Cini NewsMovie ReviewSandalwood

ಸಮಾನತೆ ಅಸ್ತಿತ್ವಕ್ಕಾಗಿ ಹೋರಾಟ – ಧೈರ್ಯಂ ಸರ್ವತ್ರ ಸಾಧನಂ (ರೇಟಿಂಗ್ : 3.5/5)

ಸಮಾನತೆ ಅಸ್ತಿತ್ವಕ್ಕಾಗಿ ಹೋರಾಟ.

ರೇಟಿಂಗ್ : 3.5/5

ಚಿತ್ರ : ಧೈರ್ಯಂ ಸರ್ವತ್ರ ಸಾಧನಂ
ನಿರ್ದೇಶಕ : ಸಾಯಿರಾಮ್
ನಿರ್ಮಾಪಕ : ಆನಂದ್ ಬಾಬು
ಸಂಗೀತ : ಜ್ಯೂಡಾಸ್ಯಾಂಡಿ
ಛಾಯಾಗ್ರಹಕ : ರವಿಕುಮಾರ್ ಸನಾ
ತಾರಾಗಣ : ವಿವಾನ್.ಕೆ.ಕೆ. , ಅನುಷಾ ರೈ , ಯಶ್‌ಶೆಟ್ಟಿ , ವರ್ಧನ್, ಪ್ರದೀಪ್‌ಪೂಜಾರಿ, ಬಲ ರಾಜವಾಡಿ, ಚಕ್ರವರ್ತಿ ಚಂದ್ರಚೂಡ್ , ರಾಮ್‌ ಪವನ್, ಮೀನಾ, ಪದ್ಮಿನಿ ಶೆಟ್ಟಿ, ಅರ್ಜುನ್‌ , ಚಂದ್ರು ಹಾಗೂ ಮುಂತಾದವರು…

ದಶಕಗಳಿಂದಲೂ ಸಮಾಜದಲ್ಲಿ ಜಾತಿ, ಮೇಲು-ಕೀಳು, ಅಸ್ಪೃಶ್ಯತೆ, ದಬ್ಬಾಳಿಕೆ, ದೌರ್ಜನ್ಯ ನಿರಂತರವಾಗಿ ನಡೆದುಕೊಂಡು ಬಂದಿದೆ. ಪ್ರಸ್ತುತ ಈಗ ಎಷ್ಟರಮಟ್ಟಿಗೆ ಅದು ಸಾಗುತ್ತಿದೆಯೋ ಏನೋ… ಆದರೆ ಇಲ್ಲೊಂದು ತಂಡ ಗುಡ್ಡಗಾಡು ಪ್ರದೇಶದ ಹಳ್ಳಿಯ ಸುತ್ತ ನಡೆಯುವ ಬಲಿಷ್ಠರ ದಬ್ಬಾಳಿಕೆ , ದುರ್ಬಲರ ನೋವು , ನಲಿವು. ಕಾನೂನು ವ್ಯವಸ್ಥೆ , ಪೊಲೀಸರ ಅಟ್ಟಹಾಸ , ಸಮಾನತೆಗಾಗಿ ಬಡಿದಾಡುವ ಜನರ ಸುತ್ತ ನೈಜಕ್ಕೆ ಹತ್ತಿರ ಎನ್ನುವಂತೆ ಬೆಸೆದುಕೊಂಡು ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಧೈರ್ಯಂ ಸರ್ವತ್ರ ಸಾಧನಂ”.
ಬಾಲ್ಯದಿಂದಲೂ ಜೊತೆಯಾಗಿ ಬೆಳೆದು ಬರುವ ನಾಗ ದೊರೆ ಹಾಗೂ ಮತ್ಸ್ಯ ಸೇನ. ಕಾಡಿನೊಳಗೆ ಬೇಟೆಯಾಡಲು ಜೊತೆಯಾಗಿ ಸಾಗುವವರು, ಅದರಲ್ಲೂ ನಾಗದೊರೆಗೆ ಬಂದೂಕು ಎಂದರೆ ಪಂಚಪ್ರಾಣ, ಗುರಿ ಕೂಡ ತಪ್ಪದವನಲ್ಲ, ಹಾಗೆಯೇ ಜಾತಿ ಮೇಲು-ಕೀಳು ಬಗ್ಗೆ ಗಮನ ಕೊಡದ ಇವರಿಬ್ಬರೂ ನಡುವೆ ಹುಳಿ ಹಿಂಡುವ ವ್ಯಕ್ತಿಯ ಮಾತಿನಂತೆ ಊರ ಮುಖಂಡ ಮತ್ಸ್ಯ ಸೇನ ಕೂಲಿ ಕೆಲಸ ಮಾಡುವರು ಬಂದೂಕ ಹಿಡಿದು ನಮ್ಮೊಟ್ಟಿಗೆ ಸಾಗಿದರೆ ಬೆಳೆಯುತ್ತಾರೆ ಎಂಬ ಕಾರಣದಿಂದ ನಾಗ ದೊರೆಯನ್ನು ದೂರ ಇಡುತ್ತಾನೆ. ತನ್ನ ಬಂದೂಕವನ್ನು ಕಸಿಯುತ್ತಾನೆ.
ಇದು ನಾಗದೊರೆ ಮನಸ್ಸಿಗೆ ಗಾಸಿಯಾಗುತ್ತದೆ. ಇದೇ ಊರಿನ ಹಿರಿಯ ವಕೀಲ ಮೋಹನ್ ಭೀಮ್ ಜಿ ಸಹಕಾರದೊಂದಿಗೆ ಹಿಂದುಳಿದ ನಾಗದೊರೆ ಹಾಗೂ ಅವರ ಜನಾಂಗದವರನ್ನು ಒಗ್ಗೂಡಿಸುತ್ತಾರೆ. ವಿದ್ಯೆ , ಸಮಾನತೆಯಲ್ಲಿ ಸಾಗಬೇಕೆಂದು ದಾರಿ ತೋರುತ್ತಾರೆ. ನಾಗದೊರೆ ಪುತ್ರ ಡ್ರಾವಿಡ(ವಿವಾನ್) ಕೂಡ ಓದಲು ಮುಂದಾಗುತ್ತಾನೆ.


