Cini NewsSandalwood

“ಕಣ್ಣಾ ಮುಚ್ಚೆ“ ಚಿತ್ರದ ಹಾಡುಗಳು ಬಿಡುಗಡೆ.

ಪ್ರೀತಿಯ ಸುತ್ತ ಹಲವಾರು ಚಿತ್ರಗಳು ಬಂದಿವೆ. ಆದರೆ ಯುವ ಮನಸುಗಳ ತಲ್ಲಣದ ಜೊತೆಗೆ ಒಂದು ವಿಭಿನ್ನ ಪ್ರೇಮಮಯ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.ಆ ನಿಟ್ಟಿನಲ್ಲಿ ’ಕಣ್ಣಾ ಮುಚ್ಚೆ’ ಚಿತ್ರದ ಆರು ಹಾಡುಗಳ ಪೈಕಿ, ಮೂರು ಗೀತೆಗಳ ಲಿರಿಕಲ್ ವಿಡಿಯೋ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ನಿರ್ಮಾಪಕರ ಮಾತೃಶ್ರೀ ರವರು ಸಾಂಗ್ ಲೋಕಾರ್ಪಣೆ ಗೊಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ನಟ ಸ್ವಸ್ತಿಕ್ ಶಂಕರ್ ಉಪಸ್ತಿತರಿದ್ದರು. Krishi ಸ್ಟುಡಿಯೋಸ್ ಮತ್ತು ಸಚಿತ್ ಫಿಲಿಂಸ್ ಹಾಗೂ ಶಿವ ಸಿನಿಮಾಸ್ ಬ್ಯಾನರ್ನಡಿಯಲ್ಲಿ ಖ್ಯಾತ ವಿತರಕ ವೆಂಕಟ್ ಗೌಡ ಪತ್ನಿ ಮೀನಾವೆಂಕಟ್ ನಿರ್ಮಾಣ ಮಾಡಿದ್ದಾರೆ. ಜಿ.ವಿ.ವೆಂಕಟೇಶ್ಬಾಬು -ಲೋಕೇಶ್.ಎನ್.ಬಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಚಿತ್ರಗಳಿಗೆ ಗೀತೆಗಳನ್ನು ಬರೆದಿರುವ ಲೋಕಲ್ ಲೋಕಿ ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡಿರುವುದು ಎರಡನೇ ಅನುಭವ. ಪ್ರೀತಿಯಲ್ಲಿ ಹೊಸ ಆಯಾಮ ಇರಲಿದೆ ಎಂಬ ಅಡಿಬರಹವು ಇಂಗ್ಲೀಷ್ನಲ್ಲಿ ಹೇಳಲಾಗಿದೆ.


ಬಹಳ ಗ್ಯಾಪ್ ನಂತರ ಸಂಗೀತ ಸಂಯೋಜಿಸಿರುವ ರಾಜೇಶ್ ರಾಮನಾಥ್ ಮಾತನಾಡಿ 2017ರಲ್ಲಿ ಅಪ್ಪನ ಕಾರ್ಖಾನೆ ನೋಡಿಕೊಳ್ಳುವ ಸಲುವಾಗಿ ಚಿತ್ರರಂಗದಿಂದ ದೂರ ಸರಿದಿದ್ದೆ. ಆದರೆ ಈ ತಂಡವು ಸಂಪರ್ಕಿಸಿ ನಾನೇ ಇರಬೇಕೆಂದು ಕೋರಿಕೊಂಡಿದ್ದರಿಂದ ಕೆಲಸ ಮಾಡಬೇಕಾಯಿತು. ’ಬೂಂ ಬೂಂ’ ಗೀತೆಗೆ ಧ್ವನಿಯಾಗಿದ್ದೇನೆ. ಎಂದಿನಂತೆ ಇದರಲ್ಲೂ ಸಚ್ಚಿನ್ ಎನ್ನುವ ಗಾಯಕನನ್ನು ಪರಿಚಯಿಸಲಾಗಿದೆ. ಎ2 ಮ್ಯೂಸಿಕ್ ಸಂಸ್ಥೆಯು ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ ಎಂದರು.

