*Zee5 ನಲ್ಲಿ ಉತ್ತರ ಕರ್ನಾಟಕ ಭಾಗದ ಮೊದಲ ವೆಬ್ ಸಿರೀಸ್ “ರಾಕ್ಷಸ” ಸ್ಟ್ರೀಮಿಂಗ್.*
ವೀಕ್ಷಕರ ಮನಸ್ಥಿತಿಯನ್ನ ಅರ್ಥ ಮಾಡಿಕೊಂಡು ಅವರಿಗೆ ಇಷ್ಟವಾದಂತ ಕಾರ್ಯಕ್ರಮಗಳ ನೀಡುವ ನಿಟ್ಟಿನಲ್ಲಿ ಸಾಗುತ್ತಿರುವ Zee5 ಸಂಸ್ಥೆ ವೆಬ್ ಸೀರೀಸ್ ನಲ್ಲಿ ದೊಡ್ಡ ಹೆಜ್ಜೆಯನ್ನೇ ಇಡುತ್ತಾ ಸಾಗಿದೆ. ಈಗಾಗಲೇ ಪ್ರತಿಷ್ಟಿತ ಒಟಿಟಿಗಳಲ್ಲಿ ಒಂದಾದ zee5 ಕನ್ನಡದಲ್ಲಿ ವೆಬ್ ಸಿರೀಸ್ ನಿರ್ಮಾಣಕ್ಕಿಳಿದಿರುವುದು ಗೊತ್ತೇ ಇದೆ. ಈಗಾಗಲೇ ಅಯ್ಯನ ಮನೆ, ಮಾರಿಗಲ್ಲು ಸೇರಿದಂತೆ ಹಲವು ವೆಬ್ ಸರಣಿಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕಿದೆ. ಇದೀಗ ಇದೇ ತಿಂಗಳ 20ರಿಂದ zee5ನಲ್ಲಿ ರಾಕ್ಷಸ ವೆಬ್ ಸಿರೀಸ್ ಪ್ರಸಾರವಾಗಲಿದೆ.

ನಟ ವಿಜಯ್ ರಾಘವೇಂದ್ರ ಅವರ ಚೊಚ್ಚಲ ವೆಬ್ ಸರಣಿ ಇದಾಗಿದೆ. ಮಲಪ್ರಭಾ ನದಿ ತೀರದ ನಿಗೂಢ ಮೊಸಳೆ ದಾಳಿಗಳ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ. ನಿನ್ನೆ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ರಾಕ್ಷಸ ಪ್ರೀಮಿಯರ್ ಶೋ ಹಾಗೂ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ Zee5 ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ, zee5 ವೆಬ್ ಸಿರೀಸ್ ಜರ್ನಿ ಶುರು ಮಾಡಿದಾಗ, ಶೃತಿ ನಾಯ್ಡು ಪ್ರೊಡಕ್ಷನ್, ಪಿಆರ್ ಕೆ, ಕೆಆರ್ ಜಿ ಈಗ ತರುಣ್ ಸುಧೀರ್ ಅವರು ಸಾಥ್ ಕೊಟ್ಟಿದ್ದಾರೆ. ನಾವು ಕೇಳಿದಾಗ ಸಿರೀಸ್ ಮಾಡಲು ಮುಂದೆ ಬಂದರು. ಈ ಒಂದು ವರ್ಷ ನಾವು ಸಾಕಷ್ಟು ಕಲಿತಿದ್ದೇವೆ. ಈ ಕಲಿಯುವಿಕೆ ಇಷ್ಟು ಕೊಂಡು ಮುಂದಿನ ವರ್ಷ ಸಾಕಷ್ಟು ಜಾನರ್ ನೊಂದಿಗೆ ಬರುತ್ತಿದ್ದೇವೆ. ಸಿರೀಸ್ ಜೊತೆಗೆ ನಾನ್ ಫಿಕ್ಷನ್, ಟಿವಿ ಫ್ಲಸ್ ಫ್ಲಸ್ ಸೇರಿದಂತೆ ಹಲವು ಫಾರ್ಮೆಟ್ ಜಾರಿಗೆ ತರುತ್ತೇವೆ. ರಾಕ್ಷಸ ಉತ್ತರ ಕರ್ನಾಟಕ ಭಾಗದ ಕಥೆ. ಕಲಾವಿದರು ಹಾಗೂ ನಿರ್ಮಾಪಕರು ಕೂಡ ಉತ್ತರ ಕರ್ನಾಟಕದವರೇ ಆಗಿದ್ದಾರೆ. 22ರಿಂದ 25 ನಿಮಿಷದ ಏಳು ಎಪಿಸೋಡ್ ಆಗಿ ಪ್ರಸಾರ ಆಗಲಿದೆ. ನಿಮ್ಮ ಸಪೋರ್ಟ್ ಹೀಗೆ ಇರಲಿ. ಏಪ್ರಿಲ್ ನಿಂದ ಬೇರೆ ಬೇರೆ ಪ್ರಾಜೆಕ್ಟ್ ಜೊತೆ ಬರುತ್ತೇವೆ ಎಂದರು.

