Cini NewsMovie Review

ದಾಂಪತ್ಯದ ಮುನಿಸು , ಕೋಪಕ್ಕೆ ಮಾರ್ಗಸೂಚಿ (ಅಥಿ ಐ ಲವ್ ಯು ಚಿತ್ರವಿಮರ್ಶೆ- ರೇಟಿಂಗ್ : 3.5 /5)

ರೇಟಿಂಗ್ : 3.5 /5
ಚಿತ್ರ : ಅಥಿ ಐ ಲವ್ ಯು
ನಿರ್ದೇಶಕ : ಲೋಕೇಂದ್ರ ಸೂರ್ಯ
ನಿರ್ಮಾಪಕ : ಸೆವೆನ್ ರಾಜ್
ಸಂಗೀತ : ಅನಂತ್ ಆರ್ಯನ್
ಛಾಯಾಗ್ರಹಣ : ಲೋಕೇಂದ್ರ
ತಾರಾಗಣ : ಲೋಕೇಂದ್ರ ಸೂರ್ಯ , ಶ್ರಾವ್ಯರಾವ್ ಹಾಗೂ ಹಿನ್ನೆಲೆ ದ್ವನಿಯ ಪಾತ್ರದಾರಿಗಳು…

ಗಂಡ ಹೆಂಡತಿಯ ಜಗಳ ಉಂಡು ಮಲಗುವವರೆಗೂ ಅನ್ನೋ ಗಾದೆ ಮಾತಿದೆ. ಆದರೆ ಆ ಮಾತಿಗೆ ತದ್ವಿರುದ್ಧವಾಗಿ ಬದುಕುತ್ತಿರುವ ಜೋಡಿಗಳೇ ಹೆಚ್ಚಾಗಿ ಕಾಣುವಂತಾಗಿದೆ. ಸಣ್ಣ ಸಣ್ಣ ಕಾರಣಕ್ಕೆ ಗಂಡ ಹೆಂಡತಿಯರ ನಡುವೆ ಮುನಿಸು , ಜಗಳ ವಿಕೋಪಕ್ಕೆ ತಿರುಗಿ ಪೊಲೀಸ್ ಸ್ಟೇಷನ್, ಕೋರ್ಟ್ ಮೆಟ್ಟಿಲು ಹತ್ತಿ ಡೈವರ್ಸ್ ಹಂತಕ್ಕೂ ಹೋಗಿದೆ. ಇಂತಹದ್ದೇ ಒಂದು ಗಂಡ ಹೆಂಡತಿಯ ಸಂಬಂಧದಲ್ಲಿ ಎದುರಾಗುವ ಘಟನೆಗಳ ಸುತ್ತ ಕಥೆಯನ್ನು ಹೆಣೆದು ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಅಥಿ ಐ ಲವ್ ಯು”.

ಗಂಡ ಹೆಂಡತಿ ಇಬ್ಬರು ನಾಲ್ಕು ವರ್ಷಗಳ ಸುದೀರ್ಘ ವೈವಾಹಿಕ ಜೀವನದಲ್ಲಿ ನೆಮ್ಮದಿ ಕಾಣದೆ ಒಬ್ಬರಿಗೊಬ್ಬರು ಸಣ್ಣ ಸಣ್ಣ ವಿಚಾರಕ್ಕೂ ಕೋಪಗೊಳ್ಳುತ್ತಾ ದಿನ ಕಳೆಯುತ್ತಿರುತ್ತಾರೆ. ಬೆಳಗ್ಗೆ ಕೆಲಸಕ್ಕೆ ಹೊರಡುವ ಗಂಡ ವಸಂತ್( ಲೋಕೇಂದ್ರ ಸೂರ್ಯ) ಬಗ್ಗೆ ಗಮನಹರಿಸಿದ ಹೆಂಡತಿ ಅಥಿರ(ಶ್ರಾವ್ಯ ರಾವ್). ಕೋಪಗೊಳ್ಳುವ ವಸಂತ್ ಮನಸೋ ಇಚ್ಛೆ ಬೈದು ಕೆಲಸಕ್ಕೆ ಹೋಗುತ್ತಾನೆ. ನಿದ್ರೆಯಿಂದ ಎದ್ದ ಅಥಿಗೆ ತನ್ನ ತಾಯಿ ಫೋನ್ ಮೂಲಕ ಮಗಳ ಬಗ್ಗೆ ವಿಚಾರಿಸಿಕೊಂಡು , ವಸಂತ್ ಹಾಗೂ ಅವನ ಕುಟುಂಬದ ಬಗ್ಗೆ ದ್ವೇಷದ ಮಾತುಗಳನ್ನು ಆಡುತ್ತಾಳೆ.

