Cini NewsMovie Review

ರಹಸ್ಯದ ಹಿಂದಿರುವ “ವೇಷ” (ಚಿತ್ರ ವಿಮರ್ಶೆ -ರೇಟಿಂಗ್ : 3/5)

ರೇಟಿಂಗ್ : 3/5

ಚಿತ್ರ : ವೇಷ
ನಿರ್ದೇಶಕ : ಕೃಷ್ಣ ನಾಡ್ಪಾಲ್
ನಿರ್ಮಾಪಕ : ರಾಘವೇಂದ್ರ ದೇವಾಡಿಗ
ಸಂಗೀತ : ಉತ್ತಮ ಸರಂಗ್
ಛಾಯಾಗ್ರಹಕ : ಸುರೇಂದ್ರ ಪಾಣಿಯೂರ್
ತಾರಾಗಣ : ರಾಘವೇಂದ್ರ, ನಿಧಿ ಮರೋಲಿ , ಸೌಖ್ಯ ಗೌಡ, ಮಂಜು ಪಾವಗಡ, ಜಯಪ್ರಕಾಶ್ ಶೆಟ್ಟಿ, ಶಿಲ್ಪ ಕುಮಟಾ, ವಾಣಿಶ್ರೀ ಹಾಗೂ ಮುಂತಾದವರು…

ಸಾಮಾನ್ಯವಾಗಿ ಜನರು ಬಯಸುವುದು ಸಿಗೋದು ಬಹಳ ಕಷ್ಟ ಅನ್ನೋ ಮಾತಿದೆ. ಯಾಕೆಂದರೆ ನಾವೊಂದು ಆಸೆ ಪಟ್ಟರೆ , ವಿಧಿಯ ಆಟವೇ ಬೇರೆ ಆಗಿರುತ್ತದೆ. ಅಂತಹದ್ದೇ ಒಂದು ಎಳೆಯೊಂದಿಗೆ ಕೆಲಸಕ್ಕಾಗಿ ಪರದಾಡುವ ಯುವಕ, ಪ್ರೀತಿಯ ಸೆಳೆತ , ಗೆಳೆಯನ ಸಾತ್ , ನೊಂದವರಿಗೆ ಊರ ಗೌಡರ ಸಹಕಾರ , ನಿಗೂಢತೆಯ ಸಾವು ಹೀಗೆ ಹಲವು ವಿಚಾರಗಳನ್ನು ಒಳಗೊಂಡಿರುವ ಕಥಾಹಂದರದ ಮೂಲಕ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ವೇಷ”.

ತನ್ನೀಚ್ಚಿಯಂತೆ ಓಡಾಡಿಕೊಂಡು ತಾಯಿಯ ಆಸೆಯಂತೆ ಕೆಲಸವನ್ನು ಹುಡುಕುವ ರಘು ( ರಾಘವೇಂದ್ರ ದೇವಾಡಿಗ) ಇವನನ್ನ ಪ್ರೀತಿಸುವ ಶ್ರೀಮಂತ ಬಿಸಿನೆಸ್ ಮ್ಯಾನ್ ತಂಗಿ ಸ್ವಾತಿ( ನಿಧಿ ಮರೋಲಿ). ಸ್ವಾಭಿಮಾನಕ್ಕೆ ಧಕ್ಕೆ ತರುವವರ ವಿರುದ್ಧ ಸಿಡಿದೆದ್ದು , ಕೆಲಸಕ್ಕಾಗಿ ತನ್ನ ಪ್ರೇಯಸಿನ ಪ್ರೀತಿಯಿಂದ ಹಿಂದೆ ಸರಿಯುತ್ತಾನೆ.

ಇನ್ನು ಗೆಳೆಯ ಹುಲಿ (ಮಂಜು ಪಾವಗಡ) ಸರ್ಕಾರಿ ಕೆಲಸದಲ್ಲಿ ಇದ್ದುಕೊಂಡು ಗೆಳೆಯನಿಗೆ ಸತ್ ನೀಡುವುದರ ಜೊತೆಗೆ ಹುಡುಗಿಯರಿಗೆ ಕಾಳಾಕುವುದನ್ನು ಬಿಟ್ಟಿರುವುದಿಲ್ಲ. ಇದರ ನಡುವೆ ಗ್ರಾಮದಲ್ಲಿರುವ ದೇವಸ್ಥಾನದ ಪೂಜೆಗಾಗಿ ಬೇರೆ ಊರಿನ ಅರ್ಚಕರ ಕುಟುಂಬಕ್ಕೆ ಗೌಡರ ಅನುಮತಿ ಕೊಡಿಸುವ ಮೂಲಕ ದೇವರ ಸೇವೆ ಮಾಡುತ್ತಾ ಅಲ್ಲಿ ವಾಸ ಮಾಡುವುದಕ್ಕೆ ಮನೆಯನ್ನು ಕೊಡಿಸುವ ರಘು.

ನಾಯಕನ ಒಳ್ಳೆತನ ನೋಡುವ ಅರ್ಚಕರ ಪುತ್ರಿ ಕಾವ್ಯ (ಸೌಖ್ಯ ಗೌಡ ) ರಘು ನನ್ನ ಪ್ರೀತಿಸುತ್ತಾಳೆ. ಅವನ ಮನೆಯ ತಾಯಿ , ತಂಗಿಗೂ ಹತ್ತಿರವಾಗುತ್ತಾಳೆ. ಆದರೆ ಊರ ಗೌಡರ ತಮ್ಮ ವಿನಯ್ ಗೌಡ (ಜಯ ಪ್ರಕಾಶ್ ಶೆಟ್ಟಿ) ನ ಕಣ್ಣು ಕಾವ್ಯ ಮೇಲೆ ಬೀಳುತ್ತದೆ. ಆಕೆಯನ್ನು ಮದುವೆಯಾಗಲು ಅಣ್ಣನ ಮೂಲಕ ಮುಂದಾಗುತ್ತಾನೆ.

