Cini NewsSandalwood

“ನೇತ್ರಂ” ಚಿತ್ರದ ಟ್ರೈಲರ್ ರಿಲೀಸ್ ಇದೇ 17ರಂದು ಬಿಡುಗಡೆ

ಸ್ಯಾಂಡಲ್ ವುಡ್ ನಲ್ಲಿ ಯುವ ಪಡೆಗಳ ಬಳಗ ಸೇರಿಕೊಂಡು ನಿರ್ಮಿಸಿರುವ “ನೇತ್ರಂ” ಚಿತ್ರದ ಟ್ರೈಲರ್ ಈಗ ಎಲ್ಲೆಡೆ ಬಿಡುಗಡೆಯಾಗಿದ್ದು , ಭರ್ಜರಿ ಸದ್ದನ್ನ ಮಾಡುತ್ತಿದೆ. ಇದೊಂದು ಆಕ್ಷನ್, ಸಸ್ಪೆನ್ಸ್ , ಲವ್ , ಥ್ರಿಲ್ಲರ್ ಅಂಶವನ್ನು ಒಳಗೊಂಡಿರುವಂತಹ ಈ ಚಿತ್ರ ಇದೇ 17ರಂದು ರಾಜ್ಯದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ನಿರ್ಮಾಣ ಮಾಡಲಾಗಿದ್ದು, ರನ್ನಿಂಗ್ ಹಾರ್ಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೊಕ್ತುಮ್ ಪಟೇಲ್ ಮತ್ತು ಶೇಕ್ ಸಬೀರ್ ಅವರು ಜಂಟಿಯಾಗಿ ನಿರ್ಮಿಸಿದ್ದಾರೆ.

ಈ ಒಂದು ಚಿತ್ರವನ್ನು ಯುವ ನಿರ್ದೇಶನ ಬಿಲ್ಲೂರ್ ಸುರೇಶ್ ನಿರ್ದೇಶನ ಮಾಡಿದ್ದು , ಇವರು ಮೂಲತಃ ಶಿಕ್ಷಕರಾಗಿದ್ದು , ಈಗಾಗಲೇ ಕನ್ನಡ ಸೇರಿದಂತೆ ತೆಲುಗು , ತಮಿಳ್ ಚಿತ್ರದಲ್ಲೂ ಕೂಡ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದು , ತಮ್ಮ ಪ್ರಥಮ ಪ್ರಯತ್ನವಾಗಿ ಈ ನೇತ್ರಂ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದು , ಸ್ನೇಹಿತರ ನಡುವೆ ಬ್ಯಾಡ್ ಇಂಪ್ರೆಶನ್ ಆದರೆ ಏನೆಲ್ಲಾ ಆಗುತ್ತದೆ ಎಂಬ ಕತೆಯನ್ನು ಒಳಗೊಂಡಿದೆಯಂತೆ.

ಈ ಚಿತ್ರದ ಮೂಲಕ ಯಂಗ್ ಅಂಡ್ ಗುಡ್ ಲುಕಿಂಗ್ ಹೀರೋ ದಕ್ಷ್ ಪಟೇಲ್ ನಾಯಕನಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇವರು ಮೂಲತಃ ಗದಗ ನವರಾಗಿದ್ದು , ಇವರು ಅಪ್ಪಟ ಪುನೀತ್ ರಾಜಕುಮಾರ್ ಅವರ ಅಭಿಮಾನಿಯಂತೆ. ಚಿತ್ರರಂಗದಲ್ಲಿ ಒಂದು ಉತ್ತಮ ನೆಲೆಯನ್ನು ಕಾಣಬೇಕೆಂಬ ಮಹಾದಾಸರೊಂದಿಗೆ ಈ ಚಿತ್ರದ ಮೂಲಕ ಭರ್ಜರಿಯಾಗಿ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ.

ಈ ಚಿತ್ರದಲ್ಲಿ ಮೂವರು ನಾಯಕಿರು ಅಭಿನಯಿಸಿದ್ದು , ಈ ಪೈಕಿ ಧನುಶ್ರೀ ಕೂಡ ಒಬ್ಬರಾಗಿದ್ದಾರೆ. ಇದಲ್ಲದೆ ಬಹಳಷ್ಟು ಯುವ ಪ್ರತಿಭೆಗಳು ಕೂಡ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಒಂದು ಹಾಡಿಗೆ ವೈ.ಜೆ.ಕೆ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದು, ಎರಡು ಹಾಡುಗಳಿಗೆ ಚೈತನ್ಯ ರಾಜ್ ಸಂಗೀತ ಒದಗಿಸಿದ್ದಾರೆ.

ಛಾಯಾಗ್ರಹಣವನ್ನು ಪ್ರಸಾದ್, ಗೋಪಾಲ್ ಮತ್ತು ಶ್ಯಾಮ್ ಸಿಂದನೂರ್ ಅವರು ನಿರ್ವಹಿಸಿದ್ದಾರೆ. ಒಟ್ಟಾರೆ ಬಹಳಷ್ಟು ಯುವ ಪ್ರತಿಭೆಗಳು ಸೇರಿ ನಿರ್ಮಿಸಿರುವ ಈ ನೇತ್ರಂ ಚಿತ್ರ ನವೆಂಬರ್ 17ಕ್ಕೆ ಅದ್ದೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿಯನ್ನು ಮಾಡಿಕೊಳ್ಳುತ್ತಿದೆ

error: Content is protected !!