Cini NewsMovie Review

ಶುಗರ್ ಫ್ಯಾಕ್ಟರಿ ಚಿತ್ರ ಹೇಗಿದೆ..? ಇಲ್ಲಿದೆ ಚಿತ್ರವಿಮರ್ಶೆ -ರೇಟಿಂಗ್ : 3.5/5

 

ರೇಟಿಂಗ್ : 3.5/5

ಚಿತ್ರ : ಶುಗರ್ ಫ್ಯಾಕ್ಟರಿ
ನಿರ್ದೇಶಕ : ದೀಪಕ್ ಅರಸ್
ನಿರ್ಮಾಪಕ : ಗಿರೀಶ್. ಆರ್
ಸಂಗೀತ : ಕಬೀರ್ ರಫಿ
ಛಾಯಾಗ್ರಾಹಕ : ಸಂತೋಷ್ ರೈ ಪತಾಜೆ
ತಾರಾಗಣ : ಡಾರ್ಲಿಂಗ್ ಕೃಷ್ಣ , ಸೋನಾಲ್ ಮೊಂಟೀರೋ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ , ರಂಗಾಯಣ ರಘು , ಗೋವಿಂದೇಗೌಡ ಹಾಗೂ ಮುಂತಾದವರು…

ಇವತ್ತಿನ ಯಂಗ್ ಜನರೇಶನ್ ಲೈಫ್ ಸ್ಟೈಲ್ ಬಹಳ ಯೂನಿಕ್ ಆಗಿದೆ. ಅದರಲ್ಲೂ ಕೆಲವು ಯುವಕ ಯುವತಿಯರು ಲೈಫ್ ನ ಎಂಜಾಯ್ ಮಾಡುತ್ತಾ ಪಬ್ , ಡಿಜೆ ಪಾರ್ಟೀಸ್, ಕಾಸ್ಮೋಟೆಕ್, ಗೋವಾ , ಕಾಕ್ಟೇಲ್ ಪಾರ್ಟಿ ಕಾಸಿನೋ , ಡ್ರೆಸ್ ಕೋಡ್, ಲವ್ , ಬ್ರೇಕ್ ಅಪ್, ಕನ್ಫ್ಯೂಷನ್ ಗಳ ನಡುವೆ ತಮ್ಮ ಬದುಕಿಗೆ ತಾವೇ ಹೊಸ ರೂಪ ಕಟ್ಟಿಕೊಳ್ಳಲು ಹೋಗುವ ಯುವ ಪೀಳಿಗೆಯ ಮನಸಿನ ತಳಮಳಗಳನ್ನು ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ತೆರೆ ಮೇಲೆ ತರುವ ಪ್ರಯತ್ನ ಮಾಡಿರುವಂತಹ ಚಿತ್ರ “ಶುಗರ್ ಫ್ಯಾಕ್ಟರಿ”.

ಸೋಶಿಯಲ್ ಮೀಡಿಯಾ ಸದ್ದು ಎಲ್ಲೆಡೆ ಆವರಿಸಿಕೊಂಡಿದೆ. ತನ್ನ ಮಾತು ಇಂಟರೆಸ್ಟಿಂಗ್ ಸ್ಟೋರಿಯ ಮೂಲಕವೇ ಗಮನ ಸೆಳೆಯುವ ಬೆಡಗಿ ಅಮೂಲು (ರುಹಾನಿ ಶೆಟ್ಟಿ) ತನ್ನ ಕ್ಯಾಮೆರಾ ಮ್ಯಾನ್ (ಸೂರಜ್) ಜೊತೆ ಯೂಟ್ಯೂಬ್ ಚಾನಲ್ ನಲ್ಲಿ ಇಂಟರೆಸ್ಟಿಂಗ್ ವ್ಯಕ್ತಿಗಳ ಇಂಟರ್ವ್ಯೂ ಮಾಡಿ ಹಾಕುವ ನಿಟ್ಟಿನಲ್ಲಿ ಗೋವಾದ ವಿಶೇಷ ಪಬ್ ಗೆ ಎಂಟ್ರಿ ಕೊಡ್ತಾರೆ. ಪಬ್ ಕಲ್ಚರ್ ನ ದುನಿಯಾ ಸೆಳೆಯುತ್ತಿದ್ದಂತೆ ಮಾಲೀಕ ಬೂಬ್ಸ್ ( ರಂಗಾಯಣ ರಘು) , ವೇಟರ್ (ಗೋವಿಂದೇಗೌಡ) ಮೂಲಕ ಇಂಟರೆಸ್ಟಿಂಗ್ ಸ್ಟೋರಿ ಹುಡುಕವಾಗ ಸಿಗುವ ನಾಯಕ ಆರ್ಯ (ಡಾರ್ಲಿಂಗ್ ಕೃಷ್ಣ). ಫ್ಲ್ಯಾಶ್ ಬ್ಯಾಕ್ ನಲ್ಲಿ ಜೀವನದಲ್ಲಿ ನಮ್ಮನ್ನ ನಾವು ಪ್ರೀತಿಸಬೇಕು.