ನಿರ್ಮಾಪಕ ತರುಣ್ ಸುಧೀರ್ ಮಾತನಾಡಿ, ಈ ಪ್ರಾಜೆಕ್ಟ್ ಮಾಡಿರುವುದು ಬಹಳ ಖುಷಿ ಇದೆ. Zee5 ಇಡೀ ಟೀಂಗೆ ಧನ್ಯವಾದಗಳು. ಸಿನಿಮಾ ಅಂತಾ ಬಂದಾಗ ಥಿಯೇಟರ್ ಗೆ ಹೋಗುತ್ತೇ. ಕಲೆಕ್ಷನ್ ಆಗುತ್ತದೆ. ಅಲ್ಲಿ ಯಾವುದೇ ಚೌಕಟ್ಟು ಇರುವುದಿಲ್ಲ.ಆದರೆ ವೆಬ್ ಸಿರೀಸ್ ಮಾಡಿದಾಗ ಫ್ಲಾಟ್ ಫಾರ್ಮ್ ಸಪೋರ್ಟ್ ಬೇಕು. ಅದನ್ನು ರೆಡಿ ಮಾಡಿ ಎಲ್ಲಿ ಪ್ರೆಸೆಂಟ್ ಮಾಡುತ್ತೀರಾ? ಒಂದು ಫ್ಲಾಟ್ ಫಾರ್ಮ್ ಸಪೋರ್ಟ್ ಮಾಡಿದಾಗ ಇಂಡಸ್ಟ್ರಿ ಬೆಳೆಯಲು ಆಗುವುದು. ಬೇರೆ ಇಂಡಸ್ಟ್ರಿಯಲ್ಲಿ ಫ್ಲಾಟ್ ಫಾರ್ಮ್ ಸಪೋರ್ಟ್ ಮಾಡಿದ್ದಕ್ಕೆ ಅಲ್ಲಿ ವೆಬ್ ಸಿರೀಸ್ ಸಂಪ್ರದಾಯ ಶುರುವಾಗಿದೆ. ಇಲ್ಲಿ ಈಗ ಅದನ್ನು zee5 ಮಾಡುತ್ತಿದೆ. ಸುಹಾಸ್ ಹೇಳಿದ ಲೈನ್ ಇಷ್ಟವಾಯ್ತು. ನನಗೆ ಉತ್ತರ ಕರ್ನಾಟಕದ ಎಲಿಮೆಂಟ್ ನನ್ನ ಸಿನಿಮಾದಲ್ಲಿ ಇರಬೇಕು. ಅದನ್ನು ನನ್ನ ಸಿನಿಮಾದಲ್ಲಿ ಅಳವಡಿಸಿದ್ದೇನೆ.ಉತ್ತರ ಕರ್ನಾಟಕ ನಮ್ಮ ಕುಟುಂಬಕ್ಕೆ ಇರುವ ಕೊಡುಗೆ. ಪ್ರೀತಿ. ಅದನ್ನು ಈ ರೀತಿ ವಾಪಸ್ ನೀಡುತ್ತಿದ್ದೇನೆ. ಒಂದೊಳ್ಳೆ ತಂಡ ಈ ಸಿರೀಸ್ ನಲ್ಲಿ ಕೆಲಸ ಮಾಡಿದೆ. 89 ಪಾತ್ರಗಳು ಈ ಸಿರೀಸ್ ನಲ್ಲಿ ಇದ್ದಾರೆ. ಅವರೆಲ್ಲರೂ ಉತ್ತರ ಕರ್ನಾಟಕ ಭಾಗದವರು. ವೆಬ್ ಸಿರೀಸ್ ಗೆ ಒಂದು ಪ್ರೆಸ್ ಮೀಟ್ ಮಾಡುತ್ತಿದ್ದೇವೆ ಅಂದರೆ ಇದು ಗ್ರೇಟ್ ಮೂವ್. ಇದೆಲ್ಲಾ zee5ನಿಂದ ಆಗಿದೆ ಎಂದರು.

ರಾಕ್ಷಸ, ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಮೊದಲ ವೆಬ್ ಸಿರೀಸ್. ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಜಾನರ್ ಒಳಗೊಂಡಿರುವ ಸರಣಿಯಲ್ಲಿ ವಿಜಯ ರಾಘವೇಂದ್ರ, ಮಯೂರಿ, ಅವಿನಾಶ್, ಮಾಳವಿಕ, ಅಪ್ಪಣ್ಣ ಮತ್ತು ಅಭಿಜಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಕ್ಷಸ ವೆಬ್ ಸೀರಿಸ್‌ಗೆ ಸುಹಾನ್ ಪ್ರಸಾದ್ ಮತ್ತು ಅಪೂರ್ವ ಕಥೆ ಒದಗಿಸಿದ್ದಾರೆ. ಹಾಗೇ ಸುಹಾನ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಈ ವೆಬ್ ಸೀರಿಸ್ ಅನ್ನು ತರುಣ್ ಸುಧೀರ್ ಪ್ರೊಡಕ್ಷನ್ಸ್‌ನಲ್ಲಿ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ನಿರ್ಮಿಸಿದ್ದಾರೆ.