ಗೋಲ್ಡನ್ ಮೂವೀಸ್ ಬೆಂಬಲದೊಂದಿಗೆ “ಟಾಸ್” ಎರಡನೇ ಹಾಡು ಸದ್ದು…ಸೆಪ್ಟೆಂಬರ್ 18ರಂದು ತೆರೆಗೆ

Spread the love

ಅವಿಕಾ ಪ್ರೊಡಕ್ಚನ್ಸ್ ಮತ್ತು ಬಿ.ಆರ್.ಬಿ. ಪ್ರೊಡಕ್ಷನ್ಸ್ ಅಡಿ ತುಳು ಹಾಗೂ ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗಿರುವ ಚಿತ್ರ ಟಾಸ್. ತುಳುನಾಡಿನ ಸೂಪರ್‌ಸ್ಟಾರ್ ಅರ್ಜುನ್‌ದೇವ್ ನಾಯಕನಾಗಿ ನಟಿಸಿ ನಿರ್ದೇಶಿಸಿರುವ, ಕನ್ನಡ ತುಳು ಸೇರಿದಂತೆ ಎರಡು ಭಾಷೆಗಳಲ್ಲಿ ತಯಾರಾಗಿರುವ ಚಿತ್ರ ಟಾಸ್. ಸೆಪ್ಟೆಂಬರ್ 18ರಂದು ತೆರೆಗೆ ಬರಲಿರುವ ಈ ಚಿತ್ರಕ್ಕೆ ನಾಯಕ ಅರ್ಜುನ್‌ದೇವ್ ಅವರೇ ಆಕ್ಷನ್ ಕಟ್ ಕೂಡ ಹೇಳಿದ್ದಾರೆ. ಅಲ್ಲದೆ ತುಳು ರಂಗಭೂಮಿಯ ಹೆಸರಾಂತ ರಂಗಕರ್ಮಿ, ಕಲಾವಿದ ಡಾ.ದೇವದಾಸ್ ಕಾಪಿಕಾಡ್ ಅವರು ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಬರೆದಿದ್ದಾರೆ,

ಇದೀಗ ಈ ಚಿತ್ರದ ಎರಡನೇ ಹಾಡಿನ ಬಿಡುಗಡೆ ಸಮಾರಂಭ ನಡೆಯಿತು. ನಾಗಾರ್ಜುನ ಶರ್ಮ ಅವರ ಸಾಹಿತ್ಯದ ಈ ಹಾಡಿಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅರ್ಜುನ್‌ದೇವ್ ಇದೊಂದು ರೋಮ್ ಕಾಮ್ ಆ್ಯಕ್ಷನ್ ಡ್ರಾಮಾ,ಎಲ್ಲಾ ಎಮೋಷನ್ಸ್ ನೀಟಾಗಿ ತೆಗೆದುಕೊಂಡು ಹೋಗಿದ್ದೇವೆ. ರಿಲೇಶನ್ ಷಿಪ್ ಗಿರುವ ಸ್ಟ್ರಾಂಗ್ ವ್ಯಾಲ್ಯೂ ಈ ಚಿತ್ರದಲ್ಲಿ ಹೇಳಿದ್ದೇವೆ. ಶಿವಣ್ಣ ಅವರು ಈ ಹಾಡನ್ನು ರಿಲೀಸ್ ಮಾಡಿ ಸಾಂಗ್ ತುಂಬಾ ಚೆನ್ನಾಗಿ ಬಂದಿದೆ ಎಂದು ಹರಸಿದರು.