ಹೆಂಡತಿಯ ಸಹಕಾರ ದೊಂದಿಗೆ ಕಷ್ಟಪಟ್ಟು ದುಡಿದು ಸ್ವಂತ ಬಂದೂಕವನ್ನ ಲೈಸೆನ್ಸ್ ಮೂಲಕ ಪಡೆಯುತ್ತಾನೆ. ಅಚಾನಕ್ಕಾಗಿ ಒಂದು ದಿನ ಬಂದೂಕಿನಿಂದಲೇ ತಾಯಿ ಸಾಯುವ ದೃಶ್ಯ ನೋಡುವ ಮಗ ಹೆದರುತ್ತಾನೆ. ತಂದೆಯ ಆಶ್ರಯದಲ್ಲಿ ಬೆಳೆಯುವ ಮಗ ವಿದ್ಯಾವಂತನಾಗಿದ್ದಾನೆ. ಆದರೆ ಬಂದೂಕ ಕಂಡರೆ ಭಯ, ಇನ್ನು ಆ ಊರಿಗೆ ಬರುವ ಹೊಸ ಪೊಲೀಸ್ ಇನ್ಸ್ಪೆಕ್ಟರ್ ಆರ್ಯ (ಯಶ್ ಶೆಟ್ಟಿ) ಸ್ಟೇಷನ್ ಗೆ ಬರುತ್ತಿದ್ದಂತೆ ಆಚಾರ , ಪದ್ಧತಿ, ಮಡಿವಂತಿಕೆ ಬಗ್ಗೆ ಹೇಳುತ್ತಲೇ ಹೆಣ್ಣು ಮಕ್ಕಳನ್ನು ಕಂಡರೆ ಜೊಲ್ಲು ಸುರಿಸುತ್ತಾನೆ. ಸಮಾಜದಲ್ಲಿ ಎಲ್ಲರೂ ಒಂದೇ ಸಮಾನತೆ , ಜಾತಿ ಪದ್ಧತಿ , ವಿದ್ಯಾಭ್ಯಾಸ ಎಷ್ಟು ಮುಖ್ಯ ಎಂಬುದರ ಅರಿವು ಮೂಡಿಸುವ ನಿಟ್ಟಿನಲ್ಲಿ ದ್ರಾವಿಡ ಸಾಗಿದರೆ. ಅವನ ಬೆಂಬಲಕ್ಕೆ ಜನರು ಹಾಗೂ ದ್ರಾವಿಡ ತಂದೆ ನಿಲ್ಲುತ್ತಾರೆ. ಇದು ಮುಖಂಡರಿಗೆ ಅನ್ಯ ಕೋಮಿನ ಜನರಿಗೆ ಸಹಿಸಲಾಗುವುದಿಲ್ಲ. ಮುಂದೆ ಪೊಲೀಸ್ ಇನ್ಸ್ಪೆಕ್ಟರ್ ಆರ್ಯನ ಜೊತೆ ಸೇರಿ ಕೀಳು ಜನರು ನಾವು ಹೇಳಿದಂತೆ ಕೇಳಬೇಕು ಎಂದು ಹಿಂಸೆಯನ್ನು ನೀಡಲು ಮುಂದಾಗುತ್ತಾರೆ. ಇದಕ್ಕೆ ಬೆಂಬಲವಾಗಿ ಅಂಬಿಕಾ ಭೀಮ್ ಜಿ ( ಅನುಷಾ ರೈ) ಮೋಹನ್ ಭೀಮ್ ಜಿ ಮೊಮ್ಮಗಳು ಸಾತ್ ನೀಡುತ್ತಾಳೆ. ಹಾಗೆಯೇ ದ್ರಾವಿಡ ನನ್ನ ಪ್ರೀತಿಸುತ್ತಾಳೆ. ತನ್ನ ಸ್ಟೇಷನ್ ಮಹಿಳೆಯರು ಸೇರಿದಂತೆ ಬೇರೆ ಹೆಣ್ಣುಗಳನ್ನು ಬಲತ್ಕರಿಸುವ ಆರ್ಯ ನ ಆರ್ಭಟಕ್ಕೆ ಕಡಿವಾಣ ಇಲ್ಲದಂತಾಗುತ್ತದೆ. ಇದರ ನಡುವೆ ನಾಗದೊರೆ ಹತ್ಯಾಗುತ್ತದೆ. ದ್ರಾವಿಡ ಕಂಗಾಲಾಗುತ್ತಾನೆ. ತಾಯಿ ಆಸೆಯಂತೆ ಸರಕಾರಿ ಕೆಲಸ, ತಂದೆಯ ಆಸೆಯಂತೆ ಬಂದೂಕು ಹಿಡಿಯುವ ಕನಸು ದೂರ ಉಳಿಯುತ್ತದೆ. ಆದರೆ ಇವನಿಗೆ ಬೆನ್ನೆಲುಬಾಗಿ ನಿಲ್ಲಲು ಮುಂದಾಗುವ ಅಂಬಿಕಾ ಮೇಲೆ ಇನ್ಸ್ಪೆಕ್ಟರ್ ಹಾಗೂ ಮುಖಂಡರ ಕಣ್ಣು ಬೀಳುತ್ತದೆ.
ದ್ರಾವಿಡ ತನ್ನ ಸ್ವಾಭಿಮಾನ ಹಾಗೂ ತಂದೆಯ ಆಸೆಯನ್ನು ಪೂರೈಸುವುದಕ್ಕೆ ಒಂದು ಸವಾಲ್ ಎದುರಿಸುತ್ತಾನೆ. ಅದು ಇಡೀ ದ್ರಾವಿಡ ಹಾಗೂ ಅವನ ಜನಾಂಗದ ದಿಕ್ಕನೆ ಬದಲಿಸುತ್ತದೆ.
ಏನದು ಸವಾಲು…
ದ್ರಾವಿಡ ಬಂದೂಕು ಹಿಡಿತಾನಾ..
ಅಂಬಿಕಾಳ ಪ್ರೀತಿ ಸಿಗುತ್ತಾ…
ಜಾತಿ ಸಂಘರ್ಷ ಏನಾಗುತ್ತೆ…
ಕ್ಲೈಮಾಕ್ಸ್ ಏನು.. ಎಂಬುದರ ತಿಳಿಯಬೇಕಾದರೆ ನೀವು ಈ ಚಿತ್ರ ನೋಡಬೇಕು.

