ಸಂಚಿತ್‌ ಸಂಜೀವ್‌ ಅಭಿನಯದ “ಮ್ಯಾಂಗೋ ಪಚ್ಚ” ಸಿನಿಮಾ ಟ್ರೇಲರ್‌ ರಿಲೀಸ್

Spread the love

ಮ್ಯಾಂಗೋ ಪಚ್ಚ ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿದೆ. ಸಂಚಿತ್‌ ಸಂಜೀವ್‌ ನಾಯಕನಾಗಿ ಅಭಿನಯ ಮಾಡುತ್ತಿದ್ದು ‘ಶಕ್ತಿ ಇರುವವರು ಯುದ್ಧ ಗೆಲ್ಲುತ್ತಾರೆ, ಆತ್ಮಶಕ್ತಿ ಉಳ್ಳವರು ಸಾಮ್ರಾಜ್ಯ ಕಟ್ಟುತ್ತಾರೆ’ ಎಂಬ ಡೈಲಾಗ್‌ ಟ್ರೇಲರ್‌ ನಲ್ಲಿ ಗಮನ ಸೆಳೆಯುತ್ತಿದೆ.

ಕಿಚ್ಚ ಸುದೀಪ್‌ ಅವರ ಸುಪ್ರಿಯಾನ್ವಿ ಸ್ಟುಡಿಯೋಸ್‌ ಹಾಗೂ ಕೆಆರ್‌ ಜಿ ಸ್ಟುಡಿಯೋಸ್‌ ಸಹಯೋಗದೊಂದಿಗೆ ಸಿನಿಮಾ ನಿರ್ಮಾಣವಾಗಿದ್ದು ಮೈಸೂರು ಮೂಲದ ವಿವೇಕ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದಾರೆ..

ನಿನ್ನೆಯಷ್ಟೇ ಬಿಡುಗಡೆ ಆಗಿರುವ ಟ್ರೇಲರ್‌ ನಲ್ಲಿ ಮೈಸೂರಿನ ಸಾಮಾನ್ಯ ಹುಡುಗ ಪ್ರಶಾಂತ್‌ ಮ್ಯಾಂಗೋ ಪಚ್ಚನಾಗಿ ಹೇಗೆ ಬದಲಾಗುತ್ತಾನೆ ಅನ್ನೋ ಸ್ಟೋರಿಯನ್ನ ಹೇಳಲಾಗಿದೆ..
ಮ್ಯಾಗೋ ಪಚ್ಚ ಸಿನಿಮಾ ಮೈಸೂರಿನಲ್ಲಿ ನಡೆಯುವ ಕಥೆಯಾಗಿದ್ದು ಇದೊಂದು ಪಕ್ಕ ಕಮರ್ಷಿಯಲ್‌ ಸಿನಿಮಾ.

ಚಿತ್ರದಲ್ಲಿ ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್, ಲವ್ ಸ್ಟೋರಿ, ಹಾಸ್ಯ ಎಲ್ಲವೂ ಇದೆ. ಸಿನಿಮಾದ ಮತ್ತೊಂದು ವಿಶೇಷವೆಂದರೆ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಚಿತ್ರದಲ್ಲಿ ಹಾಡೋಂದನ್ನ ಹಾಡಿದ್ದಾರೆ.

ಟ್ರೈಲರ್ನಲ್ಲಿ ನಾಯಕ ಸಂಚಿತ್ ಸಂಜೀವ್ ಜೊತೆಗೆ ಇನ್ನೂ ಕೆಲವು ಪಾತ್ರಗಳ ಪರಿಚಯ ಮಾಡಲಾಗಿದೆ. ಸಂಚಿತ್‌ ಜೊತೆಯಲ್ಲಿ ನಾಯಕಿಯಾಗಿ ಕಾಜಲ್ ಕುಂದರ್ ಅಭಿನಯಿಸಿದ್ದು, ವಿಲನ್ ಆಗಿ ನಟ ಮಯೂರ್ ಪಟೇಲ್ ನಟಿಸಿದ್ದಾರೆ. ಇನ್ನ ಉಗ್ರಂ ಮಂಜು ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಟ್ರೇಲರ್‌ ನಲ್ಲಿ ಸಂಚಿತ್‌ ಭರವಸೆ ನಾಯಕನಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು ಸದ್ಯ ಬಿಡುಗಡೆ ಆಗಿರೋ ಟ್ರೇಲರ್‌ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

Visited 1 times, 1 visit(s) today
error: Content is protected !!