“ಟಾಕ್ಸಿಕ್ ಎಂಪೈರ್” ಆಲ್ಬಂ ಸಾಂಗ್ ನಲ್ಲಿ ಬಿಗ್ ಬಾಸ್ ಈಶಾನಿ.
ಬಿಗ್ ಬಾಸ್ ಖ್ಯಾತಿಯ ನಟಿ ಈಶಾನಿ ಅವರು ನಟಿಸಿರುವ ” ಟಾಕ್ಸಿಕ್ ಎಂಪೈರ್ ” ಎಂಬ ಆಲ್ಬಮ್ ಹಾಡಿನ ಪ್ರಥಮ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ಈ ಹಾಡಿಗೆ ಈಶಾನಿ ಅವರೇ ದನಿಯಾಗಿದ್ದಾರೆ. ಎ.ಎಸ್. ಪ್ರೊಡಕ್ಷನ್ ಲಾಂಚನದಲ್ಲಿ ನಿರ್ಮಾಣವಾಗಿರುವ ಈ ಆಲ್ಬಂ ಹಾಡಿಗೆ ಗಿರಿಗೌಡ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಸಂತು ಮಾಸ್ಟರ್ ಅವರ ಕೂರಿಯೋಗ್ರಫ್ ಹಾಗೂ ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣ ಈ ಆಲ್ಬಂ ಹಾಡಿಗಿದೆ.

ಸಾಂಗ್ ಲಾಂಚ್ ನಂತರ ವೇದಿಕೆಯಲ್ಲಿ ಮಾತನಾಡಿದ ನಟಿ ಈಶಾನಿ ಈ ಹಾಡನ್ನು ಬರೆಯುವಾಗಲೇ ಇದು ಸ್ವಲ್ಪ ಬೋಲ್ಡ್ ಆಗಿರಬೇಕು ಅಂತ ಯೋಚಿಸಿದೆ. ಎಲ್ಲಾ ಭಾಷೆಗೂ ಸೂಟ್ ಆಗುವಂತೆ Unique ಆಗಿ ಈ ಕಾನ್ಸೆಪ್ಟ್ ಮಾಡಿದ್ದೇವೆ. ಇದು ಫ್ಯಾಮಿಲಿ, ಕಿಡ್ಸ್ ಗೆ ಅಲ್ಲ. ಅಡಲ್ಟ್ ಗೆಂದೇ ಮಾಡಿದ ಸಾಂಗ್ ಇದು. ಕನ್ನಡ, ಇಂಗ್ಲೀಷ್ ಹಿಂದಿ ಸೇರಿ 3 ಭಾಷೆಯಲ್ಲಿ ಮಾಡಿರುವ ಈ ಹಾಡಿಗೆ ಸಂತು ಮಾಸ್ಟರ್ ಅದ್ಭುತವಾಗಿ ಕೊರಿಯಾಗ್ರಾಫ್ ಮಾಡಿದ್ದಾರೆ ಎಂದರು.

ನಿರ್ದೇಶಕ ಗಿರಿಗೌಡ ಮಾತನಾಡುತ್ತ, ಈ ಹಾಡು ಮಾಡುವಾಗ ತುಂಬಾ ಸಫರ್ ಪಡಬೇಕಾಯಿತು. ಈಶಾನಿಯ ತಂದೆ ಚಂದ್ರಶೇಖರ್ ಅವರ ನನ್ನ ಮಗಳಿಗೆ ಒಂದು ಆಲ್ಬಂ ಸಾಂಗ್ ಮಾಡಿಕೊಡಲು ಹೇಳಿದರು. ನಂತರ ಈಶಾನಿ ಬಿಗ್ ಬಾಸ್ ಗೆ ಹೋದರು. ಒಂದು ಇಂಟರ್ ನ್ಯಾಷನಲ್ ಸಾಂಗ್ ಮಾಡೋಣ ಅಂತ ಟ್ರೈ ಮಾಡಿದ್ದೇವೆ. ಚಿಕ್ಕದಾಗಿ ಆರಂಭಿಸಿದ್ದು ನಂತರ ಸಿನಿಮಾನೇ ಮಾಡುವಷ್ಟು ಬಜೆಟ್ ಆಯಿತು. ಹೆಚ್. ಎಂ. ಟಿ. ಫ್ಯಾಕ್ಟರಿಯಲ್ಲಿ ಸೆಟ್ ಹಾಕಿ ಈ ಹಾಡನ್ನು ಶೂಟ್ ಮಾಡಿದ್ದೇವೆ. ಸಧ್ಯದಲ್ಲೇ ಚಿತ್ರವನ್ನೂ ಸಹ ಪ್ರಾರಂಭಿಸುತ್ತಿದ್ದೇವೆ. ನಮ್ಮಿಂದ ಟಾಕ್ಸಿಕ್ ಸಿನಿಮಾಗೆ ಸಣ್ಣ ಕಾಂಟ್ರಿಬ್ಯೂಷನ್ ಎಂದರು.

ವರ್ಧನ್ ಸಂಪಿಗೆ ಮಾತನಾಡಿ ಈ ಹಾಡನ್ನು ತುಂಬಾ ದಿನಗಳ ಹಿಂದೆ ಪ್ರಾರಂಭ ಮಾಡಿದ್ದೆವು. ಈಶಾನಿ ಅವರು ಚಿಕ್ಕ ವಯಸಿನಲ್ಲೇ ದುಬೈಗೆ ಹೋದವರು. ನಮ್ಮ ಭಾಷೆಯ ಮೇಲಿನ ಅಭಿಮಾನದಿಂದ ಕನ್ನಡವನ್ನು ಸ್ಪಷ್ಟವಾಗಿ ಕಲಿತು ತಾನೇ ಬರೆದು, ಹಾಡಿ ಅಭಿನಯಿಸಿದ್ದಾರೆ ಎಂದರು.
ಟಾಕ್ಸಿಕ್ ಎಂಪೈರ್ ನಲ್ಲಿ ಕೆಲಸ ಮಾಡಿದ ಶಿವು, ಅಭಿ ಈ ಆಲ್ಬಮ್ ಕುರಿತಂತೆ ಮಾತನಾಡಿದರು.ಇನ್ನು ಪವಿ ಪೂವಪ್ಪ ಮಾತನಾಡಿ ಇಶಾನಿ ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ಅಲ್ಲದೆ ಸಾಂಗ್ ತುಂಬಾ ಕ್ರೇಜಿ ಆಗಿದೆ ಎಂದರು.