Cini NewsSandalwood

‘ಮೂರನೇ ಕೃಷ್ಣಪ್ಪ’ ಸಿನಿಮಾ ಟ್ರೇಲರ್ ಸದ್ದು…ಇದೇ 24ಕ್ಕೆ ಚಿತ್ರ ರಿಲೀಸ್.

ಕನ್ನಡ ಚಿತ್ರರಂಗದಲ್ಲೀಗ ನಮ್ಮ ನೆಲದ ಕಥೆಗಳ ಸಿನಿಮಾಗಳು ಹೊಸ ಕ್ರಾಂತಿ ಮಾಡುತ್ತೀವೆ. ಕಾಂತಾರ, ಕಾಟೇರ ಸಕ್ಸಸ್ ಬಳಿಕ ಇಲ್ಲಿನ ನೆಲದ ಘಮಲನ್ನು ಹೊತ್ತು ಬರ್ತಿರುವ ಚಿತ್ರ ಮೂರನೇ ಕೃಷ್ಣಪ್ಪ. ಕೋಲಾರ ಭಾಗದ ಭಾಷೆಯ ಸೊಗಡನ್ನು ಪ್ರೇಕ್ಷಕರಿಗೆ ಉಣಬಡಿಸಲು ಹೊರಟಿರುವ ಮೂರನೇ ಕೃಷ್ಣಪ್ಪ ಚಿತ್ರದ ಬಗ್ಗೆ ಚಿತ್ರತಂಡ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದೆ. ಇತ್ತೀಚೆಗೆಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮೂರನೇ ಕೃಷ್ಣಪ್ಪ ಬಿಡುಗಡೆ ಸುದ್ದಿಗೋಷ್ಟಿ ಆಯೋಜಿಸಲಾಗಿತ್ತು.

ಈ ವೇಳೆ ರಂಗಾಯಣ ರಘು ಮಾತನಾಡಿ, ನವೀನ್ ಅಕಿರ ಸಿನಿಮಾ ಟೈಮ್ ನಲ್ಲಿ ಹೆಚ್ಚು ಪರಿಚಯವಾಗಿದ್ದು, ಇಲ್ಲಿ ಸಿನಿಮಾ ಮಾಡ್ತಾರೆ ಚೆನ್ನೈಗೆ ಹೋಗ್ತಾರೆ. ಅಲ್ಲಿ ಸಿನಿಮಾ ಬಗ್ಗೆ ತಿಳಿದುಕೊಂಡು ಮತ್ತೆ ಕನ್ನಡಕ್ಕೆ ವಾಪಾಸ್ ಬಂದಾಗ ಕೆಲವೊಂದಿಷ್ಟು ಮಾತಾಡಿದ್ದೇವು. ಪ್ರಾಂತ್ಯ ಭಾಷೆಯಲ್ಲಿ ಇಟ್ಕೊಂಡು ಸಿನಿಮಾ ಮಾಡಬೇಕು ಎಂದು ಚರ್ಚೆ ಮಾಡಿದ್ದೇವು. ಸ್ಕ್ರೀಪ್ಟ್ ಕೇಳಿದೆ ಕೊಟ್ಟರು. ಸ್ಕ್ರೀಪ್ಟ್ ಓದುತ್ತಾ ಓದುತ್ತಾ ಖುಷಿಯಾಯ್ತು. ಕಂಟೆಂಟ್ ತುಂಬಾ ಸ್ಟ್ರಾಂಗ್ ಆಗಿದೆ. ಎಲ್ಲಾ ಪಾತ್ರಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಕೋಲಾರ ಭಾಷೆ ತುಂಬಾ ಚೆನ್ನಾಗಿದ್ದೇನೆ. ಇಂತಹ ಪ್ರಾಂತ್ಯ ಭಾಷೆಯ ಸಿನಿಮಾದಲ್ಲಿ ನಾನು ನಟಿಸಿರುವುದು ಖುಷಿ ಕೊಟ್ಟಿದೆ ಎಂದು ತಿಳಿಸಿದರು.

ಸಂಪತ್ ಮೈತ್ರೀಯಾ, ಸಿನಿಮಾದಲ್ಲಿ ಮುಖ್ಯ ಪಾತ್ರವಷ್ಟೇ. ನಾನೇನೂ ನಾಯಕ ನಟ ಅಲ್ಲ ನಾನು ಕಲಾವಿದ. ಒಂದೊಳ್ಳೆ ವಿಷಯ ಇರುವ ಸಿನಿಮಾ. ದೇವಸ್ಥಾನ ಉದ್ಘಾಟನೆಗೆ ಸಂಬಂಧಪಟ್ಟ ಕಥೆ. ಒಬ್ಬ ಶಿಕ್ಷಕ ಸಹಾಯ ಮಾಡಲು ಹೋಗಿ ಏನ್ ಏನು ಕಷ್ಟ ಅನುಭವಿಸ್ತಾನೆ ಎಂಬ ವಿಷಯದ ಕುರಿತು ನನ್ನ ಪಾತ್ರ. ಎಲ್ಲರೂ ಅವರ ಅವರ ಪಾತ್ರದಲ್ಲಿ ಸ್ಕೋರ್ ಮಾಡಿದ್ದಾರೆ. ರಂಗಾಯಣ ರಘು ಸರ್ ಬಗ್ಗೆ ಮಾತಾಡುವಷ್ಟು ನನಗೆ ಅನುಭವ ಇಲ್ಲ. ಅವರು ನಟಿಸುವಾಗ ನಾನು ದೂರ ನೋಡುತ್ತಾ ನಿಂತಿದ್ದೇ. ಅವರಿಂದ ಕಲಿತಿದ್ದು ಸಾಕಷ್ಟು ಇದೆ. ಸಂಗೀತ ಅದ್ಭುತವಾಗಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.

