ಖಲೀಫಾ ಡ್ರಗ್ಸ್ ಸುಳಿಯಲ್ಲಿ ಖಾಕಿಯ ಖದರ್ “ಆಲ್ಫಾ #men love vengeance” (ಚಿತ್ರವಿಮರ್ಶೆ-ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಆಲ್ಫಾ #men love vengeance
ನಿರ್ದೇಶಕ : ವಿಜಯ್
ನಿರ್ಮಾಣ : L A ಪ್ರೊಡಕ್ಷನ್ಸ್
ಸಂಗೀತ : ಅನೂಪ್ ಸೀಳಿನ್
ಛಾಯಾಗ್ರಹಣ : ಕಾರ್ತಿಕ್
ತಾರಾಗಣ : ಹೇಮಂತ್ ಕುಮಾರ್, ಗೋಪಿಕಾ ಸುರೇಶ್, ಅಯನಾ,ಕಾರ್ತಿಕ್ ಮಹೇಶ್, ಅವಿನಾಶ್, ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಬಾಲು ನಾಗೇಂದ್ರ, ಮಾನಸಿ ಸುಧೀರ್, ರಾಘು ಶಿವಮೊಗ್ಗ ಹಾಗೂ ಮುಂತಾದವರು…
ವಿಶ್ವದಾದ್ಯಂತ ಮನುಕುಲಕ್ಕೆ ದೊಡ್ಡ ಕಂಠಕವಾಗಿ ಬೆಳೆದಂತಹ ದಂದೆ ಡ್ರಗ್ಸ್ ಮಾಫಿಯಾ. ಈಜಿಪ್ಟ್ , ಯುರೋಪ್ ದೇಶಗಳಿಂದ ಸೌತ್ ಏಷ್ಯಾ ಗೆ ತಲುಪಿ ಕೆಲ ಕಡಲ ಭಾಗದ ಪ್ರಾಂತ್ಯದಲ್ಲಿ ನಿಗೂಢವಾಗಿ ಸರಬರಾಜು ಮಾಡುತ್ತಾ ತನ್ನ ಮಾಫಿಯಾ ಜಾಲದಿಂದ ಅದೆಷ್ಟೋ ಯುವಕ, ಯುವತಿಯರು ಹಾಗೂ ವ್ಯಸನಿಗರನ್ನ ಸೆಳೆಯಲು ಬೇರೆ ಬೇರೆ ಮಾದರಿಯ ಡ್ರಗ್ಸ್ ಸಪ್ಲೈ ಸದ್ದು ಮಾಡುತ್ತಿದೆಯಂತೆ. ಇಂಥದ್ದೇ ಮಾಫಿಯಾ ಸುಳಿಯಲ್ಲಿ ಖಲೀಫ ಎಂಬ ಡ್ರಗ್ಸ್ ದಂಧೆಯ ಸುಳಿಯಲ್ಲಿ
ಎದುರಾಗುವ ಪೆಡ್ಲರ್ ಗಳು , ಹಣಕ್ಕಾಗಿ ಕೊಲೆ ಮಾಡುವ ದಂದೆಕೊರರು , ಖಾಕಿಯ ಒದ್ದಾಟ , ಒತ್ತಡದ ಸುಳಿ,ಬದುಕು ಕಟ್ಟಿಕೊಳ್ಳುವ ವಿದ್ಯಾರ್ಥಿಗಳು , ಸ್ನೇಹ , ಪ್ರೀತಿ , ಸಂಬಂಧಗಳ ಬೆಸುಗೆ,ಸರಿ ತಪ್ಪುಗಳ ಅರಿವಿನ ಸುಳಿಯ ಸುತ್ತ ಬೆಸೆದುಕೊಂಡು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಆಲ್ಫಾ #men love vengeance”.
ಪ್ರಾಮಾಣಿಕ ದಕ್ಷ ಪೊಲೀಸ್ ಅಧಿಕಾರಿ ಶಕ್ತಿಪ್ರಸಾದ್ (ಅಚ್ಯುತ್ ಕುಮಾರ್). ತನ್ನ ಮಗ ಅರ್ಜುನ್ ( ಹೇಮಂತ್ ಕುಮಾರ್) ದೊಡ್ಡ ಐಪಿಎಸ್ ಅಧಿಕಾರಿ ಆಗಬೇಕೆಂದು ಕನಸು ಕಾಣುವ ತಂದೆ, ತಾಯಿ ಹಾಗೂ ತಂಗಿ. ಸ್ಟಾರ್ಟ್ ಅಪ್ ಬಿಸಿನೆಸ್ ಇಷ್ಟಪಡುವ ಅರ್ಜುನ್ ಗೆ ತಂದೆಯ ಕನಸಿನ ಬಗ್ಗೆ ಆಸಕ್ತಿ ಇರುವುದಿಲ್ಲ.
