Cini NewsMovie Review

ಮನಿ ಮೈಂಡ್ ಗೇಮ್ ‘ಹೈಡ್ ಅಂಡ್ ಸೀಕ್'(ಚಿತ್ರವಿಮರ್ಶೆ-ರೇಟಿಂಗ್ : 3/5)

ರೇಟಿಂಗ್ : 3/5
ಚಿತ್ರ : ಹೈಡ್ ಅಂಡ್ ಸೀಕ್
ನಿರ್ದೇಶಕ : ಪುನೀತ್ ನಾಗರಾಜು
ನಿರ್ಮಾಪಕರು : ಪುನೀತ್, ವಸಂತ್ ರಾವ್ ಎಂ ಕುಲಕರ್ಣಿ
ಸಂಗೀತ : ಸ್ಯಾಂಡಿ ಅಡಂಕಿ ಛಾಯಾಗ್ರಹಕ : ರಿಜೋ ಪಿ ಜಾನ್
ತಾರಾಗಣ : ಅನೂಪ್ ರೇವಣ್ಣ , ಧನ್ಯ ರಾಮ್ ಕುಮಾರ್ , ಅರವಿಂದ್ ರಾವ್ , ಮೈತ್ರಿ ಜಗ್ಗಿ, ಸೂರಜ್ , ರಾಜೇಶ್ ನಟರಂಗ , ಕೃಷ್ಣ ಹೆಬ್ಬಾಳೆ, ಬಾಲ ರಾಜವಾಡಿ ಹಾಗೂ ಮುಂತಾದವರು…

ಬೆಂಗಳೂರಿನಂತಹ ಮಹಾನಗರಿಯಲ್ಲಿ ಕ್ಷಣಕ್ಕೊಂದು ಅವಗಡ , ಅಪಘಾತ , ಕೊಲೆ , ಸುಲಿಗೆ, ಅತ್ಯಾಚಾರ , ಅಪಹರಣದಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಅದು ಯಾಕೆ… ಹೇಗೆ.. ಎಂಬ ಕಾರಣ ಹುಡುಕುವುದೇ ದೊಡ್ಡ ಸವಾಲಾಗಿರುತ್ತದೆ. ಅದರಲ್ಲೂ ಕೆಲವೊಂದು ಪ್ರಕರಣಗಳು ಮಾಡಿದವರ ಕಾಲಿಗೆ ಸುರಳಿಯಂತೆ ಸುತ್ತಿಕೊಂಡ ಹಾಗೆ ಸಿಲುಕಿ ಒದ್ದಾಡುವ ಪರಿಸ್ಥಿತಿ ಎದುರಾಗುತ್ತದೆ.

ಅಂತದ್ದೇ ಒಂದು ನಿಗೂಢ ಅಪರಣದ ಕಥಹಾಂದರದ
ಮೂಲಕ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಹೈಡ್ ಅಂಡ್ ಸೀಕ್”. ಒಂದು ಆರ್ಗನೈಸೇಷನ್ ಮೂಲಕ ಚಾಲಾಕಿ ತಂಡದವರು ಕಿಡ್ನಾಪ್ ಮಾಡುವ ಗೇಮ್ ಪ್ಲಾನ್ ಪೊಲೀಸರಿಗೆ ದೊಡ್ಡ ತಲೆ ನೋವಾಗಿರುತ್ತದೆ. ಇನ್ಸ್ಪೆಕ್ಟರ್ ಕರ್ಣಾಕರ್ (ಅರವಿಂದ್ ರಾವ್) ಅಧಿಕಾರಿಗಳೊಂದಿಗೆ ಚರ್ಚಿಸಿ ಹೈ ಲೆವೆಲ್ ಆರ್ಗನೈಸೇಷನ್ ಕಿಡ್ನಾಪರ್ಸ್ ವಿಚಾರ ಚರ್ಚೆ ಮಾಡುತ್ತಿರುವಾಗಲೇ ಇಬ್ಬರು ದೊಡ್ಡ ಬಿಸಿನೆಸ್ ಮ್ಯಾನ್ ಗಳು ತಮ್ಮ ತಮ್ಮ ಹೆಣ್ಣು ಮಕ್ಕಳು ಕಾಣೆಯಾಗಿರುವುದರ ಬಗ್ಗೆ ಕಂಪ್ಲೇಂಟ್ ನೀಡುತ್ತಾರೆ.

