Cini NewsSandalwood

ನೈಜ ಘಟನೆಗಳ ಆಧಾರಿತ “ದ ರೂಲರ್ಸ್” Power of Constitution ಬರಲು ರೆಡಿ

ಬೆಳ್ಳಿ ಪರದೆ ಮೇಲೆ ಬಹಳಷ್ಟು ಹೊಸಬರ ತಂಡ ವಿಭಿನ್ನ ಕಥಾಂದರ , ನೈಜ ಘಟನೆ ಆಧಾರಿತ ಚಿತ್ರಗಳ ಮೂಲಕ ಗಮನ ಸೆಳೆಯಲು ಬರುತ್ತಿದ್ದಾರೆ. ಆ ನಿಟ್ಟಿನಲ್ಲಿ ಬರುತ್ತಿರುವಂತಹ ಯುವ ಪ್ರತಿಭೆಗಳು ಸೇರಿ ನಿರ್ಮಿಸುತ್ತಿರುವಂತಹ ಚಿತ್ರವೇ “ದ ರೂಲರ್ಸ್” ಟೈಟಲ್ ನಡಿಯಲ್ಲಿ Power of Constitution ಅನ್ನೋ ಅಡಿ ಬರಹವನ್ನಿಟ್ಟಿರೋ ಈ ಸಿನಿಮಾದ ಟೀಸರ್  ಎ2 ಮ್ಯೂಸಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿ ಜನರ ಗಮನವನ್ನು ಸೆಳೆದಿತ್ತು. ಇದರಿಂದ ಚಿತ್ರತಂಡಕ್ಕೆ ಬಹಳಷ್ಟು ಖುಷಿಯಾಗಿದೆ. ಈ ವಿಚಾರದ ಜೊತೆಗೆ ಚಿತ್ರದ ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ಳಲು ಇತ್ತೀಚಿಗೆ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು.

ಈ “ದ ರೂಲರ್ಸ್” ಚಿತ್ರ ನೈಜ ಘಟನೆಗಳನ್ನಾಧರಿಸಿ ನಿರ್ಮಾಣಗೊಂಡಿರುವಂತಹ ಚಿತ್ರ. ಕೋಲಾರ ಜಿಲ್ಲೆಯಲ್ಲಿ ನಡೆದಿರೋ, ನಡೆಯುತ್ತಿರೋ ಘಟನಾವಳಿಗಳನ್ನಾಧರಿಸಿ ಮಾಡಿರೋ ಕಥೆಯಾಗಿದ್ದು , ಸಂವಿಧಾನವೊಂದು ಆಸರೆ ಮತ್ತು ಶಕ್ತಿ ಎಂಥಹದ್ದು, ಅದು ಭಾರತೀಯ ಪ್ರಜ್ಞೆಗೆ ಕೊಟ್ಟಿರೋ ಶಕ್ತಿ ಎಂಥಹದ್ದು ಅನ್ನೋ ವಿಚಾರವನ್ನ ಮೂಲವಾಗಿಸಿಕೊಂಡು “ದ ರೂಲರ್ಸ್” ಚಿತ್ರವನ್ನ ಮಾಡಲಾಗಿದೆ. ಇಲ್ಲಿ ಮೇಲೂ ಕೀಳು ಅನ್ನೋ ಸಮುದಾಯ ಗಳ ಸಂಘರ್ಷದಿ ಮರೆಯಾದ ಮಾನವೀಯತೆಯನ್ನ ಒಂದು ಕಡೆ ಬಂಬಿಸಿದ್ರೆ, ಮತ್ತೊಂದು ಕಡೆ ಸಂವಿಧಾನ ಕೊಟ್ಟಿರೋ ಸಮಾನತೆಯ ಹಕ್ಕನ್ನ ಪ್ರತಿಪಾದಿಸೋ, ಅದರ ಶಕ್ತಿಯನ್ನ ಪ್ರದರ್ಶಿಸೋ ಮತ್ತೊಂದು ಮಜಲನ್ನ ಅನಾವರಣಗೊಳಿಸಿದ್ದಾರಂತೆ.

“ದ ರೂಲರ್ಸ್” ಹೆಸರೇ ಸೂಚಿಸುವಂತೆ ದ ಅಂದ್ರೆ ದಲಿತ ಇದಕ್ಕೆ ರೂಲರ್ಸ್ಸ್ ಅಂತ ಹೆಸರಿಟ್ಟಿರೋದ್ರ ಹಿಂದೆ ವಿಚಾರ ಇದೆಯಂತೆ. ಈ 5ಜಿ ಜಮಾನದಲ್ಲೂ ಇನ್ನೂ ಜಾತಿ ಅನ್ನೋ ಪಿಡುಗು ಎಷ್ಟರ ಮಟ್ಟಿಗೆ ಶೀತಲವಾಗಿ ಸಮಾಜದೊಳಗಿದೆ ಮತ್ತು ಅದರ ಪರಿಣಾಯ ಏನಾಗ್ತಿದೆ ಅನ್ನೋದನ್ನ ಈ ಚಿತ್ರದಲ್ಲಿ ಹೇಳಲಾಗಿದೆ ಇಂದು “ದ ರೂಲರ್ಸ್ಸ್” ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನ ಬರೆದಿರೋದು ಕೋಲಾರದ ಡಾ. ಕೆ.ಎಮ್ ಸಂದೇಶ್ ಮಾಹಿತಿಯನ್ನು ನೀಡಿದರು .

