ಬೋಲ್ಡ್ ಅಂಡ್ ಬ್ಲಾಸ್ಟ್ ಲೈಫ್ ನಲ್ಲಿ ಪಶ್ಚಾತಾಪದ ಸರ್ಕಸ್… ಟಾಕ್ಸಿಕ್ ಚಿತ್ರವಿಮರ್ಶೆ ( ರೇಟಿಂಗ್ : 4/5)

Spread the love

ರೇಟಿಂಗ್ : 4/5

ಚಿತ್ರ : ಟಾಕ್ಸಿಕ್
ನಿರ್ದೇಶಕಿ : ಗೀತು ಮೋಹನ್ ದಾಸ್
ನಿರ್ಮಾಪಕರು : ವೆಂಕಟ್ ಕೆ ನಾರಾಯಣ್ , ಯಶ್
ಸಂಗೀತ : ವಿಶಾಲ್ ಮಿಶ್ರ , ರವಿ ಬಸ್ರೂರು
ಛಾಯಾಗ್ರಹಣ : ರಾಜೀವ್ ರವಿ
ತಾರಾಗಣ : ರಾಕಿಂಗ್ ಸ್ಟಾರ್ ಯಶ್ , ಕೈರಾ ಅಡ್ವಾನಿ , ನಯನಾ ತಾರಾ , ಸುತಾರಿಯಾ , ಹುಮಾ ಖುರೇಷಿ , ರುಕ್ಮಿಣಿ ವಸಂತ್, ಕೈಲೆ ಪೌಲ್, ಅಕ್ಷಯ್ ಒಬೆರಾಯ್ ಹಾಗೂ ಮುಂತಾದವರು…

ಹಾಲಿವುಡ್ ಶೈಲಿಯ ದೃಶ್ಯ ವೈಭವದಲ್ಲಿ ನೋವು , ಹಿಂಸೆ , ಕ್ರೌರ್ಯ , ಹಸಿ ಬಿಸಿ ಬದುಕಿನ ನಡುವೆ ಪಾಪ ಪ್ರಜ್ಞೆ , ಪಶ್ಚಾತಾಪದ ರಕ್ತದೊಕುಳಿಯ ಸುರಿಮಳೆ.
ಅರಿವಿಲ್ಲದ ವಯಸ್ಸಿನಲ್ಲಿ ಕಾಣುವ ಕಠೋರ ಕತ್ತಲ ಬದುಕಿನ ಸುಳಿಯಿಂದ ಸಿಡಿದೆದ್ದು ನಿಲ್ಲುವ ಯುವಕನ ಸುತ್ತ ಎದುರಾಗುವ ರೋಚಕ ಘಟನೆಗಳ ಸದ್ದು ಅಬ್ಬರದ ರೋಮಾಂಚನಕಾರಿ ದೃಶ್ಯಗಳ ಸಮ್ಮಿಲನದ ಚಿತ್ರಣವಾಗಿ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಟಾಕ್ಸಿಕ್”.

ಗೋವಾದಲ್ಲಿ 1947ರ ಪೋರ್ಚುಗೀಸರ ಕಾಲದಲ್ಲಿ ನಡೆಯುವ ಕಥೆ ಇದಾಗಿದ್ದು, ಪ್ರೇಮ , ಮೋಹ , ದಾಹದ ಕಥೆಗಳ ದ್ವೇಷ , ವ್ಯಾಪಾರ , ಮೋಜು , ಮಸ್ತಿ , ಬಾಂಬ್ ಬುಲೆಟ್ ಗಳ ಸದ್ದಿನ ಸರಮಾಲೆಯಲ್ಲಿ ಬಾಂಧವ್ಯದ ಪ್ರೀತಿ , ಸಂಬಂಧ , ಮಮತೆಯ ಸೆಳೆತ ಹೊತ್ತುಕೊಂಡಿದೆ.

ರಾಯಲ್ ಯಾಗಿ ಎಂಟ್ರಿ ಆಗುವ ರಾಯ(ಯಶ್) ಗೋವಾ ಪ್ರಾಂತ್ಯವನ್ನೇ ತನ್ನ ಸಾಮ್ರಾಜ್ಯ ಎನ್ನುವಂತೆ ಅಬ್ಬರಿಸುತ್ತಾ ಸಾಲ್ವಿಡರ್ ಬಲಗೈ ಬಂಟನಾಗಿ ಎದುರಾಳಿಗಳ ಎದೆ ನಡುಗಿಸುತ್ತ ಸಾಗುತ್ತಾನೆ. ತನ್ನ ಬದುಕಿಗೆ ಆಸರೆಯಾಗಿ ದಾರಿದೀಪದಂತೆ ನಿಲ್ಲುವ ಅಕ್ಕ ಗಂಗಾ (ನಯನತಾರ).

ಇನ್ನು ಸಾಮ್ರಾಜ್ಯದ ವ್ಯಾಪಾರದಲ್ಲಿ ವೈಶಮ್ಯ , ದ್ವೇಷ , ಗ್ಯಾಂಗ್ವಾರ್ ನಡುವೆ ಬಾಸ್ ಮಗಳು ರಬ್ಬಿಕ (ತಾರಾ ಸುತರಿಯಾ) ರಾಯ ನನ್ನ ಪ್ರೀತಿಸುತ್ತಾಳೆ. ಇದರ ನಡುವೆ ರಾಯಲ್ ಸರ್ಕಸ್ ನಲ್ಲಿ ಬರುವ ಮುದ್ದಾದ ಚೆಲುವೆ ನಾಡಿಯಾ (ಕೈರಾ ಅಡ್ವಾನಿ) ಸೌಂದರ್ಯಕ್ಕೆ ಮನಸೊಲುವ ರಾಯ ಆಕೆಯನ್ನು ಇಷ್ಟಪಡುತ್ತಾನೆ.

