ಜಾಕಿ ಭಾವನಾ ಲಾಯರ್ ಪಾತ್ರದಲ್ಲಿ “ಸ್ಪಾರ್ಕ್”ಗೆ ಎಂಟ್ರಿ

Spread the love

ಸ್ಪಾರ್ಕ್ ಮೊಗೆದಷ್ಟು ಮುಗಿಯದ ಹೊಸ ಹೊಸ ಸಂಗತಿಗಳನ್ನು ಹೊರಗಿಡುತ್ತಲೇ ಬಂದಿದೆ. ಇತ್ತೀಚೆಗಷ್ಟೇ ಚಿತ್ರದ ಅದ್ಭುತ ಹಾಡುಗಳನ್ನು ಪರಿಚಯಿಸಲಾಗಿತ್ತು. ಇದೀಗ ವಿಶೇಷ ಪಾತ್ರದಲ್ಲಿ ನಟಿಸಿರುವ ಭಾವನಾರನ್ನು ಸುದ್ದಿಗೋಷ್ಠಿಗೆ ಕರೆಸಿ ಪಾತ್ರದ ಬಗ್ಗೆ ಒಂದಷ್ಟು ಹೊಸ ವಿಚಾರಗಳನ್ನು ಹಂಚಿಕೊಳ್ಳಲಾಯಿತು.

ಸ್ಪಾರ್ಕ್ ಶೀರ್ಷಿಕೆಯಂತೆ ಕಥೆಯಲ್ಲೂ ಕೂಡ ಸ್ಪಾರ್ಕ್ ಇದೆ. ಎಲ್ಲ ಪಾತ್ರಗಳಲ್ಲಿಯೂ ಆ ಸ್ಪಾರ್ಕ್ ಇದೆ. ಆ ಕಾರಣದಿಂದಲೇ ನಾನು ಈ ಚಿತ್ರ ಒಪ್ಪಿಕೊಂಡೆ. ನಾನು ಚಾಲೆಂಜಿಂಗ್ ಅನಿಸುವ ಚಿತ್ರಕಥೆ ಇದ್ದಾಗಲೇ ಸಿನಿಮಾ ಒಪ್ಪಿಕೊಳ್ಳುತ್ತೇನೆ. ನಿರ್ದೇಶಕರು ಈ ಪಾತ್ರದ ಬಗ್ಗೆ ಹೇಳಿದಾಗ ನಾನಂತೂ ಇಂಥ ಪಾತ್ರ ಈ ಹಿಂದೆ ಮಾಡಿಲ್ಲ ಎನ್ನುವುದು ಗೊತ್ತಾಯಿತು. ಅದಕ್ಕಾಗಿ ನಾನು ನಿರ್ದೇಶಕರಿಗೆ ದನ್ಯವಾದ ಹೇಳುತ್ತೇನೆ. ಬಹಳ ಸಮಯದ ಬಳಿಕ ನಟಿಯಾಗಿ ನನ್ನ ಪ್ರತಿಭೆಯನ್ನು ಹೊರಗೆಳೆಯಬಲ್ಲಂಥ ಪಾತ್ರವೇ ದೊರಕಿದೆ. ನಿರ್ಮಾಪಕಿ ತುಂಬ ಸಮರ್ಪಣಾ ಭಾವದಿಂದ ನಿತ್ಯವೂ ಸೆಟ್ ಗೆ ಬಂದು ಚಿತ್ರೀಕರಣದಲ್ಲಿ‌ ಭಾಗಿಯಾಗಿದ್ದಾರೆ ಎಂದರು.