ಈ ಯುವ ಹೋರಾಟಗಾರ ಡಾ. ಬಿ.ಆರ್ ಅಂಬೇಡ್ಕರ್ ತತ್ವ ಸಿದ್ದಾಂತವನ್ನ ಮೈಗೂಡಿಸಿಕೊಂಡು, ವರ್ಷಗಳಿಂದ ಸಾಮಾಜಿಕ ಸಮಾನತೆಯಾಗಿ 300ಕ್ಕೂ ಹೆಚ್ಚು ಹೋರಾಟ ಹಾಗೂ 150ಕ್ಕೂ ಹೆಚ್ಚು ಅಂತರ್ಜಾತಿ ವಿವಾಹಗಳನ್ನ ಮಾಡುತ್ತಾ ಸಮಾಜವನ್ನು ಸುಧಾರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇವರಿಗೆ ಡಾಕ್ಟರೇಟ್ ಪದವಿ ಕೂಡ ದೊರಕಿದೆ.

ಇನ್ನು ಈ ಒಂದು ಚಿತ್ರವನ್ನು ನಿರ್ದೇಶನ ಮಾಡಿರುವ ಉದಯ್ ಭಾಸ್ಕರ್ ಮಾತನಾಡುತ್ತಾ ಈ ಡಿಜಿಟಲ್ ಯುಗದಲ್ಲಿಯೂ ಸಹ ಜಾತಿಯ ಸಮಸ್ಯೆಯು ಪ್ರಮುಖ ಸಮಸ್ಯೆಯಾಗಿಯೇ ಉಳಿದಿದೆ. ಚಿತ್ರವು ನೈಜ ಘಟನೆಗಳನ್ನು ಆಧರಿಸಿದ್ದು, ಬಹುತೇಕ ಕೋಲಾರ ಜಿಲ್ಲೆಯಲ್ಲಿ ನಡೆದ ಘಟನೆಗಳಿಂದ ಪ್ರೇರಿತವಾಗಿದೆ. ಚಿತ್ರವು ಸಂವಿಧಾನವು ಭಾರತೀಯ ಪ್ರಜ್ಞೆಗೆ ನೀಡಿದ ಶಕ್ತಿ ಮತ್ತು ಶಕ್ತಿಯನ್ನು ಅನ್ವೇಷಿಸುತ್ತದೆ. ಮೇಲಿನ ಮತ್ತು ಕೆಳ ಸಮುದಾಯಗಳ ನಡುವಿನ ಸಂಘರ್ಷಗಳ ನಡುವೆ ಮರೆತುಹೋದ ಮಾನವೀಯತೆಯನ್ನು ಪ್ರತಿಬಿಂಬಿಸುವ ಅಥವಾ ನಿರೂಪಣೆಯ ಮೂಲಕ ಸಮಾನತೆಯನ್ನು ಪ್ರತಿಪಾದಿಸುವ ಮೂಲಕ ಚಿತ್ರವು ಸಮಾಜದ ಕೆಟ್ಟ ಆಚರಣೆಗಳಿಗೆ ಕನ್ನಡಿ ಹಿಡಿಯುವ ನಿರೀಕ್ಷೆಯಿದೆ ಎಂದರು.

ಎಂ.ಎನ್‌.ಎಂ ಮೂವೀಸ್
ಅಶ್ವಥ್ ಬಳಗೆರೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು , ಸಮಾಜಕ್ಕೆ ಒಂದು ಉತ್ತಮ ಚಿತ್ರವನ್ನು ಕೊಡುವ ದೃಷ್ಟಿಯಿಂದ ಕಥೆಯನ್ನು ಒಪ್ಪಿಕೊಂಡು ಹಣವನ್ನ ಹಾಕುತ್ತಿದ್ದೇನೆ. ಚಿತ್ರ ಉತ್ತಮವಾಗಿ ಮೂಡಿ ಬರುತ್ತದೆ ಆದಷ್ಟು ಬೇಗ ತೆರೆಯ ಮೇಲೆ ಬರುತ್ತೇವೆ ಎಂದರು. ಉಳಿದಂತೆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಕಲಾವಿದರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಈ ಚಿತ್ರಕ್ಕೆ ಕರುಣ್ ಕೆ.ಜಿ.ಎಫ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಯುವ ಪ್ರತಿಭೆಗಳಾದ ವಿಶಾಲ್, ರಿತಿಕಾ ಗೌಡ, ಕೆ.ಜಿ.ಎಫ್‌ನ ಪಠಾಣ್ ಖ್ಯಾತಿಯ ಪುನೀತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಖುದ್ದು ಸಂದೇಶ ನೀಡುವ ತಮ್ಮ ನೈಜ ಪಾತ್ರವನ್ನ ಮಾಡಿದ್ದಾರೆ. ಸದ್ಯ ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿರುವ ಟೀಸರ್ ಜೋರಾಗೇ ಸದ್ದು ಮಾಡ್ತಿದ್ದು , ಅತಿ ಶೀಘ್ರದಲ್ಲಿ ಚಿತ್ರ ಬೆಳ್ಳಿ ಪರದೆ ಮೇಲೆ ಬರಲಿದೆ.

error: Content is protected !!