ಹಿಂದಿ ಹಾಗೂ ಕನ್ನಡದಲ್ಲಿ “ಪರಂ ವೀರ್” ಸಿನಿಮಾ ತೆರೆಗೆ ಬರ್ತಿದೆ.*

Spread the love

ಗಂಗಾಸಾಗರ್ ಕದನದ “ಪರಂ ವೀರ್” ಮೋಶನ್ ಟೀಸರ್‌ಗೆ ಭರ್ಜರಿ ಪ್ರತಿಕ್ರಿಯೆ. ವರ್ಧನ್ ಪುರಿ ಅಭಿನಯದ ಹೊಸ ಬಾಲಿವುಡ್ ಸಿನಿಮಾ “ಪರಂ ವೀರ್”. ಭಾರತೀಯ ಸೇನೆಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿರುವ ಗಂಗಾಸಾಗರ್ ಕದನದ ಕಥೆಯನ್ನು ಆಧರಿಸಿದ ಸಿನಿಮಾ ತೆರೆ ಮೇಲೆ ಬರಲು ಸಿದ್ದವಾಗಿದೆ. ಸುಮಂತ್ ರಾತುರಿ ನಿರ್ದೇಶನದಲ್ಲಿ ವರ್ಧನ್ ಪುರಿ ನಾಯಕನಾಗಿ ಅಭಿನಯಿಸುತ್ತಿರುವ ಈ ಸಿನಿಮಾಗೆ ಪರಂ ವೀರ್ ಎಂದು ಹೆಸರಿಡಲಾಗಿದೆ. ‘ಪರಂ ವೀರ್ ಚಿತ್ರವು ಭಾರತೀಯ ಸೈನಿಕರ ಅಪ್ರತಿಮ ಶೌರ್ಯ ಮತ್ತು ತ್ಯಾಗವನ್ನು ಬೆಳ್ಳಿತೆರೆಯ ಮೇಲೆ ಅನಾವರಣಗೊಳಿಸುವ ಉದ್ದೇಶ ಹೊಂದಿದೆ. ಮೈರಾಧಾ ಮೋಷನ್ ಪಿಕ್ಚರ್ಸ್ ಹಾಗೂ ಎಚ್‌ವಿಜೆ ಮೀಡಿಯಾ ಬ್ಯಾನರ್‌ಗಳ ಅಡಿಯಲ್ಲಿ ಸಾಗರ್ ಗೌಡ ಮತ್ತು ಸುಮಂತ್ ರಾತುರಿ ನಿರ್ಮಿಸುತ್ತಿದ್ದಾರೆ. ಹಿಂದಿ ಹಾಗೂ ಕನ್ನಡದಲ್ಲಿ ಈ ಸಿನಿಮಾ ತೆರೆಗೆ ಬರ್ತಿದೆ.

ವಿಶೇಷ ಅಂದರೆ ಕರ್ನಾಟಕ ಮೂಲದ ನಿರ್ಮಾಪಕ ಸಾಗರ್ ಗೌಡ ಬಾಲಿವುಡ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.. ಸಾಗರ್ ಗೌಡ ಅವರ ಪ್ರಕಾರ ‘ಪರಂ ವೀರ್ ಸಿನಿಮಾ ಕೇವಲ ಒಂದು ಸಿನಿಮಾ ನಿರ್ಮಾಣದ ಪ್ರಯತ್ನವಲ್ಲ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಭಾರತೀಯ ಸೈನಿಕರ ಸಾಹಸಗಾಥೆಯನ್ನು ಜನರಿಗೆ ತಲುಪಿಸುವ ಮತ್ತು ಮುಂದಿನ ಪೀಳಿಗೆಗೆ ಅವರ ತ್ಯಾಗದ ಮಹತ್ವವನ್ನು ಪರಿಚಯಿಸುವ ಒಂದು ಮಹತ್ವದ ಜವಾಬ್ದಾರಿಯಾಗಿದೆ. ಪರಂ ವೀರ್’ ಚಿತ್ರವು ಕೇವಲ ದೇಶಭಕ್ತಿಯ ಕಥೆಯನ್ನು ಮಾತ್ರವಲ್ಲದೆ, ತಾಂತ್ರಿಕವಾಗಿಯೂ ಅದ್ದೂರಿಯಾಗಿ ಮೂಡಿಬರಲು ಸಜ್ಜಾಗಿದೆ. ಚಿತ್ರದ ನಿರ್ಮಾಣದಲ್ಲಿ ಅನುಭವಿ ಹಾಗೂ ಪ್ರತಿಭಾವಂತ ತಂತ್ರಜ್ಞರು ಕೈಜೋಡಿಸಿದ್ದು, ಪ್ರತಿಯೊಂದು ವಿಭಾಗದಲ್ಲೂ ಗುಣಮಟ್ಟಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ನಿರ್ದೇಶನ, ಛಾಯಾಗ್ರಹಣ, ಸಂಕಲನ, ಸಂಗೀತ, ಧ್ವನಿ ವಿನ್ಯಾಸ ಮತ್ತು ಇತರ ಪ್ರಮುಖ ತಾಂತ್ರಿಕ ವಿಭಾಗಗಳಲ್ಲಿ ಪರಿಣತ ತಂಡದ ಸಹಕಾರದೊಂದಿಗೆ ಚಿತ್ರವನ್ನು ರೂಪಿಸಲಾಗುತ್ತಿದೆ. ಭಾರತೀಯ ಸೈನಿಕರ ಶೌರ್ಯ, ತ್ಯಾಗ ಮತ್ತು ಸಾಹಸವನ್ನು ಪ್ರೇಕ್ಷಕರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ಚಿತ್ರತಂಡ ಶ್ರಮಿಸುತ್ತಿದೆ.

“ಪರಂ ವೀರ್ಮೋಶನ್ ಟೀಸರ್‌ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು ಸದ್ಯ ಮೋಷನ್ ಪೋಸ್ಟರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿರೋ ಸಿನಿಮಾತಂಡ ಪೋಸ್ಟ್ ಪ್ರೊಡಕ್ಷನ್ ಮುಗಿಸಿಕೊಂಡು ಆದಷ್ಟು ಬೇಗ ಸಿನಿಮಾವನ್ನ ಪ್ರೇಕ್ಷಕರ ಮುಂದೆ ತರಲಿದೆ.

Visited 1 times, 1 visit(s) today
error: Content is protected !!