”Romantic ರಾಮು Lovely ಸೀತಾ” ಟೈಟಲ್ ಟೀಸರ್ ರಿಯಲ್ ಸ್ಟಾರ್ ರಿಂದ ಬಿಡುಗಡೆ

Spread the love

“ರೋಮ್ಯಾಂಟಿಕ್ ರಾಮು ಲವ್ಲಿ ಸೀತಾ” ಪ್ರೀತಿ, ಬಾಂಧವ್ಯ ಮತ್ತು ಥ್ರಿಲ್ಲರ್ ಕಥಾಹಂದರ ಚಿತ್ರದ ಮೊದಲ‌ ಟೀಸರ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ರಿಯಲ್ ಸ್ಟಾರ್ ಉಪೇಂದ್ರರವರ ಕೈಯಿಂದ ಟೀಸರ್ ಬಿಡುಗಡೆಯಾಗಿದ್ದು, ನಿರ್ದೇಶಕರ ನಿರ್ದೇಶಕ ಉಪೇಂದ್ರ, ಈ ಚಿತ್ರದ ಟೈಟಲ್ ಹಾಗೂ ಕಂಟೆಂಟ್ ಕಂಡು ಶುಭಹಾರೈಸಿದ್ದಾರೆ.

‘ಪುಣ್ಯಕೋಟಿ’ ಕಥೆಯ ಮೂಲ ಆಶಯದಿಂದ ಪ್ರೇರಿತವಾದ, ತಂದೆ ಮತ್ತು ಮಗಳ ನಡುವಿನ ನಿಸ್ವಾರ್ಥ ಪ್ರೀತಿ, ಬಾಂಧವ್ಯ ಹಾಗೂ ಭಾವನಾತ್ಮಕ ಪಯಣವನ್ನು ಆಧರಿಸಿದ ಹೊಸ ಚಿತ್ರ ‘Romantic ರಾಮು Lovely ಸೀತಾ’.

ಯುವ ಪ್ರೇಮಿಗಳ ಪ್ರೀತಿ, ಹಾಸ್ಯ ಮತ್ತು ಕುತೂಹಲಕಾರಿ ಥ್ರಿಲ್ಲರ್ ಅಂಶಗಳೊಂದಿಗೆ ಮೂಡಿಬರುತ್ತಿರುವ ಈ ಚಿತ್ರವು ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲು ಸಜ್ಜಾಗಿದೆ. ಸದ್ಯ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯಭರದಿಂದ ಸಾಗುತ್ತಿದೆ. ಹೊಸ ವರ್ಷಕ್ಕೆ ಅಂದ್ರೆ ಜನವರಿಯಲ್ಲಿ ಈ ಚಿತ್ರವನ್ನ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ರೊಮ್ಯಾಂಟಿಕ್ ರಾಮು ಲವ್ಲಿ ಸೀತಾ ಚಿತ್ರವನ್ನ ಗೌರವ್ ಆರ್ಯನ್ ನಿರ್ದೇಶಿಸೋದ್ರ ಜೊತೆಗೆ ನಾಯಕನಟನಾಗಿ ಅಭಿನಯಿಸಿದ್ದಾರೆ. ಕಿರುತೆರೆಯಲ್ಲಿ ನಟನೆಯ ಮೂಲಕ ವೃತ್ತಿ ಬದುಕನ್ನಾರಂಭಿಸಿ, ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕ ಹಾಗೂ ಗೀತರಚನೆಕಾರರಾಗಿ ಕೆಲಸ‌ ಮಾಡಿದ್ದ ಗೌರವ್ ಆರ್ಯನ್ ಈ ಚಿತ್ರದ ಮೂಲಕ‌ ನಿರ್ದೇಶಕ ಮತ್ತು ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ. ನಾಯಕಿಯಾಗಿ ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ‌ನಟಿ ಸಿಂಚನಾ ಪಿ. ರಾವ್ ಅಭಿನಯಿಸಿದ್ದಾರೆ.