ಒಂದಷ್ಟು ಸಮಸ್ಯೆಗಳಿಗೆ ಕಾಣದ ಕೈಗಳು ಕಾರಣವಾಗುತ್ತಿದ್ದಂತೆ ಕಾಲಘಟ್ಟಗಳು ಉರುಳುತ್ತಾ ಹೋಗುತ್ತದೆ. ಸಮಸ್ಯೆಗಳ ಜೊತೆಗೆ ಬರುವ ಮೆಲ್ಲಿಸ (ರುಕ್ಮಿಣಿ ವಸಂತ್) ರಾಯನಿಗೆ ಹತ್ತಿರವಾಗುತ್ತಾಳೆ. ಮುಂದೆ ಬರುವ ಸಂದರ್ಭಗಳು ತನ್ನ ಪಾಪ ಪುಣ್ಯದ ಲೆಕ್ಕದ ಜೊತೆ ಪಶ್ಚಾತಾಪದ ತೊಡಲಾಟಕ್ಕೆ ಸಿಕ್ಕಿಕೊಳ್ಳುತ್ತದೆ. ಅದು ಯಾಕೆ… ಏನು… ಯಾರಿಂದ… ಎಂದು ಉತ್ತರ ತಿಳಿದುಕೊಳ್ಳಕ್ಕೆ ಒಮ್ಮೆ ಟಾಕ್ಸಿಕ್ ಚಿತ್ರವನ್ನು ನೋಡಬೇಕು.

ಇಡೀ ಚಿತ್ರವನ್ನು ರಾಕಿಂಗ್ ಸ್ಟಾರ್ ಯಶ್ ಆವರಿಸಿಕೊಂಡಿದ್ದಾರೆ. ಮೂರು ಶೇಡ್ ಗಳಲ್ಲಿ ತಮ್ಮ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಯಂಗ್ ಎನರ್ಜಿಟಿ ಪಾತ್ರದ ವರ್ಚಸ್ ಅದ್ಭುತವಾಗಿದೆ. ಇನ್ನೂ ಗಡ್ಡದಾರಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.

ಇನ್ನು ಸಂಭಾಷಣೆ ಖಡಕ್ ಆಗಿದ್ದು , ಮೇಕಪ್ , ಕಾಸ್ಟಮ್ ಅದ್ಭುತವಾಗಿ ಮ್ಯಾಚ್ ಆಗಿದೆ. ಆಕ್ಷನ್ ಸನ್ನಿವೇಶಗಳು ರೋಮಾಂಚಕಾರಿಯಾಗಿದೆ. ಪ್ರತಿಯೊಬ್ಬ ನಟಿಯರು ಪಾತ್ರಕ್ಕೆ ಜೀವ ತುಂಬಿ ಮುದ್ದು ಮುದ್ದಾಗಿ ತೆರೆಯ ಮೇಲೆ ಅಬ್ಬರಿಸಿದ್ದಾರೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಸಹ ಪಾತ್ರ ವರ್ಗಗಳು ಕೂಡ ಚಿತ್ರದ ಓಟಕ್ಕೆ ಪೂರಕವಾಗಿದ್ದಾರೆ. ಇನ್ನು ಚಿತ್ರದ ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿದ್ದು , ಸಂಗೀತಕ್ಕಿಂತ ಹಿನ್ನೆಲೆ ಸಂಗೀತ ಉತ್ತಮವಾಗಿ ಮೂಡಿ ಬಂದಿದೆ.

ತಾಂತ್ರಿಕವಾಗಿ ಚಿತ್ರ ಅದ್ಭುತವಾಗಿ ಕಾಣುತ್ತಿದೆ. ಈ ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಉತ್ತಮವಾಗಿದ್ದು , ಚಿತ್ರಕಥೆ ಇನ್ನಷ್ಟು ಹಿಡಿತ ಮಾಡಬಹುದಿತ್ತು. ವೈಲೆನ್ಸ ಅತಿರೇಕ ಎನ್ನುವಂತಿದೆ. ಇದರ ಹೊರತಾಗಿ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಇರುವ ಈ ಚಿತ್ರವು ಬೋಲ್ಡ್ ಅಂಡ್ ಬ್ಯೂಟಿಫುಲ್ ಎನ್ನುವಂತಿದೆ. ಈ ಚಿತ್ರಕ್ಕೆ ಬಂಡವಾಳ ಹೂಡಿರುವ ಕೆ ವಿ ಎನ್ ಸಂಸ್ಥೆಯ ವೆಂಕಟ್ ಕೆ ನಾರಾಯಣ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸಾಹಸವನ್ನು ಮೆಚ್ಚಲೇಬೇಕು. ಅದ್ದೂರಿ ಮೇಕಿಂಗ್ , ಅದ್ಭುತ ಸಾಹಸ , ಮನೋಹರ ದೃಶ್ಯಗಳ ಸಮಾಗಮದಲ್ಲಿ ಮೂಡಿಬಂದಿರುವ ಈ ಟಾಕ್ಸಿಕ್ ಚಿತ್ರ ಎಲ್ಲರೂ ಒಮ್ಮೆ ನೋಡುವಂತಿದೆ.

Visited 1 times, 1 visit(s) today
error: Content is protected !!