ಪ್ರೀತಿ , ಪ್ರೇಮದ ಸುತ್ತ ಹೋದರೆ ಬದುಕು ಗೋಳು ಎಂಬ ಮನಸ್ಥಿತಿಯಲ್ಲಿ ಕುಡಿಯುತ್ತಾ ಲೈಫ್ ನ ಎಂಜಾಯ್ ಮಾಡುವ ಆರ್ಯ. ಅದಕ್ಕೆ ತಕ್ಕಂತೆ ನನ್ನದು ಅದೇ ಪಾಲಿಸಿ ಎನ್ನುವ ಅದಿತಿ ಬೋಪಣ್ಣ (ಸೋನಾಲ್ ಮಂಟೀರೋ) ಕೂಡ ತಂದೆ-ತಾಯಿಯಿಂದ ದೂರ ಉಳಿದು ಒಂಟಿಯಾಗಿ ಲೈಫ್ ನಲ್ಲಿ ಕುಡಿಯೋದೇ ಜೀವನ ಎನ್ನುತ್ತಾ ಎಂಜಾಯ್ ಮಾಡುತ್ತಾಳೆ. ಇವರ ಗೆಳೆಯರೆಲ್ಲಾ ಪ್ರೀತಿಯಲ್ಲಿ ಮುಳುಗಿದ್ದರು, ಇವರಿಬ್ಬರು ಮಾತ್ರ ತಮ್ಮ ನಿರ್ಧಾರ ಸರಿ ಎನ್ನುತ್ತಾ ಜಾಲಿ ಲೈಫ್ ಮಾಡುತ್ತಿರುತ್ತಾರೆ.

ಇದರ ನಡುವೆ ಒಂದಷ್ಟು ಸಂದರ್ಭಗಳು ಎದುರಾಗಿ ಗೆಳೆತನ, ಒಡನಾಟದ ಜೊತೆಗೆ ಪ್ರೀತಿಯ ಕಡೆಗೆ ತಿರುಗುವಂತೆ ಮಾಡುತ್ತದೆ. ಎಲ್ಲವೂ ಓಕೆ ಎನ್ನುವಷ್ಟರಲ್ಲಿ ನಮ್ಮದು ಫೇಕ್ ಲವ್ ಎನ್ನುತ್ತಾ ಬೇರೆ ಆಗುತ್ತಾರೆ. ತನ್ನೂರಿಗೆ ಬರುವ ಆರ್ಯ ಮೈಸೂರಿನಲ್ಲಿ ತನ್ನ ಕಂಪನಿಯ ವೆಡ್ಡಿಂಗ್ ಆರ್ಗನೈಸಿಂಗ್ ಕೆಲಸ ಮುಂದುವರಿಸುತ್ತಾನೆ. ಅಚಾನಕ್ಕಾಗಿ ಕಾರ್ ಆಕ್ಸಿಡೆಂಟ್ ಸಂದರ್ಭದಲ್ಲಿ ಸಿಗುವ ನಂದಿನಿ (ಅದ್ವಿತಿ ಶೆಟ್ಟಿ).

ಪರಿಚಯ ಗೆಳೆತನವಾಗಿ ಆರ್ಯನ ಸಂಸ್ಥೆಯಲ್ಲಿ ಕೆಲಸ ಮಾಡುವ ನಂದಿನಿ ಅವನನ್ನೇ ಮದುವೆಯಾಗಲು ಯೋಚಿಸುತ್ತಾಳೆ. ಇದೇ ಸಂದರ್ಭದಲ್ಲಿ ತನ್ನ ಬಾಲ್ಯದ ಗೆಳೆಯನ ಮದುವೆಯ ವೆಡ್ಡಿಂಗ್ ಸಂಪೂರ್ಣ ಜವಾಬ್ದಾರಿ ಆರ್ಯನಿಗೆ ಸಿಗುತ್ತದೆ. ಅಲ್ಲಿಂದ ಆರ್ಯನ ಬದುಕಿನಲ್ಲಿ ಮತ್ತೊಂದು ತಿರುವು ಎದುರಾಗಿ ರೋಚಕ ಕ್ಲೈಮಾಕ್ಸ್ ಕೆ ಬಂದು ನಿಲ್ಲುತ್ತದೆ.
ಶುಗರ್ ಫ್ಯಾಕ್ಟರಿ…?
ಆರ್ಯ ಎದುರಿಸುವ ಸಮಸ್ಯೆ ಏನು…
ಮೂವರು ಹುಡುಗಿಯರು ಯಾಕೆ…
ಆರ್ಯ ಮದುವೆ ಆಗೋದು ಯಾರನ್ನ…
ಕ್ಲೈಮಾಕ್ಸ್ ಹೇಳೋದು ಏನು… ಈ ಎಲ್ಲಾ ವಿಚಾರ ತಿಳಿಯಬೇಕಾದರೆ ಈ ಯೂಥ್ ಫುಲ್ ಶುಗರ್ ಫ್ಯಾಕ್ಟರಿ ಯನ್ನು ನೋಡಬೇಕು.