ಚಿತ್ರದ ನಾಯಕ ನಿರಂಜನ್ ಸುಧೀಂದ್ರ ನೋಡಲು ಚೆಕುವನಾಗಿರುವುದು ಮಾತ್ರವಲ್ಲ, ಚೆನ್ನಾಗಿ ನಟಿಸುವ, ಡ್ತಾನ್ಸ್ ಮಾಡುವ, ಫೈಟ್ ಮಾಡುವ ಅಪರೂಪದ ಬಹುಮುಖ ಪ್ರತಿಭೆ ಎಂದು ಭಾವನಾ ಪ್ರಶಂಸಿಸಿದರು. ಇವರು ಚಿತ್ರರಂಗದ ಭರವಸೆಯ ನಾಯಕ ಎಂದು ಮೆಚ್ಚಿಕೊಂಡರು. ಚಿತ್ರತಂಡದ ಪ್ರತಿಯೊಬ್ಬ ಕಲಾವಿದರ ಜೊತೆಗೆ ತಮಗೆ ಇರುವಂಥ ಆತ್ಮೀಯತೆ ಬಗ್ಗೆ ಭಾವನಾ ಮನಸುಬಿಚ್ಚಿ ಮಾತನಾಡಿದರು. ಈ ಚಿತ್ರದಲ್ಲಿ ಶ್ರೇಷ್ಠ ನಟರು, ತಂತ್ರಜ್ಞರು ಇರುವುದಷ್ಟೇ ಅಲ್ಲ, ಕೌಟುಂಬಿಕ ವಿಚಾರ, ಉತ್ತಮ ಸಂದೇಶ ಎಲ್ಲವನ್ನೂ ಮನರಂಜನೆಯ ಸಂಪೂರ್ಣ ಪ್ಯಾಕೇಜ್ ಜೊತೆ ನೀಡಲಾಗಿದೆ ಎಂದು ಭಾವನಾ ಸಂಭ್ರಮ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ನಟ ಗಣೇಶ್ ರಾವ್ ಕೇಸರ್ಕರ್ ಭಾವನಾ ಅವರೊಡನೆ ತಮಗೆ ಕಾಂಬಿನೇಶನ್ ದೃಶ್ಯವಿತ್ತು. ಖುಷಿಯಾಗಿದೆ ಎಂದರು. ಮತ್ತೋರ್ವ ನಟ ಅಶ್ವಿನ್ ಹಾಸನ್ ಈ ಹಿಂದೆ ಕೇಸ್ ಆಫ್ ಕೊಂಡಾಣ ಚಿತ್ರದಲ್ಲಿ ಭಾವನಾ ಜೊತೆ ನಟಿಸಿದ್ದಾಗಿ ನೆನಪಿಸಿಕೊಂಡರು. ಧರ್ಮಣ್ಣ ಮಾತನಾಡುತ್ತಾ ಇನ್ಸ್ಪೆಕ್ಟರ್ ವಿಕ್ರಮ್ ಚಿತ್ರದಲ್ಲಿ ಭಾವನಾ ಅವರೊಂದಿಗೆ ನಟಿಸಿದ್ದೆ. ಅವರಿಂದ ಕಲಿತಿದ್ದೇನೆ ಎಂದರು. ವಿಜಯ್ ಚೆಂಡೂರು ತಮ್ಮ ಪಾತ್ರ ಸಣ್ಣದಾದರೂ ಮಹತ್ತರವಾಗಿದೆ ಎಂದು ವಿಜಯ್ ಚೆಂಡೂರ್ ಹೇಳಿದರು. ತಾವು ವಿಜಯ್ ಚೆಂಡೂರ್ ಅವರ ಪಾರ್ಟ್ನರ್ ಆಗಿ ನಟಿಸಿರುವುದಾಗಿ ಅಶ್ವಥ್ ನೀನಾಸಂ ಹೇಳಿದರು. ಮಹಾಂತೇಶ್ ಹಿರೇಮಠ ಚಿತ್ರದಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿ ನಟಿಸಿದ್ದಾರೆ.

ಕಾರ್ಯಕಾರಿ ನಿರ್ಮಾಪಕ ಶುಭಂ ಸಿಂಗ್
ಭಾವನಾಳ ಕಸಿನ್ ಬ್ರದರ್ ಆಗಿ ನಟಿಸಿದ್ದಾಗಿ ಹೇಳಿದರು. ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಮಾತನಾಡಿ ಪ್ರತಿ ಪಾತ್ರಕ್ಕೆ ತಕ್ಕಂತೆ ಕಲಾವಿದರನ್ನು ಆಯ್ಕೆ ಮಾಡಿದ್ದೇನೆ. ಒಂದು‌‌ ಘಟನೆಯಲ್ಲಿ ಪತ್ರಕರ್ತನಾದ ನಾಯಕನಿಗೆ ಸಹಕಾರಿಯಾಗಿ ಎಂಟ್ರಿ ನೀಡುವ ವೈದೇಹಿ ಎನ್ನುವ ಲಾಯರ್ ಪಾತ್ರವನ್ನು ಭಾವನಾ ಮಾಡಿರುವುದಾಗಿ ಮಹಾಂತೇಶ್ ಹೇಳಿದರು.

ಭಾವನಾ ಅವರು ಒಳ್ಳೆಯ ಕಥೆ ಇದ್ದಾಗ ಮಾತ್ರ ಸಿನಿಮಾ ಒಪ್ಕೋತಾರೆ. ಈ ಚಿತ್ರದಲ್ಲಿ ನನ್ನ ಮತ್ತು ಅವರ ಕಾಂಬಿನೇಶನ್ ದೃಶ್ಯಗಳು ತುಂಬ ಚೆನ್ನಾಗಿ ಮೂಡಿ‌ಬಂದಿದೆ. ರಚನಾ ಇಂದರ್ ತಾವು ವೈದ್ಯೆಯಾಗಿ ನಟಿಸಿರುವುದಾಗಿ ಹೇಳಿದರು. ಚಿತ್ರ ಇದೇ ತಿಂಗಳ 25ರಂದು ತೆರೆಕಾಣಲಿದೆ. ಅದಕ್ಕೂ ಮೊದಲು ಚಿತ್ರತಂಡ ಒಂದೊಂದೇ ವಿಶೇಷಗಳನ್ನು ಹಂಚಿಕೊಂಡು ಪ್ರೇಕ್ಷಕರನ್ನು ಅಚ್ಚರಿಗೊಳಿಸುತ್ತಿದೆ.

Visited 1 times, 1 visit(s) today
error: Content is protected !!