ಸ್ವತಂತ್ರ ನಿರ್ದೇಶನ ಹಾಗೂ ನಟನಾ ಹಾದಿ…”ಅನಂತ ಪಯಣ”.

Spread the love

ನವಂಬರ್ 27ಕ್ಕೆ ಶ್ರೀ ಕಾಕಾ ನಿರ್ದೇಶನದ “ಅನಂತ ಪಯಣ” ಸಿನಿಮಾ ತೆರೆಗೆ… ಕುರಿಗಾಹಿಗಳ ಕಥಾನಕ ಹೊಂದಿರುವ ಈ ಚಿತ್ರವನ್ನು ನಮ್ಮ ರಾಜಕೀಯ ನಾಯಕರು ನೋಡಬೇಕು ಎಂದಿದ್ದಾರೆ.

ಜೀವನವೇ ಒಂದು ರೀತಿಯ ಪಯಣ… ನಾವು ಎಲ್ಲಿ ಹುಟ್ಟಿ ಬೆಳೆದು ಕೊನೆಗೆ ಎಲ್ಲಿ ಸೇರುತ್ತೇವೆ ಅನ್ನುವುದನ್ನು ಹೇಳುವಷ್ಟು ಸುಲಭವಲ್ಲ. ನಮ್ಮ ವಿಧಿ ಎತ್ತ ಕರೆದುಕೊಂಡು ಹೋಗುತ್ತದೋ ಆ ದಿಕ್ಕಿನಲ್ಲಿ ಸಾಗುವುದು ಅಷ್ಟೇ ನಮ್ಮ ಕೆಲಸವಾಗಿರುತ್ತದೆ. ಇಂತದ್ದೇ ಒಂದು ಕಥೆಯನ್ನು ಆಯ್ಕೆ ಮಾಡಿಕೊಂಡು ಪ್ರಥಮ ಬಾರಿಗೆ ಬೆಳ್ಳಿ ಪರದೆ ಮೇಲೆ ನಿರ್ದೇಶನದ ಮೂಲಕ ನಾಯಕ ನಟನಾಗಿ ಅಭಿನಯಿಸುತ್ತಿರುವಂತಹ ಪ್ರತಿಭೆ “ಶ್ರೀಕಾಕಾ”.


ಈ ಚಿತ್ರದ ಕುರಿತು ಮಾತನಾಡಿದ ಶ್ರೀಕಾಕಾ ನಾನು ಮೂಲತಃ ಬೆಳಗಾವಿಯವನು , ಚಿತ್ರರಂಗಕ್ಕೆ ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿ ರಾಕಿಂಗ್ ಸ್ಟಾರ್ ಯಶ್ ಅವರ ಚಿತ್ರ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡುತ್ತಾ ಹಲವು ಆಲ್ಬಮ್ ಸಾಂಗ್ ಗಳ ಜವಾಬ್ದಾರಿಯನ್ನು ವಹಿಸಿಕೊಂಡು, ನಂತರ ಎರಡು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಅನುಭವ ಪಡೆದು , ಈಗ “ಅನಂತ ಪಯಣ” ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗುವುದರ ಜೊತೆಗೆ ನಟನಾಗಿ ಅಭಿನಯಿಸಿದ್ದೇನೆ.