ಬಿಸಿನೆಸ್ ನಲ್ಲಿ ಯಾರ ಬಗೆಯು ಅನುಮಾನ ಬರದ ಇವರಿಬ್ಬರೂ ಒಬ್ಬರನ್ನೊಬ್ಬರ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಿಡ್ನಾಪ್ ಮಾಡಿಸಿರಬಹುದು ಎಂದು ಆರೋಪಿಸುತ್ತಾರೆ. ಇನ್ನು ಇಬ್ಬರು ಹೆಣ್ಣು ಮಕ್ಕಳನ್ನು ಕಿಡ್ನಾಪ್ ಮಾಡುವ ವ್ಯಕ್ತಿ (ಅನೂಪ್ ರೇವಣ್ಣ) ಹಾಗೂ ಅವನ ತಂಡ ಟಿಟಿ ಒಂದರಲ್ಲಿ ಸುತ್ತಾಡಿಸುತ್ತಿರುತ್ತಾರೆ. ಇದಲ್ಲದೆ ಅವರದು ಒಂದು ಟ್ರಸ್ಟ್ , ಬಡ ಜನರ ಕಷ್ಟಕ್ಕೆ ಮಿಡಿಯುವ ಮನಸು ಅವನದು. ಇದರ ನಡುವೆ ಹರ್ಷಿಣಿ (ಧನ್ಯ ರಾಮ್ ಕುಮಾರ್) ತಪ್ಪಿಸಿಕೊಳ್ಳುವ ಪ್ರಯತ್ನ ಪ್ರಯೋಜನವಾಗುವುದಿಲ್ಲ.

ವಾಹನದಲ್ಲಿ ಓಡಾಡುತ್ತಾ ಸ್ಥಳ ಬದಲಿಸುವ ಈ ಕಿಡ್ನಾಪರ್ಸ್ ಚಾಣಾಕ್ಷತನವನ್ನು ಭೇದಿಸಲು ಪೊಲೀಸರು ಒಂದು ತಂಡವನ್ನೇ ರಚನೆ ಮಾಡಿ ಹಲವು ದೃಷ್ಟಿಕೋನಗಳಿಂದ ಪತ್ತೆಹಚ್ಚಲು ಮುಂದಾಗುತ್ತಾರೆ. ಈ ಒಂದು ಕಿಡ್ನಾಪ್ ಪ್ರಕರಣದ ಪ್ರಮುಖ ವ್ಯಕ್ತಿ ಘೋಸ್ಟ್ ಯಾರಿಂಬುದೇ ಪ್ರಶ್ನೆ ಆಗಿರುತ್ತದೆ. ದೊಡ್ಡ ಬಿಸಿನೆಸ್ ನ ಕೋಟ್ಯಾಧೀಶ್ವರ ಮಕ್ಕಳು , ಮೊಮ್ಮಕ್ಕಳ ಹಣದ ವೈವಾಟು , ಬಿಸಿನೆಸ್ ಶೇರ್ಸ್ ಇದಕ್ಕೆ ಕಾರಣನಾ…
ಕಿಡ್ನಾಪ್ ಮಾಡಿಸಿದ್ದು ಯಾರು…
ಘೋಸ್ಟ್ ಯಾರು…
ಪೊಲೀಸರ ಕೈಗೆ ಸಿಕ್ತಾರಾ…
ಕ್ಲೈಮಾಕ್ಸ್ ಏನು ಹೇಳುತ್ತೆ ಎಂಬ ಎಲ್ಲಾ ಪ್ರಶ್ನೆಗೆ ಚಿತ್ರದಲ್ಲಿ ಉತ್ತರ ಸಿಗತ್ತೆ.

