Cini NewsMovie Review

ಕಂಟ್ರಿ ಪಿಸ್ತೂಲ್ ಹಾವಳಿ ಸುತ್ತ ‘ಬ್ಯಾಡ್ ಮ್ಯಾನರ್ಸ್’ (ಚಿತ್ರವಿಮರ್ಶೆ -ರೇಟಿಂಗ್ : 4/5)

ರೇಟಿಂಗ್ : 4/5

ಚಿತ್ರ : ಬ್ಯಾಡ್ ಮ್ಯಾನರ್ಸ್
ನಿರ್ದೇಶಕ : ದುನಿಯಾ ಸೂರಿ
ನಿರ್ಮಾಪಕ :ಸುಧೀರ್. ಕೆ. ಎಂ
ಸಂಗೀತ : ಚರಣ್ ರಾಜ್
ಛಾಯಾಗ್ರಹಕ : ಶೇಖರ್.ಎಸ್
ತಾರಾಗಣ : ಅಭಿಷೇಕ್ ಅಂಬರೀಶ್, ರಚಿತಾ ರಾಮ್, ತಾರಾ, ಶರತ್ ಲೋಹಿತಾಶ್ವ , ಶೋಭ ರಾಜ್, ದತ್ತಣ್ಣ , ತ್ರಿವಿಕ್ರಮ್, ರೋಚಿತ್ ಶೆಟ್ಟಿ , ಕುರಿ ಪ್ರತಾಪ್ ಹಾಗೂ ಮುಂತಾದವರು…

ಇಡೀ ಸಮಾಜಕ್ಕೆ ಮಾರಕವಾಗಿರುವಂತಹ ಅದೆಷ್ಟೋ ದುಷ್ಟ ಕೆಲಸಗಳು ಕಣ್ಣಿಗೆ ಕಾಣದಂತೆ ನಡೆಯುತ್ತಿರುತ್ತದೆ. ಅದರಲ್ಲೂ ಇವತ್ತಿನ ಯುವ ಪೀಳಿಗೆಗಳು ಕುಡಿತ , ಡ್ರಗ್ಸ್ ಜೊತೆಗೆ ತಮ್ಮ ಹವಾ ಮೇಂಟೈನ್ ಮಾಡಲು ಕಂಟ್ರಿ ಪಿಸ್ತೂಲು ಸದ್ದನ್ನು ಕೂಡ ಮಾಡುವಂತಾಗಿದ್ದಾರೆ. ಈ ಪಿಸ್ತೂಲಿನ ಮೂಲ , ಇದರ ಹಿಂದೆ ಇರುವ ಕೈಗಳು, ಅವರ ಆರ್ಭಟ , ಕ್ರೂರಿತನ , ಈ ಸುಳಿಗೆ ಸಿಕ್ಕಿ ನೆಲಗಿದವರ ಪಾಡು , ಕಳ್ಳ ಪೊಲೀಸರ ಆಟ , ಇದಲ್ಲದರ ಹೊರತಾಗಿ ಮಮಕಾರ , ಪ್ರೀತಿ , ಪ್ರತ್ಯುತ್ತರ ಜೊತೆಗೆ ಸಂಪೂರ್ಣ ಮಿಕ್ಸ್ ಮಸಾಲಾ ಚಿತ್ರವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಬ್ಯಾಡ್ ಮ್ಯಾನರ್ಸ್”.

ಇನ್ಸ್ಪೆಕ್ಟರ್ ರುದ್ರ (ಅಭಿಷೇಕ್ ಅಂಬರೀಶ್) ತನ್ನ ಡಿಪಾರ್ಟ್ಮೆಂಟ್ ರಿವಾಲ್ವರ್ ಅನ್ನು ಕಳೆದುಕೊಂಡು ಮತ್ತೊಂದು ಪಡೆಯಲು ಕಂಟ್ರಿ ಪಿಸ್ತೂಲ್ ತಯಾರಿಸುವವ ರನ್ನು ಹುಡುಕಿಕೊಂಡು ಗೋವರ್ಧನಗಡ ಎಂಬ ಊರಿಗೆ ಬರುತ್ತಾನೆ. ಆ ಊರಲ್ಲಿ ಆಡೋ ಹುಡುಗರ ಕೈಗೆಲ್ಲ ಕಂಟ್ರಿ ಪಿಸ್ತೂಲ್ ಸಿಕ್ಕಿ ಕಾನೂನು ಸುವ್ಯಸ್ಥೆಯೇ ಹಾಳಾಗಿರುತ್ತದೆ. ಇದಕ್ಕೆ ಕಾರಣ ಹಣದಾಸೆಗೆ ಬಿದ್ದ ಮಗಾಯ್ ಹಾಗೂ ಫೀನಿಕ್ಸ್ ಎಂಬ ದುರುಳರು ಕಟ್ಟಿದ್ದ ಕಂಟ್ರೀ ಪಿಸ್ತೂಲ್ ಸಾಮ್ರಾಜ್ಯ.

