Cini NewsSandalwood

” ಒಂಟಿ ಬಂಟಿ ಲವ್ ಸ್ಟೋರಿ ” ತೆರೆಗೆ ಬರಲು ರೆಡಿ

ಸ್ಯಾಂಡಲ್ ವುಡ್ ಗೆ ಬಹಳಷ್ಟು ಯುವ ಪ್ರತಿಭೆಗಳು ವಿಭಿನ್ನ ಕಥಾಂದರದ ಮೂಲಕ ಪ್ರೇಕ್ಷಕರ ಮನಸನ್ನ ಗೆಲ್ಲುವುದಕ್ಕೆ ನಿರಂತರವಾಗಿ ಬರುತ್ತಿದ್ದಾರೆ. ಆ ಸಾಲಿನಲ್ಲಿ
ಸಾಫ್ಟ್ವೇರ್ ಇಂಜಿನಿಯರ್ ಯತೀಶ್ ಪನ್ನಸಮುದ್ರ ಈಗ ಸಾಫ್ಟ್ ಕಾರ್ನರ್ ನಲ್ಲಿ ಒಂದು ರೋಮ್ಯಾಂಟಿಕ್ ಕಾಮಿಡಿ ಚಿತ್ರ ನಿರ್ಮಿಸಿದ್ದಾರೆ. ಶಾರ್ಟ್ ಮೂವಿಗಳನ್ನು ಹಾಬಿಯಾಗಿ ಮಾಡುತ್ತಿದ್ದ ಪನ್ನ ಸಮುದ್ರ ಯತೀಶ್, ಈಗ ಒಂಟಿ ಬಂಟಿ ಎಂಬ ಸಿನಿಮಾ ಮಾಡಿದ್ದಾರೆ.

ಈ ಸಿನಿಮಾ ನಿರ್ಮಾಣ , ಸಂಭಾಷಣೆ , ನಿರ್ದೇಶನ ಜೊತೆಗೆ ಹೀರೋ ಆಗಿ ಸಹ ಅಭಿನಯಿಸುತ್ತಿರುವ ಯತೀಶ್ ಪನ್ನ ಸಮುದ್ರ ಒಂದೊಳ್ಳೆ ಚಿತ್ರ ಮಾಡಿದ್ದೇನೆ ಎಂಬ ಖುಷಿಯಲ್ಲಿದ್ದಾರೆ. ಕಾಲೇಜು ದಿನಗಳಿಂದ ಸಿನಿಮಾದಲ್ಲಿ ಅಭಿನಯಿಸಬೇಕು ಎಂಬ ಆಸೆ ಇತ್ತು, ಆದರೆ ಇದಕ್ಕೆ ಬೆಂಬಲವಾಗಿ ಚಿತ್ರರಂಗಕ್ಕೆ ಬಂದಿದ್ದೇನೆ, ಚಿತ್ರ ಅಂದುಕೊಂಡಂತೆ ಚೆನ್ನಾಗಿ ಬಂದಿದೆ, ಪ್ರೇಕ್ಷಕರಿಗೆ ಮೆಚ್ಚುಗೆ ಆಗುವ ಎಲ್ಲಾ ಅಂಶಗಳು ಚಿತ್ರದಲ್ಲಿದೆ.

ಅದರಲ್ಲೂ ಯುವ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟು ಕೊಂಡು ಚಿತ್ರ ನಿರ್ಮಿಸಿ ಇರುವುದರಿಂದ ಸಿನಿಮಾ ಚೆನ್ನಾಗಿ ಆಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದೇನೆ ಎನ್ನುತ್ತಾರೆ ಯತೀಶ್ ಪನ್ನಸಮುದ್ರ. ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಪನ್ನ ಸಮುದ್ರ ಗ್ರಾಮದ ಕೃಷಿ ಕುಟುಂಬದಿಂದ ಬಂದ ಯತೀಶ್ ಬೆಂಗಳೂರಿನ ಸರ್ಕಾರಿ ಶ್ರೀ ಕೃಷ್ಣರಾಜೇಂದ್ರ ಸಿಲ್ವರ್ ಜುಬಿಲಿ ಟೆಕ್ನಾಲಜಿ ಕಾಲೇಜಿನಲ್ಲಿ ಬಿ.ಇ. ಪದವಿ ಪಡೆದ ನಂತರ ಹೂವಾಯಿ ಸಾಫ್ಟ್ ವೇರ್ ಕಂಪನಿಯಲ್ಲಿ ಆರು ವರ್ಷ ಕೆಲಸ ಮಾಡಿದರು.

