Cini NewsSandalwood

“ಚಿ.ತು. ಯುವಕರ ಸಂಘ”ದ ಟೀಸರ್ ಭರ್ಜರಿ ವೈರಲ್

ಈ “ಚಿ. ತು. ಯುವಕರ ಸಂಘ” ಟೈಟಲ್ ಕೇಳಿದಾಕ್ಷಣ ನೆನಪಿಗೆ ಬರೋದು ನಟರಾದ ಶರಣ್ ಹಾಗೂ ಚಿಕ್ಕಣ್ಣ, ಅವರಿಬ್ಬರ ಕಾಂಬಿನೇಷನಲ್ಲಿ ಬಿಡುಗಡೆಯಾದ ಅಧ್ಯಕ್ಷ ಚಿತ್ರದಲ್ಲಿ ಈ ಒಂದು ಸಂಘವನ್ನು ಹುಟ್ಟುಹಾಕಿದರು. ಈಗ ಈ ಸಂಘವನ್ನೇ ಚಿತ್ರದ ಟೈಟಲ್ ಮಾಡಿಕೊಂಡು ಮತ್ತೊಂದು ಯುವಕರ ಬಳಗ ಚಿ.ತು. ಯುವಕರ ಸಂಘದ ಟೀಸರ್ ನ ಔಟ್ ಅಂಡ್ ಔಟ್ ಹಳ್ಳಿ ಮಸಾಲೆಯೊಂದಿಗೆ ಬಿಡುಗಡೆ ಮಾಡಿದೆ.

ಸದ್ಯ ರಿಲೀಸ್ ಆಗಿರೋ ಟೀಸರ್ ಬಾರಿ ವೈರಲ್ ಆಗಿದ್ದು, ಯುಟ್ಯೂಬ್ ನಲ್ಲಿ 5ಲಕ್ಷ ಕ್ಕೂ ಹೆಚ್ಹು ವೀವ್ಸ್ ಆಗಿದ್ದು, ನೋಡುಗರಿಂದ ಅತ್ಯುತ್ತಮ ಕಮೆಂಟ್ ಗಳನ್ನ ಪಡೆದುಕೊಂಡಿದೆ. ಸ್ಯಾಂಡಲ್ ವುಡ್ ಅಂಗಳದಲ್ಲಿ ಬರಲಿರೋ ಸಿನಿಮಾಗಳ ಸಾಲಲ್ಲಿ ಭರವಸೆ ಮತ್ತು ನಿರೀಕ್ಷೆ ಎರಡನ್ನೂ ಚಿ.ತು .ಯುವಕರ ಸಂಘದ ಟೀಸರ್ ಹುಟ್ಟಿಸಿದೆ.

ಚಿ.ತು ಯುವಕರ ಸಂಘ ಚಿತ್ರವನ್ನ ಶಿವು ರಾಮನಗರ ನಿರ್ದೇಶನ ಮಾಡಿದ್ದು , ಕಮರೊಟ್ಟು ಚೆಕ್ ಪೋಸ್ಟ್ ಖ್ಯಾತಿಯ ಚೇತನ್ ರಾಜ್ ನಿರ್ಮಾಣ ಮಾಡಿದ್ದಾರೆ. ಐ ಲವ್ ಯೂ ಖ್ಯಾತಿಯ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸಿದ್ದಾರೆ.

ಚಿ. ತು ಯುವಕರ ಸಂಘಕ್ಕೆ ನಾಯಕನಾಗಿ ಸನತ್ ಕಾಣಿಸಿಕೊಂಡಿದ್ದು, ವಿರಾನಿಕ ಶೆಟ್ಟಿ ನಾಯಕಿಯಾಗಿ ಅಭಿನಯಸಿದ್ದಾರೆ. ತುಕಾಲಿ ಸಂತು, ಮಹಂತೇಶ್, ಸಲ್ಮಾನ್, ಕುರಿ ಪ್ರತಾಪ್, ಬಲರಾಜವಾಡಿ, ಬಿರಾದಾರ್ ಸೇರಿದಂತೆ ದೊಡ್ಡ ಪ್ರತಿಭಾವಂತ ತಾರಾಬಳಗ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಟೀಸರ್ ನಲ್ಲಿ ಈ ಎಲ್ಲಾ ಪಾತ್ರದಾರಿಗಳನ್ನ ಹ್ಯಾಟ್ರಿಕ್ ಡೈರೆಕ್ಟರ್ ಶೋ ಮ್ಯಾನ್ ಜೋಗಿ ಪ್ರೇಮ್ ಪರಿಚಯಿಸಿರೋದು ಮತ್ತೊಂದು ವಿಶೇಷ. ಟೀಸರ್ ಲುಕ್ ಇಂಪ್ರೆಸೀವ್ ಆಗಿದೆ. ಅಧ್ಯಕ್ಷ ಫ್ಲೇವರ್ ಇರೋ ಈ ಚಿತ್ರವನ್ನ ಖುದ್ದು ಅಧ್ಯಕ್ಷ ಶರಣ್ ಕೊಂಡಾಡಿದ್ದಾರೆ.

ಅಂದ್ಹಾಗೆ ಟೀಸರ್ ನಿಂದ ಸದ್ದು ಸುದ್ದಿ ಮಾಡ್ತಿರೋ ಚಿ.ತು ಯುವಕರ ಸಂಘದ ಹಾಡುಗಳು ಸದ್ಯದಲ್ಲೇ ರಿಲೀಸ್ ಆಗಲಿದೆ. ಹಂತ ಹಂತವಾಗಿ ಚಿತ್ರತಂಡದವರು ಪ್ರಚಾರದ ಕಾರ್ಯವನ್ನು ಆರಂಭಿಸಿದ್ದು , ಅದ್ದೂರಿಯಾಗಿ ಚಿತ್ರವನ್ನ ಬಿಡುಗಡೆ ಮಾಡುವ ಪ್ಲಾನ್ ಹಾಕಿಕೊಂಡಿದೆ.

error: Content is protected !!