ಬಿಗ್‌ಬಾಸ್ ಖ್ಯಾತಿಯ ವಿನಯ್ ಗೌಡ ಹಾಗೂ ಮೂಲತಃ ರಂಗಭೂಮಿ ಕಲಾವಿದರೂ ಆಗಿರುವ ಕೂರ್ಗ್ ನ್ಯಾಚುರಲ್ ಸ್ಪೈಸಸ್ ಮಾಲೀಕ ಚೇತನ್ ಎಂ. ಮಾದಾಪುರ ಈ ಚಿತ್ರದಲ್ಲಿ ಪ್ರಮುಖ ಖಳನಾಯಕನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ರೊಮ್ಯಾಂಟಿಕ್ ರಾಮು ಲವ್ಲಿ ಸೀತಾ ಚಿತ್ರಕ್ಕೆ ಬಂಡವಾಳ ಹೂಡಿರೋದು, ಜಿಆರ್‌ಎಲ್ (GRL) ಟ್ರಾವೆಲ್ಸ್‌ನ ಮಾಲೀಕರಾದ ಗಂಗಾಧರಯ್ಯ. ಈ ಮೂಲಕ ‘ಜಿಆರ್‌ಎಲ್ ಮೂವೀಸ್’ ಕನ್ನಡ ಚಿತ್ರರಂಗಕ್ಕೆ ನಿರ್ಮಾಣ ಸಂಸ್ಥೆಗಳ ಸಾಲಿಗೆ ಸೇರಿಕೊಳ್ತಿದೆ.ಕ್ರಿಕೆಟ್ ಕ್ಷೇತ್ರದಲ್ಲಿ ಡಿವಿಷನ್ ಲೀಗ್ ಆಟಗಾರರಾಗಿ ಗುರುತಿಸಿಕೊಂಡಿರುವ ಪ್ರಣಯ್ ಜಿ. ಗೌಡ ಹಾಗೂ ಖಳನಟ ಚೇತನ್ ಎಂ. ಮಾದಾಪುರ ಅವರು ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.

ಗೌರವ್ ಆರ್ಯನ್, ಸಿಂಚನಾ ಪಿ. ರಾವ್, ವಿನಯ್ ಗೌಡ, ವಿನೋದ್ ಗೊಬರಗಾಲ, ಜಿ.ಆರ್.ಎಲ್ ಗಂಗಾಧರಯ್ಯ, ರಮೇಶ್ ಭಟ್, ಬಿರಾದಾರ್, ಟೆನ್ನಿಸ್ ಕೃಷ್ಣ, ಮುಬಾರಕ್ ಅಲಿ, ಬೇಬಿ ನಿಧಿ, ಚೇತನ್ ಎಂ. ಮಾದಾಪುರ, ರಾಘವ್ ರಾಮ್, ಫಿರೋಜ್ ಮಾಗರೆ, ಹರ್ಷಿತ ಟಿ.ಎ., ಕೀರ್ತನ ಗೌಡ, ಸುಪ್ರೀತಾ ಪ್ರೇಮ್, ನಾಗರಾಜ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಸುಧೀರ್ ಶಾಸ್ತ್ರೀ, ಶ್ರೀರಾಮ್ ಗಂಧರ್ವ ಹಾಗೂ ಗೌರವ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ 4 ಹಾಡುಗಳಿವೆ. ಕೆ.ಬಿ ಪ್ರವೀಣ್ ಹಿನ್ನೆಲೆ ಸಂಗೀತ , ಮದನ್ ಹರಿಣಿ ನೃತ್ಯನಿರ್ದೇಶನವಿದೆ.ವಿನೋದ್ ,ಚಂದ್ರು ಬಂಡೆ ಸಾಹಸ ಚಿತ್ರಕ್ಕಿದೆ. ಈ ಚಿತ್ರಕ್ಕೆ ಸಿದ್ದು ಮೈಸೂರು, ಅರುಣ್ ಸುರೇಶ್ ಇಬ್ಬರೂ ಛಾಯಾಗ್ರಣ ಮಾಡಿದ್ದಾರೆ. ಶಶಾಂಕ್ ನಾರಾಯಣ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ಈ ಚಿತ್ರದ ಹೆಸರಿಗೆ ತಕ್ಕಂತೆ, ಬೆಂಗಳೂರು, ತುಮಕೂರು, ಸಕಲೇಶಪುರ ಮತ್ತು ಮಂಗಳೂರು ಸೇರಿದಂತೆ ರಮಣೀಯ ತಾಣಗಳಲ್ಲಿ ಚಿತ್ರಿಸಲಾಗಿದೆ. ಕೊನೆಯ ಹಂತದ ಕೆಲಸಗಳಲ್ಲಿ ತೊಡಗಿಸಿಕೊಂಡಿರೋ ಚಿತ್ರತಂಡ ಟೈಟಲ್ ಟೀಸರ್ ರಿಲೀಸ್ ಮಾಡೋ ಮೂಲಕ ಅಧಿಕೃತ ಪ್ರಚಾರಕ್ಕೆ ಚಾಲನೆ ಕೊಟ್ಟಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಜನವರಿ ತಿಂಗಳಲ್ಲಿ‌ ರೊಮ್ಯಾಂಟಿಕ್ ರಾಮು ಲವ್ಲಿ ಸೀತಾ ಸಿನಿಮಾ ಪ್ರೇಕ್ಷಕರೆದುರಿಗೆ ಬರಲಿದೆ.

Visited 1 times, 1 visit(s) today
error: Content is protected !!