ಇದರ ನಡುವೆ ಅರ್ಚಕರ ವಾಸವಿದ್ದ ಮನೆಯಲ್ಲಿ ಆಗೋಚರ ಶಬ್ದಗಳು ಗೋಚರವಾಗುತ್ತಿರುತ್ತದೆ. ಅದು ಏನು.. ಯಾರು… ಎಂಬುವುದನ್ನು ಹುಡುಕಾಟದಲ್ಲಿರುವಾಗಲೇ ವ್ಯಕ್ತಿ ಒಬ್ಬ ಸಿಗುತ್ತಾನೆ. ಅವನೇ ರಘುವಿನ ಆತ್ಮೀಯ ಗೆಳೆಯ ಹುಲಿ. ಅಲ್ಲಿಂದ ಮತ್ತೊಂದು ಕುಟುಂಬದ ಸಾವಿನ ಕಥೆ ತೆರೆದುಕೊಳ್ಳುತ್ತದೆ. ಆ ಮನೆಯಲ್ಲಿ ಏನಿದೆ…
ಗೆಳೆಯ ಹೆದರಿಸಲು ಕಾರಣ…
ಸತ್ತವರು ಯಾರು…
ವೇಷ ಹಾಕಿದ್ದು ಯಾಕೆ…
ಕ್ಲೈಮ್ಯಾಕ್ಸ್ ಉತ್ತರ ಏನು…
ಈ ಎಲ್ಲಾ ಮಾಹಿತಿಗಾಗಿ ನೀವು ವೇಷ ಚಿತ್ರ ನೋಡಬೇಕು.

ಒಂದು ವಿಭಿನ್ನ ಚಿತ್ರವನ್ನ ತೆರೆಯ ಮೇಲೆ ತಂದಿರುವ ನಿರ್ಮಾಪಕ ರಾಘವೇಂದ್ರ ದೇವಾಡಿಗ, ರಂಗಭೂಮಿ ಪ್ರತಿಭೆಯಾಗಿದ್ದು , ಈ ಚಿತ್ರದಲ್ಲಿ ನಾಯಕನಾಗಿ ತಮ್ಮ ಪಾತ್ರಕ್ಕೆ ಜೀವ ತುಂಬುವುದಕ್ಕೆ ಬಹಳಷ್ಟು ಶ್ರಮ ಪಟ್ಟಿದ್ದಾರೆ.ಇದು ಮೊದಲ ಪ್ರಯತ್ನವಾಗಿದ್ದು , ಇನ್ನಷ್ಟು ತಾಲಿಮು ಅಗತ್ಯ ಅನಿಸುತ್ತದೆ.

ಅದೇ ರೀತಿ ನಾಯಕಿಯಾರಾಗಿ ಅಭಿನಯಿಸಿರುವ ಪಾತ್ರಗಳು ಕೂಡ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು ಗೆಳೆಯನಾಗಿ ಎರಡು ಶೇಡ್ ಗಳಲ್ಲಿ ಅಭಿನಯಿಸಿರುವ ಮಂಜು ಪಾವಗಡ ಪಾತ್ರ ಚಿತ್ರದಲ್ಲಿ ಹೈಲೈಟ್ ಆಗಿದ್ದು, ತಮ್ಮ ನಟನ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅದೇ ರೀತಿ ತಾಯಿಯ ಪಾತ್ರದಲ್ಲಿ ಮಾಡಿರುವ ವಾಣಿಶ್ರೀ ಸೇರಿದಂತೆ ಉಳಿದ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ.

ಇನ್ನು ಈ ಚಿತ್ರ ನಿರ್ದೇಶನ ಮಾಡಿರುವ ಕೃಷ್ಣ ನಾಡ್ಪಾಲ್ ಮೊದಲ ಪ್ರಯತ್ನವಾಗಿದ್ದು, ಕಥೆಗೆ ಪೂರಕವಾಗಿ ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬೇಕಿತ್ತು.ಒಂದಷ್ಟು ಪಾತ್ರಗಳ ಲಿಂಕ್ ಗೊಂದಲವೆನಿಸುತ್ತದೆ. ಪೂರ್ವ ತಯಾರಿಯಿಕೆಯ ಕೊರತೆ ಎನಿಸುತ್ತದೆ, ತಾಂತ್ರಿಕವಾಗಿ ಇನ್ನಷ್ಟು ಉತ್ತಮವಾಗ ಬೇಕಿತ್ತು. ಮುಂದಿನ ಚಿತ್ರಗಳಲ್ಲಿ ಸರಿಪಡಿಸಿಕೊಂಡರೆ ಉತ್ತಮ ಹಾದಿಯಲ್ಲಿ ಸಾಗಬಹುದು. ಸಂಗೀತದ ಕೆಲಸ ಉತ್ತಮವಾಗಿದೆ. ಇನ್ನು ಛಾಯಾಗ್ರಹಕರ ಕೈಚಳಕ ತಕ್ಕ ಮಟ್ಟಕ್ಕೆ ಮೂಡಿಬಂದಿದೆ. ಒಟ್ಟರೆ ಯುವ ಪ್ರತಿಭೆಗಳು ಸೇರಿ ಒಂದು ಉತ್ತಮ ಚಿತ್ರ ಕೊಡಲು ಪ್ರಯತ್ನಪಟ್ಟಿದ್ದಾರೆ. ಕುತೂಹಲ ಮೂಡಿಸುವ ಈ ವೇಷ ಚಿತ್ರ ಒಮ್ಮೆ ನೋಡಬಹುದು

error: Content is protected !!