ಎಲ್ಲಾ ದೃಶ್ಯಗಳನ್ನು ಎರಡುಬಾರಿ ಚಿತ್ರೀಕರಿಸಿದ್ದೇವೆ.‌ ಹಾಗಾಗಿ ೪೦ ದಿನ ಅಂದುಕೊಂಡದ್ದು ೬೦ ದಿನ ಆಗಿದೆ‌. ಇಷ್ಟು ದಿನ ೧೪ ವರ್ಷ ಪ್ರತಿದಿನ ನನ್ನ ತಂದೆಯನ್ನು ನೋಡಿ ನಾನೇನು ಕಲಿತೆನೋ ಅದನ್ನು ಚಿತ್ರದಲ್ಲಿ ತೋರಿಸಿದ್ದೇನೆ. ನನ್ನ ವಿಜನ್ ತೆರೆಮೇಲೆ ತರಲು ಎಲ್ಲರೂ ಸಪೋರ್ಟ್ ಮಾಡಿದರು. ಗಣೇಶ್, ಶಿಲ್ಪ ಮೇಡಂ ಅವರದು ಗೋಲ್ಡನ್ ಹಾರ್ಟ , ಸಿನಿಮಾ ನೋಡಿ ಇಷ್ಟ ಪಟ್ಟು ಸಪೋರ್ಟ್ ಮಾಡ್ತಿದಾರೆ. ನಾಯಕಿ ಸುತೇಜ್ ಶೆಟ್ಟಿ ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ಕೃತಿ ಶೆಟ್ಡಿ ಅವರ ಪಾತ್ರ ಎಲ್ಲರೂ ನೋಡುವಂಥದ್ದು. ಗರುಡರಾಮ್, ಬಾಲಾಜಿ ಮನೋಹರ್ ಅದರದು ತುಂಬಾ ಪ್ರಮುಖ ಪಾತ್ರ ಎಂದು ಚಿತ್ರದಬಗ್ಗೆ ಬಹುತೇಕ ಮಾಹಿತಿಗಳನ್ನು ಹಂಚಿಕೊಂಡರು.
ದೆವದಾಸ್ ಕಾಪಿಕಾಡ್ ಮಾತನಾಡಿ ಅರ್ಜುನ್ ನನ್ನ ಮಗ ಅಂತ ಅಲ್ಲ, ತುಂಬಾ ಚೆನ್ನಾಗಿ ಸಿನಿಮಾ ನಿರ್ದೇಶನ ಮಾಡಿದ್ದಾನೆ. ನಾನು ಕೂಡ ೩೭ ವರ್ಷದಿಂದ ರಂಗಭೂಮಿ, ಸಿನಿಮಾದಲ್ಲಿ ಕೆಲಸ ಮಾಡುತ್ತ, ೭ ಸಿನಿಮಾ ನಿರ್ದೇಶನ ಮಾಡಿದ್ದೇನೆ. ಸ್ನೇಹಿತರಾದ ಸಾಗರ್ ಪೂಜಾರಿ, ಯೋಗೀಶಣ್ಣ ನನ್ನ ಮಗನನ್ನು ಹಾಕಿಕೊಂಡು ಸಿನಿಮಾ ಮಾಡಬೇಕೆಂದು ಮುಂದೆ ಬಂದಿದ್ದಾರೆ. ಆರಂಭದಿಂದಲೂ ನಮಗೆ ಒಳ್ಳೆ ಮನಸಿನವರೇ ಸಿಕ್ಕಿದಾರೆ. ಚಿತ್ರದಲ್ಲಿ ಇದೊಂದು ಯೂನಿವರ್ಸಲ್ ಸಬ್ಜೆಕ್ಟ್, ಚಿತ್ರದ ಕಂಟೆಂಟೇ ಹೀರೋ ಎಂದರು.

ಸು ಫ್ರಮ್ ಸೋ ಖ್ಯಾತಿಯಾ ಶನೀಲ್ ಗೌತಮ್ ಈ ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ
ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಕನ್ನಡ ಮತ್ತು ತುಳು ಭಾಷೆಯಲ್ಲಿ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಟಾಸ್ ಚಿತ್ರ ವೀಕ್ಷಿಸಿ ಮೆಚ್ಚಿಕೊಂಡ ಗೋಲ್ಡನ್‌ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಗಣೇಶ್ ದಂಪತಿ ಈ ಚಿತ್ರವನ್ನ ಗೋಲ್ಡನ್ ಮೂವೀಸ್ ಬ್ಯಾನರ್ ಮೂಲಕ ಅರ್ಪಿಸುತ್ತಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತ ಸಂಯೋಜನೆ, ಜೋಯೆಲ್ ಶರ್ಮನ್ ಡಿಸೋಜಾ ಅವರ ಛಾಯಾಗ್ರಹಣ, ಯಾಶ್ವಿನ್ ಕೆ.ಶೆಟ್ಟಿಗಾರ್ ಅವರ ಸಂಕಲನ ಟಾಸ್ ಚಿತ್ರಕ್ಕಿದೆ.

Visited 1 times, 1 visit(s) today
error: Content is protected !!