Cini NewsSandalwood

ಶಿವಣ್ಣ ಹಾಗೂ ಆರ್. ಚಂದ್ರು ಕಾಂಬಿನೇಷನ್ ನಲ್ಲಿ ಹೊಸ ಚಿತ್ರ

ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ , ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಸ್ಟಾರ್ ಡೈರೆಕ್ಟರ್ ಆರ್. ಚಂದ್ರು ಕಾಂಬಿನೇಷನ್ ನಲ್ಲಿ ಚಿತ್ರ ಶುರುವಾಗಲಿದೆ. ಆರ್. ಸಿ. ಸ್ಟುಡಿಯೋಸ್ ನಿರ್ಮಾಣದ ಆರನೇ ಚಿತ್ರಕ್ಕೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕ .ಕನ್ನಡದಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಹಾಗೂ ನಿರ್ಮಿಸಿರುವ ಆರ್. ಚಂದ್ರು, ಇತ್ತೀಚಿಗೆ ಆರ್ ಸಿ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿ,

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಏಕಕಾಲಕ್ಕೆ ಐದು ಚಿತ್ರಗಳಿಗೆ ಚಾಲನೆ ನೀಡಿದ್ದರು. ಈಗ ಆರ್ .ಸಿ. ಸ್ಟುಡಿಯೋಸ್ ಸಂಸ್ಥೆ ಮೂಲಕ ಆರನೇ ಚಿತ್ರದ ಘೋಷಣೆಯಾಗಿದೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಆರನೇ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ.

ಈಗಾಗಲೇ ನಿರ್ದೇಶಕ ಆರ್. ಚಂದ್ರು ಸುಮಾರು ಹದಿಮೂರು ಚಿತ್ರಗಳನ್ನು ನಿರ್ದೇಶನ ಮಾಡಿದ್ದು, ಬಹುತೇಕ ಯಶಸ್ವಿ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆದಿದ್ದರು. ಈ ಹಿಂದೆ 2010ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಮೈಲಾರಿ ಎಂಬ ಚಿತ್ರ ಚಿತ್ರವನ್ನ ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದರು.

ಹಾಗೆ ಇತ್ತೀಚಿಗೆ ಬಿಡುಗಡೆಗೊಂಡ ಕಬ್ಜ ಚಿತ್ರದಲ್ಲೂ ಶಿವಣ್ಣನ ಖದರ್ ಎಂಟ್ರಿ ಅಭಿಮಾನಿಗಳ ಮನಸ್ಸಿನ ಗೆದ್ದಿದ್ದು , ಈಗ ತಮ್ಮದೇ ಬ್ಯಾನರ್ ನ ನಿರ್ಮಾಣದಲ್ಲಿ ನಿರ್ದೇಶಕ ಆರ್. ಚಂದ್ರು ಶಿವಣ್ಣನ ಜೊತೆ ಮತ್ತೊಮ್ಮೆ ಕಾಂಬಿನೇಷನ್ ಗೆ ಮುಂದಾಗಿದ್ದಾರೆ. ಈ ನೂತನ ಚಿತ್ರದ ಮಾಹಿತಿಯನ್ನು ಅವರು ಟ್ವಿಟ್ ಮಾಡುವ ಮೂಲಕ ಹಂಚಿಕೊಂಡಿತು. ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಲಿದ್ದಾರಂತೆ

error: Content is protected !!