ಇದರ ನಡುವೆ ಕ್ರಿಕೆಟ್ ಗಲಾಟೆ ಮಾಡಿಕೊಳ್ಳುವ ಅರ್ಜುನ್ ಆಕಸ್ಮಿಕವಾಗಿ ಆಕಾಂಕ್ಷ (ಗೋಪಿಕಾ ಸುರೇಶ್) ಗೆ ಬೈಕ್ ನಲ್ಲಿ ಡ್ರಾಪ್ ಮಾಡುತ್ತಾನೆ. ನಂತರ ಸ್ನೇಹ , ಪ್ರೀತಿಯ ಕಡೆ ತಿರುಗುತ್ತದೆ. ಇದರ ನಡುವೆ ಹಣಕ್ಕಾಗಿ ಕೊಲೆಗಳನ್ನು ಮಾಡುವ ಕ್ರೂರ ಅಪ್ಪ-ಮಕ್ಕಳು.
ಇನ್ನು ಹೊಸ ವರ್ಷದ ಸಂಭ್ರಮಾಚರಣೆಗೆ ಹೊಸ ಮಾದರಿಯ ಖಲೀಫ ಡ್ರಗ್ಸ್ ಬೆಂಗಳೂರಿಗೆ ಸಪ್ಲೈ ಮಾಡಲು ಸುಲ್ತಾನ ಮಾಡುವ ಪ್ಲಾನ್. ಡ್ರಗ್ ಪೆಡ್ಲರ್ ಗಳ ಬಾಸ್ ಕಿಂಗ್ ಬಾಬಿಯ ಈ ಡ್ರಗ್ಸ್ ಹಿಡಿಯಲು ಪೊಲೀಸ್ ಇಲಾಖೆಯ ಕ್ರೈಂ ತಂಡ ಮಾಡುವ ಚಕ್ರವ್ಯೂಹ. ಗೆಳೆಯನ ಮದುವೆಗೆ ಹೋದ ಅರ್ಜುನ್ ಹಾಗೂ ಗೆಳೆಯರು. ಇದರ ನಡುವೆ ಡ್ರಗ್ಸ್ ಕೊಲೆಗಡುಕರ ಮೂಲಕ ಸಿಟಿ ಎಂಟ್ರಿ ಆಗುತ್ತದೆ. ಇನ್ ಫಾರ್ಮರ್ಸ್ ಮೂಲಕ ಡ್ರಗ್ಸ್ ಹಿಡಿಯಲು ಹೋದ ಶಕ್ತಿಪ್ರಸಾದ್ ಗೆ ಗುಂಡೆ ಟು ಬಿದ್ದು ಸಾವು ಬದುಕಿದ ನಡುವೆ ಹೋರಾಡುವಂತಾಗುತ್ತದೆ.

ಇನ್ನು ಪ್ರೇಯಸಿ ಆಕಾಂಕ್ಷ ಗೆಳೆಯ ಕಾರ್ತಿಕ್ ಒಡನಾಟದಿಂದ ಕಂಗಾಲಾಗುವ ಅರ್ಜುನ್ , ತಂದೆಯನ್ನು ಕಾಪಾಡಿಕೊಳ್ಳಲು ಮುಂದಾಗುತ್ತಾನೆ. ಇನ್ನು ಪೊಲೀಸ್ ಕೈವಶದಲ್ಲಿರುವ ಖಲೀಫಾ ಡ್ರಗ್ಸ್ ಗಾಗಿ ಪ್ಲಾನ್ ಮಾಡುವ ಬಾಬಿ , ಇದರ ನಡುವೆ ಕಾಣದ ಕೈಗಳ ಬೆಂಬಲ , ಕೊಲೆಗೆ ಸಂಚು , ಕ್ರೂರಿಗಳ ಅಟ್ಟಹಾಸ , ನಿಗೂಢ ಸತ್ಯದ ನೆರಳು ಬೇರೆಯದೇ ದೃಷ್ಟಿಕೋನ ನೀಡಿರುತ್ತದೆ. ಅದು ಏನು… ಸತ್ಯ ಯಾವುದು… ಡ್ರಗ್ಸ್ ಕಿಂಗ್ ಯಾರು? ಪೋಲಿಸ್ ಸಂಕಷ್ಟ ಏನು… ಇದೆಲ್ಲದಕ್ಕೂ ಉತ್ತರ ಒಮ್ಮೆ ನೀವು ಈ ಚಿತ್ರವನ್ನು ನೋಡಬೇಕು.
