ರಾಜ್ ಬಿ ಶೆಟ್ಟಿ, ವಿಜಯ್ ಸೇತುಪತಿ ಅಭಿನಯದ “ಪಾಕೆಟ್ ನಾವಲ್” ರಿಲೀಸ್ ಡೇಟ್ ಘೋಷಣೆ

Spread the love

ಕನ್ನಡದ ಖ್ಯಾತ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ಇದೀಗ ಬಹುಭಾಷಾ ನಟನಾಗಿ ತೆರೆಗೆ ಬರುತ್ತಿದ್ದಾರೆ. ರಾಜ್ ಬಿ ಶೆಟ್ಟಿ ಹಾಗೂ ವಿಜಯ್ ಸೇತುಪತಿ ನಟಿಸಿರುವ ಬಹುಭಾಷಾ ಸಿನಿಮಾ ಪಾಕೆಟ್ ನಾವೆಲ್ ರಿಲೀಸ್ ದಿನಾಂಕ ಘೋಷಣೆಯಾಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿದ ರಾಜ್ ಬಿ ಶೆಟ್ಟಿ ಇದೀಗ ಕನ್ನಡ, ತಮಿಳು ಸೇರಿದಂತೆ ಹಲವು ಭಾಷೆಗಳ ಬಹುನಿರೀಕ್ಷಿತ ಸಿನಿಮಾ ಮೂಲಕ ತೆರೆಗೆ ಬರುತ್ತಿದ್ದಾರೆ. ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಜೊತೆ ರಾಜ್ ಬಿ ಶೆಟ್ಟಿ ಅಭಿನಯದ ಪಾಕೆಟ್ ನಾವೆಲ್ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ರ್ದೇಶಕ ತ್ಯಾಗರಾಜನ್ ಕುಮಾರರಾಜಾ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಜನವರಿ 14ರಂದು ತೆರೆಗೆ ಅಪ್ಪಳಿಸಲಿದೆ. ರಾಜ್ ಬಿ ಶೆಟ್ಟಿ ಬಹುಭಾಷ ನಟನಾಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಸಜ್ಜಾಗಿದ್ದಾರೆ.

ಕನ್ನಡದ ಸ್ಟಾರ್ ನಟರ ಸಂಗಮ: ಸಿನಿಪ್ರಿಯರಿಗೆ ಹಬ್ಬ!
ಚಿತ್ರತಂಡ ಹಂಚಿಕೊಂಡಿರುವ ಅಧಿಕೃತ ಮಾಹಿತಿಯ ಪ್ರಕಾರ, 2027ರ ಜನವರಿ 14 ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಚಿತ್ರ ಅದ್ಧೂರಿಯಾಗಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ವಿಶೇಷ ಅಂದರೆ ರಾಜ್ ಬಿ ಶೆಟ್ಟಿ ಮಾತ್ರವಲ್ಲ ಕನ್ನಡದ ಪ್ರಮುಖ ನಟರ ಸಂಗಮ ಇದಾಗಿದೆ. ಕನ್ನಡದ ಖ್ಯಾತ ನಟ ಕಿಶೋರ್ ಪ್ರಮುಖ ಪಾತ್ರದ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್ ಸೇತುಪತಿ, ರಾಜ್ ಬಿ. ಶೆಟ್ಟಿ ಹಾಗೂ ಕಿಶೋರ್ ಅವರಂತಹ ನೈಜ ಕಲಾವಿದರು ಒಂದೇ ಪರದೆಯ ಮೇಲೆ ಮುಖಾಮುಖಿಯಾಗುತ್ತಿರುವುದು ಕುತೂಹಲ ಹೆಚ್ಚಿಸಿದೆ.

ಚಿತ್ರದಲ್ಲಿ ಮಾಳವಿಕಾ ಮೋಹನನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಕುರಿತು ಭಾವುಕ ಪೋಸ್ಟ್ ಮಾಡಿರುವ ಮಾಳವಿಕಾ ಮೋಹನ್, ಈ ಚಿತ್ರತಂಡದ ಭಾಗವಾಗಲು ನನಗೆ ಹೆಮ್ಮೆಯಾಗುತ್ತಿದೆ. ತಿಂಗಳುಗಳ ಕಾಲ ಒಟ್ಟಿಗೆ ಊಟ ಮಾಡಿ, ಮಾತಾಡಿ, ಕಷ್ಟ-ಸುಖ ಹಂಚಿಕೊಂಡ ನಂತರ ಜೊತೆಗಿದ್ದ ಜನರು ಕೇವಲ ಸಹೋದ್ಯೋಗಿಗಳಾಗಿ ಉಳಿಯದೆ ನಮ್ಮ ಕುಟುಂಬದಂತಾಗುತ್ತಾರೆ” ಎಂದಿದ್ದಾರೆ.

Visited 1 times, 1 visit(s) today
error: Content is protected !!