ಅದೇ ರೀತಿ ಅಥಿಯಾ ಗೆಳತಿಯು ಕರೆ ಮಾಡಿ ಸಂಸಾರದಲ್ಲಿ ಬೆಂಕಿ ಇಡುವ ಕೆಲಸ ಮಾಡುತ್ತಾಳೆ. ಇದರ ನಡುವೆ ಮತ್ತೊಬ್ಬ ಗೆಳತಿ ತನ್ನ ಬದುಕಿನ ನೋವಿನ ಕಹಿ ಅನುಭವಗಳನ್ನು ತಿಳಿಸುತ್ತಾಳೆ. ಇದರ ನಡುವೆ ಅಥಿ ಗೆ ತನ್ನ ಗಂಡ ವಸಂತ್ ವರ್ತನೆ ಇಷ್ಟವಿಲ್ಲದೆ ಫೋನ್ ಮಾಡಿ ಬೈದ ವಿಚಾರವಾಗಿ ಕೇಳಿ ಕೋಪಗೊಂಡು ತನ್ನ ತಾಯಿ ಮನೆಗೆ ಹೋಗುತ್ತೇನೆಂದು ಹೇಳುತ್ತಾಳೆ. ಇದರಿಂದ ಕೋಪಗೊಳ್ಳುವ ವಸಂತ್ ಮನೆಗೆ ಬಂದು ಒಡೆದು ತಕ್ಕ ಪಾಠ ಕಲಿಸುತ್ತೇನೆ ಎಂದು ಅವಾಜ್ ಹಾಕುತ್ತಾನೆ.

ಒಂದು ಕಡೆ ಅಥಿ ಗೆ ಭಯವಿದ್ದರೂ ಮತ್ತೊಂದೆಡೆ ಏನಾಗುತ್ತದೆ ಆಗಲಿ ಎಂಬ ಕೋಪವು ಇರುತ್ತದೆ. ಮುಂದೆ ಎದುರಾಗುವ ಹಲವು ಘಟನೆಗಳು ಈ ಗಂಡ ಹೆಂಡತಿಯ ಬದುಕಿಗೆ ಯಾವ ಮಾರ್ಗವನ್ನ ತೋರಿಸುತ್ತದೆ ಎಂಬುವುದೇ ಕಥಾಂದರ.
ಇವರಿಬ್ಬರ ನಡುವೆ ನಡೆಯೋದು ಏನು…
ಸಂಸಾರ ಸರಿ ಹೋಗುತ್ತಾ… ಅಥವಾ ಬೇರೆ ಆಗ್ತಾರಾ… ಈ ವಿಚಾರವನ್ನು ಜೋಡಿಗಳು ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬಂದು ನೋಡಿ.

