Cini NewsSandalwood

ಯುವ ನಟ ಮಿಲಿಂದ್ ಹುಟ್ಟುಹಬ್ಬಕ್ಕೆ “ಅನ್ ಲಾಕ್ ರಾಘವ” ಚಿತ್ರದ ಹಾಡು ಗಿಫ್ಟ್.

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ವಿಭಿನ್ನ ಬಗೆಯ , ವಿಶಿಷ್ಟ ಕಥಾಹಂದರದ ಚಿತ್ರವೂಂದು ತೆರೆಯ ಮೇಲೆ ಬರಲು ಸನ್ನದ್ಧವಾಗಿದೆ. ಚಿತ್ರ ಆರಂಭವಾದಗಿನಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ “ಅನ್ ಲಾಕ್ ರಾಘವ” ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ.

ಹೃದಯಶಿವ ಅವರು ಬರೆದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿ, ಸಾಯಿ ವಿಘ್ನೇಶ್ ಹಾಡಿರುವ “ನನ್ನ ಹುಡುಗಿ” ಎಂಬ ಹಾಡು ಯುವ ನಾಯಕ ಮಿಲಿಂದ್ ಹುಟ್ಟುಹಬ್ಬದಂದು A2 music ಮೂಲಕ ಬಿಡುಗಡೆಯಾಗಿ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಚಿತ್ರತಂಡ ನಾಯಕನ ಬರ್ತಡೆ ಸೆಲೆಬ್ರೇಶನ್ ಮಾಡುವುದರ ಜೊತೆಗೆ ಹಾಡಿನ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲು ಪತ್ರಿಕಾಗೋಷ್ಠಿಯನ್ನು ಆ ಯೋಜನೆ ಮಾಡಿತು.

ಈ ಚಿತ್ರದ ನಿರ್ದೇಶಕ ದೀಪಕ್ ಮಧುವನಹಳ್ಳಿ ಮಾತನಾಡುತ್ತಾ ಹಲವು ವಿಶೇಷಗಳನ್ನು ಹೊಂದಿರುವ “ಅನ್ ಲಾಕ್ ರಾಘವ” ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ಪ್ರಥಮಪ್ರತಿ ಬರಲಿದೆ. ನಾಯಕ ಮಿಲಿಂದ್ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಹಾಡಿನ ಚಿತ್ರೀಕರಣ ಚಿತ್ರದುರ್ಗದಲ್ಲಿ ಎರಡು ದಿನಗಳ ಕಾಲ ನಡೆದಿದೆ.

ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ‌. ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿತ್ತು. ಮಿಲಿಂದ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ. ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಚಿತ್ರದ ಎಲ್ಲಾ ಹಾಡುಗಳು ಚೆನ್ನಾಗಿದೆ. ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ನಿರ್ಮಾಪಕರಿಗೆ ಹಾಗೂ ತಂಡಕ್ಕೆ ಧನ್ಯವಾದ ಎಂದರು.

ಇನ್ನು ಈ ಚಿತ್ರವನ್ನ ನಿರ್ಮಾಣ ಮಾಡಿರುವ ನಿರ್ಮಾಪಕ ಮಂಜುನಾಥ.ಡಿ. ಮಾತನಾಡುತ್ತಾ , ಇದೊಂದು ವಿಭಿನ್ನ ಬಗೆಯ ಚಿತ್ರ. ನನ್ನ ಮಗ ಮಿಲಿಂದ್ ನಾಯಕನಾಗಿದ್ದು , ಇಂದು ಅವನ ಹುಟುಹಬ್ಬದಂದು ಈ ಹಾಡು ಬಿಡುಗಡೆ ಮಾಡಿದೇವೆ. ಈ ಚಿತ್ರಕ್ಕೆ ಸತ್ಯಪ್ರಕಾಶ್ ಅವರು ಕಥೆ ಬರೆದಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು. ಮತ್ತೊಬ್ಬ ನಿರ್ಮಾಪಕರಾದ ಗಿರೀಶ್ ಕುಮಾರ್ ಸಹ ಚಿತ್ರದ ಕುರಿತು ಮಾತನಾಡಿ, ಮಿಲಿಂದ್ ಅವರಿಗೆ ಶುಭಾಶಯ ತಿಳಿಸಿದರು.

ಈ ಚಿತ್ರದ ನಾಯಕ ಮಿಲಿಂದ್ ಮಾತನಾಡುತ್ತಾ ನಮ್ಮ ಇಡೀ ತಂಡ ಬಹಳಷ್ಟು ಶ್ರಮವಹಿಸಿ ಈ ಒಂದು ವಿಭಿನ್ನ ಚಿತ್ರವನ್ನು ಪ್ರೇಕ್ಷಕರನ್ನ ಮುಂದೆ ತರಲು ಸಿದ್ಧರಾಗಿದ್ದೇವೆ. ನನ್ನ ಹುಟ್ಟುಹಬ್ಬದಂದು ಈ ಹಾಡು ಬಿಡುಗಡೆ ಮಾಡಿರುವುದು ನನಗೆ ಸಂತೋಷ ತಂದಿದೆ ಎನ್ನುತ್ತಾ ಹಾಡಿನ ಚಿತ್ರೀಕರಣದ ಸಮಯದಲ್ಲಿ ನಡೆದ ಘಟನೆಗಳನ್ನು ಹಂಚಿಕೊಂಡರು.

ಹೃದಯಶಿವ ಅವರು ಬರೆದು ಅನೂಪ್ ಸೀಳಿನ್ ಸಂಗೀತ ನೀಡಿ, “ವರಾಹ ರೂಪಂ” ಹಾಡಿನ ಖ್ಯಾತಿಯ ಸಾಯಿ ವಿಘ್ನೇಶ್ ಹಾಡಿರುವ ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರದುರ್ಗದ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿದೆ. ನಮ್ಮ ಚಿತ್ರವನ್ನ ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.

ನಾಯಕಿ ರೆಚೆಲ್ ಡೇವಿಡ್ ಸಹ ಹಾಡಿನ ಬಗ್ಗೆ ಮಾತನಾಡಿ, ಮಿಲಿಂದ್ ಅವರಿಗೆ ಶುಭಾಶಯ ಕೋರಿದರು. ಛಾಯಾಗ್ರಾಹಕ ಲವಿತ್, ಸಂಕಲನಕಾರ ಅಜಯ್ ಹಾಗೂ ನೃತ್ಯ ಸಂಯೋಜಕ ಮುರಳಿ ಮಾಸ್ಟರ್ ಹಾಡಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಒಟ್ಟಾರೆ ಬಹಳಷ್ಟು ನೀರಿಕ್ಷೆಯನ್ನು ಇಟ್ಟುಕೊಂಡಿರುವ ಈ “ಅನ್ ಲಾಕ್ ರಾಘವ” ಚಿತ್ರತಂಡ ಹಂತ ಹಂತವಾಗಿ ಪ್ರಚಾರವನ್ನು ಮಾಡುವುದರ ಮೂಲಕ ಅದ್ದೂರಿಯಾಗಿ ಬೆಳ್ಳಿ ಪರದೆ ಮೇಲೆ ಚಿತ್ರವನ್ನು ತರಲಿದ್ದಾರಂತೆ.

error: Content is protected !!