“ಖೇಲೋ ಬಿಎಸ್‌ಎನ್‌ಡಿಪಿ” ಕ್ರಿಕೆಟ್ ಲೀಗ್ ಲೋಗೋ ಅನಾವರಣ ಮಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ

Spread the love

ಇಡೀ ರಾಜ್ಯ ಹಾಗೂ ದೇಶವೇ ಗಮನ ಸೆಳೆಯುವಂತಹ ಒಂದು ವಿಭಿನ್ನ ರೀತಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಿದೆ “ಖೇಲೋ ಬಿಎಸ್‌ಎನ್‌ಡಿಪಿ” ಕ್ರಿಕೆಟ್ ಲೀಗ್. ರಾಜ್ಯದ 224 ವಿಧಾನಸಭಾ ಕ್ಷೇತ್ರದ ಕ್ರೀಡಾಪಟುಗಳಿಗೆ ಸುವರ್ಣ ಅವಕಾಶವನ್ನು ನೀಡುತ್ತಿದೆ.ಕೇರಳಂ ನ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿನಲ್ಲಿ ಖೇಲೋ ಬಿಎಸ್‌ಎನ್‌ಡಿಪಿ ಕ್ರಿಕೆಟ್ ಲೀಗ್ ಕರ್ನಾಟಕದಲ್ಲಿ ನಡೆಸಲು ಸುಮಾರು ಆರು ತಿಂಗಳು ಸತತ ಪೂರ್ವ ತಯಾರಿಯೊಂದಿಗೆ ಯುವಜನ ಸಬಲೀಕರಣ ಕ್ರೀಡಾ ತಂಡವು ಮುಂದಾಗಿದೆ.

ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಆಸಕ್ತ ಯುವಕರಿಗೆ ಅನುಕೂಲ ಆಗುವಂತೆ ದೊಡ್ಡ ಉದ್ದೇಶದಿಂದ ರಾಜ್ಯ ಮಟ್ಟದ ಕ್ರಿಕೆಟ್ ಲೀಗ್ ಪ್ರಾರಂಭಕ್ಕೆ ಚಾಲನೆ ದೊರಕಿದೆ. ಈ ಖೇಲೋ ಬಿಎಸ್‌ಎನ್‌ಡಿಪಿ ಕ್ರಿಕೆಟ್ ಲೀಗ್ ಪಂದ್ಯದ ಲೋಗೋ ಬಿಡುಗಡೆ ಕಾರ್ಯಕ್ರಮಕ್ಕೆ ಪರಮಪೂಜ್ಯ ಶ್ರೀ ದೇವಿಕಾನಂದ ಶ್ರೀಗಳು, ಮಾಜಿ ಸಚಿವ ಅರವಿಂದ ಲಿಂಬಾವಳಿ ಲೀಗ್ ಲೋಗೋ ಅನಾವರಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

224 ಅಸೆಂಬ್ಲಿಯಲ್ಲಿ ಒಂದೊಂದು ತಂಡ ಇರಲಿದ್ದು 31 ಜಿಲ್ಲೆಗಳಲ್ಲಿ ಆಯಾ ಪ್ರದೇಶದ ಮಹನೀಯರ ಹೆಸರಿನಲ್ಲಿ ಕ್ರೀಡಾ ಜ್ಯೋತಿ ಯಾತ್ರೆ ನಡೆಯಲಿದೆ. ಹಾಗೆಯೇ ಒಂದೊಂದು ಜಿಲ್ಲೆಯಲ್ಲೂ ವಿಶೇಷ ರೀತಿಯ ಕಾರ್ಯಕ್ರಮ ಮೂಲಕ ಈ ಕ್ರಿಕೆಟ್ ಪಂದ್ಯಾವಳಿಯ ನಡೆಯುವ ಸ್ಥಳ , ಜರ್ಸಿ ಸಿರಿದಂತೆ ಬಹಳಷ್ಟು ವಿಚಾರಗಳನ್ನು ಅನಾವರಣ ಮಾಡುವುದರ ಜೊತೆಗೆ ಕ್ರಿಕೆಟ್ ಪಂದ್ಯದಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಜಾತಿ , ರಾಜಕಾರಣ ಮಾಡದೆ ಪ್ರತಿಭೆ ಇರುವಂತಹ ಉತ್ತಮ ಆಟಗಾರನ ಆಯ್ಕೆ ಮಾಡುವುದು ಈ ಒಂದು ಪಂದ್ಯಾವಳಿಯ ಉದ್ದೇಶವಾಗಿದೆಯಂತೆ. ಅದಕ್ಕಾಗಿ ಪಾರದರ್ಶಕವಾಗಿ ಕೆಲಸ ಮಾಡಲು ತಂಡ ರಚನೆಯಾಗಿದ್ದು , ಒಂದೊಂದೇ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಆಯೋಜಕರ ತಂಡ ಹಂಚಿಕೊಳ್ಳಲಿದೆಯಂತೆ.