ಈ ಚಿತ್ರವನ್ನ ನಿರ್ದೇಶನ ಮಾಡಿರುವ ದೀಪಕ್ ಅರಸ್
ಇವತ್ತಿನ ಅಪ್ಪರ್ ಮಿಡ್ಲ್ ಕ್ಲಾಸ್ ಯುವಪೀಳಿಗೆಯ ಪಬ್ ಕಲ್ಚರ್ , ಡ್ರೆಸ್ ಕೋಡ್, ಲವ್ , ಫ್ರೆಂಡ್ ಶಿಪ್ , ಬ್ರೇಕ್ ಅಪ್ ಗೆ ಕನೆಕ್ಟ್ ಆಗುವಂತ ಯೂತ್ ಸಬ್ಜೆಕ್ಟ್ ಅನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನವನ್ನು ಮಾಡಿದ್ದಾರೆ. ಚಿತ್ರಕಥೆಯಲ್ಲಿ ಇನ್ನಷ್ಟು ಹಿಡಿತ ಗೊಳಿಸಬಹುದಿತ್ತು, ಏನೇ ಇದ್ದರೂ ಪ್ರೀತಿಗೆ ಇರುವ ಶಕ್ತಿ ಎಂತದ್ದು ಎಂಬುದನ್ನು ಕೂಡ ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ.

ಆದರೆ ಬಹುತೇಕ ಎಣ್ಣೆ ಕಿಕ್ , ಬಾಟ್ಲು ಸೌಂಡ್ , ನೆಶೆಯಲ್ಲೇ ಗಿರಿಕಿ ಹೊಡೆದಂತಿದೆ. ಯಂಗ್ ಜನರೇಶನ್ ರನ್ನ ಸೆಳೆಯುವ ಅಂಶ ಒಳಗೊಂಡಿದೆ. ಇಂತಹ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರ ಧೈರ್ಯ ಮೆಚ್ಚಲೇಬೇಕು. ಪಬ್ ಕಲ್ಚರನ್ನು ಹಾಗೂ ಗೋವಾ ಸುಂದರ ತಾಣಗಳನ್ನು ಕಲರ್ಫುಲ್ ಆಗಿ ತೋರಿಸಿದ್ದಾರೆ ಛಾಯಾಗ್ರಹಕ ಸಂತೋಷ್ ರೈ ಪತಾಜೆ. ಹಾಗೆಯೇ ಸಂಗೀತ ನಿರ್ದೇಶಕ ಕಬೀರ್ ರಫಿಯ ಮೋಡಿ ಗಮನ ಸೆಳೆಯುತ್ತದೆ.

ಇನ್ನು ನಾಯಕನಾಗಿ ಡಾರ್ಲಿಂಗ್ ಕೃಷ್ಣ ತಮ್ಮ ಪಾತ್ರವನ್ನು ಬಹಳ ಲೀಲಾಜಾಲವಾಗಿ ಅಭಿನಯಿಸಿ ಎಲ್ಲರೂ ಗಮನ ಸೆಳೆಯುವಂತೆ ಮಾಡಿದ್ದಾರೆ. ನಾಯಕಿಯರಾಗಿ ಸೋನಾಲ್ ಎಂದಿನಂತೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಅದೇ ರೀತಿ ಅದ್ವಿತಿ ಶೆಟ್ಟಿ , ರುಹಾನಿ ಶೆಟ್ಟಿ ಕೂಡ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರಂಗಾಯಣ ರಘು ಮಾತಿನ ಭರಾಟೆಯಲ್ಲಿ ಮಿಂಚಿದ್ದು, ಉಳಿದಂತೆ ಅಭಿನಯಿಸಿರುವ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟ್ಟಾರೆ ಮನೋರಂಜನೇಯ ದೃಷ್ಟಿಯಿಂದ ಎಲ್ಲರೂ ನೋಡುವಂತಹ ಚಿತ್ರವಾಗಿ ಹೊರಬಂದಿದೆ.

error: Content is protected !!