Cini NewsMovie ReviewSandalwood

ಕುತೂಹಲ ತಿರುವಿನಲ್ಲಿ ಪ್ರೇಮಿಗಳ ಪಯಣ : ‘ಅಭಿರಾಮಚಂದ್ರ’ ಚಿತ್ರವಿಮರ್ಶೆ (ರೇಟಿಂಗ್ : 4/5)

ರೇಟಿಂಗ್ : 4/5

ಚಿತ್ರ : ಅಭಿರಾಮಚಂದ್ರ
ನಿರ್ದೇಶಕ : ನಾಗೇಂದ್ರ ಗಾಣಿಗ
ನಿರ್ಮಾಪಕ : ಎ.ಜಿ. ಸುರೇಶ್‌ , ಮಲ್ಲೇಶ್‌
ಸಂಗೀತ : ರವಿ ಬಸ್ರೂರು
ಛಾಯಾಗ್ರಹಕ : ಸಂದೀಪ್
ತಾರಾಗಣ : ರಥ ಕಿರಣ್ , ಸಿದ್ದು ಮೂಲಿಮನಿ, ನಾಟ್ಯರಂಗ, ಶಿವಾನಿ ರೈ, ವೀಣಾ ಸುಂದರ್‌, ಎಸ್‌. ನಾರಾಯಣ್‌, ಪ್ರಕಾಶ್‌ ತುಮ್ಮಿನಾಡು, ಸುಂದರ್‌, ಪವನ್‌ ಹಾಗೂ ಮುಂತಾದವರು…

ಪ್ರತಿಯೊಬ್ಬರ ಬದುಕಿನಲ್ಲಿ ಬಾಲ್ಯ ,ಯೌವನ , ಗೆಳೆತನ , ಪ್ರೀತಿ , ನೋವು, ನಲಿವು ಎಲ್ಲವೂ ಸರ್ವೇಸಾಮಾನ್ಯ. ನಮ್ಮ ಬದುಕಿನ ಪ್ರಯಾಣದಲ್ಲಿ ನಾವು ಎದುರಿಸುವ ಹಲವು ಘಟನೆಗಳು ನಮ್ಮನ್ನು ಸದಾ ಕಾಡುತ್ತಲೇ ಇರುತ್ತದೆ. ಅಂತದ್ದೆ ಮೂವರು ಹುಡುಗರ ಬದುಕಿನಲ್ಲಿ ಎದುರಾಗುವ ಕಷ್ಟ, ಸುಖ, ನೋವು, ನಲಿವು, ಪ್ರೀತಿಯ ಕುತೂಹಲ ಮೂಡಿಸುವ ಬೇಸುಗೆಯೊಂದಿಗೆ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರವೇ “ಅಭಿರಾಮಚಂದ್ರ”.

ಎಲ್ಲೋ ಹುಟ್ಟಿ ಬೆಳೆದು ಬದುಕಿಗಾಗಿ ಒಂದೆಡೆ ಸೇರುವಂತ ಜಾಗವೇ ಮಹಾ ನಗರಿ ಬೆಂಗಳೂರು. ಅಭಿ(ರಥ ಕಿರಣ್) ಮಂಗಳೂರಿಂದ ಬಂದ ಯುವಕ, ರಂಗ ಭೂಮಿಯ ನಂಟು , ರಾಮ ( ಸಿದ್ದು ಮೂಲಿಮನಿ)ಮಂಡ್ಯ ಹುಡುಗ ಕ್ಯಾಬ್ ಡ್ರೈವರ್ , ಚಂದ್ರು ( ನಾಟ್ಯ ರಂಗ) ಹೋಟೆಲ್ ನಲ್ಲಿ ಕ್ಯಾಶರ್ ಜೊತೆ ಎಲ್ಲಾ ಕೆಲಸಕ್ಕೂ ಸೈ. ಈ ಗೆಳೆಯರು ಬಾಡಿಗೆ ಕಟ್ಟಲು ದುಡ್ಡಿಲ್ಲದಿದ್ದರೂ ಒಂದೇ ರೂಮ್ ನಲ್ಲಿ ವಾಸ. ಹಣದ ಅವಶ್ಯಕತೆ ಹೆಚ್ಚಿದ್ದರೂ ಸಿಗರೇಟ್, ಎಣ್ಣೆ, ಮೋಜು ಮಸ್ತಿಗೆ ಹಣವಿರುವ ವ್ಯಕ್ತಿಯನ್ನು ಬಕ್ರ ಮಾಡುವುದರಲ್ಲಿ ಕಮ್ಮಿ ಇರುವುದಿಲ್ಲ.

