Cini NewsSandalwood

ಸ್ಟಾರ್ ನಿರ್ದೇಶಕ ಆರ್. ಚಂದ್ರು ಹುಟ್ಟುಹಬ್ಬದಂದು ಅಭಿಮಾನಿ ಬಳಗ ಸ್ಥಾಪನೆ.

ಚಂದನವನದಲ್ಲಿ ಸದಭಿರುಚಿಯ ಚಿತ್ರಗಳನ್ನು ಮೂಲಕ ಪ್ರೇಕ್ಷಕರ ಮನಸನ್ನ ಗೆದ್ದಂತ ನಿರ್ದೇಶಕ ಆರ್. ಚಂದ್ರು ರವರು ತಮ್ಮ 44ನೇ ವರ್ಷದ ಹುಟ್ಟುಹಬ್ಬವನ್ನು ತಮ್ಮ ನಿವಾಸದಲ್ಲಿ ಕುಟುಂಬಸ್ಥರು , ಸ್ನೇಹಿತರು , ಸಿನಿಮಾ ಗೆಳೆಯರು , ಅಭಿಮಾನಿಗಳು ಹಾಗೂ ಪತ್ರಕರ್ತರ ಸಮ್ಮುಖದಲ್ಲಿ ಆಚರಿಸಿಕೊಂಡರು.

ಇದೇ ಸಂದರ್ಭದಲ್ಲಿ ಪ್ಯಾನ್ ಇಂಡಿಯಾ ನಿರ್ದೇಶಕ ಎಂಬ ಖ್ಯಾತಿ ಪಡೆದ ಆರ್. ಚಂದ್ರು ರವರ ಕರ್ನಾಟಕದದ್ಯಂತ ಇರುವ ಅಭಿಮಾನಿ ಬಳಗವು ಸೇರಿಕೊಂಡು ‘ಅಖಿಲ ಕರ್ನಾಟಕ ಆರ್. ಚಂದ್ರು ಅಭಿಮಾನಿಗಳ ಸಂಘ’ ವನ್ನು ಅಧಿಕೃತವಾಗಿ ಚಾಲನೆಯನ್ನು ನೀಡಿದ್ದಾರೆ. ರಾಜ್ಯದಾದ್ಯಂತ ವಿರುವ ಚಂದ್ರು ಅಭಿಮಾನಿಗಳು , ಜಿಲ್ಲಾಧ್ಯಕ್ಷರು , ರಾಜ್ಯಾಧ್ಯಕ್ಷರು ಎಲ್ಲೆಡೆ ಒಂದೆಡೆ ಸೇರಿ ನಿರ್ದೇಶಕ ಆರ್. ಚಂದ್ರುರವರ ಸಮ್ಮುಖದಲ್ಲಿ ಸಾವಿರಾರು ಅಭಿಮಾನಿಗಳು ಈ ಬೃಹತ್ ಅಭಿಮಾನಿ ಸಂಘವನ್ನ ಸ್ಥಾಪಿಸುವ ಮೂಲಕ ಅವರಿಗೆ ಶಕ್ತಿಯಾಗಿದ್ದಾರೆ.

ಸಾಮಾನ್ಯವಾಗಿ ಸಿನಿಮಾ ನಟ , ನಟಿಯರಿಗೆ ಅಭಿಮಾನಿ ಬಳಗ ಒಂದು ದೊಡ್ಡ ಮಟ್ಟದಲ್ಲಿ ಕಾಣುವುದು ಸಹಜ. ಆದರೆ ಗ್ರಾಮೀಣದಿಂದ ಬಂದಂತ ಪ್ರತಿಭೆ ಹಲವಾರು ಯಶಸ್ವಿ ಚಿತ್ರಗಳನ್ನು ನೀಡಿ ಪ್ರೇಕ್ಷಕರ ಗಮನ ಸೆಳೆದಂತ ಒಬ್ಬ ಸ್ಟಾರ್ ನಿರ್ದೇಶಕರಿಗೆ ಈ ಮಟ್ಟದ ದೊಡ್ಡ ಅಭಿಮಾನಿ ಬಳಗ ಹೊಂದಿರುವುದು ಒಳ್ಳೆಯ ಬೆಳವಣಿಗೆ ಆಗಿದೆ.

