ಸೂರ್ಯ ನಟನೆಯ ‘ಕರುಪ್ಪು’ ಕರ್ನಾಟಕ ವಿತರಣೆ ಹಕ್ಕು ಕೆವಿಎನ್ ತೆಕ್ಕೆಗೆ

Spread the love

ತಮಿಳು ನಟ ಸೂರ್ಯ -ತ್ರಿಷಾ ಕೃಷ್ಣನ್ ಅಭಿನಯದ ಕರುಪ್ಪು ಕಾಲಿವುಡ್ ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಇದೇ ತಿಂಗಳ 14ರಂದು ರಿಲೀಸ್ ಆಗ್ತಿರುವ ಈ ಸಿನಿಮಾದ ಕರ್ನಾಟಕ ವಿತರಣೆ ಹಕ್ಕು ಪ್ರತಿಷ್ಠಿತ ಸಂಸ್ಥೆ ಕೆವಿಎನ್ ತೆಕ್ಕೆ ಸೇರ್ಪಡೆಯಾಗಿದೆ. ಹೌದು, ಕರುಪ್ಪು ಚಿತ್ರವನ್ನು ರಾಜ್ಯಾದ್ಯಂತ ಇರುವ ಥಿಯೇಟರ್ ಗಳಲ್ಲಿ ಕೆವಿಎನ್ ಬಿಡುಗಡೆ ಮಾಡಲಿದೆ.

ಆರ್​​ಜೆ ಬಾಲಾಜಿ ಅವರು ‘ಕರುಪ್ಪು’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಅಡಿಯಲ್ಲಿ ಪ್ರಕಾಶ್ ಬಾಬು ಹಾಗೂ ಎಸ್​​ಆರ್​ ಪ್ರಭು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಶ್ವಿನ್ ರವಿಚಂದ್ರನ್, ರಾಹುಲ್ ರಾಜ್, ಗೋಪಿ ಕೃಷ್ಣನ್ ಮೊದಲಾದವರು ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ.

ಸೂರ್ಯ, ತ್ರಿಷಾ ಜೊತೆಗೆ ಇಂದ್ರನ್ಸ್, ನಟ್ಟಿ, ಸ್ವಾಸಿಕಾ, ಶ್ಶಿವಧ, ಅನಘ ಮಾಯಾ ರವಿ, ಸುಪ್ರೀತ್ ರೆಡ್ಡಿ ಮುಂತಾದವರು ನಟಿಸಿದ್ದಾರೆ. ಸಾಯಿ ಅಭಯಂಕರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

Visited 1 times, 1 visit(s) today
error: Content is protected !!