ನಕಲಿ ಪಿಸ್ತೂಲುಗಳನ್ನು ತಯಾರಿಸಿ ಮಾರಾಟ ಮಾಡುವುದೇ ಇವರ ದಂದೆ. ಚಿನ್ನಗಳ ಕಳ್ಳತನ , ಶ್ರೀಮಂತರ ಕುಟುಂಬದವರ ಮಕ್ಕಳ ಅಪಹರಣ. ಹೀಗೆ ಇದರ ನಡುವೆ ಎರಡು ಗುಂಪುಗಳ ದುಶ್ಮನಿ ಬದುಕು, ಇದಕ್ಕೆ ಸಹಕಾರಿಯಾಗಿ ಒಂದಷ್ಟು ವ್ಯಕ್ತಿಗಳ ಸಪೋರ್ಟ್ ಜೊತೆಗೆ ಕಾಲೇಜು ಹುಡುಗರ ಕೈಗೆ ಸಿಗುವ ಕಂಟ್ರೀ ಪಿಸ್ತೂಲ್. ಅದರಿಂದ ಆಗುವ ಅನಾಹುತ ಜೊತೆಗೆ ನಾಯಕ ರುದ್ರನ ಕೋಪಕ್ಕೆ ಒಂದು ಕಾರಣವೂ ಇರುತ್ತದೆ. ಅದೇ ನಂಬುವುದೇ ಈ ಚಿತ್ರದ ಕ್ಲೈಮಾಕ್ಸ್ ತಿರುಳು…

ಬ್ಯಾಡ್ ಮ್ಯಾನರ್ಸ್ ಯಾವುದು…
ಪಿಸ್ತೂಲ್ ಮಾಡೋರ್ ಹಿಂದೆ ಏಕೆ ಬೀಳುತ್ತಾನೆ…
ಬದುಕು , ಪ್ರೀತಿ ಏನಾಗುತ್ತೆ…
ಎಚ್ಚರಿಕೆ ಯಾರಿಗೆ…
ಒಂದಷ್ಟು ಸೂಕ್ಷ್ಮ ವಿಚಾರವನ್ನು ತಿಳಿಯಬೇಕಾದರೆ ನೀವೆಲ್ಲರೂ ಒಮ್ಮೆ ಈ ಚಿತ್ರವನ್ನು ನೋಡಬೇಕು.

ನಿರ್ದೇಶಕ ಸೂರಿ ಎಂದಿನಂತೆ ಬಹಳ ಸೂಕ್ಷ್ಮವಾದ ವಿಚಾರವನ್ನು ಸಾಧ್ಯವಾದಷ್ಟು ಎಫರ್ಟ್ ಹಾಕಿ ಎಲ್ಲರ ಕಣ್ಮುಂದೆ ತರುವ ಪ್ರಯತ್ನ ಮಾಡಿದ್ದಾರೆ. ಸಿನಿಮಾ ನೋಡ್ರಿದ್ದಂತೇ ಇದೊಂದು ಪಕ್ಕ ಸುಕ್ಕ ಕಂಟೆಂಟ್ ಅನ್ನೋದು ಗ್ಯಾರಂಟಿ. ಯುವ ನಟ ಅಭಿಷೇಕ್ ಅಂಬರೀಶ್ ನಟನಾ ಸಾಮರ್ಥ್ಯವನ್ನು ಹೊರತೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ಆಗಾಗ ಬರುವ ಚಕ್ರವ್ಯೂಹ ಚಿತ್ರದ ಹಾಡು ಅಂಬರೀಶ್ ರನ್ನ ನೆನಪಿಸುತ್ತದೆ. ಇನ್ನು ಉಳಿದಂತ ಚಿತ್ರದ ಪಾತ್ರಧಾರಿಗಳಾದ ಫೀನಿಕ್ಸ್ , ಮಗಾಯ್, ಡೈಮಂಡ್ ಭಂಡಾರಿ, ಕಟ್ಟೆ ಕೇಶವ, ಗುನ್ನಿಸ್ ರವಿ, ಶೋಲೆಬಾಬು ಹೆಸರು ಕೇಳುವುದೇ ಚಿತ್ರ ವಿಚಿತ್ರವಾಗಿರುತ್ತೆ. ಕಂಟ್ರಿ ಪಿಸ್ತೂಲ್ ಸುತ್ತ ನಡೆಯುವ ಕಥೆಗೆ ಸೂರಿ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿಯೇ ಚಿತ್ರದಲ್ಲಿ ತಂದಿದ್ದಾರೆ. ಇನ್ನು ತಾಯಿಯ ಮಮಕಾರ , ಗೆಳತಿಯ ಪ್ರೀತಿ ಗಮನ ಸೆಳೆಯುವಂತಿದೆ.