ಇದರ ಮೂಲಕ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ಈ ಒಂದು ಸಂಘ ಹೊಂದಿದ್ದು ಇದಕ್ಕೆ ಎಲ್ಲಾ ರೀತಿಯ ಸಹಕಾರ ಬೆಂಬಲವನ್ನ ನೀಡುವ ನಿಟ್ಟಿನಲ್ಲಿ ನಿರ್ದೇಶಕ ಆರ್. ಚಂದ್ರು ರವರು ಮುಂದಾಗಿದ್ದಾರೆ. ಈ ಒಂದು ಸಂಘಕ್ಕೆ ಹಲವಾರು ಪ್ರಮುಖ ಗಣ್ಯರು ಕೂಡ ಸಮಾಜಮುಖಿ ಕೆಲಸಕ್ಕೆ ಹಾಗೂ ನಿರ್ಮಾಪಕ , ನಿರ್ದೇಶಕ ಆರ್. ಚಂದ್ರು ರವರ ಬೆಂಬಲಕ್ಕೆ ನಿಂತಿದ್ದಾರೆ.

ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ನಿರ್ದೇಶಕ , ನಿರ್ಮಾಪಕ ಆರ್ .ಚಂದ್ರು ಮಾತನಾಡುತ್ತಾ ನಾನು ಇಂದು ಈ ಮಟ್ಟಕ್ಕೆ ಬಂದಿರುವುದಕ್ಕೆ ಪ್ರತಿಯೊಬ್ಬರ ಸಹಕಾರವು ಬಹಳವಿದೆ. ನಾನು ಹಳ್ಳಿಯಿಂದ ಬೆಂಗಳೂರಿಗೆ ಬಂದು ಸಿನಿಮಾ ಕ್ಷೇತ್ರದಲ್ಲಿ ಒಂದು ಭದ್ರ ನೆಲೆ ಕಾಣುವ ನಿಟ್ಟಿನಲ್ಲಿ ಮುನ್ನುಗ್ಗಿ ನನ್ನ ಮೊದಲ ಪ್ರಯತ್ನವಾಗಿ ತಾಜ್ ಮಹಲ್ ಚಿತ್ರವನ್ನು ಅಭಿಮಾನಿಗಳು , ಪತ್ರಕರ್ತರು ಎಲ್ಲರೂ ಮೆಚ್ಚಿ ಪ್ರಶಂಸಿಸಿ ನನ್ನನ್ನ ಬಳಸುತ್ತಾ ಬಂದರು.

ನಾನು ಅದೇ ರೀತಿ ಮೈಲಾರಿ , ಚಾರ್ಮಿನಾರ್ , ಕೋಕೋ ಸೇರಿದಂತೆ ತೆಲುಗು ಚಿತ್ರವನ್ನು ಕೂಡ ನಿರ್ದೇಶನ ಮಾಡಿದೆ. ಹಾಗೆಯೇ ಪ್ಯಾನ್ ಇಂಡಿಯಾ ದಲ್ಲಿ ಸದ್ದು ಮಾಡಬೇಕೆಂಬ ದೃಷ್ಟಿಯೊಂದಿಗೆ ಕಬ್ಜ ಚಿತ್ರವನ್ನು ನಿರ್ಮಿಸಿ , ನಿರ್ದೇಶನ ಮಾಡುವುದರ ಜೊತೆಗೆ ದೊಡ್ಡ ಸದ್ದನ್ನೇ ಮಾಡಿದ್ದೇನೆ. ಚಿತ್ರವನ್ನ ಅದ್ದೂರಿಯಾಗಿ ತೆರೆಯ ಮೇಲೆ ತಂದಿದ್ದೇನೆ. ಕೆಲವರು ಇಲ್ಲಸಲ್ಲದ ಮಾತುಗಳನ್ನು ಆಡಿದ್ದಾರೆ. ಕೆಲವರು ಚಿತ್ರದ ಕುರಿತು ವಿಮರ್ಶೆ ಮಾಡುವ ಬದಲು ನನ್ನ ತೇಜೋವದೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಅದಕ್ಕೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಕೂಡ ನನ್ನ ಸಿದ್ಧನಿದ್ದೇನೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಬಹಳ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಕೆಲವೊಂದು ಯೂಟ್ಯೂಬ್ ಗಳಲ್ಲಿ ಹಾಕುವ ಸುದ್ದಿಗಳಿಗೆ ಬರುವ ಕಮೆಂಟ್ಸ್ ನನಗೆ ಬಹಳಷ್ಟು ನೋವನ್ನು ಉಂಟು ಮಾಡಿದೆ. ದಯವಿಟ್ಟು ಅಂಥವರನ್ನ ಮಟ್ಟ ಹಾಕಿ , ಕಷ್ಟಪಟ್ಟು ಬೆಳೆದು ಬಂದವನು , ನಾನು ಉತ್ತಮ ಚಿತ್ರ ನೀಡುವ ಹಾದಿಯಲ್ಲಿ ಸಾಗುತ್ತಿದ್ದೇನೆ.

