Cini NewsSandalwood

ಕುತೂಹಲ ಮೂಡಿಸುವ “ಸತ್ಯಂ” ಚಿತ್ರದ ಟೀಸರ್ ಬಿಡುಗಡೆ

ಚಂದನವನಕ್ಕೆ ಮತ್ತೊಂದು ವಿಭಿನ್ನ ಪ್ರಯತ್ನದ ಚಿತ್ರ “ಸತ್ಯಂ” ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ಇತ್ತೀಚಿಗೆ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಆಯೋಸಿದ್ದು, ಆಧ್ಯಾತ್ಮಕ ಚಿಂತಕರು ಜಂಬುನಾಥ್ ಸ್ವಾಮಿ ಟೀಸರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭವನ್ನು ಹಾರೈಸಿದರು.ಈ “ಸತ್ಯಂ” ಚಿತ್ರದ ಕುರಿತು ಮಾತನಾಡಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದರು. ಈ ಚಿತ್ರದ ನಿರ್ಮಾಪಕರಾದ ಮಾಂತೇಶ್. ವಿ.ಕೆ. ಮಾತನಾಡುತ್ತಾ ನಮ್ಮ ಶ್ರೀ ಮಾತಾ ಕ್ರಿಯೇಶನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರ ಸತ್ಯಂ.

ಈ ಹಿಂದೆ ನಾನು ಮಹಾಮಹಿಮ ಲಡ್ಡು ಮುತ್ಯ ಎಂಬ ಚಿತ್ರ ನಿರ್ಮಿಸಿದ್ದೆ. ಈ ಸತ್ಯಂ ಚಿತ್ರವನ್ನು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮಾಡುತ್ತಿದ್ದೇನೆ. ನಾನೊಬ್ಬ ಸಿವಿಲ್ ಕಾಂಟ್ರಾಕ್ಟರ್ ಆಗಿದ್ದರೂ ಸಿನಿಮಾ ಮೇಲೆ ಅಪಾರ ಆಸಕ್ತಿ , ಪ್ರೀತಿ ಇದೆ. ದುಡ್ಡಿದ್ದ ಮಾತ್ರಕ್ಕೆ ಸಿನಿಮಾ ಮಾಡುವುದು ಮುಖ್ಯವಲ್ಲ ನಮಗೂ ಒಂದು ಜವಾಬ್ದಾರಿ ಇರಬೇಕು , ಹಾಗಾಗಿ ನಮ್ಮ ಬ್ಯಾನರ್ ನಲ್ಲಿ ಸದಭಿರುಚಿಯ ಚಿತ್ರವನ್ನು ನೀಡುವುದು ನಮ್ಮ ಉದ್ದೇಶ.

ನಿರ್ದೇಶಕ ಅಶೋಕ್ ಕಡಬ ಈ ಕಥೆಯನ್ನು ತಂದಾಗ ವಿಶೇಷ ಅನಿಸಿತು. ಏಕೆಂದರೆ ಇದು ಎರಡು ಕಾಲಘಟ್ಟಗಳಲ್ಲಿ ನಡೆಯುತ್ತದೆ. ಜಮೀನ್ದಾರ್ ಕುಟುಂಬದ ಎಳೆಯೊಂದಿಗೆ ಪ್ರಸ್ತುತ ಬದುಕಿನ ಕಥೆಯು ಬೆಸೆದುಕೊಂಡಿದೆ. ಇದರಲ್ಲಿ ತಾತ ಮೊಮ್ಮಗನ ಕಥೆ ಬಹಳ ವಿಶೇಷವಾಗಿದೆ. ತಾತನಾಗಿ ಹಿರಿಯ ನಟ ಸುಮನ್ ಹಾಗೂ ಮೊಮ್ಮಗನಾಗಿ ನಟ ಸಂತೋಷ ಅಭಿನಯಿಸಿದ್ದಾರೆ.