’ಮಾಜರ್’ ನಂತರ ಇದಕ್ಕೆ ಆಕ್ಷನ್ ಕಟ್ ಹೇಳಿದ್ದೇನೆ. ಪ್ರತಿಯೊಂದು ಹಾಡಿನಲ್ಲಿ ಒಂದೊಂದು ಕಥೆಯನ್ನು ಹೇಳಲಾಗಿದೆ. ಮೊಬೈಲ್ ಅಂಗಡಿ ಹುಡುಗನೊಬ್ಬ ಪ್ರೀತಿನೇ ಮಾಡದವನು, ಪ್ರೀತಿಯಲ್ಲಿ ಬೀಳುತ್ತಾನೆ. ಅಮಾಯಕ ಹುಡುಗಿಗೆ ಇದು ಕಂಡರೆ ಇಷ್ಟವಿಲ್ಲದಿದ್ದರೂ ಲವ್ ಹುಟ್ಟಿಕೊಳ್ಳುತ್ತದೆ. ಮುಂದೆ ಇಬ್ಬರು ದೂರ ಆಗುತ್ತಾರೆ. ಕೊನೆಗೆ ಅವಳು ಸಿಕ್ತಾಳಾ? ಈತನ ಪ್ರೀತಿಗೆ ಜೀವ ಬರುತ್ತದಾ? ಎನ್ನುವುದು ಒಂದು ಏಳೆಯ ಸಾರಾಂಶವಾಗಿದೆ. ಬೆಂಗಳೂರು, ರಾಮನಗರ, ಹೆಸರುಘಟ್ಟ ಸುಂದರ ತಾಣಗಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್ ನವರು ’ಯು/ಎ’ ಪ್ರಮಾಣಪತ್ರ ನೀಡಿದ್ದಾರೆಂದು ನಿರ್ದೇಶಕ ಲೋಕಲ್ ಲೋಕಿ ಮಾಹಿತಿ ನೀಡಿದರು.

ವಿತರಕ ವೆಂಕಟ್ ಗೌಡ ಹೇಳುವಂತೆ ಗುರುಗಳಾದ ರಾಜೇಶ್ ರಾಮನಾಥ್ ನಮ್ಮ ಚಿತ್ರಕ್ಕೆ ಟ್ಯೂನ್ ಮಾಡಿಕೊಟ್ ಟಿರುವುದು ಶಕ್ತಿ ಬಂದಿದೆ. ಸಿನಿಮಾದ ಅಂಶಗಳು ಇಷ್ಟವಾಗಿ ಬಂಡವಾಳ ಹೂಡಲು ಮುಂದಾದೆವು. ಮಧ್ಯಮ ವರ್ಗದ ಸನ್ನಿವೇಶಗಳೂ ಇದ್ದರೂ, ದೃಶ್ಯಗಳು ಶ್ರೀಮಂತವಾಗಿ ಮೂಡಿಬಂದಿದೆ. ಫೆಬ್ರವರಿಯಲ್ಲಿ ತೆರೆಗೆ ತರುವ ಯೋಜನೆ ಇದೆ ಎಂದು ಹೇಳಿದರು.

ಮೂಲತ: ಡ್ಯಾನ್ಸರ್ ಆಗಿರುವ ರವಿಕೃಷ್ಣ ನಾಯಕ. ಮೂರು ಮೆಗಾ ಧಾರವಾಹಿಗಳಲ್ಲಿ ನಟಿಸಿರುವ ತೇಜಸ್ವಿನಿ ಆನಂದಕುಮಾರ್ ನಾಯಕಿ. ಇವರೊಂದಿಗೆ ಉಗ್ರಂ ರವಿ, ನಾಗೇಂದ್ರಅರಸ್, ಕೃಷ್ಣ, ಮಮತ, ಪ್ರಶಾಂತ್ ಸಿದ್ದಿ, ಜಯಸೂರ್ಯ ಮುಂತಾದವರು ಅಭಿನಯಿಸಿದ್ದಾರೆ. ಛಾಯಾಗ್ರಹಣ ಜಗನ್ ಬಾಬು, ಸಂಕಲನ ಇ.ಎಸ್.ಈಶ್ವರ್, ನೃತ್ಯ ಕಂಬಿರಾಜು-ವಿಜಯನಗರಮಂಜು-ಸದಾ ಅವರದಾಗಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆಯಂತೆ

error: Content is protected !!