ಕೊರೊನಾ ಕಾಲದಲ್ಲಿ ವರ್ಕ್ ಫ್ರಮ್ ಹೋಮ್ ಆದಾಗ ಸಿನಿಮಾ ಕ್ಷೇತ್ರಕ್ಕೆ ಬಂದರು. ಜೀವನದಲ್ಲಿ ಯಾವುದು ಮುಖ್ಯ ಎಂದು ತಿಳಿಯದೆ ಪರದಾಡುವ ಯುವಜನರ ಮಾನಸಿಕ ತೊಳಲಾಟವನ್ನೇ ಕಥೆಯಾಗಿಟ್ಟುಕೊಂಡು “ಒಂಟಿ ಬಂಟಿ ಲವ್ ಸ್ಟೋರಿ” ಎಂಬ ಸಿನಿಮಾ ಮಾಡಿದ್ದಾರೆ. ಓದೋ ಕಾಲದಲ್ಲಿ ಲವ್, ಲವ್ ಮಾಡೋ ಕಾಲದಲ್ಲಿ ಉದ್ಯೋಗ, ಉದ್ಯೋಗ ಮಾಡುವಾಗ ಹಣ, ಮುಖ್ಯನಾ? ಹೆಸರು ಮುಖ್ಯನಾ ಅಂತ ಪರದಾಡುವುದು ಇಂದಿನ ಜನರ ಮನಸ್ಥಿತಿಯಾಗಿದೆ.

ಯುವ ಜನರ ಇಂತ ಗೊಂದಲಗಳನ್ನೆಲ್ಲ ರೋಮ್ಯಾಂಟಿಕ್ ಕಾಮಿಡಿ ಕಥೆ ಮಾಡಿ ಚಿತ್ರ ಮಾಡಿದ್ದಾರೆ ಯತೀಶ್ ಪನ್ನ ಸಮುದ್ರ. ಚಿತ್ರದಲ್ಲಿ ಶ್ವೇತಾ ಭಟ್ ಮತ್ತು ಶ್ರುತಿ ಚಂದ್ರಶೇಖರ್ ನಾಯಕಿಯಾಗಿದ್ದಾರೆ. ಶ್ವೇತಾ ಭಟ್ ಹಿಂದೆ ‘ಯದಾ ಯದಾಹಿ’ ಮತ್ತು ‘ಹೊಯ್ಸಳ’ ಚಿತ್ರಗಳಲ್ಲಿ ಮತ್ತು ಅರ್ಧಾಂಗಿ ಎಂಬ ಸುವರ್ಣ ಟಿವಿಯ ಧಾರವಾಹಿಯಲ್ಲಿ ಅಭಿನಯಿಸಿದ ಅನುಭವವಿದೆ. ಉಳಿದಂತೆ ನಟನಾಗಿರುವ ವೈಭವ ವರ್ಧನ್, ಸಂಗೀತ ನಿರ್ದೇಶಕ ಶ್ರೀ ಹರಿ ಶ್ರೇಷ್ಠ, ಸಂಕಲನಕಾರರು ಅಭಿನವ ಶ್ರೀನಿವಾಸ್,ಛಾಯಾಗ್ರಹಕ ಶಿವರಾಜ್ ರಾಥೋಡ್ ಎಲ್ಲರೂ ಹೊಸಬರೇ.

ಚಿತ್ರದಲ್ಲಿ ಎರಡು ಹಾಡುಗಳನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ. ” ಸಮಯವೇ ಸಾಲದು ” ಅನ್ನೋ ರೋಮ್ಯಾಂಟಿಕ್ ಸಾಂಗ್ ಅನ್ನು ಕಲ್ಯಾಣ್ ಮಂಜು ಹಾಡಿದ್ದಾರೆ, ” ಬೇಜಾರು” ವಿಷಾಕ್ ನಾಗಲಪುರ ಹಾಡಿದ್ದಾರೆ. “ಒಂಟಿ ಬಂಟಿ ಲವ್ ಸ್ಟೋರಿ” ಚಿತ್ರ ಅತಿ ಶೀಘ್ರದಲ್ಲಿ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ

error: Content is protected !!