“ಟಾಸ್” ಮೊದಲ ಹಾಡು ರೀಲಿಸ್… ಸೆಪ್ಟೆಂಬರ್ 18ಕ್ಕೆ ರಾಜ್ಯದಾದ್ಯಂತ ಚಿತ್ರ ತೆರೆಗೆ

Spread the love

ತುಳುನಾಡಿನ ಸೂಪರ್ ಸ್ಟಾರ್ ಅರ್ಜುನ್ ದೇವ್ “ಟಾಸ್” ಚಿತ್ರದ ಬೆನ್ನಿಗೆ ನಿಂತ ಗೋಲ್ಡನ್ ಮೂವೀಸ್. ಶಿಲ್ಪಾಗಣೇಶ್ ಸಾರಥ್ಯದಲ್ಲಿ ಕನ್ನಡ ಮತ್ತು ತುಳುವಿನಲ್ಲಿ ಬಿಡುಗಡೆ. ಟಾಸ್ ಚಿತ್ರದ ಮೊದಲ ಹಾಡು ಹೆಲೋ ಹೆಲೋ ನೀಲಾಂಬರಿ ಬಿಡುಗಡೆ. ಗೋಲ್ಡನ್ ಮೂವೀಸ್ ಅರ್ಪಿಸುವ ಅವಿಕಾ ಪ್ರೊಡಕ್ಷನ್ಸ್ ಮತ್ತು ಬಿ.ಆರ್.ಬಿ ಪ್ರೊಡಕ್ಷನ್ಸ್ ನಿರ್ಮಾಣದ ತುಳು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ತಯಾರಾಗಿರುವ ಚಿತ್ರ ಟಾಸ್.

ತುಳು ನಾಡಿನ‌ ಸೂಪರ್ ಸ್ಟಾರ್ ಅರ್ಜುನ್ ದೇವ್ ನಾಯಕನಾಗಿ ನಟಿಸಿ ನಿರ್ದೇಶಿಸಿರುವ ಚಿತ್ರ. ಡಾ.ದೇವದಾಸ್ ಕಾಪಿಕಾಡ್ ಕಥೆ,ಚಿತ್ರಕಥೆ, ಸಂಭಾಷಣೆ ಇರುವ ಚಿತ್ರ. ಮಣಿಕಾಂತ್ ಕದ್ರಿ ಸಂಗೀತ , ಜೋಯೆಲ್ ಶರ್ಮನ್ ಡಿಸೋಜಾ ಛಾಯಾಗ್ರಹಣ,ಯಾಶ್ವಿನ್ ಕೆ ಶೆಟ್ಟಿಗೇರ್ ಸಂಕಲನ ಟಾಸ್ ಚಿತ್ರಕ್ಕಿದೆ.ಸುಫ್ರಮ್ ಸೋ ಖ್ಯಾತಿಯಾ ಶನೀಲ್ ಗೌತಮ್ ಈ ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿರೋದು ವಿಶೇಷ.

ಟಾಸ್ ಸಿನಿಮಾ ನೋಡಿ ಮೆಚ್ಚಿಕೊಂಡ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಗಣೇಶ್ ರವರು ಈ ಚಿತ್ರವನ್ನ ಗೋಲ್ಡನ್ ಮೂವೀಸ್ ಬ್ಯಾನರ್ ಮೂಲಕ ಅರ್ಪಿಸ್ತಿದ್ದಾರೆ. ಅದ್ರಂತೆ ಪ್ರಚಾರ ಆರಂಭಿಸಿರೋ ಚಿತ್ರತಂಡ ಚಿತ್ರದ ಮೊದಲ ಹಾಡನ್ನ ಬಿಡುಗಡೆ ಮಾಡಿದ್ದಾರೆ. ಹೆಲೋ ಹೆಲೋ ನೀಲಾಂಬರಿ ಅನ್ನೋ ಮೆಲೋಡಿ ಡ್ಯುಯೆಟ್ ಹಾಡಲ್ಲಿ ಅರ್ಜುನ್ ದೇವ್ ಮತ್ತು ನಾಯಕಿ ಸುತೇಜ್ ಶೆಟ್ಟಿ ಕೆಮಿಸ್ಟ್ರಿ ಆಕರ್ಷಕವಾಗಿದೆ. ಮಣಿಕಾಂತ್ ಕದ್ರಿ ಟ್ಯೂನ್, ಯೋಗರಾಜ್ ಭಟ್ ಸಾಹಿತ್ಯವಿರೋ ಈ ಹಾಡನ್ನ ಅರ್ಮಾನ್ ಮಾಲೀಕ್ ಹಾಡಿದ್ದಾರೆ..ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಕನ್ನಡ ಮತ್ತು ತುಳು ಭಾಷೆಯಲ್ಲಿ ಹಾಡು ಲಭ್ಯವಿದೆ.

ಟಾಸ್ ಸಿನಿಮಾದ ಹಾಡು ಮತ್ತು ಮೇಕಿಂಗ್ ಗುಣಮಟ್ಟ ನಿರೀಕ್ಷೆ ಹುಟ್ಟಿಸ್ತಿದೆ… ಅಂದ್ಹಾಗೆ ಈ ಹಾಡಿನ ಮೂಲಕ‌‌ಪ್ರಚಾರ ಕೆಲಸಕ್ಕೆ ಚಾಲನೆ ಕೊಟ್ಟಿರೋ ಚಿತ್ರತಂಡ ಸದ್ಯದಲ್ಲೇ ಪತ್ರಿಕಾಗೋಷ್ಠಿ ಮೂಲಕ ಉಳಿದ ವಿಷ್ಯಗಳನ್ನ ಹಂಚಿಕೊಳ್ಳೊ ಯೋಜನೆಯಲ್ಲಿದ್ದು, ಚಿತ್ರವನ್ನ ಸೆಪ್ಟೆಂಬರ್ 18ಕ್ಕೆ ಬಿಡುಗಡೆ ಮಾಡೋ ಸನ್ನಾಹದಲ್ಲಿದೆ.

Visited 1 times, 1 visit(s) today
error: Content is protected !!