Cini NewsSandalwood

ಆಗ ಪ್ರೇಮಲೋಕ… ಈಗ ಗೌರಿ ಲೋಕ…

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮ್ಯೂಸಿಕಲ್ ಓರಿಯೆಂಟೆಡ್ ಚಿತ್ರ ಬೆಳ್ಳಿ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಸ್ಮಾರ್ಟ್ ಹ್ಯಾಂಡ್ಸಮ್ ಹೀರೋ ಸಮರ್ಜಿತ್ ಲಂಕೇಶ್ ಅಭಿನಯದ “ಗೌರಿ” ಚಿತ್ರದಲ್ಲಿ ಬರೋಬರಿ ಏಳು ವಿಭಿನ್ನ ಹಾಡುಗಳಿದ್ದು , ಹಲವು ಬಿಟ್ಸ್ ಗಳು ಕೂಡ ಒಳಗೊಂಡಿದೆಯಂತೆ.

ಆಗ ಪ್ರೇಮಲೋಕದಲ್ಲಿ ಬರೋಬ್ಬರಿ 11 ಸಾಂಗ್ಸ್ ಗಳು ಪ್ರೇಕ್ಷಕರನ್ನ ರಂಜಿಸಿದ್ದು , ಈಗ ಗೌರಿಯಲ್ಲಿ 07 ಸಾಂಗ್ ಬೇರೆದೇ ಲೋಕವನ್ನು ಸೃಷ್ಟಿ ಮಾಡಲು ಸಿದ್ಧವಾಗಿದೆಯಂತೆ. ವಿಶೇಷ ಏನೆಂದರೆ ಈ ಚಿತ್ರಕ್ಕೆ ಒಟ್ಟು ಐದು ಜನ ಸಂಗೀತ ನಿರ್ದೇಶಕರಾದ ಜೆಸ್ಸಿ ಗಿಫ್ಟ್ , ಚಂದನ್ ಶೆಟ್ಟಿ , ಶಿವು ಬೆರ್ಗಿ ಹಾಗೂ ಅನಿರುದ್ಧ ಶಾಸ್ತ್ರಿ ಸಂಗೀತ ನೀಡಿದರೆ , ಮ್ಯಾಥ್ಯೂಸ್ ಮನು ಹಿನ್ನೆಲೆ ಸಂಗೀತ ನೀಡಿದ್ದಾರೆ.

ಈ ಚಿತ್ರಕ್ಕೆ ವಿ. ನಾಗೇಂದ್ರ ಪ್ರಸಾದ್ ಕವಿರಾಜ್ , ಕೆ .ಕಲ್ಯಾಣ್, ವರದರಾಜ್ ಹಾಡುಗಳಿಗೆ ಸಾಹಿತ್ಯವನ್ನು ರಚಿಸಿದ್ದು ಕೈಲಾಶ್ ಕೇರ್ , ಚಂದನ್ ಶೆಟ್ಟಿ , ಅನಿರುದ್ಧ ಶಾಸ್ತ್ರಿ , ಜಾವೇದ್ ಅಲಿ , ಅನನ್ಯ ಭಟ್ , ನಿಹಾಲ್ ತವರು ತೌರೋ , ಸಾಗರ್ , ಬಾಲಸುಬ್ರಮಣ್ಯಂ , ಪ್ರಜ್ಞ ಮರಾಠೆ ಹಾಗೂ ನಾಯಕ ಸಮರ್ಜಿತ್ ಕೂಡ ಹಾಡುಗಳನ್ನು ಹಾಡಿದ್ದಾರೆ.

