Cini NewsSandalwood

ಯುವನಟ ಅಭಯ್ ನಟನೆಯ “ಮಂಡ್ಯಹೈದ” ಟೀಸರ್ ಟೈಟಲ್ ಸಾಂಗ್ ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ಮಂಡ್ಯ ಹೆಸರಿಗೆ ದೊಡ್ಡ ಮೌಲ್ಯವಿದೆ. ರೆಬೆಲ್ ಸ್ಟಾರ್‌ ಅಂಬರೀಶ್ ತವರುಜಿಲ್ಲೆ ಅಲ್ಲದೆ ಆ ಭಾಗದ ಕಥೆ ಹೇಳುವ ಹಲವಾರು ಚಿತ್ರಗಳು ತೆರೆಗೆ ಬಂದಿವೆ. ಈಗ ಮತ್ತೊಬ್ಬ ಮಂಡ್ಯಹೈದ ತನ್ನ ಪ್ರೀತಿಗಾಗಿ ಹೇಗೆಲ್ಲ ಹೋರಾಡಿದ ಎಂಬುದನ್ನು ನಿರ್ದೇಶಕ‌ ವಿ.ಶ್ರೀಕಾಂತ್ ಅವರು ಹೇಳಹೊರಟಿದ್ದಾರೆ.

ಮಂಡ್ಯಹೈದ ಚಿತ್ರದ ಟೈಟಲ್ ಸಾಂಗ್ ಕಾವೇರಮ್ಮನ ಮಡಿಲಲ್ ಹಾಡಿ ಬೆಳೆದವ್ನೆ ಎಂಬ ಸಾಹಿತ್ಯವಿರುವ ನಾಯಕನ ಇಂಟ್ರಡಕ್ಷನ್ ಹಾಡು ಸೋಮವಾರ ಬಿಡುಗಡೆಯಾಗಿದೆ, ಅಲ್ಲದೆ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಕೂಡ ನಡೆಯಿತು, ಈ ಚಿತ್ರದಲ್ಲಿ ಯುವನಟ ಅಭಯ್ ಚಂದ್ರಶೇಖರ್ ಮಂಡ್ಯ ಹುಡುಗನಾಗಿ ಕಾಣಿಸಿಕೊಂಡಿಸಿದ್ದು, ಭೂಮಿಕಾ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಮನಸಾಗಿದೆ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದ, ಅಭಯ್ ಈಗ ತಮ್ಮ ಎರಡನೇ ಚಿತ್ರದಲ್ಲಿ ಪಕ್ಕಾ ಮಂಡ್ಯಹುಡುಗನಾಗಿ ಹೊರಹೊಮ್ಮಿದ್ದಾರೆ.

ತೇಜಸ್ ಕ್ರಿಯೇಶನ್ಸ್‌ ಮೂಲಕ ಅಭಯ್ ತಂದೆ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಿಸಿದ್ದು, ವಿ.ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ವೇದಿಕೆಯಲ್ಲಿ ನಿರ್ಮಾಪಕ ಚಂದ್ರಶೇಖರ್ ಮಾತನಾಡುತ್ತ ಇದು ನಮ್ಮ ಬ್ಯಾನರ್‌ನ ಐದನೇ ಹಾಗೂ ಅಭಯ್ ನಟನೆಯ ಎರಡನೇ ಚಿತ್ರ. ಟೈಟಲ್ ಕೇಳಿದಾಗ ವಿಲೇಜ್ ಕಾನ್ಸೆಪ್ಟ್ ಅನ್ನೋದು ಗೊತ್ತಾಗುತ್ತೆ, ಪ್ರೀತಿ ಎಲ್ಲರಿಗೂ ಗೊತ್ತಿರುವ ಪದ.

ಅದೊಂದು ವಿಸ್ಮಯ, ಇದರ ಅರ್ಥ ಯಾರಿಗೂ ಗೊತ್ತಿಲ್ಲ, ಅದನ್ನು ಪಡೆಯಲು ಕೆಲವರು ಸಾಯ್ತಾರೆ, ಮತ್ತೆ ಕೆಲವರು ಸಾಯಿಸ್ತಾರೆ, ನಮ್ಮ ಹೀರೋ ಕೂಡ ಈ ಪ್ರೀತಿಯನ್ನು ಪಡೆಯಲು ಹೋಗಿ ಯಾರನ್ನಾದರೂ ಸಾಯಿಸ್ತಾನಾ ಅಥವಾ ತಾನೇ ಸಾಯ್ತಾನಾ ಎನ್ನುವುದೇ ನಮ್ಮ ಚಿತ್ರ. ಶೇ.90ರಷ್ಟು ಕಥೆ ಮಂಡ್ಯ ಭಾಗದಲ್ಲೇ ನಡೆದರೆ, ಉಳಿದದ್ದು ಬೆಂಗಳೂರಲ್ಲಿ ನಡೆಯುತ್ತದೆ. 15 ಜನ ಕಾಮಿಡಿ ಕಿಲಾಡಿಗಳು ಕಲಾವಿದರು ನಟಿಸಿದ್ದಾರೆ.

