Cini NewsMovie ReviewSandalwood

ಸ್ನೇಹ , ಪ್ರೀತಿ , ಆತ್ಮದ ಸುಳಿಯಲ್ಲಿ “ದಿ ವೆಕೆಂಟ್ ಹೌಸ್”. ರೇಟಿಂಗ್ : 3.5 /5

ಸ್ನೇಹ , ಪ್ರೀತಿ , ಆತ್ಮದ ಸುಳಿಯಲ್ಲಿ “ದಿ ವೆಕೆಂಟ್ ಹೌಸ್”.

ರೇಟಿಂಗ್ : 3.5 /5

ಚಿತ್ರ : ದಿ ವೆಕೆಂಟ್ ಹೌಸ್
ನಿರ್ದೇಶಕಿ : ಎಸ್ತರ್ ನರೋನ್ಹಾ
ನಿರ್ಮಾಪಕಿ : ಜಾನೆಟ್ ನರೋನ್ಹಾ
ಸಂಗೀತ : ಎಸ್ತರ್ ನರೋನ್ಹಾ
ಛಾಯಾಗ್ರಹಕ : ನರೇಂದ್ರಗೌಡ
ತಾರಾಗಣ : ಎಸ್ತರ್ ನರೋನ್ಹಾ , ಸಂದೀಪ್ ಮಲಾನಿ, ಶ್ರೇಯಸ್ ಚಿಂಗಾ,
ಸೀಮಾ ಬುತೆಲ್ಲೋ ಹಾಗೂ ಮುಂತಾದವರು…

ಜೀವನದಲ್ಲಿ ಒಂಟಿತನ , ತನ್ನವರು, ನನ್ನವರು ಇಲ್ಲದಿದ್ದಾಗ ಮನಸು ಯಾವ ರೀತಿ ಪರಿತಪಿಸುತ್ತದೆ. ಅನಿರೀಕ್ಷಿತವಾಗಿ ಸಿಗುವ ಸ್ನೇಹ , ಪ್ರೀತಿ , ಬದುಕಿಗೆ ತೋರುವ ಮಾರ್ಗ ಏನೆಂಬುದರ ಜೊತೆಗೆ ದುರಂತ ಘಟನೆಗಳು ಆತ್ಮವಾಗಿ ಹಿಂಬಾಲಿಸಿದಾಗ ಏನೆಲ್ಲಾ ಎದುರಿಸಬೇಕಾಗುತ್ತದೆ ಎಂಬುದನ್ನು ಹಲವು ದೃಷ್ಟಿಕೋನದ ಮೂಲಕ ಈ ವಾರ ತೆರೆಯ ಮೇಲೆ ತೋರಿಸಲು ಬಂದಿರುವಂತಹ ಚಿತ್ರವೇ “ದಿ ವೆಕೆಂಟ್ ಹೌಸ್”. ದಟ್ಟ ಅರಣ್ಯದ ನಡುವೆ ಇರುವ ಸುಂದರ ಪರಿಸರದಲ್ಲಿ ಕಾಣುವ ಇಂಡಿಪೆಂಡೆಂಟ್ ಮನೆಯಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಒಬ್ಬಂಟಿಯಾಗಿ ವಾಸಿಸುವ ಮನವ್(ಶ್ರೇಯಸ್ ಚಿಂಗಾ) ಆ ಊರಿನ ಶಾಲಾ ಶಿಕ್ಷಕನಾಗಿ ಮಕ್ಕಳಿಗೆ ಪಾಠ ಮಾಡುತ್ತಾ ವಾಸ ಮಾಡುತ್ತಿರುತ್ತಾನೆ, ಅವನ ಮನೆಯ ಎದುರು ಒಂದು ಖಾಲಿ ಮನೆ , ಅಕ್ಕ ಪಕ್ಕ ಯಾರು ಇಲ್ಲದ ಸ್ಥಳದಲ್ಲಿ , ಒಂಟಿತ ಬದುಕಿದ್ದು ಸತ್ತಂತೆ ಎಂಬ ಭಾವನೆ ಮನವ್ ಗೆ. ಆಗಾಗ ತನ್ನ ಶಾಲಾ ಸ್ನೇಹಿತೆ ಮಾನಸ (ಸೀಮಾ) ಗೆಳೆಯ ಯೋಗ ಕ್ಷೇಮವನ್ನು ವಿಚಾರಿಸುತ್ತಿರುತ್ತಾಳೆ. ಒಂದು ದಿನ ಕಾಲಿ ಇದ್ದ ಮನೆಗೆ ಮಹೇಶ್ (ಸಂದೀಪ್ ಮಲಾನಿ) ಹಾಗೂ ಮೋಹ (ಎಸ್ತರ್ ನರೋನ್ಹಾ) ಇಬ್ಬರು ಪ್ರವೇಶ ಮಾಡುತ್ತಾರೆ. ಇದನ್ನು ಗಮನಿಸುವ ಮಾನವ್ ಮುದ್ದಾದ ಸುಂದರ ಯುವತಿ ಮೋಹ ನೋಟಕ್ಕೆ ಮನಸುಲುತ್ತಾನೆ. ಆಕೆಯನ್ನು ಭೇಟಿ ಮಾಡಲು ಹಲವು ಪ್ರಯತ್ನ ಮಾಡುತ್ತಾನೆ. ಅದಕ್ಕಾಗಿ ಗೆಳತಿಯ ಸಹಕಾರವು ಪಡೆಯುತ್ತಾ , ಮೋಹಳ ಸ್ನೇಹ , ಪ್ರೀತಿ ಗಳಿಸುತ್ತಾನೆ ಎನ್ನುವಷ್ಟರಲ್ಲಿ ಮೋಹ ಮಹೇಶ್ ಹೆಂಡತಿ ಎಂದು ತಿಳಿದು ಕೂಡಲೇ ಕುಗ್ಗಿ ಹೋಗುತ್ತಾನೆ. ಆಕೆಯಿಂದ ದೂರ ಉಳಿಯಬೇಕು ಅನ್ನುವಷ್ಟರಲ್ಲಿ ಗಂಡ ಹೆಂಡತಿ ಹೊರಟ ಕಾರ್ ಆಕ್ಸಿಡೆಂಟ್ ಆಗುತ್ತದೆ. ಮಹೇಶ್ ಸ್ಪಾಟ್ ಡೆತ್ ಆಗಿದ್ದು , ಮೋಹ ಗಂಭೀರ ಸ್ಥಿತಿ ಎಂಬ ವಿಚಾರ ತಿಳಿಯುತ್ತದೆ. ಮುಂದೆ ಇಲ್ಲಿಂದ ಮಾನವ್ ನ ಬದುಕಿನ ಹಾದಿಯಲ್ಲಿ ರೋಚಕ ಘಟನೆಗಳು , ಆತ್ಮಗಳ ಸಂಚಲನ , ಹೀಗೆ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ.
ಮಾನವ್ ಬದುಕು ಏನು…
ಸತ್ತವರು ಯಾರು…
ಆತ್ಮದ ಕಾಟವೋ… ಪ್ರೀತಿಯೋ…
ಒಂಟಿತನಕ್ಕೆ ಉತ್ತರ ಏನು…
ಇದೆಲ್ಲದಕ್ಕೂ ಉತ್ತರ ಈ ಚಿತ್ರ ನೋಡಿದರೆ ಸಿಗುತ್ತದೆ.

