Cini NewsSandalwood

ಮೂರನೇ ಸೀಸನ್ “TPL” ಟೀಂ ಲೋಗೋ ಬಿಡುಗಡೆ

ಕ್ರಿಕೆಟ್ ಗೂ, ಸಿನಿಮಾಗೂ ಒಂದು ನಂಟು ಇದ್ದೇ ಇದೆ. ಕಲಾವಿದರು ಸಹ ಕ್ರಿಕೆಟ್ ಆಡಲು ಇಷ್ಟ ಪಡ್ತಾರೆ. ಜನವರಿಯಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ -3 ನಡೆಯಲಿದೆ. ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ ಎನ್ 1 ಕ್ರಿಕೆಟ್ ಅಕಾಡೆಮಿಯ ಬಿ.ಆರ್.ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯುತ್ತಿದೆ. ಈಗಾಗಲೇ ಯಶಸ್ವಿಯಾಗಿ ಎರಡು ಸೀಸನ್ ಮುಗಿದಿದ್ದು, ಮೂರನೇ ಸೀಸನ್ ಜನವರಿ ತಿಂಗಳಲ್ಲಿ ಆರಂಭವಾಗಲಿದೆ. ಅದಕ್ಕೂ ಮುನ್ನ ಬೆಂಗಳೂರಿನ ಎಂಎಂ ಲೆಗಸಿಯಲ್ಲಿ ಟಿಪಿಎಲ್ ಸೀಸನ್-3 ಟೀಂ ಲೋಗೋ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಜಯಂತ್ ಕುಮಾರ್ ವೀರಶೈವ ವೇದಿಕೆ ರಾಷ್ಟ್ರೀಯ ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಬಳಿಕ ಮಾತನಾಡಿದ ಜಯಂತ್ ಕುಮಾರ್ , TPL ಸೀಸನ್ 3ರ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಜನವರಿ 24 ರಿಂದ 28ರವರೆಗೆ 5ದಿನ ಜರುಗಲಿದೆ. ಈ TPL ಸೀಸನ್ ಗೆ ನಮ್ಮ ಸಂಪೂರ್ಣ ಬೆಂಬಲ ಹಾಗು ಯಾವುದೇ ಸಹಾಯ ನಾನು ಮಾಡಲು ಸಿದ್ಧ ಮತ್ತು ಮುಂದಿನ ಕಾರ್ಯಕ್ರಮದಲ್ಲಿ ಕೇಂದ್ರ ಹಾಗು ರಾಜ್ಯ ಸಚಿವರು ಭಾಗವಹಿಸಲಿದ್ದಾರೆ ಎಂದು ಆಯೋಜಕರಾದ ಶ್ರೀ ಸುನೀಲ್ ಕುಮಾರ್ ಬಿ ಆರ್ ರವರಿಗೆ ಹೇಳಿದರು.

ಟಿಪಿಎಲ್ ಆಯೋಜಕರಾದ ಸುನಿಲ್ ಕುಮಾರ್ ಬಿ ಆರ್ ಮಾತನಾಡಿ, ಒಟ್ಟಾರೆ 10 ತಂಡಗಳು ಭಾಗಿಯಾಗಲಿದ್ದು, 150 ಫ್ಲೇಯರ್ಸ್ ಇರಲಿದ್ದಾರೆ. ಒಂದು ಟೀಂನಲ್ಲಿ 15 ಜನ ಇರ್ತಾರೆ. ಒಂದು ಗ್ರೂಪ್ ಗೆ 4 ಲೀಗ್ ಮ್ಯಾಚ್ ಇರುತ್ತದೆ. ಲೀಗ್ ಮ್ಯಾಚ್ ಬಳಿಕ ಸೆಮಿ ಫೈನಲ್, ಫೈನಲ್ ಇರುತ್ತದೆ. ಒಟ್ಟು 23 ಪಂದ್ಯಾವಳಿ ಇರಲಿದೆ. ಹುಬ್ಬಳ್ಳಿಯಲ್ಲಿ ಈ ಬಾರಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಜನವರಿ 24 ರಿಂದ 28ರವೆಗೆ ಪಂದ್ಯ ನಡೆಯಲಿದೆ ಎಂದು ತಿಳಿಸಿದರು.

