ಶ್ರೀಮುರಳಿ ನಟನೆಯ ಆಕ್ಷನ್ ಪ್ಯಾಕ್ಡ್ “ಪರಾಕ್” ಟೀಸರ್ ಬಿಡುಗಡೆ

Spread the love

ಬಿಡದಿಯಲ್ಲಿ ಸರ್ವೇ ಮಾಡಲು ಬಂದ ಅಧಿಕಾರಿಗಳಿಗೆ ಪೊರಕೆಯಿಂದ ಜಾಡಿಸಿದ ಮಹಿಳೆಯರು ರೋರಿಂಗ್ ಸ್ಟಾರ್ ಶ್ರೀಮುರಳಿ ಭತ್ತಳಿಕೆಯಿಂದ ಬರ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು ಪರಾಕ್. ಸಿನಿಮೋತ್ಸವ ಇರುವ ಹೊಸ ತಂಡ ಸೇರಿಕೊಂಡು ಮಾಡುತ್ತಿರುವ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಆ ನಿರೀಕ್ಷೆಗೆ ತಕ್ಕಂತೆ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ.

ಇಂದು ಬೆಂಗಳೂರಿನ ಖಾಸಗಿ ಮಾಲ್ ನಲ್ಲಿ ಟೀಸರ್ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಿರ್ದೇಶಕ ಹಾಲೇಶ್ ಕೊಗುಂಡಿ ಮಾತನಾಡಿ, ಇದು ಜಸ್ಟ್ ಟೀಸರ್ ಅಷ್ಟೇ. ಸಿನಿಮಾದಲ್ಲಿ ಸಾಕಷ್ಟು ವಿಷಯಗಳನ್ನು ಹೇಳಿದ್ದೇವೆ. ಶ್ರೀಮುರಳಿ ಸರ್ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ನಿಮ್ಮ ಬೆಂಬಲ ಇರಲಿ ಎಂದರು.

ನಟ ಶ್ರೀಮುರಳಿ ಮಾತನಾಡಿ, ಪರಾಕ್ ಟೀಸರ್ ನೋಡಿದ್ರೆ ಇದು ಸುಲಭವಾಗಿ ಆದ ಕೆಲಸ ಅಲ್ಲ. ಅದಕ್ಕೆ ಆದ ಶ್ರಮ. ಸಾಕಷ್ಟು ಮೀಟಿಂಗ್ ಆಯ್ತು. ಇದನ್ನು ತೆಗೆಯಲು ಎರಡೂವರೆ ವರ್ಷ ತೆಗೆದುಕೊಂಡೆವು. ಪರಾಕ್ ಸುಲಭವಾಗಿ ಶುರುವಾದ ಸಿನಿಮಾವಲ್ಲ. ಕಥೆಗೆ ಮೂರೂವರೆ ವರ್ಷ ಟೈಮ್ ಕೊಟ್ಟಿದ್ದೇವೆ. ಹೊಸಬರು, ಹೊಸ ಪ್ರೊಡಕ್ಷನ್ ಜೊತೆ ಯಾಕೆ ಸಿನಿಮಾ ಮಾಡಿದ್ದೇನೆ? ಅಂದರೆ ಅವರ ಜೊತೆ ಕೆಲಸ ಮಾಡಲು ನನಗೆ ಕಿಕ್ಕು.

ನಾನು ಹೊಸಬರನ್ನು, ಅವರ ಆಲೋಚನೆಯನ್ನು, ಇಷ್ಟಪಡುತ್ತೇನೆ ನಂಬುತ್ತೇನೆ. ಪರಾಕ್ ಎಂಬ ಅದ್ಬುತ ಪ್ರಯತ್ನವನ್ನು ಎಲ್ಲರಿಗೂ ನೀಡಬೇಕು ಎಂಬ ಅಸೆ, ಹಠ, ಕಾಳಜಿಯಿಂದ ಮಾಡುತ್ತಿದ್ದೇವೆ.‌ ಈ ಹೊಸತಂಡ ನಮ್ಮ ಚಿತ್ರರಂಗದ ಆಸ್ತಿಗಳು. ಚಿತ್ರದ ಬಗ್ಗೆ ಹೆಚ್ಚಿನದಾಗಿ ಹೇಳಲ್ಲ. ಇನ್ನೂ ಸಿನಿಮಾ ಚಿತ್ರೀಕರಣ ಮಾಡುವುದು ಇದೆ ಎಂದರು.

ಪರಾಕ್ ಟೀಸರ್ ನಲ್ಲಿ ಸಿಕ್ಸ್ ಪ್ಯಾಕ್ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಶ್ರೀಮುರಳಿ, ಆಕ್ಷನ್ ಸೀನ್ಸ್ ನಲ್ಲಿ ಅಬ್ಬರಿಸಿದ್ದಾರೆ. ಚರಣ್ ರಾಜ್ ಮ್ಯೂಸಿಕ್, ಸಂದೀಪ್ ಕ್ಯಾಮೆರಾ ಕೈಚಳಕ, ನಿರ್ದೇಶಕ ಹಾಲೇಜ್ ವಿಷನ್ ಟೀಸರ್ ನಲ್ಲಿ ಅಚ್ಚುಕಟ್ಟಾಗಿ ಮೂಡಿ ಬಂದಿದೆ.

ಯುವ ನಿರ್ದೇಶಕ ಹಾಲೇಶ್‌ ಕೋಗುಂಡಿ ಪರಾಕ್‌ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಇವರು ನಿರ್ದೇಶನ ಮಾಡುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ. ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ಅಡಿ ಚಿತ್ರ ಸಿನಿಮಾ ನಿರ್ಮಾಣವಾಗುತ್ತಿದೆ.

ಚರಣ್ ರಾಜ್ ಎಂ.ಆರ್ ಸಂಗೀತ ನಿರ್ದೇಶನ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ರಕ್ಷಿತ್ ಕಾಪ್ ಸಂಕಲನ‌, ಡಾ ಕೆ ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಮಂಜುನಾಥ್ ಟಿ, ಮೋಹನ್ ಕೆ ಓ, ಹಾಲೇಶ್ ಕೋಗುಂಡಿ ಸಂಭಾಷಣೆ ಬರೆದಿದ್ದಾರೆ. ಸದ್ಯ ಚಿತ್ರದ 35ರಷ್ಟು ಭಾಗದ ಚಿತ್ರೀಕರಣ ಮುಕ್ತಾಯಗೊಂಡಿದೆ.

Visited 1 times, 1 visit(s) today
error: Content is protected !!