ಇನ್ನು ಈ ಚಿತ್ರದ ನಿರ್ದೇಶಕ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ಸೂಕ್ಷ್ಮವಾದದ್ದು , ಅರ್ಥಪೂರ್ಣವಾಗಿದೆ. ನಾನಾ ರೀತಿಯ ಡ್ರಗ್ಸ್ ಸುಳಿಗೆ ಸಿಲುಕಿದವರ ಸ್ಥಿತಿಗತಿಗಳು , ಪೊಲೀಸ್ ಇಲಾಖೆಯ ಒದ್ದಾಟ , ಕಾಣದ ಕೈಗಳ ಷಡ್ಯಂತರ , ಉತ್ತಮ ಭವಿಷ್ಯ ಕಾಣುವವರ ಪರಿಸ್ಥಿತಿಯ ಸುತ್ತ ಒಂದು ಸಂದೇಶವನ್ನು ನೀಡಿರುವ ಆಲೋಚನೆ ಮೆಚ್ಚುವಂತದ್ದು , ಚಿತ್ರಕಥೆಯಲ್ಲಿ ಮತ್ತಷ್ಟು ಹಿಡಿತ ಮಾಡಬಹುದಿತ್ತು.
ವಾಯ್ಲೆನ್ಸ್ , ರಕ್ತಪಾತ ಅತಿಯಾದಂತಿದೆ. ಆದರೂ ಜಾಗೃತಿಯ ವಿಚಾರ ಗಮನ ಸೆಳೆಯುತ್ತದೆ. ಇಂತಹ ಚಿತ್ರ ನಿರ್ಮಿಸುವ ನಿರ್ಮಾಪಕರ ಧೈರ್ಯವನ್ನು ಕೂಡ ಮೆಚ್ಚಲೇಬೇಕು. ಸಂಗೀತ , ಛಾಯಾಗ್ರಹಣ , ಸಂಕಲನ ಸೇರಿದಂತೆ ತಾಂತ್ರಿಕವಾಗಿ ತಂಡದ ಕೆಲಸ ಉತ್ತಮವಾಗಿದೆ. ಇನ್ನು ನಾಯಕನಾಗಿ ಅಭಿನಯಿಸಿರುವ ಯುವ ಪ್ರತಿಭೆ ಹೇಮಂತ್ ಕುಮಾರ್ ಬಹಳಷ್ಟು ಪೂರ್ವ ತಯಾರಿ ಮಾಡಿಕೊಂಡು ಬಂದಂತಿದ್ದು , ಆಕ್ಷನ್ , ಡಾನ್ಸ್ ಸೇರಿದಂತೆ ನಟನೆಯಲೂ ಗಮನ ಸೆಳೆದಿದ್ದಾರೆ.
ಮುಂದಿನ ದಿನಗಳಲ್ಲಿ ಉತ್ತಮ ನಟನಾಗಿ ಬೆಳೆಯುವ ಸಾಧ್ಯತೆ ಕಾಣುತ್ತದೆ. ಇನ್ನು ನಟಿಯರಾಗಿ ಆಯಾನಾ ಹಾಗೂ ಗೋಪಿಕಾ ಸುರೇಶ್ ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ದಕ್ಷ ಪೊಲೀಸ್ ಅಧಿಕಾರಿಯಾಗಿ ಅಚ್ಚುತ್ ಕುಮಾರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು , ಕಮಿಷನರ್ ಪಾತ್ರದಲ್ಲಿ ಅವಿನಾಶ್ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಕಾರ್ತಿಕ್ ಮಹೇಶ್ ನೆಗೆಟಿವ್ ಪಾತ್ರದ ಮೂಲಕ ತನ್ನ ನಟನ ಸಾಮರ್ಥ್ಯವನ್ನು ಹೊರಹಾಕಿ ಯಾವ ಪಾತ್ರವಾದರೂ ಸರಿ ಎನ್ನುವಂತೆ ಮಿಂಚಿದ್ದಾರೆ.
ಇನ್ನು ಕ್ರೂರಿಗಳ ಪಾತ್ರದಲ್ಲಿ ರಮೇಶ್ ಇಂದಿರಾ , ಬಾಲು ನಾಗೇಂದ್ರ ರಕ್ತದೊಕುಳಿಯ ಆಟ ಆಡಿದ್ದಾರೆ. ಇನ್ನು ಮಾನಸಿ ಸುಧೀರ್ , ಬಿಎಂ ಗಿರಿರಾಜ್ , ರಾಘು ಶಿವಮೊಗ್ಗ ಸೇರಿದಂತೆ ಹಲವಾರು ಕಲಾವಿದರು ತಮ್ಮ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಒಟ್ಟಾರೆ ಸಂದೇಶದ ಜೊತೆ ಅಬ್ಬರದಲ್ಲಿ ಮೂಡಿಬಂದಿರುವ ಈ ಚಿತ್ರ ಒಮ್ಮೆ ನೋಡಬಹುದು.