ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ರಿಲೀಸ್ ಡೇಟ್ ಫಿಕ್ಸ್.
ಹಬ್ಬಗಳ ಆರ್ಭಟದಲ್ಲಿ ಬಾಕ್ಸ್ ಆಫೀಸ್ ಬ್ಲಾಸ್ಟಿಗೆ ಟಾಕ್ಸಿಕ್ ಸಜ್ಜು. ಶುಕ್ರವಾರ ಅಲ್ಲ ಬುಧವಾರವೇ ಸಿನಿಮಾ ರಿಲೀಸ್. ರಾಯ ಮತ್ತು ಟಿಕೆಟ್ ಪಾತ್ರಗಳ ಪೋಸ್ಟರ್ ಮೂಲಕ ಬಿಡುಗಡೆ* *ದಿನಾಂಕ ಖಚಿತ ಪಡಿಸಿದ ಚಿತ್ರತಂಡ. ಇದು ವಿಶ್ವತಂದೆಯಂದಿರ ದಿನದ ವಿಶೇಷ. ‘ಟಾಕ್ಸಿಕ್’ ಸಿನಿಮಾ ತನ್ನ ವಿಶ್ವಾದ್ಯಂತ ಬಿಡುಗಡೆಗೆ ಬುಧವಾರ, 26 ಆಗಸ್ಟ್ 2026 ರ ದಿನಾಂಕವನ್ನು ಲಾಕ್ ಮಾಡಿದೆ.
ರಾಕಿಂಗ್ ಸ್ಟಾರ್ ಯಶ್ ಅವರ ‘ರಾಯ’ ಮತ್ತು ‘ಟಿಕೆಟ್’ ಎಂಬ ದ್ವಿಪಾತ್ರದ ಅವತಾರಗಳನ್ನು ಹೈಲೈಟ್ ಮಾಡುವ ಹೊಸ ಪೋಸ್ಟರ್, ಚಿತ್ರದ ಕರಾಳ ಮತ್ತು ವಿಶಾಲವಾದ ಪ್ರಪಂಚದ ಝಲಕ್ ಅನ್ನು ಈಗಾಗಲೇ ತೋರಿಸಿಕೊಟ್ಟಿದೆ.
ಓಣಂ, ಈದ್, ವರಮಹಾಲಕ್ಷ್ಮಿ ಮತ್ತು ರಕ್ಷಾಬಂಧನ ಹಬ್ಬಗಳ ಸಾಲು ಸಾಲು ರಜೆಗಳ ಲಾಭ ಪಡೆಯಲು ಬುಧವಾರವೇ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದು ಹಾಗೂ ಚಿತ್ರದಲ್ಲಿನ ತಾರಾಗಣದ ದಂಡು, 2026ರ ಅತ್ಯಂತ ದೊಡ್ಡ ಚಿತ್ರಮಂದಿರದ ಹಬ್ಬಕ್ಕೆ ವೇದಿಕೆಯನ್ನು ಸಿದ್ಧಪಡಿಸಿದೆ.
Visited 1 times, 1 visit(s) today