ಹಾಗೂ ನಟಿ ರಂಜಿನಿ ರಾಘವನ್ ಕೂಡ ಉತ್ತಮ ಸಹಕಾರಿಯಾಗಿ ಕೆಲಸ ಮಾಡಿದ್ದಾರೆ. ಇದೊಂದು ಫ್ಯಾಮಿಲಿ ಕಂಟೆಂಟ್ , ಥ್ರಿಲ್ಲರ್ ಅಂಶವು ಒಳಗೊಂಡಿದೆ. ನಾನು ವಿಶೇಷವಾಗಿ ನಮ್ಮ ಆನೇಕಲ್ ಬಾಲರಾಜ್ ಅಣ್ಣನವರನ್ನು ನೆನಪಿಸಿಕೊಳ್ಳಬೇಕು, ಯಾಕೆಂದ್ರೆ ಈ ಕಥೆ ವಿಚಾರವಾಗಿ ಮಾತನಾಡುವಾಗ ಅವರು ಇದೊಂದು ಒಳ್ಳೆಯ ಕಥೆ. ನನ್ನ ಬೆಂಬಲ ಸದಾ ಇದೆ ಎಂದಿದ್ದರು , ಆದರೆ ಅವರು ನಮ್ಮೊಂದಿಗಿಲ್ಲ ಅವರ ಆಶೀರ್ವಾದ ಇದೆ ಇರುತ್ತೆ.

ಅವರ ಮಗ ಸಂತೋಷ ನಾಯಕ ನಟನಾಗಿ ನಮಗೆ ತುಂಬ ಸಹಕಾರ ನೀಡಿದ್ದಾರೆ. ಇಂದು ಟೀಸರ್ ಬಿಡುಗಡೆ ಮಾಡಿದ್ದೇವೆ. ಈ ಚಿತ್ರದ ವಿತರಣೆ ಹಕ್ಕನ್ನು ನಿರ್ಮಾಪಕ ಕೆ.ಎ. ಸುರೇಶ್ ವಹಿಸಿಕೊಂಡಿದ್ದಾರೆ. ಇನ್ನು ಟ್ರೈಲರ್ , ಹಾಡುಗಳು ಬಿಡುಗಡೆ ಮಾಡಬೇಕಿದೆ. ಡಿಸೆಂಬರ್ ನಲ್ಲಿ ರಿಲೀಸ್ ಪ್ಲಾನ್ ಇದೆ. ನಿಮ್ಮೆಲ್ಲರ ಸಹಕಾರ ಪ್ರೀತಿ ಇರಲಿ ಎಂದು ಕೇಳಿಕೊಂಡರು.

ಇನ್ನೂ ಈ ಚಿತ್ರದ ನಿರ್ದೇಶಕ ಅಶೋಕ್ ಕಡಬ ಮಾತನಾಡುತ್ತಾ ಇದೊಂದು ಫ್ಯಾಮಿಲಿ ಎಂಟೈನಮೆಂಟ್ ಚಿತ್ರವಾಗಿದೆ. ಇದರಲ್ಲಿ ಪಂಜುರ್ಲಿ ದೈವ ಆರಾಧಿಸುವ ರಾಜಮನೆತನದ ಕುಟುಂಬದಲ್ಲಿ ಒಂದು ಕಳಂಕ ನಡೆದಿರುತ್ತದೆ ಅದರಿಂದ ಸಾವು ನೋವುಗಳು ಆಗಿದ್ದು, ಅದರಲ್ಲಿ ಒಂದು ವಂಶದ ಕುಡಿ ಸುಮಾರು 40 ವರ್ಷದ ನಂತರ ಭೂತ ಕೋಲದ ಪೂಜೆಗೆಂದು ಆ ಊರಿಗೆ ಬರುವ ಕಥಾನಕ ಒಳಗೊಂಡಿದೆ.

