ಮೇ 8ಕ್ಕೆ ಜೀ5ನಲ್ಲಿ” ಲವ್ ಮಾಕ್ಟೇಲ್ 3” ಬಿಡುಗಡೆ

Spread the love

ಲವ್ ಮಾಕ್ಟೇಲ್ 3 ಮನಮುಟ್ಟುವ ಭಾವನಾತ್ಮಕ ಕಥೆಯಾಗಿದ್ದು, ಈ‌ ಕಥೆಯನ್ನು ಖ್ಯಾತ ನಟರಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್,‌ ಯದುನಂದನ್ ಬರೆದಿದ್ದಾರೆ. ಇದಕ್ಕೆ ನಟ ಡಾರ್ಲಿಂಗ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ.ಈ ಚಿತ್ರವನ್ನು ಕ್ರಿಸ್ಮಿ ಫಿಲಂಸ್ ಲಾಂಛನದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ನಿರ್ಮಾಣ ಮಾಡಿರುತ್ತಾರೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ,‌ ಮಿಲನ ನಾಗರಾಜ್, ಸಂವೃತಾ, ಅಮೃತಾ ಐಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್ ಮುಂತಾದವರು ನಟಿಸಿರುತ್ತಾರೆ.

ಲವ್ ಮಾಕ್ಟೇಲ್ 2ನ ಯಶಸ್ಸಿನ ನಂತರ, ಹಲವಾರು ವರ್ಷಗಳು ಕಳೆದ ಮೇಲೆ ಲವ್ ಮಾಕ್ಟೇಲ್ 3 ತೆರೆ ಮೇಲೆ ಬಂದಿತ್ತು. ಈ ಕಥೆಯು ಆದಿತ್ಯ (ಡಾರ್ಲಿಂಗ್ ಕೃಷ್ಣ) ಹಾಗೂ ನಿಧಿ(ಸಂವೃತಾ) ಸುತ್ತ ಸುತ್ತುತ್ತದೆ. ನಿಧಿಯನ್ನು ಆದಿತ್ಯ ಲವ್ ಮಾಕ್ಟೇಲ್ 2ನಲ್ಲಿ ದತ್ತು ತೆಗೆದುಕೊಂಡಿರುತ್ತಾನೆ. ಅವರಿಬ್ಬರ ನಡುವಿನ ತಂದೆ-ಮಗಳ ಬಾಂಧವ್ಯವನ್ನು ಈ ಕಥೆ ಎತ್ತಿ ಹಿಡಿಯಲಿದೆ. ಕಥೆಯು ಈ ತಂದೆ-ಮಗಳ ದಿನಚರಿ, ತುಂಟಾಟ,‌ ಅವರಿಬ್ಬರ ನಡುವಿನ ಪ್ರೀತಿ, ಅವರೊಂದಿಗೆ ಅವರ ಮನೆಯ ಕೇರ್‌ಟೇಕರ್‌ ಜಗ್ಗನ ತಮಾಷೆ ಮುಂತಾದವುಗಳನ್ನು ಹೇಳುತ್ತದೆ.
ಡಾ.ಶಾಂತಾ,‌ ನಿಧಿಯ ನಿಜವಾದ ಅಜ್ಜಿ ತನ್ನ ಮೊಮ್ಮಗಳನ್ನು ಹಿಂದಿರುಗಿಸಲು ಒತ್ತಾಯಿಸಿದಾಗ ಈ ಸುಂದರವಾದ ಸಂಸಾರಕ್ಕೆ ಸಿಡಿಲು ಬಡಿದಂತೆ ಆಗುತ್ತದೆ. ಇದನ್ನು ಆದಿತ್ಯ ಹೇಗೆ ಸರಿಪಡಿಸುತ್ತಾನೆ,‌ ಅವನು ಎದುರಿಸುವ ಸವಾಲುಗಳು, ಆ‌ ಭಾವನಾತ್ಮಕ ತೊಳಲಾಟ ಇತ್ಯಾದಿಗಳನ್ನು ಈ ಚಿತ್ರವು ಬಿಂಬಿಸುತ್ತದೆ. ಒಟ್ಟಾರೆ, ಲವ್ ಮೋಕ್ಟೇಲ್ 3 ಒಂದು ವಿಶೇಷವಾದ ಭಾವನಾತ್ಮಕ ಡ್ರಾಮಾ ಚಿತ್ರವಾಗಿದೆ. ಪ್ರೀತಿ, ಬಾಂಧವ್ಯ,‌ ಸ್ನೇಹ, ಮುಂತಾದುವುಗಳನ್ನು ಈ ಕಥೆ ಹೇಳುತ್ತದೆ.

ಲವ್ ಮಾಕ್ಟೇಲ್ 3 ಚಿತ್ರದ ಡಿಜಿಟಲ್ ಬಿಡುಗಡೆ ಕುರಿತು ಮಾತನಾಡಿದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಡಾರ್ಲಿಂಗ್ ಕೃಷ್ಣ, “ಲವ್ ಮಾಕ್ಟೇಲ್ ಸರಣಿಯು ನನ್ನ ಸಿನಿ ಪಯಣದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಲವ್ ಮಾಕ್ಟೇಲ್ 3 ಚಿತ್ರವು ಈ‌ ಹಿಂದಿನ ಎರಡು ಕಥೆಗಳಿಗೆ ಒಂದು ಸಿಹಿಯಾದ ಅಂತ್ಯವಾಗಿದೆ. ಈ ಚಿತ್ರವು ಪ್ರೀತಿಯ ದೈವೀ ರೂಪವಾದ ವಾತ್ಸಲ್ಯವನ್ನು ಹೇಳುತ್ತದೆ, ತಂದೆ-ಮಗಳ ನಡುವಿನ ಬಾಂಧವ್ಯವನ್ನು ಹೇಳುತ್ತದೆ. ಈ ಚಿತ್ರವು ಜೀ5ನಲ್ಲಿ ಬಿಡುಗಡೆ ಆಗುತ್ತಿರುವುದು ನನಗೆ ಸಂತಸ ತಂದಿದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ಮೇ 8ಕ್ಕೆ ಲವ್ ಮಾಕ್ಟೇಲ್ 3 ಹಾಗೂ ಜೀ5 ಎಲ್ಲಾ ಚಿತ್ರಗಳನ್ನು ಕೇವಲ 129/- ಕ್ಕೆ ವೀಕ್ಷಿಸಬಹುದಾಗಿದೆ.

ಜೀ5 ಕಿರುಪರಿಚಯ:
ಜೀ5 ಭಾರತದ ಅತಿ ಮುಖ್ಯ ಡಿಜಿಟಲ್ ವೇದಿಕೆಗಳಲ್ಲಿ ಒಂದಾಗಿದ್ದು, ಬಹುಭಾಷಾ ಕಥೆಗಳನ್ನು ಇಡೀ ಪ್ರಪಂಚಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಇದು ಜೀ ಎಂಟರ್ಟೇನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ZEEL) ಅವರ ಡಿಜಿಟಲ್/ ಓ ಟಿ ಟಿ (OTT) ಮಾಧ್ಯಮವಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಲಿ, ಮರಾಠಿ, ಇಂಗ್ಲಿಷ್ ಭಾಷೆಗಳು ಸೇರಿದಂತೆ ಹಲವಾರು ಭಾಷೆಗಳ ಚಿತ್ರಗಳನ್ನು ಪ್ರಸಾರ ಮಾಡುತ್ತದೆ.

Visited 1 times, 1 visit(s) today
error: Content is protected !!