ಜೋಶ್ , ಮದರ್ ಸೆಂಟಿಮೆಂಟ್ , ಲವ್ ಸೇರಿದಂತೆ ಒಂದೊಂದು ಹಾಡು ಒಂದೊಂದು ಶೈಲಿಯಲ್ಲಿ ಪ್ರೇಕ್ಷಕರ ಗಮನವನ್ನು ಸೆಳೆಯುತ್ತದೆ. ಹಾಗೆಯೇ ಒಂದು ಹಾಡಿಗಾಗಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ಅದ್ದೂರಿ ಸೆಟ್ ಗಳನ್ನ ಹಾಕಿ , ರಿಚ್ ಕಾಸ್ಟ್ಯೂಮ್ , ಬಾಂಬೆ ಡ್ಯಾನ್ಸರ್ಸ್ ಸೇರಿಸಿ ಅದ್ದೂರಿಯಾಗಿ ಚಿತ್ರೀಕರಣ ಮಾಡಿದ್ದೇವೆ ಎಂದರು ನಿರ್ದೇಶಕ ಇಂದ್ರಜಿತ್ ಲಂಕೇಶ್.

ಈಗ ಬಿಡುಗಡೆಗೊಂಡಿರುವ ‘ಒಳ್ಳೆ ಟೈಮ್ ಬರತ್ತೆ’… ಎಂಬ ಸಾಂಗ್ ಎಲ್ಲೆಡೆ ಬಾರಿ ವೈರಲ್ ಆಗಿದ್ದು ಎಲ್ಲರಿಂದ ಭರ್ಜರಿ ರೆಸ್ಪಾನ್ಸ್ ಬರುತ್ತಿದೆ. ಈಗಾಗಲೇ ಯೂಟ್ಯೂಬ್ , ರೀಲ್ಸ್ , ಶಾರ್ಟ್ , ಫೇಸ್ಬುಕ್ , ಇನ್ಸ್ಟಾಗ್ರಾಂ ಗಳಲ್ಲಿ ಫಾಲೋವರ್ಸ್ ಗಳು ವಿಡಿಯೋಗಳನ್ನು ಮಾಡಿದ್ದು , ಭರ್ಜರಿ ವ್ಯೂಸ್ ಪಡೆದುಕೊಂಡಿದೆ. ಚಿತ್ರದ ಮೊದಲ ಇನ್ವಿಟೇಶನ್ ಹಾಡುಗಳು , ಕೇಳುಗರಿಗೆ ಹಾಡು ಇಷ್ಟವಾದರೆ ಖಂಡಿತ ಸಿನಿಮಾ ವೀಕ್ಷಕರ ಮನಸ್ಸನ್ನು ಮುಟ್ಟುತ್ತೆ ಅನ್ನೋ ನಂಬಿಕೆ ಇದೆ.

ಕಥೆಗೆ ಪೂರಕವಾಗಿ ಹಾಡುಗಳು ಕೂಡ ಮೂಡಿಬಂದಿದೆ. ಸೆಂಟಿಮೆಂಟ್ , ಫ್ರೈಂಡ್ ಶಿಪ್ , ಲವ್ , ಫ್ಯಾಮಿಲಿ ಡ್ರಾಮಾ , ಆಕ್ಷನ್ ಜೊತೆಗೆ ಮ್ಯೂಸಿಕಲ್ ಟಚ್ ಭರ್ಜರಿಯಾಗಿ ಮೂಡಿ ಬಂದಿದೆ. ಈಗಾಗಲೇ ಈ ಚಿತ್ರದ ಆಡಿಯೋ ಹಕ್ಕನ್ನು ಆನಂದ್ ಆಡಿಯೋ ದೊಡ್ಡ ಮೊತ್ತಕ್ಕೆ ಪಡೆದುಕೊಂಡಿದೆ. ಸಿನಿಮಾ ಕಂಟೆಂಟ್ , ಮೇಕಿಂಗ್ , ಅದ್ದೂರಿತನ ಚೆನ್ನಾಗಿದ್ದರೆ ಖಂಡಿತ ಆಡಿಯೋ , ಟಿವಿ ರೈಟ್ಸ್ ಎಲ್ಲವೂ ಆಗುತ್ತದೆ. ಇನ್ನು ಮುಂದೆ ಒಂದೊಂದೇ ಹಾಡುಗಳು , ಟೀಸರ್ , ಟ್ರೈಲರ್ ಬಿಡುಗಡೆ ಮಾಡುವ ಪ್ಲಾನ್ ಹಂತ ಹಂತವಾಗಿ ಮಾಡಿಕೊಂಡಿದ್ದೇವೆ ಎಂದರು.

