ಟಾಲಿವುಡ್, ಕಾಲಿವುಡ್‍ನಲ್ಲೇ ಮಿಂಚಿದ್ದೇ ಹೆಚ್ಚು ಅಲ್ಲೇ ತಮ್ಮ ಫ್ಯಾನ್ಸ್ ಕ್ಲಬ್ ಅನ್ನು ಕೂಡ ಹುಟ್ಟುಹಾಕಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಅವರು ಕೂಡ ಕೆಲವು ಪರಭಾಷಾ ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದರು. ಡೈನಾಮಿಕ್ ಸ್ಟಾರ್ ದೇವರಾಜ್, ಟೈಗರ್ ಪ್ರಭಾಕರ್ ಪರಭಾಷೆಯಲ್ಲಿ ಖಾಯಂ ವಿಲನ್‍ಗಳಾಗಿಯೇ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು. ಈಗ ರಿಯಲ್‍ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್‍ರ ಸರದಿ. ಈಗ ಚಿತ್ರದ ನಂತರ ಕಿಚ್ಚ… Read More
Cinisuddi Fresh Cini News Tollywood 

ಕರ್ಣಂ ಮಲ್ಲೇಶ್ವರಿ ಪಾತ್ರಕ್ಕೆ ರಾಕುಲ್ ಪ್ರೀತ್ ಸಿಂಗ್ ಗ್ರೀನ್‍ಸಿಗ್ನಲ್

ಕ್ರೀಡಾಲೋಕ ಹಾಗೂ ಸಿನಿಮಾ ಕ್ಷೇತ್ರಗಳಿಗೂ ಸಾಕಷ್ಟು ಅವಿನಾಭಾವ ಸಂಬಂಧಗಳಿವೆ. ವಿರಾಟ್ ಕೊಹ್ಲಿಘಿ, ಮೊಹಮ್ಮದ್ ಅಜರುದ್ದೀನ್, ಯುವರಾಜ್‍ಸಿಂಗ್ ಸೇರಿದಂತೆ ಹಲವು ಕ್ರಿಕೆಟಿಗರು ಸಿನಿಮಾ ತಾರೆಯರನ್ನು ವಿವಾಹವಾಗಿದ್ದಾರೆ. ಮಿಲ್ಖಾಸಿಂಗ್, ಎಂ.ಎಸ್.ಧೋನಿ, ಕಪಿಲ್‍ದೇವ್ ಸೇರಿದಂತೆ ಹಲವು ಕ್ರೀಡಾಪಟುಗಳ ಜೀವನಾಧಾರಿತ ಕಥೆಗಳು ಚಿತ್ರರೂಪ ಪಡೆದುಕೊಂಡಿವೆ. ಬಾಲಿವುಡ್‍ನಲ್ಲಿ ಈಗಾಗಲೇ ವೇಗದ ಓಟಗಾರ ಮಿಲ್ಖಾಸಿಂಗ್ ಜೀವನಾಧಾರಿತವಾಗಿ ಬಾಗ್ ಮಿಲ್ಖಾ ಬಾಗ್, ಧೋನಿ ಜೀವನ ರೂಪಿಸುವ ಆನ್‍ಟೋಲ್ಡ್ ಸ್ಟೋರಿ ಧೋನಿ, ವಿಶ್ವಕಪ್ ವಿಜೇತ ನಾಯಕ ಕಪಿಲ್‍ದೇವ್‍ರ ಜೀವನಾಧಾರಿತ 83 ಸೇರಿದಂತೆ ದಂಗಲ್, ಚಕ್‍ದೇ ಇಂಡಿಯಾ ಇನ್ನೂ ಹಲವು ಕ್ರೀಡಾಆಧಾರಿತ ಚಿತ್ರಗಳು ಪ್ರೇಕ್ಷಕರ ಮನಸ್ಸು ಕದ್ದು… Read More
Cinisuddi Fresh Cini News Tollywood 