ನಾವು ಈ ಕಥೆಯನ್ನು 2019ರಲ್ಲಿ ಮಾಡಿದ್ವಿ, ಕಾಂತಾರ ಚಿತ್ರ ಬರುವ ಮುಂಚೆಯೇ ಈ ಸಬ್ಜೆಕ್ಟ್ ರೆಡಿ ಇತ್ತು. ಈ ಚಿತ್ರದ ಟೀಸರ್ ನಲ್ಲಿ ಕಾಣುವ ಹುಲಿ ಉಗುರು ವಿಚಾರವಾಗಿ ಇದು ಒರಿಜಿನಲ್ ಅಲ್ಲ ಕಾಸ್ಟ್ಯೂಮರ್ ಕೊಟ್ಟಿರುವ ಡುಪ್ಲಿಕೇಟ್ ಉಗುರು ಎಂದರು. ಇದರಲ್ಲಿ ಹಾರರ್, ಸಸ್ಪೆನ್ಸ್ , ಲವ್ ಎಲ್ಲಾ ಅಂಶವು ಒಳಗೊಂಡಿದೆ. ಇದು ಕನ್ನಡ ಹಾಗೂ ತೆಲುಗು ಭಾಷೆ ಎರಡಕ್ಕೂ ಒಪ್ಪುವಂತೆ ಮೂಡಿ ಬಂದಿದೆ.

ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಕೂಡ ಅದ್ಭುತವಾಗಿ ಮಾಡಿದ್ದಾರೆ. ಅದೇ ರೀತಿ ಛಾಯಾಗ್ರಾಹಕ ಸಿನಿ ಟೆಕ್ ಸೂರಿ ಕೂಡ ಅದ್ಭುತವಾಗಿ ಚಿತ್ರವನ್ನು ಸರಿ ಹಿಡಿದಿದ್ದಾರೆ. ಹಾಗೂ ಕೆ. ವಿ. ರಾಜು ರವರ ಸ್ಕ್ರೀನ್ ಪ್ಲೇ , ಸಂಭಾಷಣೆ ಒಂದಷ್ಟು ಬರ್ದಿದ್ದು , ಮುಂದುವರಿದ ಒಂದಷ್ಟು ಸಂಭಾಷಣೆಗೆ ಕಿನ್ನಲ್ ರಾಜ್ ಸಾತ್ ನೀಡಿದ್ದು , ಈ ಚಿತ್ರಕ್ಕಾಗಿ ಒಂದು ಹಾಡನ್ನು ಕೂಡ ಬರೆದಿದ್ದಾರೆ.

ಈ ಚಿತ್ರದ ಆಡಿಯೋ ಹಕ್ಕನ್ನ A2 ಮ್ಯೂಸಿಕ್ ಒಂದು ಉತ್ತಮ ಮೊತ್ತವನ್ನು ಕೊಟ್ಟು ಪಡೆದುಕೊಂಡಿದೆ. ಮೂರು ಶೇಡ್ ಗಳು ಇರುವ ಈ ಚಿತ್ರಕ್ಕೆ ದೊಡ್ಡ ಮಟ್ಟದ ಸೆಟ್ಗಳನ್ನು ಕೂಡ ಹಾಕಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಇನ್ನು ನಾಯಕ ನಟ ಸಂತೋಷ್ ಬಾಲರಾಜ್ ಮಾತನಾಡುತ್ತ ನಾನು ಇದಕ್ಕೂ ಮುಂಚೆ ಮಾಡಿದ ಕೆಂಪ, ಕರಿಯ-2, ಗಣಪ ಸಿನಿಮಾಗಳೇ ಒಂತರಾದರೆ ಇದು ಆ ಮೂರಕ್ಕಿಂತ ಡಿಫ್ರೆಂಟ್ ಆಗಿ ಮೂಡಿ ಬಂದಿದೆ. ನನ್ನ ಪಾತ್ರದ ಹೆಸರು ಸತ್ಯ, ನಿರ್ದೇಶಕ , ನಿರ್ಮಾಪಕರು ತುಂಬಾ ಸಹಕಾರ ನೀಡಿದರು. ನನ್ನ ತಂದೆ ಬದುಕಿದ್ದರೆ ತುಂಬಾ ನೋಡಿ ತುಂಬಾ ಇಷ್ಟಪಡುತ್ತಿದ್ದರು.

