ಮ್ಯಾರೇಜ್ ಪಾರ್ಟಿ ಟ್ರೈಲರ್‌ನಲ್ಲಿ ಭರ್ಜರಿ ಮನೋರಂಜನೆ.

Spread the love

ಚಯನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ, ಶ್ರೀ ವಾರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್ ವಿ ನಿರ್ಮಾಣ ಮಾಡಿರುವ `ಮ್ಯಾರೇಜ್ ಪಾರ್ಟಿ’ ಚಿತ್ರ ಇದೇ ಡಿಸೆಂಬರ್ 4ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಈಗಾಗಲೇ ಎರಡು ಹಾಡುಗಳ ಮೂಲಕ ಮ್ಯಾರೇಜ್ ಪಾರ್ಟಿ ಸಿನಿಮಾಸಕ್ತರನ್ನು ಬಹುವಾಗಿ ಸೆಳೆದುಕೊಂಡಿತ್ತು. ಬಿಡುಗಡೆಯ ಕ್ಷಣಗಳು ಹತ್ತಿರಾಗುತ್ತಿರುವ ಈ ಹೊತ್ತಿನಲ್ಲಿ ಚಿತ್ರತಂಡ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದೆ. ಈ ಮೂಲಕ ಮ್ಯಾರೆಜ್ ಪಾರ್ಟಿಯ ಆಂತರ್ಯದಲ್ಲಿರಬಹುದಾದ ರೋಚಕ ಅಂಶಗಳು ಪ್ರೇಕ್ಷಕರ ಮುಂದೆ ತೆರೆದುಕೊಂಡಿವೆ. ಈ ಹಿಂದೆ ಅಧಿಪತ್ರ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಚಯನ್ ಶೆಟ್ಟಿ, ಮ್ಯಾರೇಜ್ ಪಾರ್ಟಿಯ ಮೂಲಕ ಗಟ್ಟಿ ಕಥೆಯೊಂದನ್ನು ಕೈಗೆತ್ತಿಕೊಂಡಿರುವ ವಿಚಾರ ಟ್ರೈಲರ್ ಮೂಲಕ ಸ್ಪಷ್ಟವಾಗಿದೆ. ಸಾಮಾನ್ಯವಾಗಿ ಕಡಲ ಕಿನಾರೆಯಲ್ಲಿ ಘಟಿಸುವ ಕಥೆಯೆಂದರೇನೇ ಕುತೂಹಲ ಮೂಡಿಕೊಳ್ಳುತ್ತದೆ. ಆದರೆ, ಮ್ಯಾರೇಜ್ ಪಾರ್ಟಿಯಲ್ಲಿ ಕರಾವಳಿ ಸೀಮೆಯ ಒಡಲಿನಲ್ಲಿರುವ ಮತ್ತೊಂದು ರೋಚಕ ಕಥನವಿದೆ ಎಂಬ ವಿಚಾರವೂ ಟ್ರೈಲರ್ ಮೂಲಕವೇ ಜಾಹೀರಾಗಿದೆ.

ಮ್ಯಾರೇಜ್ ಪಾರ್ಟಿ, ಜನಮಾನಸದಲ್ಲಿರೋ ವಿಚಿತ್ರ ನಂಬಿಕೆ, ಒಂದು ಸಾವು, ದೆವ್ವದ ಮದುವೆ ಮತ್ತು ಅಬೇಧ್ಯ ಕಾಡೊಳಗಿನ ರಹಸ್ಯ… ಇಂಥಾ ಅನೇಕ ಗಟ್ಟಿ ಕಥಾ ಎಳೆಯೊಂದಿಗೆ, ಭರ್ಜರಿ ಹಾಸ್ಯದೊಂದಿಗೆ ಮ್ಯಾರೇಜ್ ಪಾರ್ಟಿ ಮೂಡಿ ಬಂದಿರುವ ವಿಚಾರವನ್ನು ನಿರ್ದೇಶಕರು ಟ್ರೈಲರ್ ಮೂಲಕ ಪ್ರೇಕ್ಷಕರತ್ತ ದಾಟಿಸಿದ್ದಾರೆ. ಶ್ರೀ ವಾರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್ ವಿ ನಿರ್ಮಾಣ ಮಾಡಿರುವ ಮ್ಯಾರೇಜ್ ಪಾರ್ಟಿ ಚಿತ್ರ ದಲ್ಲಿ ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ಸು ಫ್ರಂ ಸೋ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ, ವಿನೀತ್ ಕುಮಾರ್, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್, ಭೀಮ್ ರಾವ್ ವಾಸ್ಟರ್ ಮುಂತಾದವರ ತಾರಾಗಣವಿದೆ. ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಈ ಚಿತ್ರ ತೆರೆಗಾಣಲಿದೆ.

Visited 1 times, 1 visit(s) today
error: Content is protected !!