ಪ್ರಭಾಸ್ ಜೊತೆಯಾಗಲು ಸೌತ್ ಇಂಡಿಯಾಗೆ ದೀಪಿಕಾ ರೀ ಎಂಟ್ರಿ

ಭಾರತದ ಯಾವುದೇ ಮೂಲೆಯಲ್ಲಿ ನಮ್ಮ ಕನ್ನಡದ ನಟಿಯರು ಇದ್ದರೂ ಸಿನಿಮಾಗಳ ಮೂಲಕ ಸದ್ದನ್ನು ಮಾಡುತ್ತಲೇ ಇರುತ್ತಾರೆ. ಆ ಸಾಲಿಗೆ ನಟಿ ದೀಪಿಕಾ ಪಡುಕೋಣೆ ಕೂಡ ಒಬ್ಬರು , ಬಾಲಿವುಡ್ ನ ಸ್ಟಾರ್ ಡಂ ನಟಿಯಾಗಿರುವ ದೀಪಿಕಾ ಮೊದಲು ಬಣ್ಣ ಹಚ್ಚಿದ್ದು ಕರುನಾಡಲ್ಲೇ… 2006 ರಲ್ಲಿ ಟ್ಯಾಲೆಂಟೆಡ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ರಿಯಲ್ ಸ್ಟಾರ್ , ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ “ಐಶ್ವರ್ಯ” ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಬಣ್ಣವನ್ನು ಹಚ್ಚಿದ್ರು. ಮುದ್ದಾದ ಈ ಬೆಡಗಿ ನಂತರ ಹಾರಿದ್ದು ಬಾಲಿವುಡ್ ಗೆ. ಹಿಂದಿ ಚಿತ್ರರಂಗದಲ್ಲಿ… Read More
Cinisuddi Fresh Cini News Tollywood 

ಟಾಲಿವುಡ್‍ನಲ್ಲಿ ನಭಾ ನಟೇಶ್ ಸದ್ದು

ಚಿಲ್ಲಿ ದೇಸ್ ಮೇ ಕೊಯಿ ಬಿಲ್ಲಿ ಆಯಾ ರೇ… ಹೆಣ ಬೀಳೋ ಜಾಗದಲ್ ನೊಣ ಇರ್ಬೇಕು, ಇಲ್ಲ ಈ ಪಟಾಕ ಹವಾ ಇರಬೇಕು ಎಂಬ ಮಾಸ್ ಪಂಚ್‍ನಿಂದ ಗಮನ ಸೆಳೆದಿದ್ದ ನಭಾ ನಟೇಶ್ ತಾನು ನಟಿಸಿದ ಮೊದಲ ಚಿತ್ರ ವಜ್ರಕಾಯದಲ್ಲೇ ತಮ್ಮ ಹವಾ ಎಬ್ಬಿಸಿದ್ದರು. ನಂತರ ಲೀ, ಸಾಹೇಬದಲ್ಲಿ ತನ್ನ ಅಭಿನಯದ ಕಂಪು ಸೂಸಿದ ನಭಾನಟೇಶ್ ಟಾಲಿವುಡ್‍ನಲ್ಲೂ ತನ್ನ ಹವಾ ಎಬ್ಬಿಸಿದ್ದು `ನನ್ನು ದೋಚುಕೊಂಡುವಂಟೆ’ ಚಿತ್ರದ ಮೂಲಕ. ನಂತರ ಟಾಲಿವುಡ್‍ನಲ್ಲೇ ಬ್ಯುಸಿಯಾಗಿರುವ ನಭಾಗೆ ರಾಮ್‍ಪೋತಿನೇನಿ ಅಭಿನಯದ `ಇಸ್ಮಾರ್ಟ್ ಶಂಕರ್’ ಅವರನ್ನು ಮತ್ತೊಂದು ಮಜಲಿನತ್ತ ಕೊಂಡೊಯ್ದಿತು.… Read More