Bollywood Cinisuddi Fresh Cini News Tollywood 

ರಣಬೀರ್ ಕಪೂರ್ ಪ್ಯಾನ್ ಇಂಡಿಯಾ ಸಿನಿಮಾ ‘ಅನಿಮಲ್’ ಫಸ್ಟ್ ಲುಕ್ ರಿಲೀಸ್

ಸೌತ್ ಸಿನಿ ದುನಿಯಾದಲ್ಲಿ ‘ಅರ್ಜುನ್ ರೆಡ್ಡಿ’ ಚಿತ್ರದ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ. ‘ಕಬೀರ್ ಸಿಂಗ್’ ಮೂಲಕ ಬಾಲಿವುಡ್ ಅಂಗಳದಲ್ಲೂ ಛಾಪು ಮೂಡಿಸಿದ್ದಾರೆ. ಇದೀಗ ಬಿ ಟೌನ್ ಸ್ಟಾರ್ ನಟ ರಣಬೀರ್ ಕಪೂರ್ ಜೊತೆಗೂಡಿ ಪ್ಯಾನ್ ಇಂಡಿಯಾ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಚಿತ್ರಕ್ಕೆ ‘ಅನಿಮಲ್’ ಎಂದು ಟೈಟಲ್ ಇಡಲಾಗಿದ್ದು, ಈ ಚಿತ್ರದ ಮೂಲಕ ರಣಬೀರ್ ಕಪೂರ್ ಆಕ್ಷನ್ ಹೀರೋ ಆಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಹೊಸ ವರ್ಷದ ಸಂಭ್ರಮಕ್ಕೆ ‘ಅನಿಮಲ್’ ಚಿತ್ರದ ಫಸ್ಟ್ ಲುಕ್… Read More
Cinisuddi Fresh Cini News Kollywood mollywood Tollywood Tv / Serial 

2023 ಏಪ್ರಿಲ್ 28ಕ್ಕೆ  ‘ಪೊನ್ನಿಯಿನ್ ಸೆಲ್ವನ್’ ಸೀಕ್ವೆಲ್ 2 ಚಿತ್ರ ರಿಲೀಸ್.

ಐತಿಹಾಸಿಕ ಸ್ಟೋರಿ, ಸ್ಟಾರ್ ಡೈರೆಕ್ಟರ್, ಸ್ಟಾರ್ ತಾರಾಗಣ, ಅದ್ದೂರಿ ಮೇಕಿಂಗ್, ಸಂಗೀತ ಮಾಂತ್ರಿಕನ ಮ್ಯೂಸಿಕ್ ಇದೆಲ್ಲವೂ ಒಳಗೊಂಡ ಸಿನಿಮಾವೇ ‘ಪೊನ್ನಿಯಿನ್ ಸೆಲ್ವನ್’. ಸೆಪ್ಟೆಂಬರ್ 30ರಂದು ಮೊದಲ ಸೀಕ್ವೆಲ್ ರಿಲೀಸ್ ಆಗಿ ವರ್ಲ್ಡ್ ವೈಡ್ ಸೂಪರ್ ಸಕ್ಸಸ್ ಕಂಡ ಚಿತ್ರದಿಂದ ಹೊಸ ಅಪ್ಡೇಟ್ ಹೊರಬಿದ್ದಿದೆ. ‘ಪೊನ್ನಿಯಿನ್ ಸೆಲ್ವನ್’ ಸೀಕ್ವೆಲ್ 2 ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು 2023 ಏಪ್ರಿಲ್ 28ಕ್ಕೆ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ ‘ಪೊನ್ನಿಯಿನ್ ಸೆಲ್ವನ್’. ಕಾರ್ತಿ, ಐಶ್ವರ್ಯಾ ರೈ, ಚಿಯಾನ್… Read More
Cinisuddi Fresh Cini News Tollywood 

ಎರಡು ದಶಕ ಪೂರೈಸಿದ ಮ್ಯೂಸಿಕ್ ಮಾಂತ್ರಿಕ ಮಣಿಕಾಂತ್ ಕದ್ರಿ.

