Cini NewsMovie ReviewSandalwood

ವಂಚಕರ ಜಾಲದಲ್ಲಿ ಹ್ಯಾಕರ್ಸ್ ಮೈಂಡ್ ಗೇಮ್. Mr ನಟ್ವರ್ ಲಾಲ್ (ರೇಟಿಂಗ್ : 3.5/5 )

ವಂಚಕರ ಜಾಲದಲ್ಲಿ ಹ್ಯಾಕರ್ಸ್ ಮೈಂಡ್ ಗೇಮ್.

ರೇಟಿಂಗ್ : 3.5/5

ಚಿತ್ರ : Mr ನಟ್ವರ್ ಲಾಲ್
ನಿರ್ದೇಶಕ : ವಿ. ಲವ
ನಿರ್ಮಾಪಕ :ತನುಷ್ ಸಿನಿಮಾಸ್
ಸಂಗೀತ : ಧರ್ಮವಿಶ್
ಛಾಯಾಗ್ರಹಕ : ವಿಲಿಯಂ ಡೇವಿಡ್
ತಾರಾಗಣ : ತನುಷ್ ಶಿವಣ್ಣ , ಸೋನಾಲ್ ಮೊಂತೆರೊ , ನಾಗಭೂಷಣ, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ರಾಜೇಶ್ ನಟರಂಗ, ರಘು ರಾಮನ ಕೊಪ್ಪ , ಹರಿಣಿ, ರಾಜೇಂದ್ರ ಕಾರಂತ್ ಹಾಗೂ ಮುಂತಾದವರು…

ಇಡೀ ದೇಶವನ್ನೇ ಬೆಚ್ಚಿಬಿಳಿಸಿದ ಕಾನ್ ಆರ್ಟಿಸ್ಟ್ ನಟ್ವರ್ ಲಾಲ್. ತನ್ನ ಚಾಣಾಕ್ಷ ಬುದ್ಧಿವಂತಿಕೆಯಿಂದ ಯಾರನ್ನ ಯಾವ ಸಮಯದಲ್ಲಾದರೂ ನಂಬಿಸಿ , ತನ್ನ ಕೆಲಸವನ್ನು ಪೂರ್ಣಗೊಳಿಸಿಕೊಳ್ಳುವ ಈ ವ್ಯಕ್ತಿ ದೇಶದ ಪ್ರಮುಖ ಸ್ಥಳಗಳಾದಂತಹ ತಾಜ್ ಮಹಲ್ , ಕೆಂಪುಕೋಟೆ , ರಾಷ್ಟ್ರಪತಿ ಭವನ ಹಾಗೂ ಹಲವು ಸ್ಥಳಗಳನ್ನ ಮಾರಾಟಕ್ಕಿಟ್ಟ ಭೂಪತಿ. ಬಿಟ್ ಕಾಯಿನ್, ಕರೆನ್ಸಿ , ಹ್ಯಾಕಿಂಗ್ ಸೇರಿದಂತೆ ಹಲವು ಪ್ರಕರಣಗಳಲ್ಲೂ ಪ್ರಮುಖ. ಇಂತಹದ್ದೇ ಚಾಣಾಕ್ಷತನದ ವ್ಯಕ್ತಿ ಒಬ್ಬನ ಸುತ್ತ ನಡೆಯುವ ಬದುಕಿನ ನೋವು , ನಲಿವು , ಅವಮಾನ, ಗೆಳೆತನ, ಪ್ರೀತಿ, ವಂಚಕರ ಜಾಲ , ಹ್ಯಾಕರ್ಸ್ ನ ತಂತ್ರಗಾರಿಕೆ, ಕಳ್ಳ ಪೊಲೀಸ್ ಆಟದಲ್ಲಿ ಸಾಗುವ ಕಥಾ ಹಂದರದ ಮೂಲಕ ಈ ವಾರ ಬೆಳ್ಳಿ ಪರದೆ ಮೇಲೆ ಬಂದಿರುವಂತಹ ಚಿತ್ರ ಮಿಸ್ಟರ್ “ನಟ್ವರ್ ಲಾಲ್”.