ಇಂತಹ ಒಂದು ವಿಭಿನ್ನ ಪ್ರಯತ್ನದ ಚಿತ್ರವನ್ನು ನಿರ್ದೇಶನ ಮಾಡಿದಂತ ಯುವ ನಿರ್ದೇಶಕಿ ಎಸ್ತರ್ ನರೋನ್ಹಾ ಸಾಹಸವನ್ನು ಮೆಚ್ಚಲೇಬೇಕು. ಕಥೆ , ಚಿತ್ರಕಥೆ, ಸಂಗೀತ , ನಿರ್ಮಾಣದ ಜೊತೆ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡು ನಂಬಿಕೆ , ಸ್ನೇಹ , ಪ್ರೀತಿಯ ಸುಳಿಯಲ್ಲಿ ಬದುಕು ಹಾಗೂ ಸಾವಿನ ತಳಮಳಗಳ ಭಾವನೆಯನ್ನು ಅನುಭವಿಸುವ ಪರಿಯನ್ನ ಅಚ್ಚುಕಟ್ಟಾಗಿ ಕಟ್ಟಿಕೊಡುವ ಜೊತೆಗೆ ನಿಜವಾದ ಪ್ರೀತಿ ಸಾವನ್ನು ಗೆದ್ದಂತೆ ಎಂಬುವುದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಇನ್ನು ನಾಯಕಿಯಾಗಿಯೂ ಕೂಡ ಎಸ್ತರ್ ನರೋನ್ಹಾ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅದೇ ರೀತಿ ನಾಯಕನಾಗಿ ಅಭಿನಯಿಸಿರುವ ಶ್ರೇಯಸ್ ಚಿಂಗಾ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ.
ನಾಯಕಿಯ ಗಂಡನಾಗಿ ಸಂದೀಪ್ ಮಲಾನಿ, ನಾಯಕನ ಸ್ನೇಹಿತನಾಗಿ ಸೀಮಾ ಗಮನ ಸೆಳೆಯುತ್ತಾರೆ. ಬೆರಳೆಣಿಕೆಯ ಪಾತ್ರಗಳು ಚಿತ್ರದ ಕುತೂಹಲವನ್ನು ತೂಗಿಸಿಕೊಂಡು ಸಾಗಿದೆ. ಇನ್ನೂ ಛಾಯಾಗ್ರಹಕ ನರೇಂದ್ರಗೌಡ ಕೆಲಸ ಉತ್ತಮವಾಗಿದ್ದು , ಸಂಗೀತ ತಕ್ಕಮಟ್ಟಿಗೆ ಬಂದಿದೆ. ತಾಂತ್ರಿಕವಾಗಿ ಚಿತ್ರ ಇನ್ನಷ್ಟು ಉತ್ತಮವಾಗಿ ಮಾಡಬಹುದಿತ್ತು , ಚಿತ್ರದ ದ್ವಿತೀಯ ಭಾಗ ಗಮನ ಸೆಳೆಯುವಂತಿದೆ. ಚಿತ್ರದ ನಿರ್ದೇಶಕಿಗೆ ಇದು ಪ್ರಥಮ ಚಿತ್ರವಾದರೂ ಮುಂದಿನ ದಿನಗಳಿಗೆ ಮತ್ತಷ್ಟು ಕಲಿಕೆಗೆ ದಾರಿ ಮಾಡಿಕೊಟ್ಟಂತಿದೆ. ಒಟ್ಟಾರೆ ಸಸ್ಪೆನ್ಸ್ , ಹಾರರ್, ಥ್ರಿಲ್ಲರ್ ಪ್ರೀಯರಿಗೆ ಈ ಚಿತ್ರ ಬಹಳ ಬೇಗ ಇಷ್ಟವಾಗುತ್ತದೆ. ಎಲ್ಲರೂ ಒಮ್ಮೆ ನೋಡುವ ಹಾಗೆ ಚಿತ್ರ ಮೂಡಿ ಬಂದಿದೆ.

error: Content is protected !!