ಇನ್ನು ಈ ಒಂದು ಚಿತ್ರವನ್ನ ಲಾಫಿಂಗ್ ಬುದ್ಧ ಸಂಸ್ಥೆಯಲ್ಲಿ ನಿರ್ಮಾಣ ಮಾಡಿದ್ದು ಸಮರ್ಜಿತ್ ಲಂಕೇಶ್ ಗೆ ಜೋಡಿಯಾಗಿ ಸಾನ್ಯಾ ಅಯ್ಯರ್ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ಇನ್ನುಳಿದಂತೆ ಹಿರಿಯ ಕಲಾವಿದರಾದ ಕಾಂತಾರ ಖ್ಯಾತಿಯ ಮಾಲತಿ ಸುಧೀರ್ , ಕೆಜಿಎಫ್ ಖ್ಯಾತಿಯ ಸಂಪತ್ ಮೈತ್ರಿಯ , ನಟ ಲೂಸ್ ಮಾದ ಯೋಗಿ , ಹಿರಿಯ ಕಲಾವಿದರಾದ ಸಿಹಿಕಹಿ ಚಂದ್ರು , ಮುಖ್ಯಮಂತ್ರಿ ಚಂದ್ರು , ನಟಿ ಪ್ರಿಯಾಂಕ ಉಪೇಂದ್ರ , ವಸುಂದರಾಸ್ , ಸಂಗೀತ ನಿರ್ದೇಶಕ ರಿಕ್ಕಿ ಕೇಜ್ , ಅಕುಲ್ ಬಾಲಾಜಿ ಸೇರಿದಂತೆ ದೊಡ್ಡ ತಾರಾ ಬಳಗವೇ ಕಾಣಿಸಿಕೊಂಡಿದೆ.

ಎ.ಜೆ .ಶೆಟ್ಟಿ ಹಾಗೂ ಕೆ . ಕೃಷ್ಣಕುಮಾರ್ ಛಾಯಾಗ್ರಹಣ ಅದ್ದೂರಿಯಾಗಿ ಮೂಡಿ ಬಂದಿದೆಯಂತೆ. ಇವತ್ತಿನ ಫ್ರೆಂಡಿಗೆ ತಕ್ಕಂತೆ ಮೂಡಿ ಬಂದಿರುವ ಈ ಗೌರಿ ಚಿತ್ರ ಇಂದ್ರಜಿತ್ ಲಂಕೇಶ್ ರವರ ಸಹೋದರಿ ಗೌರಿ ಲಂಕೇಶ್ ರವರ ಕಥೆ ಆಧಾರಿತ ಚಿತ್ರವಲ್ಲ, ಈ ಗೌರಿ ಚಿತ್ರ ನೋಡಿಗರಿಗೆ ಹಬ್ಬ , ಕಂಪು , ಸೌಂದರ್ಯ , ಸಂಗೀತದ ಸುಧೆ ಎಲ್ಲವೂ ಅತ್ಯದ್ಭುತವಾಗಿ ಕಾಣುತ್ತದೆ. ಪ್ರತಿಯೊಬ್ಬರು ಈ ಚಿತ್ರವನ್ನು ನೋಡಿ ಖುಷಿ ಕೊಡುತ್ತೆ ಎಂದು ಹೇಳಿದರು ನಿರ್ದೇಶಕ , ನಿರ್ಮಾಪಕ ಇಂದ್ರಜಿತ್ ಲಂಕೇಶ್.

error: Content is protected !!