ಬಂಜೆತನ ನಿವಾರಣೆಯ ವಿಚಾರವಾಗಿ ದೊಡ್ಡ ದಂದೆಯೇ ನಡೆಯುತ್ತಿರುತ್ತದೆ. ಇದರ ಪ್ರಮುಖ ರೂವಾರಿ ಗೋಡ್ಸೆ. ಅವನು ಹೇಳಿದಂತೆ ಸ್ಪರ್ಮ್ ಶೇಖರಣೆ ಮಾಡಿ, ಅದನ್ನು ಅದಲು ಬದಲು ಮೂಲಕ ಅಳವಡಿಸಿ ಗಂಡ ಹೆಂಡತಿಯರ ನಡುವೆ ಜಗಳ ತಂದು ಬ್ಲಾಕ್ ಮೆಲ್ ತಂತ್ರವನ್ನು ನಡೆಸುವ ಡಾಕ್ಟರ್ ಶೆಟ್ಟಪ್ಪ , ಈ ದುಷ್ಟ ಕೆಲಸಕ್ಕೆ ಸಹಕಾರ ನೀಡುವ ಪಿಎಸ್ಐ ಶೌರಿ. ಹ್ಯಾಕರ್ಸ್ ಗಳ ಕಾರ್ಯತಂತ್ರದ ಮೂಲಕ ಪಾತಕಿ, ಡಾಕ್ಟರ್ ಹಾಗೂ ಪಿಎಸ್ಐ ಕೊಲೆ ಮಾಡುವ ಹ್ಯಾಕರ್(ತನುಷ್ ಶಿವಣ್ಣ). ಈ ಕೇಸನ್ನ ಪತ್ತೆಹಚ್ಚಲು ಬರುವ ಪೊಲೀಸ್ ಅಧಿಕಾರಿ( ರಾಜೇಶ್ ನಟರಂಗ).

ತನ್ನ ತಂಡವನ್ನು ಕಟ್ಟಿಕೊಂಡು ಸೈಬರ್ ಕ್ರೈಂ ನ ತಂತ್ರಗಾರಿಕೆಯ ಜಾಲದಲ್ಲಿ ನಾನ ದೃಷ್ಟಿಕೋನದಿಂದ ಹುಡುಕುತ್ತಾ ಈ ಕೇಸಿಗಾಗಿ ಹಲವರನ್ನ ವಿಚಾರಣೆ ನಡೆಸಿದರು ಯಾವುದೇ ಪ್ರಯೋಜನವಾಗುವುದಿಲ್ಲ. ಇನ್ನೇನು ಕೈಗೆ ಸಿಕ್ಕರು ಎನ್ನುವಷ್ಟರಲ್ಲಿ ಎಸ್ಕೇಪ್ ಆಗುತ್ತಿದ್ದರು , ಒಮ್ಮೆ ಗೆಳೆಯನೊಬ್ಬ ಸಿಕ್ಕಿ ಹಾಕಿಕೊಳ್ಳುತ್ತಾನೆ. ಇವನಿಂದ ಸತ್ಯವನ್ನು ಹೊರೆ ತರಲು ಪೊಲೀಸರು ಹರಸಾಹಸ ಮಾಡಬೇಕಾಗುತ್ತದೆ. ಇದರ ನಡುವೆ ಒಂದು ಫ್ಲಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ. ಊರ ಗೌಡನಿಗೆ ಇಬ್ಬರು ಹೆಂಡತಿಯರು , ಎರಡನೇ ಹೆಂಡತಿಯ ಮಗ ರಂಗ (ತನುಷ್ ಶಿವಣ್ಣ).

ಇಂಜಿನಿಯರಿಂಗ್ ಮುಗಿಸಿದ್ದರು ರೈತನಾಗಿ ಬದುಕುವ ರಂಗನ ಬದುಕಿಗೆ ಮುದ್ದಾದ ಬೆಡಗಿ ನಂದು( ಸೋನಾಲ್ ಮೊಂತೆರೊ) ಪ್ರವೇಶ. ಪರಸ್ಪರ ಸ್ನೇಹ, ಪ್ರೀತಿ ಓಡಾಟ. ಮೊದಲ ಹೆಂಡತಿ ಮಕ್ಕಳ ವಿರೋಧದ ನಡುವೆ ರಂಗ ಹಾಗೂ ಅವನ ತಾಯಿ ಊರು ಬಿಡುವ ಪರಿಸ್ಥಿತಿ ಬರುತ್ತದೆ. ಸ್ವಾಮೀಜಿಗಳ ಆಶ್ರಯದಲ್ಲಿ ನಮ್ಮ ಮನೆ ಎಂಬ ಕುಟೀರದಲ್ಲಿ ಜೀವನ ನಡೆಸುವ ಅಮ್ಮ ಮಗ. ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎನ್ನುವಷ್ಟರಲ್ಲಿ ದುರಂತ ಸಾವುಗಳ ದರ್ಶನ. ಇದರಿಂದ ಕಾಣದ ಕೈಗಳ ದೊಡ್ಡ ಷಡ್ಯಂತ್ರವೇ ತುಂಬಿಕೊಂಡಿರುತ್ತದೆ. ಜೀವನವೇ ಸಾಕು ಎನ್ನುವ ರಂಗ(ತನುಷ್ )ಗೆ ಧೈರ್ಯ ತುಂಬುವ ಗೆಳೆಯ ಪ್ರಕಾಶ್ (ನಾಗ್ ಭೂಷಣ್). ಈ ದುಷ್ಟರನ್ನು ಸದೆ ಬಡಿಯಲು ನಟ್ವರ್ ಲಾಲ್ ನಂತೆ ಮಾಸ್ಟರ್ ಪ್ಲಾನ್ ಮೂಲಕ ಹ್ಯಾಕರ್ಸ್ ಜಾಲವನ್ನೇ ಕೈಗೊಳ್ಳುತ್ತಾರೆ.