ಇದರ ನಡುವೆ ಅಭಿಯ ಕಡಲ ತೀರದ ಬದುಕು, ಶಾಲಾ ದಿನಗಳಲ್ಲಿ ತಾನು ಇಷ್ಟಪಟ್ಟ ಹುಡುಗಿಯ ನೋಟ , ಸನ್ನೆಯ ನೆನಪು, ಹಿಂಬಾಲಿಸಿದ ಪರಿ, ಜಾತ್ರೆಯಲ್ಲಿ ಕಳೆದ ಸಮಯ, ಅವಳು ಊರು ಬಿಟ್ಟು ಹೋದಾಗ ನೆನಪಿಗೆ ಉಳಿದ ಒಂದು ಜುಮ್ಕಿ , ಅಭಿಗೆ ಮತ್ತೆ ತನ್ನ ಗೆಳತಿ ಅರುಣಿ ಸಿಗುತ್ತಾಳೆಂಬ ಆಸೆಯನ್ನು ಗೆಳೆಯರೊಟ್ಟಿಗೆ ಹೇಳಿಕೊಳ್ಳುತ್ತಾನೆ. ಅದೇ ರೀತಿ ಮತ್ತೊಬ್ಬ ಗೆಳೆಯ ರಾಮ ಕ್ಯಾಬ್ ಡ್ರೈವರ್ ಆಗಿದ್ದು , ಅವನು ತನ್ನ ಊರು ಮಂಡ್ಯದಲ್ಲಿ ಹಳ್ಳಿಯ ಪರಿಸರ ನಡುವೆ ಕುಟುಂಬದೊಂದಿಗೆ ಬದುಕು ಕಟ್ಟಿಕೊಂಡು, ಒಮ್ಮೆ ತನ್ನ ಅಕ್ಕನ ಮಗನನ್ನ ಡಾಕ್ಟರ್ ಬಳಿ ಕರೆದುಕೊಂಡು ಹೋದಾಗ ಸುಂದರ ಹುಡುಗಿಯ ನೋಟಕ್ಕೆ ಮನಸೋತು ಇಷ್ಟ ಪಡುತ್ತಾನೆ.

ಅದೇ ರೀತಿ ಮತ್ತೊಬ್ಬ ಗೆಳೆಯ ಚಂದ್ರ ಹೋಟೆಲ್ ನಲ್ಲಿ ಮಾಲೀಕನಿಗೆ ಯಾಮಾರಿಸುತ್ತಾ ಕ್ಯಾಶಿಯರ್ ಆಗಿದ್ದರು, ಮೊಬೈಲ್ನಲ್ಲಿ ಪಬ್ಜಿ ಆಟ ಆಡುವುದೇ ಅವನ ನಿತ್ಯ ಕಾಯಕ, ಜೊತೆ ದುರಭ್ಯಾಸದ ಚಟ. ಗೆಳೆಯರೊಂದಿಗೆ ಕೀಟಲೆ, ತರಲೆ ಮಾಡುತ್ತಾ ಮೊಬೈಲ್ ಗೇಮ್ ನಲ್ಲಿ ಸಿಗುವ ಹುಡುಗಿಯರಿಗೂ ಕಾಳಾಕುತ್ತಿರುತ್ತಾನೆ. ಈ ಮೂವರು ಗೆಳೆಯರಿಗೆ ಏನೇ ಸಮಸ್ಯೆ ಬಂದರೂ ಎಲ್ಲರೂ ಕೈಜೋಡಿಸಿ ಮುಂದೆ ಸಾಗುತ್ತಿರುತ್ತಾರೆ. ಆದರೆ ಈ ಮೂವರ ಪ್ರೀತಿಗೂ ಒಂದು ನಂಟು ಬೆಸೆದುಕೊಂಡಿರುತ್ತದೆ. ಅದೇ ಚಿತ್ರದ ರೋಚಕ ತಿರುವು…
ಅಭಿಗೆ ತನ್ನ ಗೆಳತಿ ಸಿಗುತ್ತಾಳ…
ಈ ಮೂವರ ಪ್ರೇಯಸಿ ಯಾರು…
ಅಭಿರಾಮಚಂದ್ರ ಏನಾಗುತ್ತಾರೆ…
ಕ್ಲೈಮಾಕ್ಸ್ ಉತ್ತರ ಏನು…
ಈ ಎಲ್ಲಾ ಮಾಹಿತಿಗೆ ನೀವು ಒಮ್ಮೆ ಚಿತ್ರವನ್ನು ನೋಡಬೇಕು.