ಚಿತ್ರದಲ್ಲಿ ಐದು ಸುಂದರ ಹಾಡುಗಳಿದ್ದು, ಸುರೇಂದ್ರನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಟೈಟಲ್‌ಟ್ರ‍್ಯಾಕ್ ಇಂದು(ಸೋಮವಾರ) ಬೆಳಿಗ್ಗೆಯಷ್ಟೇ ಬಿಡುಗಡೆಯಾಗಿದೆ. ಈ ಹಾಡಿಗೆ ಕಿಶೋರ್ ಕೊರಿಯಾಗ್ರಾಪ್ ಮಾಡಿದ್ದು, ಛಾಯಾಗ್ರಾಹಕ ಮನುಗೌಡ ಸೆರೆಹಿಡಿದಿದ್ದಾರೆ, ಈಗ ಟೀಸರ್ ರಿಲೀಸಾಗಿದೆ ಎಂದು ವಿವರಿಸಿದರು.

ನಿರ್ದೇಶಕ ವಿ.ಶ್ರೀಕಾಂತ್ ಮಾತನಾಡಿ ಕಮರ್ಷಿಯಲ್ ಎಂಟರ್‌ಟೈನರ್ ಹಾಗೂ ಲವ್ ಜೊತೆ ಫ್ಯಾಮಿಲಿ ಸೆಂಟಿಮೆಟ್ ಚಿತ್ರ ಇದಾಗಿದ್ದು ನನ್ನ ಮೊದಲ ಚಿತ್ರಕ್ಕೆ ಇಂಥ ಒಳ್ಳೇ ತಂಡ ಸಿಕ್ಕಿರುವುದು ಖುಷಿಯಾಗಿದೆ, ಮಂಡ್ಯ ಹೈದನ ಲೈಫ್ ಸ್ಟೈಲ್ ಹೇಗಿರುತ್ತೆ, ಆತ ಲವ್ ಮಾಡಿದರೆ ಹೇಗಿರುತ್ತೆ ಅನ್ನೋದನ್ನು ಚಿತ್ರದಲ್ಲಿ ತೋರಿಸಿದ್ದೇವೆ. ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ ಎಂದರು,

ನಾಯಕ ಅಭಯ್ ಮಾತನಾಡಿ ಚಿತ್ರದಲ್ಲಿ ನಾನು ಶಿವ ಹೆಸರಿನ ಮಂಡ್ಯಹುಡುಗನಾಗಿದ್ದು, ಶಿವನ ಜೀವನದಲ್ಲಿ ಆಗುವ ಘಟನೆಗಳೇ ಈ ಚಿತ್ರದ ಹೈಲೈಟ್. ಚಿತ್ರದ ಟೀಸರ್, ಸಾಂಗ್ ರಿಲೀಸಾಗಿದೆ, ಈ ಹಾಡಿಗೆ ಕಿಶೋರ್ ಅವರು ತುಂಬಾ ಚೆನ್ನಾಗಿ ಹುಕ್‌ಸ್ಟೆಪ್ಸ್ ಮಾಡಿದ್ದಾರೆ, 3 ಸಾಹಸ ದೃಶ್ಯಗಳನ್ನು ಥ್ರಿಲ್ಲರ್ ಮಂಜು ಅವರು ಮಾಡಿಕೊಟ್ಟಿದ್ದಾರೆ, ನಮ್ಮ ತಂದೆಯವರು ಎಲ್ಲಾ ವಿಭಾದಲ್ಲಿ ಇನ್ ವಾಲ್ವ್ ಆಗಿ ಚಿತ್ರ ಅತ್ಯುತ್ತಮವಾಗಿ ಬರುವಂತೆ ನೋಡಿಕೊಂಡಿದ್ದು, ಸಿನಿಮಾಗೆ ಏನು ಬೇಕೋ ಅದನ್ನು ಪ್ರೊವೈಡ್ ಮಾಡಿದ್ದಾರೆ.

ಚಿತ್ರದಲ್ಲಿ ಪ್ರಮುಖವಾಗಿ 3 ಮೆಸೇಜ್‌ಗಳಿವೆ, ಪ್ರೀತಿಸುವವರಿಗೆ, ಪೋಷಕರಿಗೆ ಹಾಗೂ ಸ್ನೇಹಿತರಿಗೆ ಸಂದೇಶವಿದೆ ಎಂದು ಹೇಳಿದರು. ಉಳಿದಂತೆ ನಟರಾದ ತೇಜಸ್, ಗಜೇಂದ್ರ, ದರ್ಶನ್ ಸೂರ್ಯ, ಸುಖೇಶ್, ಚಿದಂಬರ ಚಿಕ್ಕದಾಗಿ ಮಾತನಾಡಿದರು. ನಾಯಕಿ ಭೂಮಿಕಾ ಗೀತಾ, ಮನೆಯೇ ಮಂತ್ರಾಲಯ ಸೀರಿಯಲ್ ಅಲ್ಲದೆ ೩ ಸಿನಿಮಾಗಳಲ್ಲೂ ಅಭಿನಯಿಸಿದ್ದು, ಇಲ್ಲಿ ಹಳ್ಳಿಹುಡುಗಿ ಪ್ರಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಬಲ ರಾಜವಾಡಿ, ಸುನಂದ ಅಲ್ಲದೆ ನಿರ್ಮಾಪಕ ಚಂದ್ರಶೇಖರ್ ಅವರು ಕಥೆಗೆ ಟ್ವಿಸ್ಟ್ ಕೊಡುವಂಥ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

error: Content is protected !!