ಅಶ್ವಸೂರ್ಯ ರೈಡರ್ಸ್, ಗೋಲ್ಡನ್ ಈಗಲ್, KKR ಮೀಡಿಯಾ ಹೌಸ್, ಖುಷಿ 11, AVR tuskers, ರಾಸು ವಾರಿಯರ್, ಭಜರಂಗಿ ಬಾಯ್ಸ್, The bull squad, Insane Cricket team, GLR ವಾರಿಯರ್ಸ್ ಎಂಬ 10 ತಂಡಗಳು ಭಾಗಿಯಾಗಲಿದ್ದು, ಒಟ್ಟು 102 ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ಕೊಡಲಿದ್ದಾರೆ. ಈ 10 ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್ ಗಳಿರಲಿದ್ದಾರೆ. ಎ ವಿ ಆರ್ ಗ್ರೂಪ್ಸ್ ನ ಹೆಚ್.ವೆಂಕಟೇಶ್ ರೆಡ್ಡಿ ಹಾಗೂ ಅರವಿಂದ್ ವೆಂಕಟೇಶ್ ರೆಡ್ಡಿ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ.

ಅಶ್ವಸೂರ್ಯ ರೈಡರ್ಸ್ ತಂಡಕ್ಕೆ ಹರ್ಷ ಸಿಎಂ ಗೌಡ ನಾಯಕ-ರಂಜಿತ್ ಕುಮಾರ್.ಎಸ್ ಓನರ್, GLR ವಾರಿಯರ್ಸ್ ಟೀಂಗೆ ಲೂಸ್ ಮಾದ ಯೋಗಿ ನಾಯಕ-ರಾಜೇಶ್ ಎಲ್ ಓನರ್, Insane Cricket team ಟೀಂಗೆ ರವಿಶಂಕರ್ ಗೌಡ ನಾಯಕ-ಫೈಜಾನ್ ಖಾನ್ ಓನರ್, The bull squad ತಂಡಕ್ಕೆ ಶರತ್ ಪದ್ಮಾನಾಭ್ ನಾಯಕ-ಮೋನಿಶ್ ಓನರ್, ಭಜರಂಗಿ ಬಾಯ್ಸ್ ಟೀಂಗೆ ಸಾಗರ್ ಬಿಳಿಗೌಡ ನಾಯಕ- ಸ್ವಸ್ತಿಕ್ ಆರ್ಯ ಓನರ್, ರಾಸು ವಾರಿಯರ್ಸ್ ಟೀಂಗೆ ದೀಕ್ಷಿತ್ ಶೆಟ್ಟಿ ನಾಯಕ-ರಘು ಭಟ್ ಹಾಗೂ ಸುಗುಣ ಓನರ್, AVR tuskers ಚೇತನ್ ಸೂರ್ಯ ನಾಯಕ- ಅರವಿಂದ್ ವೆಂಕಟ್ ರೆಡ್ಡಿ ಓನರ್, ಖುಷಿ 11 ಅಲಕ್ ನಂದ ಶ್ರೀನಿವಾಸ್ ನಾಯಕ-ಅನಿಲ್ ಬಿಆರ್ ಓನರ್, KKR ಮೀಡಿಯಾ ಹೌಸ್ ಗೆ ಅರುಣ್ ರಾಮ್ ಗೌಡ ನಾಯಕ-ಲಕ್ಷ್ಮೀ ಕಾಂತ್ ರೆಡ್ಡಿ ಓನರ್, ಗೋಲ್ಡನ್ ಈಗಲ್ ವಿಹಾನ್ ನಾಯಕ-ಕುಶಾಲ್ ಗೌಡ ಒಡೆತನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಟಿಪಿಎಲ್ ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ರಾಗಿಣಿ ದ್ವಿವೇದಿ ಇದ್ದಾರೆ.

ಈ ಬಾರಿಯ ಟೆಲಿಮಿಷನ್ ಪ್ರೀಮಿಯರ್ ಲೀಗ್ ಸೀಸನ್-3ನಲ್ಲಿ ಮಾಧ್ಯಮದವರಿಗೂ ಅವಕಾಶ ನೀಡಲಾಗಿದೆ. ಈ ಬಾರಿ ಪಂದ್ಯಾವಳಿ ವಿಶೇಷ ಎಂದರೆ ಎನ್ 1 ಕ್ರಿಕೆಟ್ ಅಕಾಡೆಮಿಯಿಂದ ಮ್ಯಾನ್ ಆಫ್ ದಿ ಸೀರಿಸ್ ಪಟ್ಟ ಪಡೆದವರಿಗೆ ಕಾರು, ಆರೆಂಜ್ ಕ್ಯಾಪ್ ಹೋಲ್ಡರ್(batsman), ಪರ್ಪಲ್ ಕ್ಯಾಪ್ ಹೋಲ್ಡರ್(bowler) ಪಡೆದವರಿಗೆ ಬೈಕ್ ಕೊಡಲಾಗುತ್ತದೆ.

error: Content is protected !!