ಸ್ಯಾಂಡಲ್ ವುಡ್ ಅಂಗಳದ ಮ್ಯೂಸಿಕ್ ಮಾಂತ್ರಿಕ ಮಣಿಕಾಂತ್ ಕದ್ರಿ ಸಂಗೀತ ನೀಡಿರೋ ಹಾಡುಗಳು ಯಾರಿಗೆ ಇಷ್ಟವಾಗೋದಿಲ್ಲ ಹೇಳಿ. ಹಿತವೆನಿಸುವ ಹಾಡು, ಮನಸ್ಸಿಗೆ ಮುದ ನೀಡೋ ಸಂಗೀತದ ಮೂಲಕ ಸದಾ ಎಲ್ಲರ ಮನಸೂರೆಗೊಳ್ಳುವ ಮಣಿಕಾಂತ್ ಕದ್ರಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಎರಡು ದಶಕ ಪೂರೈಸಿದ್ದಾರೆ. ಯಾವುದೇ ಜಾನರ್ ಸಿನಿಮಾವಿರಲಿ ಮಣಿಕಾಂತ್ ಕದ್ರಿ ಸಂಗೀತ ಅಲ್ಲೊಂದು ಮ್ಯಾಜಿಕ್ ಮಾಡಿರುತ್ತೆ. ಹಾಡುಗಳು ಗುನುಗುವಂತೆ ಮಾಡುತ್ತೆ, ಮನಸ್ಸನ್ನು ತಲುಪುತ್ತೆ ಅದು ಇವರ ಮ್ಯೂಸಿಕ್ ಸ್ಪರ್ಶಕ್ಕಿರುವ ತಾಕತ್ತು. ‘ಪೃಥ್ವಿ’, ‘ಸವಾರಿ’, ‘ಸವಾರಿ 2’, ‘ಮದುವೆ ಮನೆ’, ‘ನಡುವೆ ಅಂತರವಿರಲಿ’, ‘ರನ್ ಆಂಟನಿ’… Read More
Bollywood Cinisuddi Fresh Cini News Kollywood mollywood Tollywood Tv / Serial 

ಅಭಿಷೇಕ್ ಅಂಬರೀಶ್ ಇಂದು ಅವಿವಾ ಬಿದ್ದಪ್ಪ ಜೊತೆ ನಿಶ್ಚಿತಾರ್ಥ.

ಚಿತ್ರರಂಗದಲ್ಲಿ ಮತ್ತೊಂದು ಭರ್ಜರಿ ಸುದ್ದಿ ಹೊರ ಬಂದಿದೆ. ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸಂಸದೆ ಸುಮಲತಾ ರವರ ಸುಪುತ್ರ ಅಭಿಷೇಕ ಅಂಬರೀಶ್ ರವರ ಎಂಗೇಜ್ಮೆಂಟ್ ಕಾರ್ಯಕ್ರಮ ಬೆoಗಳೂರಿನ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ನಡೆಯಿತು. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ಇಂದು ಎಂಗೇಜ್ ಆಗಿದ್ದಾರೆ. ಈ ಒಂದು ನಿಶ್ಚಿತಾರ್ಥ ಸಮಾರಂಭವು ಆಪ್ತರ ಸಮ್ಮುಖದಲ್ಲಿ ನೆರವೇರಿದೆ. ಮುಂದಿನ ವರ್ಷ ಈ ಜೋಡಿಯ ಮದುವೆ ಅದ್ದೂರಿಯಾಗಿ ನೆರವೇರಲಿಯಂತೆ. ಅಭಿಷೇಕ್ ಹಾಗೂ ಅವಿವಾ ಅವರು ಬಹಳ ವರ್ಷಗಳಿಂದ ಸ್ನೇಹಿತರಾಗಿದ್ದು,… Read More
Cinisuddi Fresh Cini News Tollywood 

