Cinisuddi Fresh Cini News 

“ದಿ ವೆಕೆಂಟ್ ಹೌಸ್” ಚಿತ್ರದ ಫಸ್ಟ್ ಲುಕ್ ಲಾಂಚ್

ಸಿನಿ ಪ್ರಿಯರ ಗಮನ ಸೆಳೆಯುವುದಕ್ಕೆ ಪ್ರಥಮ ಬಾರಿಗೆ “ದಿ ವೆಕೆಂಟ್ ಹೌಸ್” ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ. ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಜಾನೆಟ್ ನೊರೊನ್ಹಾ ಪ್ರೊಡಕ್ಷನ್ ಹೌಸ್ ಮೂಲಕ ಜಾನೆಟ್ ನರೋನಾ ನಿರ್ಮಾಣ ಮಾಡಿದ್ದಾರೆ.

ಇದು ಈ ಸಂಸ್ಥೆಯ 3 ನೇ ಚಿತ್ರವಾಗಿದ್ದು , ಈ ಹಿಂದೆ ಕೊಂಕಣಿಯಲ್ಲಿ 2 ಚಿತ್ರವನ್ನು ನಿರ್ಮಿಸಿದ್ದಾರೆ. 2018 ರಲ್ಲಿ “ಸೋಫಿಯಾ ಎ ಡ್ರೀಮ್ ಗರ್ಲ್” ಎಂಬ ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ , ಬಾಲಿವುಡ್ ನಟ ಜಾಕಿಶ್ರಾಫ್ ಕೂಡಾ “ಕಾಂಟರ್” ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಮೂರನೇ ಪ್ರಯತ್ನವಾಗಿ “ದಿ ವೆಕೆಂಟ್ ಹೌಸ್” ಚಿತ್ರವನ್ನ ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಸಿದ್ಧವಾಗುತ್ತಿದ್ದು , ಈ ಚಿತ್ರಕ್ಕೆ ಪ್ರಥಮ ಬಾರಿಗೆ ಸಂಗೀತವನ್ನು ನೀಡುವ ಮೂಲಕ ಎಸ್ತರ್ ನರೋನಾ ಪಾದಾರ್ಪಣೆ ಮಾಡುತ್ತಿದ್ದು , ನಾಯಕಿಯಾಗಿ ಕೂಡ ಮಿಂಚಲಿದ್ದಾರೆ.

ಎಸ್ತರ್ ನರೋನಾ ಬಾಲ್ಯ ದಿಂದಲೂ ಹಾಡು , ಸಂಗೀತದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು, ಅದೇ ರೀತಿ ಶಾಲಾ ಹಾಗೂ ಕಾಲೇಜು ಕೂಡ ಎಲ್ಲರ ಗಮನ ಸೆಳೆದಿದ್ದರು. ಹಲವಾರು ಕೊಂಕಣಿ ಚಿತ್ರಗಳಲ್ಲೂ ಕಾಣಿಸಿಕೊಂಡ ಎಸ್ತರ್ ಇತ್ತೀಚೆಗೆ ಶಕೀಲಾ ಬಯೋಪಿಕ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಇನ್ನೂ ಹಲವು ಚಿತ್ರಗಳು ತೆರೆಗೆ ಬರಬೇಕಿದೆ.

ತಮ್ಮ ಸ್ವಂತ ಬ್ಯಾನರ್ ಮೂಲಕವೇ ಸಂಗೀತ ನಿರ್ದೇಶಕಿಯಾಗಿ ಬೆಳ್ಳಿಪರದೆಗೆ ಬರುತ್ತಿರುವ ಎಸ್ತರ್ ನರೋನಾ ಹಲವಾರು ಕನಸುಗಳನ್ನು ಹೊತ್ತು ಕೊಂಡಿದ್ದಾರೆ. ಈ ಚಿತ್ರಕ್ಕೆ ಸಾಹಿತ್ಯ ಹಾಗೂ ಸಂಭಾಷಣೆ ಕೂಡ ಬರೆದಿದ್ದಾರೆ. ಎಸ್ತರ್ ಮುಂದೆ ಉತ್ತಮ ಸಂಗೀತವನ್ನು ನೀಡುವ ತವಕ ಹೊಂದಿದ್ದಾರೆ.

ಇದೊಂದು ವಿಭಿನ್ನ ಕಥಾ ಹಂದರವಾಗಿದ್ದು , ಬಹಳಷ್ಟು ವಿಚಾರಗಳನ್ನು ಮುಂದಿನ ದಿನಗಳಲ್ಲಿ ಚಿತ್ರ ತoಡ ನೀಡಲು ನಿರ್ಧರಿಸಿದೆ. ಈ ಚಿತ್ರವನ್ನ ಶ್ರೇಯಸ್ ಚಿಂಗಾ ನಿರ್ದೇಶನ ಮಾಡಿದ್ದಾರೆ. ಇದು ಇವರ ಪ್ರಥಮ ಪ್ರಯತ್ನದ ಚಿತ್ರವಾಗಿದ್ದು , ಇವರು ಕೂಡ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಏಪ್ರಿಲ್ 4 ವಿಶೇಷ ದಿನವಾಗಿದ್ದು ಎಸ್ತರ್ ನರೋನಾ ಈ ಚಿತ್ರದ ಫಸ್ಟ್ ಲುಕ್ ಅನ್ನು ಹೊರತಂದಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ತoಡ ನೀಡಲಿದ್ದಾರoತೆ. ಸದ್ಯ ಬಿಡುಗಡೆಗೊಂಡಿರುವ ಫಸ್ಟ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ.

Related posts