Cini NewsSandalwood

ಕಮರ್ ಸಾರಥ್ಯದಲ್ಲಿ ಬೌಲಿಂಗ್ ಲೀಗ್ ಸೀಸನ್ -2 ಗೆ ಸ್ಯಾಂಡಲ್‌ವುಡ್ ಸ್ಟಾರ್ಸ್ಸ್ ಸಜ್ಜು

ಸ್ಯಾಂಡಲ್‌ವುಡ್ ತಾರೆಯರು ಬೆಳ್ಳಿ ಪರದೆಯ ಮೇಲೆ ಪ್ರೇಕ್ಷಕರನ್ನ ರಂಜಿಸುವುದಷ್ಟೇ ಅಲ್ಲದೆ , ಕ್ರೀಡೆಯಲ್ಲೂ ಕೂಡ ವೀಕ್ಷಕಕರ ಗಮನಸೆಳೆಯುತ್ತಾ ಬಂದಿದ್ದಾರೆ. ಆ ನಿಟ್ಟಿನಲ್ಲಿ ಈಗಾಗಲೇ ಕ್ರಿಕೆಟ್, ಕಬ್ಬಡಿ, ಬ್ಯಾಡ್ಮಿಂಟನ್ ಲೀಗ್‌ ಹೀಗೆ ಅನೇಕ ಲೀಗ್‌ಗಳು ಗಮನ ಸೆಳೆದಿದೆ.

ಅದೇ ರೀತಿ ಬೌಲಿಂಗ್ ಲೀಗ್ ಕೂಡ ಸದ್ದು ಮಾಡಿತು. ಈಗ ಮತ್ತೆ ಬೌಲಿಂಗ್ ಸೀಸನ್- 2 ಗೆ ತಾರೆಯರು ಸಜ್ಜಾಗಿದ್ದಾರೆ. ಬೌಲಿಂಗ್ ಲೀಗ್ ಪ್ರಾರಂಭಕ್ಕೂ ಮೊದಲು ಸ್ಟಾರ್ಸ್ ಮಾಧ್ಯಮದ ಮುಂದೆ ಹಾಜರಾಗಿದ್ದರು. ಈ ಬಾರಿಯ ಲೀಗ್ ನಲ್ಲಿ ಭಾಗಿಯಾಗಲು ತಾರೆಯರು ಸಖತ್ ಎಕ್ಸಾಯಿಟ್ ಆಗಿದ್ದಾರೆ.

ಅಂದಹಾಗೆ ಬೌಲಿಂಗ್ ಲೀಗ್‌ ಅನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ್ದು ನಿರ್ಮಾಪಕ ಕಮರ್. ಕಳೆದ ವರ್ಷ ಬೌಲಿಂಗ್ ಲೀಗ್‌‌ ಅನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಕಮರ್ ಈ ಬಾರಿ ಕೂಡ ಅದೇ ಹುರುಪಿನಲ್ಲಿ ಲೀಗ್ ಮಾಡಲು ಮುಂದಾಗಿದ್ದಾರೆ. ಈ ವಿಚಾರವಾಗಿ ಮಾಧ್ಯಮ ಗೋಷ್ಠಿ ಆಯೋಜಿಸಲಾಗಿದ್ದು ಲೀಗ್ ಬಗ್ಗೆ ಮಾಹಿತಿ ಹಂಚಿಕೊಂಡರು.

ನಟಿಯರಾದ ಕಾರುಣ್ಯಾ ರಾಮ್, ಧನ್ಯಾ ರಾಮ್ ಕುಮಾರ್, ರಕ್ಷಿತಾ ಶೆಟ್ಟಿ, ರಚನಾ ಇಂದರ್, ಬೃಂದಾ ಆಚಾರ್ಯ, ಸಾಕ್ಷಿ ಇನ್ನೂ ನಟರಾದ ತರುಣ್ ಚಂದ್ರ, ಕೆಂಪೆಗೌಡ, ಭರತ್ ಸೇರಿದಂತೆ ಅನೇಕರು ಹಾಜರಿದ್ದರು. ಈ ಬಾರಿಯ ಲೀಗ್‌ನಲ್ಲಿ ಒಟ್ಟು ಆರು ತಂಡಗಳಿರಲಿದ್ದು ತಾರೆಯರ ಜೊತೆಗೆ ಪತ್ರಕರ್ತರು ಕೂಡ ಲೀಗ್‌ನಲ್ಲಿ ಭಾವಹಿಸುತ್ತಿ ರುವುದು ವಿಶೇಷ.

ಕಳೆದ ಬಾರಿಯ ಲೀಗ್‌ನಲ್ಲಿ ಶ್ರೀನಗರ ಕಿಟ್ಟಿ ಮತ್ತು ತಂಡ ಗೆದ್ದು ಬೀಗಿದ್ದರು. ಈ ಬಾರಿಯ ಬೌಲಿಂಗ್ ಲೀಗ್‌ ಕಪ್ ಯಾರ ಮುಡಿಗೇರಲಿದೆ ಎಂದು ಕಾದು ನೋಡಬೇಕು. ಡಿಸೆಂಬರ್‌ನಲ್ಲಿ ಲೀಗ್ ಲೀಗ್ ಪ್ರಾರಂಭ ವಾಗಲಿದೆ. ಎರಡು ದಿನಗಳು ನಡೆಯಲಿದ್ದು ಅನೇಕ ಸ್ಟಾರ್ಸ್ ಭಾಗಿಯಾಗಲಿದ್ದಾರೆ.

ಇದಕ್ಕಾಗಿ ಒಂದು ಜೂರಿ ತಂಡವು ರಚನೆಯಾಗಿದ್ದು, ಒಂದಷ್ಟು ತರಬೇತಿಯ ನಂತರವೇ ತಂಡಗಳ ರಚನೆ ಆಗಲಿದ್ದು, ಒಂದಷ್ಟು ಹೊಸ ವಿಶೇಷತೆಗಳೊಂದಿಗೆ ಹೊಸ ರೂಪದಲ್ಲಿ ಈ ಒಂದು ಕಾರ್ಯಕ್ರಮ ನಡೆಯಲಿದ್ದು , ಇನ್ನೂ ಏನೆಲ್ಲಾ ವಿಶೇಷತೆ ಇರಲಿದೆ, ಯಾರೆಲ್ಲ ಕಲಾವಿದರು ಭಾಗಿಯಾಗುತ್ತಾರೆ ಎನ್ನುವ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡಲಿದ್ದಾರಂತೆ.

error: Content is protected !!