ಈ ಚಿತ್ರವನ್ನು ಸಂತೋಷ ಅಶೋಕ್ ಹೆಗಡೆ ಹಾಗೂ ಸಾಗರ್. ಬಿ. ನಿರ್ಮಾಣ ಮಾಡಿದ್ದು, ಗೆಳೆಯರ ಸಹಕಾರವು ಸಿಕ್ಕಿದೆಯಂತೆ. ಇದೊಂದು ಸಂಚಾರಿ ಕುರುಗಾಯಿಗಳ ಕಥೆ ಆಧಾರಿತ ಚಿತ್ರ. ನಾನು ಸೌದತ್ತಿ ಎಲ್ಲಮ್ಮ ದರ್ಶನ ಪಡೆದು ಬರುವಾಗ ಕುರಿಗಾಯಿಗಳನ್ನ ಕಂಡು ಅವರ ಬಗ್ಗೆ ಚಿತ್ರ ಮಾಡಲು ನಿರ್ಧರಿಸಿದೆ. ಕುರಿಗಾಯಿಗಳ ಬದುಕು ಬವಣೆ , ಊರಿಂದ ಊರಿಗೆ ಅಲೆಯುವ ಬದುಕು , ವಿದ್ಯಾಭ್ಯಾಸವಿಲ್ಲದೆ , ಒಂದು ನೆಲೆ ಕಾಣದೆ ಪರದಾಡುವ ಪರಿಸ್ಥಿತಿಯ ಸುತ್ತ ಈ ಕಥೆ ಸಾಗಲಿದೆ. ರಿಯಲ್ ಆಗಿ ಚಿತ್ರೀಕರಣ ಮಾಡುವ ಪ್ರಯತ್ನ ಮಾಡಿದ್ದು , ಇದಲ್ಲೊಂದು ಪ್ರೀತಿಯ ಎಳೆಯು ಇದೆ. ಈ ಚಿತ್ರವನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ನಾನಾ ಭಾಗಗಳಲ್ಲಿ 45 ದಿನ ಚಿತ್ರೀಕರಣ ಮಾಡಿದ್ದು , ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ಸಿನಿಮಾ ಸಿದ್ಧವಾಗಿದೆ. ಕರ್ನಾಟಕದಲ್ಲಿ ಬಾಗುರ್ ಫಿಲಂಸ್ ಮೂಲಕ ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು , ಉತ್ತರ ಕರ್ನಾಟಕದಲ್ಲಿ ಹೆಚ್ಚು ಚಿತ್ರಮಂದಿರದಲ್ಲಿ ತೆರೆಗೆ ತರುವ ಆಲೋಚನೆ ಇದೆ ಎಂದರು.


ಇನ್ನು ಈ ಚಿತ್ರದಲ್ಲಿ ಶ್ರೀ ಕಾಕಾ ನಾಯಕನಾಗಿ ಅಭಿನಯಿಸುತ್ತಿದ್ದು , ಈ ಚಿತ್ರದಲ್ಲಿ ನಾಯಕಿಯಾಗಿ ನಿವಿಷ್ಕಾ ಪಾಟೀಲ್ ಅಭಿನಯಿಸಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಬಾಲ ರಾಜ್ವಾಡಿ, ಲಕ್ಷ್ಮಿ ಸಿದ್ದಯ್ಯ, ಪ್ರಶಾಂತ್ ಸಿದ್ದಿ, ಅಪೂರ್ವ , ಮಂಜುನಾಥ ಹೆಗಡೆ , ಸಂದೀಪ್ ನೀನಾಸಂ, ಅನನ್ಯ ಹಾಗೂ ವಿಶೇಷ ಹಾಡೊಂದರಲ್ಲಿ ಸಂಗೀತ ಭಟ್ ಸೇರಿದಂತೆ ದೊಡ್ಡ ತಾರಾ ಬಳಗವೇ ಕಾಣಿಸಿಕೊಂಡಿದೆಯಂತೆ. ಈ ಚಿತ್ರಕ್ಕೆ ಆಕಾಶ ಪರ್ವ ಸಂಗೀತವನ್ನು ನೀಡಿದ್ದು , ಒಟ್ಟು ಆರು ಹಾಡುಗಳಿಗೆ ನಿರ್ದೇಶಕ ಶ್ರೀಕಾಕಾ ಎರಡು ಹಾಡುಗಳಿಗೆ ನಿತ್ಯ ನಿರ್ದೇಶನ ಮಾಡಿದ್ದು , ಎರಡು ಬಿಟ್ ಸಾಂಗಗಳಿಗೂ ಕೆಲಸ ಮಾಡಿದ್ದು , ಹಾಗೆಯೇ ಮತ್ತೊಬ್ಬ ನೃತ್ಯ ನಿರ್ದೇಶಕ ರಘು ಮಾಸ್ಟರ್ ಈ ಚಿತ್ರದ ಎರಡು ಹಾಡಿಗೆ ಕೆಲಸ ಮಾಡಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ ಮಾಡಿರುವ ಈ ಚಿತ್ರಕ್ಕೆ ದೀಪು ಸಂಕಲನ ಮಾಡಿದ್ದಾರೆ. ಈ ಒಂದು ಕಥೆ ನೈಜಕ್ಕೆ ಹತ್ತಿರವಾಗಿದ್ದು , ಚಿತ್ರದ ಬಗ್ಗೆ ತಂಡ ಬಹಳಷ್ಟು ನಿರೀಕ್ಷೆಯನ್ನ ಇಟ್ಟುಕೊಂಡಿದೆ. ಇದೆ ನವಂಬರ್ 27ರಂದು ರಾಜ್ಯದ್ಯಂತ ಚಿತ್ರ ತೆರೆಗೆ ಬರಲಿದೆ.

Visited 1 times, 1 visit(s) today
error: Content is protected !!