ಖಡಕ್ ಡೈಲಾಗ್ , ಬುಲೆಟ್ ಸದ್ದು ಚಿತ್ರವನ್ನು ಆವರಿಸಿಕೊಂಡಿದೆ. ಚಿತ್ರ ಇನ್ನಷ್ಟು ವೇಗ ಮಾಡಬಹುದಿತ್ತು. ಇಂತಹ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿರುವ ನಿರ್ಮಾಪಕ ಸುಧೀರ್ ಕೆ.ಎಂ. ಪಕ್ಕ ಅಂಬರೀಶ್ ಅಭಿಮಾನಿಯಾಗಿದ್ದು, ಇಂತಹ ಚಿತ್ರ ಮಾಡಿರುವ ಧೈರ್ಯ ಮೆಚ್ಚುವಂಥದ್ದು.ಈ ಚಿತ್ರದಲ್ಲಿ ಚರಣ್‌ರಾಜ್ ಮ್ಯೂಸಿಕ್ ಹೈಲೈಟ್, ಹಾಡುಗಳಿಗಿಂತ ಹಿನ್ನೆಲೆ ಸಂಗೀತ ತುಂಬಾ ಚೆನ್ನಾಗಿದೆ. ಹಾಗೆಯೇ ಶೇಖರ್‌. ಎಸ್ ಅವರ ಕ್ಯಾಮೆರಾ ಕೈಚಳಕ ಮ್ಯಾಜಿಕ್‌ನ್ನೇ ಮಾಡಿದೆ. ಇಡೀ ತಾಂತ್ರಿಕ ವರ್ಗವೇ ಬಹಳ ಶ್ರಮ ಪಟ್ಟಿರುವುದು ಎದ್ದು ಕಾಣುತ್ತದೆ.

ಇಡೀ ಚಿತ್ರದ ಕೇಂದ್ರ ಬಿಂದು ಅಭಿಷೇಕ್ ಅಂಬರೀಶ್ ಲುಕ್ ಹಾಗೂ ಪೋಲಿಸ್ ಅಧಿಕಾರಿಯ ಪಾತ್ರ ತುಂಬಾ ಚೆನ್ನಾಗಿ ಒಪ್ಪುತ್ತದೆ. ಅದಕ್ಕೆ ತಕ್ಕಂತೆ ಅವರ ಮೈಕಟ್ಟೂ ಇದ್ದು , ಆಕ್ಷನ್ ಸೀನ್‌ಗಳಲ್ಲಿ ರೌಡಿಗಳನ್ನು ಚಿಂದಿ ಉಡಾಯಿಸಿದ್ದಾರೆ. ಕೆಲವೊಂದು ಸೀನ್‌ಗಳಲ್ಲಿ ಡೈಲಾಗ್ ಕೇಳ್ತಿದ್ದಂತೆ ರೆಬೆಲ್‌ಸ್ಟಾರ್ ಅಂಬರೀಷ್ ಅವರನ್ನೇ ತೆರೆಮೇಲೆ ನೋಡಿದಂತಾಗುತ್ತದೆ. ಖಡಕ್ ಪೊಲೀಸ್ ಅಧಿಕಾರಿಯಾಗಿ , ತಾಯಿಯ ಮುದ್ದಿನ ಮಗನಾಗಿ , ಗೆಳತಿಯ ಪ್ರೇಮಿಯಾಗಿ ಗಮನ ಸೆಳೆಯುತ್ತಾರೆ.

ಹಾಗೆಯೇ ನಾಯಕಿಯಾಗಿ ಕಾಣಿಸಿಕೊಳ್ಳುವ ರಚಿತಾ ರಾಮ್ ಪಾತ್ರ ಬಂದಷ್ಟೇ ವೇಗವಾಗಿ ಮಾಯಾವಾಗುತ್ತದೆ. ಇನ್ನು ನಾಯಕನ ತಾಯಿ ಹಾಗೂ ಟೀಚರ್ ಪಾತ್ರದಲ್ಲಿ ಹಿರಿಯನಟಿ ತಾರಾ, ಹಿರಿಯ ಪೊಲೀಸ್ ಅಕಾರಿಯ ಪಾತ್ರದಲ್ಲಿ ಶರತ್ ಲೋಹಿತಾಶ್ವ, ಆಂಧ್ರ ಪೊಲೀಸ್ ಅಧಿಕಾರಿಯಾಗಿ ಶೋಭ ರಾಜ್ ಇಷ್ಟವಾಗುತ್ತಾರೆ. ಹಾಗೆಯೇ ಮಗಾಯ್ ಪಾತ್ರ ಮಾಡಿರುವ ರೋಚಿತ್, ಫೀನಿಕ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ತ್ರಿವಿಕ್ರಮ್ ಬರವಸೆ ಮೂಡಿಸುತ್ತಾರೆ.

ಉಳಿದಂತೆ ಪ್ರಶಾಂತ್ ಸಿದ್ಧಿ, ಪೂರ್ಣಚಂದ್ರ , ನಿರಂಜನ್, ಸಚ್ಚಿದಾನಂದ ಸೇರಿದಂತೆ ಹಲವು ಯುವ ಪ್ರತಿಭೆಗಳು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಟ್ಟಾರೆ ಆಕ್ಷನ್ ಪ್ರಿಯರಿಗೆ ಈ ಚಿತ್ರ ಬಹಳ ಇಷ್ಟವಾಗಲಿದ್ದು, ಎಲ್ಲರೂ ಒಮ್ಮೆ ನೋಡುವಂತಿದೆ

error: Content is protected !!