ಪತ್ರಕರ್ತರಾಗಿದ್ದ ಎ.ರಾಜೇಶ್‌ಗೌಡ ನಿರ್ಮಾಣ ಚಿತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಟ್ರಿ. 

Spread the love

ಸದಾ ಬ್ಯುಸಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ *ಎ.ರಾಜೇಶ್‌ಗೌಡ* ಫಿಲಂ ಕೋರ್ಸ್ ಮುಗಿಸಿದ ತರುವಾಯ ’ರಾ’ ಚಿತ್ರ ನಿರ್ದೇಶಿಸಿ ನಿರ್ಮಾಣ ಮಾಡಿದ್ದರು. ಇದರ ಅನುಭವದಿಂದಲೇ ಈಗ ನಲವತ್ತೇಂಟು ಘಂಟೆಗಳು, ಒಂದು ತಂಡ, ಒಂದು ದಾಖಲೆ, ಒಂದು ಪ್ರಪಂಚ ಪರಿಕಲ್ಪನೆಯಲ್ಲಿ ಹೆಸರಿಡದ ಚಿತ್ರಕ್ಕೆ ಬಂಡವಾಳ ಹೂಡುವ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ.

ಇದರ ವಿಷಯಕ್ಕೆ ಸಂಬಂದಿಸಿದಂತೆ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಹಾಜರಿದ್ದರು. ನಂತರ ಮಾತನಾಡಿದ ರೇವಣ್ಣ, ಮುಖ್ಯಮಂತ್ರಿ ಅಧಿಕಾರದಲ್ಲಿ ಇದ್ದಾಗಲೇ ಆರು ಬಾರಿ ಪ್ರಯತ್ನ ಮಾಡಿ, ಕೊನೆಗೆ ಅವರನ್ನು ನಟಿಸಲು ಒಪ್ಪಿಸುವಲ್ಲಿ ಸಪಲನಾದೆ. ಮಿಕ್ಕಂತೆ ಸಿನಿಮಾ ಬಗ್ಗೆ ಏನು ತಿಳಿಯದು ಎಂದರು.

ನಿರ್ದೇಶಕರು ಮಾತನಾಡಿ ಚಿತ್ರವು ಅಂದಾಜು ನೂರು ನಿಮಿಷ ಇರಲಿದೆ. ರಾಜಕೀಯ ಆಧಾರಿತ ಕಥೆಯನ್ನು ಒಳಗೊಂಡಿರುವುದರಿಂದ ಸಿದ್ದರಾಮಯ್ಯ ಸೂಕ್ತ ಎಂದು ಭಾವಿಸಲಾಗಿ ಅಭಿನಯಿಸಲು ಅವರಿಂದ ಹಸಿರು ನಿಶಾನೆ ಸಿಕ್ಕಿದೆ. ರೇವಣ್ಣ ಮತ್ತು ಕಾ.ತೆ.ಚಿಕ್ಕಣ್ಣ ಇವರಿಂದ ಸಿನಿಮಾ ಮಾಡಲು ಸುಲಭವಾಯಿತು. ಇವರುಗಳು ಸಹ ಬಣ್ಣ ಹಚ್ಚಲಿದ್ದಾರೆ. ಹಿರಿಯ ನಟಿ ಉಮಾಶ್ರೀ ಮಿಕ್ಕಂತೆ ಕಲಾವಿದರು ಸೇರ್ಪಡೆಯಾಗಲಿದ್ದಾರೆ. ಸಿಎಂ ಗೃಹ ಕಚೇರಿ ಕಾವೇರಿ, ಮಿಕ್ಕಂತೆ ಮತ್ತೋಂದು ಬಂಗ್ಲೆಯಲ್ಲಿ ನವೆಂಬರ್ ತಿಂಗಳಿಂದ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ. ಈಗಾಗಲೇ ಅನುಮತಿಗಾಗಿ ಪತ್ರ ಬರೆಯಲಾಗಿದೆ. ಮುಂದಿನ ಭೇಟಿಯಲ್ಲಿ ಸಿದ್ದರಾಮಯ್ಯ ಅವರು ಬರಲಿದ್ದಾರೆ. ಚಲನಚಿತ್ರ ಪ್ರಕ್ರಿಯೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿ, ಗಿನ್ನಿಸ್ ದಾಖಲೆಗೆ ತಲುಪುವ ಉದ್ದೇಶವಿದೆ ಎಂದು ಎ.ರಾಜೇಶ್‌ಗೌಡ ಮಾಹಿತಿ ಹಂಚಿಕೊಂಡರು. ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಹೇಳುವಂತೆ ನನ್ನ ಅನುಭವದಲ್ಲಿ ಇದೊಂದು ಸವಾಲಿನ ಕೆಲಸವೆಂದು ಬಣ್ಣನೆ ಮಾಡಿಕೊಂಡರು.

Visited 1 times, 1 visit(s) today
error: Content is protected !!