Cini NewsSandalwood

ಪ್ರಿಯಾಂಕಾ ಉಪೇಂದ್ರ ಹುಟ್ಟುಹಬ್ಬಕ್ಕೆ ‘ಕ್ಯಾಪ್ಚಾರ್’ ತಂಡದಿಂದ ಬಿಗ್ ಸರ್ಪ್ರೈಸ್

ಸ್ಯಾಂಡಲ್ ವುಡ್ ನಟಿ ಪ್ರಿಯಾಂಕಾ ಉಪೇಂದ್ರ ಅವರಿಗೆ ಇಂದು (ನವೆಂಬರ್ 12) ಹುಟ್ಟುಹಬ್ಬದ ಸಂಭ್ರಮ. ರಿಯಲ್ ಸ್ಟಾರ್ ಪತ್ನಿಗೆ ಅಭಿಮಾನಿಗಳಿಂದ ಶುಭಾಶಯಗಳು ಮಹಾಪೂರವೇ ಹರಿದು ಬರುತ್ತಿದ್ದು ಸಾಮಾಜಿಕ ಜಾಣತನದಲ್ಲಿ ಪೋಸ್ಟರ್ ಶೇರ್ ಮಾಡಿ ಸಂಭ್ರಮಿಸುತಿದ್ದಾರೆ. ಪ್ರಿಯಾಂಕಾ ಅವರು ಇಂದು ಅಭಿಮಾನಿಗಳು ಹಾಗೂ ಕುಟುಂಬದ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಕ್ಯಾಪ್ಚರ್ ಸಿನಿಮಾತಂಡ ಪ್ರಿಯಾಂಕಾ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಸಂಭ್ರಮಿಸಿದರು. ವಿಭಿನ್ನವಾದ ಕೇಕ್ ತಯಾರಿಸಿದ್ದ ಕ್ಯಾಪ್ಚರ್ ತಂಡ ಪ್ರಿಯಾಂಕ ಅವರಿಗೆ ಬಿಗ್ ಸರ್ಪ್ರೈಸ್ ನೀಡಿದರು‌. ಇದೇ ಸಮಯದಲ್ಲಿ ಕ್ಯಾಪ್ಚರ್ ತಂಡದಿಂದ ಪ್ರಿಯಾಂಕ ಅವರ ಮತ್ತೊಂದು ಪೋಸ್ಟರ್ ಅನ್ನು ರಿಲೀಸ್ ಮಾಡಲಾಯಿತು. ಡ್ರೋನ್ ಮೂಲಕ ಚಿತ್ರದ 2ನೇ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ಮತ್ತಷ್ಟು ವಿಭಿನ್ನವಾಗಿಸಿದರು.

ಅದ್ದೂರಿಯಾಗಿ ನೆರವೇರಿದ ಪ್ರಿಯಾಂಕ ಹುಟ್ಟು ಹಬ್ಬಕ್ಕೆ ಪತಿ ರಿಯಲ್ ಸ್ಟಾರ್ ಉಪೇಂದ್ರ ಕೂಡ ಸಾತ್ ನೀಡಿದರು. ಪತ್ನಿ ಪ್ರಿಯಾಂಕಾ ಅವರಿಗೆ ಕೇಕ್ ತಿನಿಸುವ ಮೂಲಕ ಶುಭಾಶಯ ಹೇಳಿದರು. ಜೊತೆಗೆ ಕ್ಯಾಪ್ಚರ್ ಚಿತ್ರ ತಂಡಕ್ಕೂ ಶುಭಾ ಹಾರೈಸಿದರು. ಕ್ಯಾಪ್ಚರ್ ತಂಡದ ವಿಭಿನ್ನ ಪ್ರಯತ್ನಕ್ಕೆ ಪ್ರಿಯಾಂಕಾ ಉಪೇಂದ್ರ ಸಂತಸ ವ್ಯಕ್ತಪಡಿಸಿದರು.

ಕೇಕ್ ಕತ್ತರಿಸಿ ಮಾಧ್ಯಮದ ಜೊತೆ ಮಾತನಾಡಿದ ಪ್ರಿಯಾಂಕಾ ದೀಪಾವಳಿಗೆ ಬರ್ತಡೇ ಬಂದಿದ್ದು ತುಂಬಾ ಖುಷಿ ಇದೆ.ಉಪೇಂದ್ರ ಅವರ ಬರ್ತಡೇ ಗಣೇಶ ಹಬ್ಬಕ್ಕೆ ಬರುತ್ತೆ. ತುಂಬಾ ವಿಶೇಷವಿದು. ನನಗೆ ಸಿನಿಮಾ ಅಂದ್ರೆ ತುಂಬಾ ಇಷ್ಟ, ಮದುವೆ ಅದ್ಮೇಲೂ ನನ್ನ ಗ್ರಾಫ್ ಹೀಗೆ ಹೋಗುತ್ತೆ ಅಂತ ಅಂದ್ಕೊಂಡಿರಲಿಲ್ಲ. ಒಳ್ಳೆ ಸಿನಿಮಾಗೆ ಆಡಿಯನ್ಸ್ ಸಪೋರ್ಟ್ ಇದ್ದೇ ಇರುತ್ತೆ, ಇದು ನನ್ನ ಟೀಂ ಎಫರ್ಟ್’ ಎಂದರು.

ಜೊತೆಗೆ ಇಂದೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಧಿಕಾ ಕುಮಾರಸ್ವಾಮಿ ಅವರಿಗೂ ವಿಶ್ ಮಾಡಿದರು. ‘ನನ್ನ ಜೀವನದ ಬಗ್ಗೆ ನಾನು ಯಾವುದೇ ಪ್ಲಾನ್ ಮಾಡಿಲ್ಲ. ಈ ಕ್ಷಣವನ್ನು ಎಂಜಾಯ್ ಮಾಡುತ್ತೇನೆ ಅಷ್ಟೇ. ನನ್ನಿಂದ ಸ್ವಲ್ಪ ಜನಕ್ಕೆ ಪ್ರೇರಣೆ ಸಿಕ್ಕದ್ರು ನನಗೆ ಅದು ತುಂಬಾ ಖುಷಿ’ ಎಂದರು. ಸದ್ಯ ಪ್ರಿಯಾಂಕಾ ಅವರು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಕ್ಯಾಪ್ಚರ್ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.

ಲೋಹಿತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕ್ಯಾಪ್ಚರ್ ಸಿನಿಮಾದ ಪ್ರಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. ಟೈಟಲ್ ಮತ್ತು ಪೋಸ್ಟರ್ ಮೂಲಕ ಸದ್ದು ಮಾಡುತ್ತಿರುವ ಕ್ಯಾಪ್ಚರ್ ಡಿಸೆಂಬರ್ ಮೊದಲ ವಾರದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಕ್ಯಾಪ್ಚರ್ ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್ ಅವರು ತಮ್ಮ ಶ್ರೀ ದುರ್ಗಾಪರಮೇಶ್ವರಿ ಬ್ಯಾನರ್ ಮೂಲಕ ನಿರ್ಮಾಣ ಮಾಡಿದ್ದಾರೆ. ಸಿಸಿಟಿವಿ ಕಾನ್ಸೆಪ್ಟ್ ನಲ್ಲಿ ಮೂಡಿ ಬಂದಿರುವ ಕ್ಯಾಪ್ಚರ್ ಸಿನಿಮಾ ಬಾರಿ ಕುತೂಹಲ ಮೂಡಿಸಿದ್ದು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ

error: Content is protected !!