ಚಿತ್ರದ ನಿರ್ದೇಶಕ ಎ.ಆರ್. ಸಾಯಿ ರಾಮ್ ಬೆಳ್ಳಿ ಪರದೆಯ ಮೇಲೆ ಮತ್ತೊಂದು ಸೂಕ್ಷ್ಮ ವಿಚಾರದ ನೈಜ್ಯ ಘಟನೆಯ ಕುರಿತು ಬೆಳಕು ಚೆಲ್ಲಿದ್ದಾರೆ. ಸಮಾನತೆ ಜೊತೆಗೆ ಮೇಲು-ಕೀಳು, ದುಷ್ಟರ ಅಟ್ಟಹಾಸ , ಬಡವರ ಪರದಾಟದ, ಕಾನೂನು ಎಲ್ಲರಿಗೂ ಒಂದೇ ಎಂಬ ಸತ್ಯವಂಶದ ಸುತ್ತ ಸಾಗಿರುವ ರೀತಿ ಗಮನ ಸೆಳೆಯುತ್ತದೆ. ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬಹುದಿತ್ತು. ಒಂದಷ್ಟು ಹಸಿ ಬಿಸಿ ದೃಶ್ಯಗಳು , ಹೊಡೆದಾಟದ ರಕ್ತದೊಕಳಿ ಸಂದರ್ಭಗಳು ನೋಡುವುದಕ್ಕೆ ಕಷ್ಟವೆನಿಸುತ್ತದೆ. ಆದರೂ ಸಮಾಜಕ್ಕೆ ಸಮಾನತೆಯ ಬಗ್ಗೆ ಹೇಳಿರುವ ರೀತಿ ಉತ್ತಮವಾಗಿದೆ. ಇಂತಹ ಚಿತ್ರವನ್ನು ಬಹಳ ಧೈರ್ಯಮಾಡಿ ನಿರ್ಮಿಸಿರುವ ನಿರ್ಮಾಪಕರ ಸಾಹಸವನ್ನು ಕೂಡ ಒಪ್ಪುವಂತದೆ. ಇನ್ನು ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಸಂದರ್ಭಕ್ಕೆ ಅನುಗುಣವಾಗಿ ಸಾಗಿದ್ದು , ಛಾಯಾಗ್ರಾಹಕರ ಕೈಚಳಕ ಕೂಡ ಗಮನ ಸೆಳೆಯುತ್ತದೆ. ಅಷ್ಟೇ ರೋಚಕವಾಗಿ ಸಾಹಸ ದೃಶ್ಯಗಳು ಮೂಡಿಬಂದಿದೆ.