ಈ ಚಿತ್ರದಲ್ಲಿ ಎರಡೇ ಪಾತ್ರಗಳು ಪರದೆಯ ಮೇಲೆ ವಿಭಿನ್ನವಾಗಿ ತೋರಿಸುವ ಆಲೋಚನೆ ಮಾಡಿರುವ ನಿರ್ದೇಶಕ ಲೋಕೇಂದ್ರ ಸೂರ್ಯ ಆಲೋಚನೆ ಮೆಚ್ಚುವಂತದ್ದು , ಗಂಡ ಹೆಂಡತಿಯ ಬದುಕಿನಲ್ಲಿ ಎದುರು ಆಗುವ ಘಟನೆಗಳು , ಸಣ್ಣ ಸಣ್ಣ ವಿಚಾರಗಳಿಗೆ ಎದುರಿಸುವ ಸಮಸ್ಯೆಗಳು , ಗಲಾಟೆಗೆ ದಾರಿ ಮಾಡುವ ವ್ಯಕ್ತಿಗಳು , ಪರಿಹಾರ ತೋರಿಸುವ ವ್ಯಕ್ತಿಗಳ ಧ್ವನಿಯ ಮೂಲಕ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳುವ ಹಾದಿಯಲ್ಲಿ ಸಾಗಿರುವ ಚಿತ್ರಕಥೆಯ ರೀತಿ ಗಮನ ಸೆಳೆಯುತ್ತದೆ.

ಆದರೆ ಚಿತ್ರದ ಓಟ ನಿಧಾನಗತಿಯಲ್ಲಿ ಸಾಗಿದ್ದು , ಅದನ್ನ ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟ ಅನಿಸುತ್ತದೆ. ನಿರ್ದೇಶನ ಜೊತೆ ಹಲವು ವಿಭಾಗಗಳ ಜವಾಬ್ದಾರಿ ವಹಿಸಿಕೊಂಡಿರುವ ಲೋಕೇಂದ್ರ ಸೂರ್ಯ ನಾಯಕನ ಪಾತ್ರಕ್ಕೆ ಜೀವ ತುಂಬಲು ಶ್ರಮವಹಿಸಿದ್ದಾರೆ.ಇನ್ನು ನಾಯಕಿಯಾಗಿ ಅಭಿನಯಿಸಿರುವ ಶ್ರಾವ್ಯ ರಾವ್ ಕೂಡ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನು ಉಳಿದಂತೆ ಬರುವ ಹಿನ್ನೆಲೆ ಧ್ವನಿಗಳ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಪೂರಕವಾಗಿದೆ.

ಹಾಗೆಯೇ ನಿರ್ಮಾಪಕರಾದ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಧ್ವನಿ ಯು ಗಮನ ಸೆಳೆಯುತ್ತದೆ. ಇನ್ನು ಈ ಚಿತ್ರದ ಸಂಗೀತ ನಿರ್ದೇಶಕ ಅನಂತ್ ಆರ್ಯನ್ ಅವರ ಹಿನ್ನೆಲೆ ಸಂಗೀತ ವಿಭಿನ್ನವಾಗಿ ಮೂಡಿ ಬಂದಿದೆ. ಸ್ಪೆಶಲ್ ಎಫೆಕ್ಟ್ಸ್ ವೆಂಕಟೇಶ್ , ಜಾಕೋಬ್ ಡಿಐ ವರ್ಕ್ ಗಮನ ಸೆಳೆಯುತ್ತದೆ. ಒಟ್ಟಾರೆ ಈ ಚಿತ್ರವನ್ನು ನವ ಜೋಡಿಗಳು ,ದಂಪತಿಗಳು ನೋಡುವುದು ಅತ್ಯವಶ್ಯಕ. ಸಂಸಾರದಲ್ಲಿ ಗಂಡ- ಹೆಂಡತಿ ಅನ್ಯೋನ್ಯವಾಗಿ ಬಾಳ್ವೆ ನಡೆಸುವುದು ಎಷ್ಟು ಮುಖ್ಯ ಎಂಬುದನ್ನು ಹೇಳಿರುವ ರೀತಿಗಾಗಿ ಒಮ್ಮೆ ನೋಡಬಹುದು

error: Content is protected !!