ಒಂದು ಉದಾಹರಣೆ ಎನ್ನುವಂತೆ ಜಡ್ಜ್ ಒಬ್ಬರು ತಮ್ಮ ಚಿತ್ರವನ್ನು ನೋಡಿ ಇಂತಹ ಚಿತ್ರಗಳು ಬರಬೇಕು ಎಂದು ಹೇಳಿರುವ ವಿಚಾರವನ್ನು ನೆನಪಿಸಿಕೊಂಡರು. ತಪ್ಪು ತಪ್ಪಾಗಿ ಸುದ್ದಿಯನ್ನ ಹರಡುವವರ ಕಮೆಂಟ್ಸ್ ಗಳನ್ನ ನಿಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಡಿಲೀಟ್ ಮಾಡಿ , ನಾವು ನೀವೆಲ್ಲರೂ ಸೇರಿ ಚಿತ್ರರಂಗದಲ್ಲಿ ಒಂದು ಉತ್ತಮ ಬಾಂಧವ್ಯದೊಂದಿಗೆ ಮುಂದೆ ಸಾಗೋಣ , ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಸದಾ ನಮ್ಮ ಮೇಲಿರಲಿ.

ನಾನು ಈಗಾಗಲೇ ಸನ್ಮಾನ್ಯ ಮುಖ್ಯ ಮಂತ್ರಿಗಳ ಮೂಲಕ ಅನೌನ್ಸ್ ಮಾಡಿರುವ ನನ್ನ ಬ್ಯಾನರ್ ನಡಿಯಲ್ಲಿ ಬರುತ್ತಿರುವ 5 ಚಿತ್ರಗಳಲ್ಲಿ ಮೊದಲ ಚಿತ್ರವಾಗಿ ಗಾಡ್ ಫಾದರ್ ಎಂಬ ಚಿತ್ರ ಇದೇ ತಿಂಗಳು ಚಿತ್ರೀಕರಣಕ್ಕೆ ಹೊರಡಲಿದೆ. ಡಾರ್ಲಿಂಗ್ ಕೃಷ್ಣ ನಾಯಕನಾಗಿ ಅಭಿನಯಿಸುತ್ತಿದ್ದು , ಹೊರ ರಾಜ್ಯದ ಕಲಾವಿದರು ಕೂಡ ಈ ಒಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಒಂದೇ ಹಂತದ ಚಿತ್ರೀಕರಣ ಮುಗಿಸಲು ನಿರ್ಧರಿಸಿದ್ದೇವೆ ಇನ್ನು ಉಳಿದಂತ ಚಿತ್ರಗಳನ್ನು ಅಂತಹಂತವಾಗಿ ತಮಗೆ ತಿಳಿಸುತ್ತಾ ಹೋಗುತ್ತೇನೆ ಎಂದು ಹೇಳಿದರು. ಒಟ್ನಲ್ಲಿ ನಿರ್ದೇಶಕ ಆರ್ .ಚಂದ್ರು ರವರು ತಮ್ಮ ಹುಟ್ಟು ಹಬ್ಬದಂದು ಹುಟ್ಟುಕೊಂಡಿರುವ ಒಂದು ದೊಡ್ಡ ಅಭಿಮಾನಿ ಬಳಗದ ಸಂಘವು ಮುಂದಿನ ದಿನಗಳಲ್ಲಿ ಮಾಡುವ ಸಮಾಜಮುಖಿ ಕೆಲಸ ದೊಡ್ಡ ಮಟ್ಟಕ್ಕೆ ಯಶಸ್ವಿಯಾಗಿ ಸಾಗಲಿ. ಹಾಗೆಯೇ ಅವರು ಹೇಳಿರುವ ಮನದಾಳದ ಮಾತುಗಳು ಕೂಡ ಬಹಳ ಅರ್ಥಪೂರ್ಣವಾಗಿದ್ದು , ಚಿತ್ರೋದ್ಯಮದ ಮುಂದಿ ಎಲ್ಲರೂ ಒಗ್ಗಟ್ಟಿನಲ್ಲಿ ಸಾಗಿ ಉತ್ತಮ ಚಿತ್ರಗಳನ್ನು ನೀಡುವ ಮೂಲಕ ಚಿತ್ರರಂಗವನ್ನು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗುವಂತಾಗಲಿ

error: Content is protected !!