ಕಾಣದ ಕೈಗಳು ಸಿಕ್ತಾರಾ…
ರಂಗನ ಸಮಸ್ಯೆ ಏನು…
ಹ್ಯಾಕಿಂಗ್ ಉದ್ದೇಶ…
ಗೆಳತಿಯ ಪ್ರೀತಿ ಸಿಗುತ್ತಾ…
ಕ್ಲೈಮಾಕ್ಸ್ ಏನು… ಇದೆಲ್ಲ ತಿಳಿಯಬೇಕಾದರೆ ನೀವು ಮಿಸ್ಟರ್ ನಟ್ವರ್ ಲಾಲ್ ಚಿತ್ರ ನೋಡಬೇಕು.

ಈ ಚಿತ್ರದಲ್ಲಿ ನಿರ್ದೇಶಕ ವಿ. ಲವ ಸಮಾಜದಲ್ಲಿ ನಡೆಯುತ್ತಿರುವ ದುಷ್ಟ ವ್ಯಕ್ತಿಗಳ ಮೋಸದ ಜಾಲದ ಅನಾವರಣ. ಹಣ , ಆಸ್ತಿಗಾಗಿ ಮಾಡುವ ಅಪರಾಧಗಳು, ತಂದೆ ತಾಯಿಯ ಪ್ರೀತಿ, ಅಣ್ಣ-ತಮ್ಮಂದಿರ ಸಂಬಂಧ , ಗೆಳತಿಯ ಸ್ನೇಹ , ಸ್ನೇಹಿತನ ಸಹಕಾರ, ಮೋಸಕ್ಕೆ ಇನ್ನೊಂದು ತಂತ್ರಗಾರಿಕೆಯೇ ಉಪಾಯ ಎನ್ನುವ ನಿಟ್ಟಿನಲ್ಲಿ ಒಂದಷ್ಟು ವಿಚಾರವನ್ನು ತೆರೆಯ ಮೇಲೆ ತಂದಿದ್ದಾರೆ. ಚಿತ್ರದ ಓಟ ನಿಧಾನಗತಿಯಲ್ಲಿ ಸಾಗಿದ್ದು , ದ್ವಿತೀಯ ಭಾಗ ಕುತೂಹಲವಾಗಿ ಸಾಗಿದೆ. ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬಹುದಿತ್ತು. ಇನ್ನು ಚಿತ್ರದ ಹಾಡುಗಳಿಗಿಂತ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.

ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದೆ. ಇಡೀ ಚಿತ್ರದ ಕೇಂದ್ರ ಬಿಂದು ನಾಯಕನಾಗಿ ಅಭಿನಯಿಸಿರುವ ತನುಷ್ ಶಿವಣ್ಣ ಪಾತ್ರಕ್ಕೆ ಜೀವ ಕೊಡುವುದಕ್ಕೆ ಬಹಳಷ್ಟು ಶ್ರಮ ಪಟ್ಟಿದ್ದಾರೆ. ಆಕ್ಷನ್ ದೃಶ್ಯಗಳಲ್ಲಿ ಸೈ ಎಂದಿದ್ದಾರೆ. ಇನ್ನು ನಾಯಕಿಯಾಗಿ ಅಭಿನಯಿಸಿರುವ ಸೋನಾಲ್ ಮೊಂತೆರೊ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಗೆಳೆಯನಾಗಿ ಅಭಿನಯಿಸಿರುವ ನಾಗಭೂಷಣ ಕೂಡ ಸಿಕ್ಕ ಅವಕಾಶಕ್ಕೆ ಜೀವ ತುಂಬಿದ್ದಾರೆ. ಪೊಲೀಸ್ ಅಧಿಕಾರಿ ಆಗಿ ರಾಜೇಶ್ ನಟರಂಗ ಅದ್ಭುತವಾಗಿ ಮಿಂಚಿದ್ದಾರೆ. ಇನ್ನು ಉಳಿದಂತೆ ಕಾಕ್ರೋಜ್ ಸುಧಿ, ಯಶ್ ಶೆಟ್ಟಿ , ರಘು ರಾಮನಕೊಪ್ಪ, ಹರಿಣಿ ಶ್ರೀಕಾಂತ್, ಸುಂದರರಾಜ್, ಕಾಂತರಾಜು ಕಡ್ಡಿಪುಡಿ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಒಟ್ಟಾರೆ ಕುತೂಹಲಕಾರಿ ಸಾಗುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು.

error: Content is protected !!