ಈ ಲೀಗ್ ನಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 25 ಲಕ್ಷ, 5 ಲಕ್ಷ ದ್ವಿತೀಯ ಬಹುಮಾನ, 2.5 ಲಕ್ಷ ತೃತೀಯ ಬಹುಮಾನ ಇರಲಿದೆ. ಮ್ಯಾನ್ ಆಫ್ ದಿ ಸೀರೀಸ್ ಗೆ ಇವಿ ಬೈಕ್ ಬಹುಮಾನ ಆಗಿ ದೊರೆಯಲಿ ಎಂದು ಘೋಷಿಸಲಾಯಿತು.

ಕ್ರಿಕೆಟಿಗ ದೊಡ್ಡ ಗಣೇಶ್, ನಿರ್ಮಾಪಕರಾದ ಡಾ. ಸಂಜಯ್ ಗೌಡ, ಗಣ್ಯರಾದ ಮೋಹನ್ ಬಾಬು, ಟಿವಿ ಬಾಬು, ಬಿ. ಸೋಮಶೇಖರ್, ಸೈದಪ್ಪ ಕೆ. ಗುತ್ತೇದಾರ್ ಮೊದಲಾದವರು ಉಪಸ್ಥಿತರಿದ್ದರು. ಹಾಗೆಯೇ ಬಂದಂತಹ ಎಲ್ಲಾ ಗಣ್ಯರು ಈ ಕ್ರಿಕೆಟ್ ಪಂದ್ಯಾವಳಿಗೆ ಬೆನ್ನೆಲುಬಾಗಿ ನಿಲ್ಲುವುದರ ಜೊತೆಗೆ ತಮ್ಮ ಕೈಲಾದಂತಹ ಸಹಕಾರವನ್ನ ನೀಡುತ್ತೇವೆ ಎಂದು ಮನ ತುಂಬಿ ಮಾತನಾಡಿದರು.

ಹಾಗೆಯೇ ಕ್ರೀಡೆಗಾಗಿ ಇರುವಂತಹ ಸರಕಾರದ ಒಂದಷ್ಟು ಸೌಲತ್ತುಗಳನ್ನ ಎಲ್ಲರೂ ಬಳಸಿಕೊಳ್ಳಬೇಕು , ಯುವಜನರು ಮೊಬೈಲ್ ಮತ್ತೊಂದು ಕಡೆ ಗಮನ ಹರಿಸದೆ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ವಹಿಸಬೇಕು ಎಂಬ ಉದ್ದೇಶವೂ ಈ ಒಂದು ಕ್ರಿಕೆಟ್ ಪಂದ್ಯಾವಳಿಯನ್ನು ಬಹಳ ಅದ್ದೂರಿಯಾಗಿ ಅಚ್ಚುಕಟ್ಟಾಗಿ ಆಯೋಜನೆ ಮಾಡಿದೆ. ಇದರ ಸದುಪಯೋಗ ಗ್ರಾಮೀಣ ಪ್ರತಿಭೆಗಳು ಸೇರಿದಂತೆ ಆಸಕ್ತಿ ಇರುವ ಎಲ್ಲಾ ಕ್ರಿಕೆಟ್ ಆಟಗಾರರಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ.

Visited 1 times, 1 visit(s) today
error: Content is protected !!