ಇನ್ನು ಈ ಚಿತ್ರದ ಮೂಲಕ ನಾಯಕನಾಗಿ ಕಾಣಿಸಿಕೊಂಡಿರುವ ಯುವ ಪ್ರತಿಭೆ ವಿವಾನ್ ಕೂಡ ತನ್ನ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ನಾಯಕಿಯಾಗಿ ಅಭಿನಯಿಸಿರುವ ಅನುಷಾ ರೈ ಕೂಡ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ವಿಶೇಷವಾಗಿ ಬಾಲ ರಾಜವಾಡಿ ಇಡೀ ಚಿತ್ರದ ಕೇಂದ್ರ ಬಿಂದುವಾಗಿ ನೈಜಕ್ಕೆ ಹತ್ತಿರ ಎನ್ನುವಂತೆ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಇನ್ನು ದುಷ್ಟ ಪೊಲೀಸ್ ಅಧಿಕಾರಿ ಪಾತ್ರವನ್ನು ಅದ್ಭುತವಾಗಿ ಯಶ್ ಶೆಟ್ಟಿ ತೆರೆಯ ಮೇಲೆ ತೆರೆದಿಟ್ಟಿದ್ದಾರೆ. ಇನ್ನು ಮುಂದೆ ಇನ್ನಷ್ಟು ಬೇರೆ ಬೇರೆ ಅವಕಾಶಗಳು ಸಿಗುವ ಸಾಧ್ಯತೆ ಇದೆ ಎನ್ನಬಹುದು. ಉಳಿದಂತೆ ಅಭಿನಯಿಸಿರುವ ವರ್ಧನ್, ಚಕ್ರವರ್ತಿ ಚಂದ್ರಚೂಡ್, ಪ್ರದೀಪ್‌ ಪೂಜಾರಿ , ರಾಮ್‌ ಪವನ್, ಮೀನಾ, ಪದ್ಮಿನಿ ಶೆಟ್ಟಿ, ಅರ್ಜುನ್‌ಪಾಳೆಗಾರ, ರಾಮ್‌ನಾಯಕ್, ಹೊಂಗಿರಣ ಚಂದ್ರು ಸೇರಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಇದೊಂದು ಸತ್ಯ ಘಟನೆಯ ಅಂಶಗಳನ್ನು ಒಳಗೊಂಡಿದ್ದು, ಎಲ್ಲರೂ ಒಮ್ಮೆ ನೋಡುವಂತಹ ಚಿತ್ರ ಇದಾಗಿದೆ.

error: Content is protected !!