ನಿರ್ದೇಶಕ ನವೀನ್ ರೆಡ್ಡಿ, ನಾನು ಬರೆದ ಪಾತ್ರಗಳಿಗೆ ಇಡೀ ಕಲಾವಿದರು ಜೀವ ತುಂಬಿದ್ದಾರೆ. ಏನು ಬೇಕೋ ಎಲ್ಲದಕ್ಕಿಂತ ಒಂದು ಪಟ್ಟು ಜಾಸ್ತಿಯೇ ಮಾಡಿದ್ದಾರೆ. ಈ ಹಿಂದೆ ನನ್ನ ಎರಡು ಸಿನಿಮಾಗಳಿಗೆ ಕೆಲಸ ಮಾಡಿದ ಯೋಗಿ ಈ ಚಿತ್ರಕ್ಕೂ ಕೆಲಸ ಮಾಡಿದ್ದಾರೆ. ನನ್ನ ಬಳಿಕ ಏನ್ ಇದೆಯೋ ಅದರಲ್ಲಿ ಕೆಲಸ ಮಾಡಿದ್ದಾರೆ. ಶ್ರೀಕಾಂತ್ ಸರ್ ನನ್ನ ಸಿನಿಮಾವನ್ನು ನನಗೆ ಇಷ್ಟವಾಗುವಂತೆ ಸಂಕಲನದ ಕೆಲಸ ಮಾಡಿದ್ದಾರೆ. ಟ್ರೇಲರ್ ನೋಡಿದ್ದೀರಾ? ಇಷ್ಟಪಟ್ಟಿದ್ದೀರಾ? ಖುಷಿ ಇದೆ. ನಿಮಗೆ ಟ್ರೇಲರ್ ಇಷ್ಟವಾಗಿದ್ದರೆ 24 ರಂದು ಸಿನಿಮಾ ಬಿಡುಗಡೆಯಾಗಲಿದೆ. ಈ ಬಾರಿ ಹಿಟ್ ಟೇಸ್ಟ್ ನೋಡುತ್ತೇವೆ ನಂಬಿಕೆ ಇದೆ ಎಂದರು.

ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ರಂಗಾಯಣ ರಘು ಹಾಗೂ ಸಂಪತ್ ಮೈತ್ರಿಯಾ ಮೂರನೇ ಕೃಷ್ಣಪ್ಪ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಳ್ಳಿ ಸೊಗಡಿನ ಕಥೆಯನ್ನು ಕಟ್ಟಿಕೊಟ್ಟಿರುವ ಈ ಚಿತ್ರಕ್ಕೆ ವೀನ್ ರೆಡ್ಡಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ವಿಭಿನ್ನ ಟೈಟಲ್ನೊಂದಿಗೆ ನಿರ್ದೇಶಕ ನವೀನ್ ಅವರು ಆರಂಭದಲ್ಲೇ ಕೌತುಕ ಮೂಡಿಸಿದ್ದಾರೆ. ‘ರೆಡ್ ಡ್ರ್ಯಾಗನ್ ಫಿಲ್ಮ್ಸ್’ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಿಸಿದೆ. ಮೋಹನ್ ರೆಡ್ಡಿ ಜಿ, ರವಿಶಂಕರ್ ಅವರು ಬಂಡವಾಳ ಹೂಡಿದ್ದಾರೆ.

ಶ್ರೀಪ್ರಿಯಾ ಅವರು ಈ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ತುಕಾಲಿ ಸಂತೋಷ್, ಉಗ್ರಂ ಮಂಜು ಮುಂತಾದವರು ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಆನಂದ್ ರಾಜವಿಕ್ರಮ್ ಸಂಗೀತ ಕೊಟ್ಟಿದ್ದಾರೆ. ಯೋಗಿ ಕ್ಯಾಮರಾ ವರ್ಕ್ ಮಾಡಿದ್ದಾರೆ. ಇದೇ ತಿಂಗಳು ಮೇ-24 ರಂದು ಸಿನಿಮಾ ರಿಲೀಸ್ ಆಗುತ್ತಿದೆ.

error: Content is protected !!