ಆಕ್ಷನ್ ಥ್ರಿಲ್ಲರ್ ‘ಹಿಟ್ -2’ ಚಿತ್ರ ರಿಲೀಸ್

‘ಮೇಜರ್’ ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ತೆಲುಗು ನಟ ಅಡವಿ ಶೇಷ್ ‘ಹಿಟ್-2’ ಸಿನಿಮಾ ಡಿಸೆಂಬರ್ 2ರಂದು ಬಿಡುಗಡೆಯಾಗುತ್ತಿದೆ. ಚಿತ್ರವನ್ನು ‘ಹಿಟ್’ ಸಿನಿಮಾ ಖ್ಯಾತಿಯ ಡಾ. ಶೈಲೇಶ್ ಕೊಲನು ನಿರ್ದೇಶನ ಮಾಡಿದ್ದಾರೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಬಂದಿದ್ದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಚಿತ್ರದ ನಿರ್ದೇಶಕ ಶೈಲೇಶ್ ಕೊಲನು ಮಾತನಾಡಿ ‘ಹಿಟ್ 1’ಗೆ ಬಹಳ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿತ್ತು. ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾದ ಮೇಲೆ ಹೆಚ್ಚಿನ ಜನತೆ ಚಿತ್ರವನ್ನು ನೋಡಿ, ಮೆಚ್ಚುಗೆ ಸೂಚಿಸಿದ್ದಾರೆ. ಅದರಲ್ಲೂ… Read More
Cinisuddi Fresh Cini News Tollywood 

ಅಯೋಧ್ಯೆಯ ಶ್ರೀರಾಮನ ಆಶೀರ್ವಾದ ಪಡೆದ “ಹನು-ಮಾನ್” ಚಿತ್ರತಂಡ.

ಪ್ರಶಾಂತ್ ವರ್ಮಾ ನಿರ್ದೇಶನದ ತೇಜ ಸಜ್ಜ ನಟನೆಯ ಬಹು ನಿರೀಕ್ಷಿತ ತೆಲುಗು ಸಿನಿಮಾ ‘ಹನು-ಮಾನ್’. ಪ್ರೈಮ್ ಶೋ ಎಂಟಟೈನ್ಮೆಂಟ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಟೀಸರ್ ಮೂಲಕ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಪಡೆದುಕೊಂಡ ಸಿನಿಮಾ ತಂಡ ಬಿಡುಗಡೆಗೆ ಎದುರು ನೋಡುತ್ತಿದೆ. ಇದೇ ವೇಳೆ ನಿರ್ದೇಶಕ ಪ್ರಶಾಂತ್ ವರ್ಮಾ ಹಾಗೂ ನಾಯಕ ತೇಜ ಸಜ್ಜ ಚಿತ್ರತಂಡದೊಂದಿಗೆ ಅಯೋಧ್ಯೆಗೆ ಭೇಟಿ ಶ್ರೀರಾಮನ ಆಶೀರ್ವಾದ ಪಡೆದಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೋ ‘ಹನು-ಮಾನ್’ ಬಗ್ಗೆ ಕಥೆ… Read More
Cinisuddi Fresh Cini News Tollywood 

ಶಿವಣ್ಣ ಅಭಿನಯದ ಥ್ರಿಲ್ಲರ್ ಚಿತ್ರಕ್ಕೆ ತೆಲುಗು ನಿರ್ದೇಶಕ ಕಾರ್ತಿಕ್ ಅದ್ವೈತ್.

ಹ್ಯಾಟ್ರಿಕ್ ಹೀರೋ, ಅಭಿಮಾನಿಗಳ ಪ್ರೀತಿಯ ಶಿವಣ್ಣ ಸ್ಯಾಂಡಲ್ ವುಡ್ ಬ್ಯುಸಿಯೆಸ್ಟ್ ನಟ. ಸದ್ಯ ಶಿವಣ್ಣ 125ನೇ ಸಿನಿಮಾ ‘ವೇದ’ ಡಿಸೆಂಬರ್ ನಲ್ಲಿ ತೆರೆ ಕಾಣಲು ಸಜ್ಜಾಗಿ ನಿಂತಿದೆ. ಘೋಸ್ಟ್, ನೀ ಸಿಗೋವರೆಗೂ, ಫಾರ್ಟಿಫೈವ್, ಕರಟಕ ದಮನಕ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮತ್ತೊಂದು ಹೊಸ ಚಿತ್ರಕ್ಕೆ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ತೆಲುಗು ನಿರ್ದೇಶಕರೊಬ್ಬರು ಹೇಳಿರೋ ಕಥೆ ಕೇಳಿ ಇಂಪ್ರೆಸ್ ಆಗಿರೋ ಶಿವಣ್ಣ ಅವರೊಂದಿಗೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಅಂದ್ಹಾಗೆ ಶಿವರಾಜ್ ಕುಮಾರ್ ಗೆ ಆಕ್ಷನ್ ಕಟ್ ಹೇಳ್ತಿರೋ ನಿರ್ದೇಶಕ ತೆಲುಗಿನ ಕಾರ್ತಿಕ್ ಅದ್ವೈತ್.… Read More
Cinisuddi Fresh Cini News Tollywood 

ರಿವೀಲ್ ಆಯ್ತು ‘ದಸರಾ’ದಲ್ಲಿ ಕೀರ್ತಿ ಸುರೇಶ್ ಲುಕ್.

ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಮೆಗಾ ಪ್ರಾಜೆಕ್ಟ್ ‘ದಸರಾ’ ಸಿನಿಮಾ ಈಗಾಗಲೇ ಸಿನಿ ಪ್ರಿಯರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಮೂಲಕ ನಾನಿ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ತಲುಪಲಿದ್ದು, ಮಾಸ್ ಅವತಾರದಲ್ಲಿ ರಂಜಿಸಲಿದ್ದಾರೆ. ಖಡಕ್ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವ ನಾನಿಗೆ ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಮಾಸ್ ಸಿನಿಮಾ ‘ದಸರಾ’ದಲ್ಲಿ ಕೀರ್ತಿ ಸುರೇಶ್ ಯಾವ ರೀತಿ ಕಾಣಸಿಗುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿ ಬಳಗದಲ್ಲಿತ್ತು. ಆ ಕುತೂಹಲವನ್ನು ಹಾಗೆ ಕಾಪಾಡಿಕೊಂಡು ಬಂದಿದ್ದ ಚಿತ್ರತಂಡ ಕೀರ್ತಿ… Read More
Cinisuddi Fresh Cini News Kollywood Tollywood 

ಮೋಹನ್ ಬಾಬು ಪುತ್ರ ವಿಷ್ಣು ಮಂಚು ನಟನೆಯ ‘ಜಿನ್ನಾ’ ಚಿತ್ರ ಅಕ್ಟೋಬರ್ 21 ರಂದು  ಬಿಡುಗಡೆ.

ತೆಲಗು ನಟ ವಿಷ್ಣು ಮಂಚು ನಾಯಕರಾಗಿ ಅಭಿನಯಿಸಿರುವ ಆ್ಯಕ್ಷನ್, ಕಾಮಿಡಿ ಜಾನರ್ ನ ‘ಜಿನ್ನಾ’ ಸಿನಿಮಾ ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು, ಇದೇ ಅಕ್ಟೋಬರ್ 21 ರಂದು ವಿಶ್ವಾದಾದ್ಯಂತ ತೆರೆಗೆ ಬರುತ್ತಿದೆ. ಆ ಸಲುವಾಗಿ ಇತ್ತೀಚೆಗೆ ನಟ ವಿಷ್ಣು ಮಂಚು ಸಿನಿಮಾ ಪ್ರಮೋಷನ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ವಿಷ್ಣು ಮಂಚು, ಈ ಮೊದಲು ನಾನು ೨೦೧೨ರಲ್ಲಿ ಸಿನಿಮಾ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಿದ್ದೆ. ಆಗ ನನಗೆ ಅಂಬರೀಶ್ ಅವರು ತುಂಬಾ ಸಪೋರ್ಟ್ ಮಾಡಿದ್ದರು. ಅವರು ನನ್ನ… Read More
Cinisuddi Fresh Cini News Tollywood 

ಕಿರೀಟಿ ಅಭಿನಯದ ಸಿನಿಮಾ ಸೆಟ್ ಗೆ ಶಿವಣ್ಣ  ಸರ್ಪ್ರೈಸ್ ವಿಸಿಟ್.

ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ಕಿರೀಟಿ ಗಂಧದಗುಡಿ ಅಂಗಳಕ್ಕೆ ಗ್ರ್ಯಾಂಡ್ ಆಗಿ ಬಂದಾಗಿದೆ. ಇನ್ನೂ ಹೆಸರಿಡದ ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ರಾಧಾಕೃಷ್ಣ ರೆಡ್ಡಿ ಸಾರಥ್ಯದಲ್ಲಿ ತಯಾರಾಗುತ್ತಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ. ಈಗಾಗಲೇ ರಿಲೀಸ್ ಆಗಿರುವ ಕಿರೀಟಿ ಇಂಟ್ರೂಡಕ್ಷನ್ ಟೀಸರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಇದೀಗ ಸಿನಿಮಾ ಅಂಗಳದಿಂದ ನಯಾ ಖಬರ್ ರಿವೀಲ್ ಆಗಿದೆ. *ಕಿರೀಟಿ ಸಿನಿಮಾ ಸೆಟ್ ನಲ್ಲಿ… Read More