“ಬಂಬೂ ಸವಾರಿ” ಚಿತ್ರದ ‘ಗೋವಿಂದಾ ಗೋವಿಂದಾ’ ಹಾಡು ಬಿಡುಗಡೆ
ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಕ್ಸಕ್ ಫುಲ್ ಸಿನಿಮಾ ಜಾತ್ರೆ ಆರಂಭವಾಗಿರೋ ಈ ಋತುಮಾನದಲ್ಲಿ , ಬಂಬೂ ಸವಾರಿ ಅನ್ನೋ ಸಿನಿಮಾವೊಂದು ಸದ್ದಿಲ್ಲದೇ ಬಿಡುಗಡೆಗೆ ಸಜ್ಜಾಗಿದೆ. ಅದ್ರ ಮೊದಲ ಹಂತ ಚಿತ್ರತಂಡ ಒಂದು ಹಾಡನ್ನ ಬಿಡುಗಡೆ ಮಾಡಿ ಗಮನ ಸೆಳೆಯುತ್ತಿದೆ. ಗೋವಿಂದಾ.. ಎಂಟ್ರಾನ್ ಸಾಮಿ ಗೋವಿಂದಾ… ಇದು ಬಂಬೂ ಸವಾರಿ ಚಿತ್ರದ ಹಾಡು.. ಮ್ಯೂಸಿಕ್ ಬಜಾರ್ ಯುಟ್ಯೂಬ್ ಚಾನೆಲ್ನಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿರೋ ಹಾಡು.. ಕೇಳುಗರ ಗಮನ ಸೆಳೆದು ಅತ್ಯುತ್ತಮ ಕಮೆಂಟ್ ಗಳನ್ನ ಪಡೆದುಕೊಳ್ತಿರೋ ಹಾಡು…
ಗೋವಿಂದಾ ಗೋವಿಂದಾ ಹಾಡಿಗೆ ಎ.ಎಂ ನೀಲ್ ಸಂಗೀತ ಸಂಯೋಜಿಸಿದ್ರೆ, ಕವಿರತ್ನ ಡಾ.ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಜಿ. ನಂದಕುಮಾರ್ ನೃತ್ಯ ನಿರ್ದೇಶನ ಮಾಡಿರೋ ಈ ಹಾಡಲ್ಲಿ ತಾಂಡವ್ ರಾಮ್, ದೀಪಕ್ , ವರ್ಧನ್ ,ಗಿಲ್ಲಿ ನಟ, ನಾಗೇಂದ್ರ ಪ್ರಸಾದ್ ಈ ಹಾಡಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ಸಾಂದರ್ಭಿಕವಾಗಿ ಮೂಡಿ ಬರೋ ಈ ಹಾಡು.. ಕೇಳೋದಕ್ಕರ ಎಷ್ಟು ಕಲೋಕಿಯಲ್ ಆಗಿದ್ಯೋ.. ನೋಡದಕ್ಕೂ ಅಷ್ಟೆ ಮಜಭೂತಾಗಿದೆ. ಇವತ್ತಿನ ಲವ್ವು.. ನೊವ್ವು… ಪ್ರಾಕ್ಟಿಕಲ್ ಲವ್ ಲೈಫ್ ಫಿಲಾಸಫಿ ಹೇಳೋ ಗೋವಿಂದಾ ಗೋವಿಂದಾ ಹಾಡಿನ ಲಿರಿಕಲ್ ವಿಡಿಯೋನಷ್ಟೇ ಸದ್ಯಕ್ಕೆ ರಿಲೀಸ್ ಮಾಡಿರೋ ಚಿತ್ರತಂಡ.. ಇಲ್ಲಿಂದ ಪ್ರಚಾರವನ್ನ ಆರಂಭಿಸಿದೆ…
ಬಂಬೂ ಸವಾರಿ ಉದಯದೀಪಾ ಮೂವೀಸ್ ಲಾಂಛನದಲ್ಲಿ, ಆರ್ಯ ಎಂ ಮಹೇಶ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಚಿತ್ರ. ಎಸ್. ವೆಂಕಟೇಶ್ ನಿರ್ಮಾಣದಲ್ಲಿ ಈ ಚಿತ್ರಕ್ಕೆಜಿ ಮುನಿರಾಜು ರವರ ಸಹ ನಿರ್ಮಾಣವಿದೆ. ತಾಂಡವ್ ರಾಮ್, ವರ್ಧನ್ , ದೀಪಕ್, ಗಿಲ್ಲಿ ನಟ, ಡಾ.ವಿ.ನಾಗೇಂದ್ರಪ್ರಸಾದ್, ಆದ್ಯಪ್ರಿಯ,ಬಿಂದು ನಾಗರಾಜ್,ಅನುಪ್ರೇಮ,ನಾಗೇಂದ್ರ ಪ್ರಸಾದ್ ಸೇರಿದಂತೆ ಪ್ರತಿಭಾನ್ವಿತ ಕಲಾವಿದರ ದಂಡೇ ಬಂಬೂ ಸವಾರಿಯಲ್ಲಿದೆ.ಅಂದ್ಹಾಗೆ ಬಂಬೂ ಸವಾರಿ ಚಿತ್ರದ ಕೊನೆಯ ಹಂತದ ಕೆಲಸಗಳು ಭರದಿಂದ ಸಾಗ್ತಿದ್ದು, ಇದೇ ವರ್ಷ ಚಿತ್ರವನ್ನ ತೆರೆಗೆ ತರೋ ಸನ್ನಾಹದಲ್ಲಿದೆ ಚಿತ್ರತಂಡ.