ಒಂದು ರೀತಿ ಕುತೂಹಲವನ್ನು ಮೂಡಿಸುವಂತಹ ಪ್ರೇಮ ಕಥೆಯನ್ನ ತೆರೆಯ ಮೇಲೆ ತಂದಿರುವ ನಿರ್ದೇಶಕ ನಾಗೇಂದ್ರ ಗಾಣಿಗ ಪ್ರಯತ್ನವನ್ನು ಉತ್ತಮವಾಗಿದೆ. ಮೂರು ವಿಭಿನ್ನ ಪ್ರೇಮ ಕಥೆಗಳ ಎಳೆಯನ್ನ ಆಯಾ ಭಾಷೆಯ ಸೊಗಡಿಗೆ ತಕ್ಕಂತೆ ಬೆಸೆದುಕೊಂಡು ಸಾಗಿದ್ದಾರೆ. ಇನ್ನು ಮಕ್ಕಳ ಪ್ರೀತಿ , ಪ್ರೇಮದ ದೃಶ್ಯಗಳು ಹೆಚ್ಚಾಗಿ ತೆರೆಯ ಮೇಲೆ ತಂದಿರೋದು ಸೂಕ್ತ ಎನಿಸುವುದಿಲ್ಲ. ಚಿತ್ರದ ದ್ವಿತೀಯ ಭಾಗ ಗಮನ ಸೆಳೆಯುವಂತಿದೆ. ನಿರ್ದೇಶಕರು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಇನ್ನೂ ಯುವ ಪ್ರತಿಭೆಗಳ ಚಿತ್ರವನ್ನು ತೆರೆಯ ತಂದಿರುವ ನಿರ್ಮಾಪಕರ ಧೈರ್ಯ ಮೆಚ್ಚಲೇಬೇಕು.

ಇನ್ನು ಚಿತ್ರದ ಸಂಗೀತ ಹಾಗೂ ಛಾಯಾಗ್ರಾಹಕರ ಕ್ಯಾಮೆರಾ ಕೈಚಳಕ ಉತ್ತಮವಾಗಿ ಮೂಡಿ ಬಂದಿದೆ. ನಾಯಕರಾಗಿ ಅಭಿನಯಿಸಿರುವ ರಥ ಕಿರಣ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಭರವಸೆಯ ಪ್ರತಿಭೆಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಾಯಕ ಸಿದ್ದು ಮೂಲಿಮನಿ ತನ್ನ ಪಾತ್ರಕ್ಕೆ ಜೀವ ತುಂಬಿ ಗಮನ ಸೆಳೆದಿದ್ದಾರೆ. ಅದೇ ರೀತಿ ಮತ್ತೊಬ್ಬ ಪ್ರತಿಭೆ ನಾಟ್ಯ ರಂಗ ಕೂಡ ಲೀಲಾಜಾಲವಾಗಿ ತನ್ನ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನು ನಾಯಕಿಗೆ ಅಭಿನಯಿಸಿರುವ ಶಿವಾನಿ ರೈ ಕೂಡ ನೋಡಲು ಮುದ್ದಾಗಿ ಕಾಣುತ್ತಾ ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಉಳಿದಂತೆ ಡಾಕ್ಟರ್ ಪಾತ್ರ ನಿರ್ವಹಿಸಿರುವ ಎಸ್ .ನಾರಾಯಣ್ ಹಾಗೂ ಮನೆಯ ಮಾಲೀಕರಾಗಿ ಕಾಣಿಸಿಕೊಂಡಿರುವ ವೀಣಾ ಸುಂದರ್ ಹಾಗೂ ಸುಂದರ್ ದಂಪತಿಗಳು , ಸಂಗೀತ ನಿರ್ದೇಶಕ ರವಿ ಬಸ್ರೂರ್ ಮಗ ಬಾಲ್ಯದ ಅಭಿ ಪಾತ್ರವನ್ನು ನಿರ್ವಹಿಸಿ ತನ್ನ ಪ್ರತಿಭೆಯನ್ನು ತೋರಿಸಿದ್ದಾರೆ. ಅದೇ ರೀತಿ ಉಳಿದ ಮಕ್ಕಳು ಕೂಡ ಉತ್ತಮವಾಗಿ ನಟಿಸಿದ್ದಾರೆ. ಹಾಗೆಯೇ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಅರ್ಚನಾ ಕೊಟ್ಟಿಗೆ ಸೇರಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟ್ಟಾರೆ ಮನೋರಂಜನೆಗೆ ಕೊರತೆ ಇಲ್ಲದಂತೆ ಯುವಕ , ಯುವತಿಯರು , ಪ್ರೇಮಿಗಳು ನೋಡುವಂತ ಚಿತ್ರವಾಗಿ ಹೊರಬಂದಿದೆ

error: Content is protected !!