ಇನ್ನು ಈ ಚಿತ್ರದ ನಿರ್ದೇಶಕ ಪುನೀತ್ ನಾಗರಾಜ್ ಒಂದು ಇಂಟರೆಸ್ಟಿಂಗ್ ಸಬ್ಜೆಕ್ಟ್ ಅನ್ನ ಆಯ್ಕೆ ಮಾಡಿಕೊಂಡಿದ್ದು , ಶ್ರೀಮಂತ ಕುಟುಂಬದವರ ಬದುಕು , ಹಣದ ವಹಿವಾಟು , ಪರ್ಸೆಂಟೇಜ್ ಶೇರ್ಸ್, ವೆಲ್ ಆರ್ಗನೈಸಿಂಗ್ ಕಿಡ್ನಾಪರ್ಸ್ , ಪೊಲೀಸರ ಹರಸಾಹಸ ಹೀಗೆ ಒಂದಕ್ಕೊಂದು ಕೊಂಡಿಯಂತೆ ಕುತೂಹಲಕಾರಿ ಚಿತ್ರಕಥೆ ಶೈಲಿ ವಿಭಿನ್ನವಾಗಿದೆ. ಒಂದೇ ವಿಷಯದತ್ತಲ್ಲೇ ಸಾಗಿ ಇದ್ದಲ್ಲೇ ಗಿರಿಕಿ ಒಡೆದಂತಿದೆ. ಮತ್ತಷ್ಟು ಇಂಟೆರೆಸ್ಟಿಂಗ್ ಅಂಶ ಸೇರಿಸಬಹುದಿತ್ತು. ಇನ್ನು ಚಿತ್ರದ ಛಾಯಾಗ್ರಹಕರ ಕೈ ಚಳಕ ಸೊಗಸಾಗಿ ಬಂದಿದೆ.

ಅದೇ ರೀತಿ ಸಂಗೀತ ಕೂಡ ಗಮನ ಸೆಳೆಯುತ್ತದೆ. ತಾಂತ್ರಿಕವಾಗಿ ತಂಡ ಬಹಳ ಶ್ರಮ ಪಟ್ಟಿದ್ದಾರೆ. ಇನ್ನು ನಾಯಕನಾಗಿ ಅಭಿನಯಿಸಿರುವ ಅನುಪ್ ರೇವಣ್ಣ ಒಬ್ಬ ಕಿಡ್ನ್ಯಾಪರ್ ಆಗಿ ತಮ್ಮ ಪಾತ್ರಕ್ಕೆ ನ್ಯಾಯ ನೀಡಿದ್ದು, ಮಾತಿಗಿಂತ ಮೌನದಲ್ಲೇ ಗಮನ ಸೆಳೆದಿದ್ದಾರೆ. ಒಂದು ಮೈಂಡ್ ಗೇಮ್ ಓಟದಲ್ಲಿ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಅವರೊಟ್ಟಿಗೆ ಮೈತ್ರಿಯ ಜಗ್ಗಿ , ಸೂರಜ್ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಇನ್ನು ನಾಯಕಿಯಾಗಿ ಧನ್ಯ ರಾಮ್ ಕುಮಾರ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಜೀವ ತುಂಬಿದ್ದಾರೆ. ಆಕ್ಟಿವ್ ಅಂಡ್ ಎನಾಜಿಟಿಕ್ ಆಗಿ ಎಣ್ಣೆಗೂ ಸೈ… ಮಾತಿಗೂ ಜೈ ಎನ್ನುವ ಪಾತ್ರ ನಿರ್ವಹಿಸಿದ್ದಾರೆ. ಮತ್ತೊಬ್ಬ ನಟಿ ಮೌನದಲ್ಲೇ ಗಮನ ಸೆಳೆದಿದ್ದಾರೆ. ಇನ್ನು ಹೆಣ್ಣು ಮಕ್ಕಳ ತಂದೆಯ ಪಾತ್ರಗಳಲ್ಲಿ ರಾಜೇಶ್ ನಟರಂಗ , ಕೃಷ್ಣ ಹೆಬ್ಬಾಳೆ ಗಮನ ಸೆಳೆಯುತ್ತಾರೆ. ಇನ್ಸ್ಪೆಕ್ಟರ್ ಪಾತ್ರದಲ್ಲಿ ಅರವಿಂದ್ ರಾವ್ ಜೀವ ತುಂಬಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಬಾಲ ರಾಜವಾಡಿ ಸೈಲೆಂಟ್ ಲುಕ್ ಸೆಳೆಯುತ್ತದೆ. ಒಟ್ನಲ್ಲಿ ಕುತೂಹಲವನ್ನು ಮೂಡಿಸುತ್ತಾ ಸಾಗುವ ಈ ಚಿತ್ರ ಸಸ್ಪೆನ್ಸ್ ಪ್ರಿಯರಿಗೆ ಬಹಳ ಬೇಗ ಇಷ್ಟವಾಗಲಿದ್ದು , ಎಲ್ಲರೂ ಒಮ್ಮೆ ನೋಡಬಹುದು

error: Content is protected !!