ಯಾಕೆಂದರೆ ಆರಂಭದಲ್ಲಿ ಈ ಕಥೆಯನ್ನು ಒಪ್ಪಿ ನನ್ನ ತಂದೆ ಇದು ಒಂದು ಉತ್ತಮ ಚಿತ್ರವಾಗಿ ಬರುತ್ತೆ ಅಂತ ಹೇಳಿದ್ರು, ನನಗೆ ದರ್ಶನ್ ಸರ್ ಸಪೋರ್ಟ್ ಕೂಡ ತುಂಬಾ ಇದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಇದೆ. ಬಹಳ ಗ್ಯಾಪ್ ಆಗಿತ್ತು ಇನ್ನು ಮುಂದೆ ಪ್ಲಾನ್ ಮಾಡಿಕೊಂಡು ನಮ್ಮ ಬ್ಯಾನರ್ ನಲ್ಲಿ ಇನ್ನಷ್ಟು ವಿಭಿನ್ನ ಚಿತ್ರಗಳ ಮೂಲಕ ನಿಮ್ಮ ಮುಂದೆ ಬರುತ್ತೇನೆ ನಿಮ್ಮೆಲ್ಲರ ಪ್ರೋತ್ಸಾಹ ಇರಲಿ ಎಂದು ಕೇಳಿಕೊಂಡರು.

ಇನ್ನು ಈ ಚಿತ್ರದ ನಾಯಕಿ ರಂಜಿನಿ ರಾಘವನ್ ಮಾತನಾಡುತ್ತ ಸತ್ಯಂ ಟೀಸರ್ ಗಾಗಿ ನಾನು ತುಂಬಾ ವೇಟ್ ಮಾಡ್ತಿದ್ದೆ ಚೆನ್ನಾಗಿ ಬಂದಿದೆ. ಅಚಾನಕ್ಕಾಗಿ ಈ ಚಿತ್ರತಂಡಕ್ಕೆ ನಾನು ಸೇರ್ಪಡೆಯಾದೆ. ಡೈರೆಕ್ಟರ್ ನನ್ನನ್ನು ನೋಡಿ ಈ ಕಥೆಗೆ ಮ್ಯಾಚ್ ಆಗ್ತಾರೆ ಅಂತ ಹೇಳಿ, ಆಯ್ಕೆ ಮಾಡಿಕೊಂಡರು, ನನಗೆ ಕಥೆ ಒಂದು ಗಂಟೆ ಹೇಳಿದ್ರು, ನನ್ನ ಪಾತ್ರ ಕಥೆಗೆ ಟರ್ನಿಂಗ್ ಪಾಯಿಂಟ್ ಆಗಿದ್ದು , ಕಥೆಯ ಜೊತೆಗೆ ಸಾಗುತ್ತೆ.

ಹೀರೋ ಸಂತೋಷ್ ಅವರ ಸಪೋರ್ಟ್ ಚೆನ್ನಾಗಿತ್ತು, ಈ ಚಿತ್ರದ ಹಾಡುಗಳು ಚೆನ್ನಾಗಿ ಬಂದಿದೆ. ನೀವೆಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು. ಅದೇ ರೀತಿ ಈ ಚಿತ್ರದ ಸಾಹಿತಿ ಹಾಗೂ ಸಂಭಾಷಣೆಕಾರ ಕಿನ್ನಲ್ ರಾಜ್ , ಛಾಯಾಗ್ರಹಕ ಸಿನಿಟೆಕ್ಸ್ ಸೂರಿ ಹಾಗೂ ಇದೆ ಮೊದಲ ಬಾರಿಗೆ ಬೇರೆ ಬ್ಯಾನರ್ ಚಿತ್ರವನ್ನು ವಿತರಣೆ ಮಾಡುತ್ತಿರುವ ಕೆ.ಎ. ಸುರೇಶ್ ಚಿತ್ರದ ಕುರಿತು ಮಾತನಾಡಿದರು.

error: Content is protected !!