ಮ್ಯೂಸಿಕ್‌ ಮಾಂತ್ರಿಕ ದೇವಿ ಶ್ರೀ ಪ್ರಸಾದ್ ನಟನೆಯ”ಯಲ್ಲಮ್ಮ” ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್.

Spread the love

ಭಾರತೀಯ ಚಿತ್ರರಂಗದ ಸಂಗೀತ ಮಾಂತ್ರಿಕ ದೇವಿ ಶ್ರೀ ಪ್ರಸಾದ್ (DSP) ಹೀರೋ ಆಗಿ ಎಂಟ್ರಿಕೊಟ್ಟಿದ್ದಾರೆ.. ಡಿಎಸ್ಪಿ ಅವರ ಹುಟ್ಟುಹಬ್ಬದ ವಿಶೇಷವಾಗಿ ಯಲ್ಲಮ್ಮ ಸಿನಿಮಾದ ಫಸ್ಟ್‌ ಲುಕ್‌ ಹಾಗೂ ಮೋಷನ್‌ ಪೋಸ್ಟರ್‌ ಬಿಡುಗಡೆ ಆಗಿದೆ…

‘ಯಲ್ಲಮ್ಮ’ ತಂಡ ಡಿಎಸ್ ಪಿ ಲುಕ್‌ ಅನ್ನ ಸಖತ್‌ ಸಿಂಪಲ್‌ ಆಗಿ ಪ್ರಸೆಂಟ್‌ ಮಾಡಿದೆ. ಸಾಮಾನ್ಯ ಉಡುಪಿನಲ್ಲಿ, ಕೈಯಲ್ಲಿ ಕಿರೀಟ ಹಿಡಿದು, ಸಖತ್‌ ಸಿಂಪಲ್‌ ಆಗಿ ಕಾಣಿಸಿಕೊಂಡಿದ್ದಾರೆ…ಪರ್ಶಿ ಅನ್ನೋ ಪಾತ್ರದಲ್ಲಿ ದೇವಿ ಶ್ರೀ ಪ್ರಸಾದ್‌ ಅಭಿನಯ ಮಾಡುತ್ತಿದ್ದಾರೆ…

ಯಲ್ಲಮ್ಮ ಸಿನಿಮಾವನ್ನ ಬಳಗಂ ಸಿನಿಮಾ ಖ್ಯಾತಿಯ ವೇಣು ಯೆಲ್ದಾಂಡಿ ನಿರ್ದೇಶನ ಮಾಡುತ್ತಿದ್ದಾರೆ.. ದಿನ ಜನರನ್ನ ತಮ್ಮ ಮ್ಯೂಸಿಕ್‌ ನಿಂದ ಕುಣಿಸುತ್ತಿದ್ದ ದೇವಿ ಶ್ರೀ ಪ್ರಸಾದ್‌ ಅಭಿನಯದ ಮೂಲಕ ಪ್ರೇಕ್ಷಕರನ್ನ ರಂಜಿಸಲು ಸಿದ್ದರಾಗಿದ್ದಾರೆ..ಫಸ್ಟ್ ಲುಕ್ ಜೊತೆಗೆ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ಕೂಡ ಇಂಪ್ರೆಸಿವ್‌ ಆಗಿದೆ… ಅದರಲ್ಲಿರುವ ಸಂಗೀತ ಮತ್ತು ಬ್ಯಾ‌ಗ್ರೌಂಡ್ ಸ್ಕೋರ್ ಅದ್ಬುತವಾಗಿ ಮೂಡಿಬಂದಿದೆ.

ಯಲ್ಲಮ್ಮ ಸಿನಿಮಾದಲ್ಲಿ ಡಿಎಸ್ಪಿ ಕೇವಲ ನಾಯಕನಾಗಿ ನಟಿಸಿರುವುದಷ್ಟೇ ಅಲ್ಲ, ಸಂಗೀತ ನಿರ್ದೇಶಕರಾಗಿಯೂ ತಮ್ಮ ಮಾಂತ್ರಿಕ ಸ್ಪರ್ಶ ನೀಡಿದ್ದಾರೆ. ಅವರ ಸಂಗೀತ ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ನಿರ್ದೇಶಕ ವೇಣು ಯೆಲ್ದಂಡಿ, ‘ಬಲಗಂ’ ಚಿತ್ರದ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ ನಂತರ, ‘ಯಲ್ಲಮ್ಮ’ ಚಿತ್ರವನ್ನು ತಮ್ಮ ಕನಸಿನ ಪ್ರಾಜೆಕ್ಟ್ ಆಗಿ ಹಲವು ವರ್ಷಗಳಿಂದ ಅತ್ಯಂತ ಪ್ರೀತಿಯಿಂದ ರೂಪಿಸಿದ್ದಾರೆ. ಪ್ರೇಕ್ಷಕರಿಗೆ ಅತ್ಯುತ್ತಮ ಚಿತ್ರವನ್ನು ನೀಡಬೇಕೆಂಬ ಅವರ ಬದ್ಧತೆ ಈ ಪ್ರತಿಯೊಂದು ಫ್ರೇಮ್‌ನಲ್ಲೂ ಕಾಣಿಸುತ್ತದೆ.

ಚಿತ್ರದ ಘೋಷಣೆ ಮತ್ತು ಮೊದಲ ಝಲಕ್‌ನಿಂದಲೇ ‘ಯಲ್ಲಮ್ಮ’ ಬಗ್ಗೆ ಭಾರೀ ನಿರೀಕ್ಷೆ ನಿರ್ಮಾಣವಾಗಿತ್ತು. ಇದೀಗ ಬಿಡುಗಡೆಯಾಗಿರುವ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಆ ನಿರೀಕ್ಷೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿವೆ.ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ನಿರ್ಮಿಸುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Visited 1 times, 1 visit(s) today
error: Content is protected !!